ನುಗ್ಗೆಕಾಯಿ ಹಾಕಿದ ಸಾಂಬಾರ್‌, ಆರೋಗ್ಯಕ್ಕೆ ಬಹಳ ಒಳ್ಳೆಯದು...

By: manu
Subscribe to Boldsky

ಬಹುತೇಕ ಎಲ್ಲಾ ಬಗೆಯ ಸಾಂಬಾರುಗಳಲ್ಲಿ ಮತ್ತು ಕೆಲವು ತಿಳಿಸಾರುಗಳಲ್ಲಿ, ಅಷ್ಟೇ ಏಕೆ, ಉಪ್ಪಿನಕಾಯಿ, ಸಾಗು, ಸೂಪ್‌ಗಳಲ್ಲಿಯೂ ನುಗ್ಗೇಕಾಯಿಯನ್ನು ತಪ್ಪದೇ ಸೇರಿಸುತ್ತಾರೆ. ಹೆಚ್ಚಿನವರಿಗೆ ಮರದ ಕುಂಟೆಯಂತೆ ಕಾಣುವ ಈ ತರಕಾರಿ ಇಷ್ಟವಿಲ್ಲ. ತಮಗಿಷ್ಟವಿಲ್ಲದಿರುವುದಕ್ಕೇ ಇವರು ಈ ತರಕಾರಿಗೆ 'ಟಿಂಬರ್' ಎಂಬ ಅಡ್ಡಹೆಸರಿಟ್ಟು ಅವಹೇಳನವನ್ನೂ ಮಾಡುತ್ತಾರೆ. ಕಾಯಿ ಕಾಯಿ ನುಗ್ಗೆಕಾಯಿಯ ಪವರ್‌ಗೆ ತಲೆಬಾಗಲೇಬೇಕು!

ಆದರೆ ವಾಸ್ತವವಾಗಿ ನುಗ್ಗೇಕಾಯಿ ಪೋಷಕಾಂಶಗಳ ಗಣಿಯಾಗಿದ್ದು ಆರೋಗ್ಯವನ್ನು ಹಲವು ವಿಧದಿಂದ ಉತ್ತಮಗೊಳಿಸುತ್ತದೆ. ನುಗ್ಗೇಕಾಯಿಯಲ್ಲಿ ಏನೇನಿದೆ ಎಂದು ಪಟ್ಟಿಮಾಡಹೊರಟರೆ ಪ್ರಮುಖವಾಗಿ ಕಂಡುಬರುವುದೆಂದರೆ ಕಬ್ಬಿಣ, ಗಂಧಕ ಮತ್ತು ವಿಟಮಿನ್ ಸಿ. ನುಗ್ಗೆ ಸೊಪ್ಪು+ಅರಿಶಿನ- ಬರೋಬ್ಬರಿ ಏಳು ರೋಗಕ್ಕೆ ಮದ್ದು....

ಒಂದು ವೇಳೆ ನೀವು ನಿಮ್ಮ ಅಜ್ಜಿಯ ಕೈಯಡುಗೆ ಉಂಡಿದ್ದರೆ ಅವರು ಪ್ರತಿಬಾರಿಯೂ ಸಾಂಬಾರಿನಲ್ಲಿ ತಪ್ಪದೇ ನುಗ್ಗೇಕಾಯಿಯನ್ನು ಏಕೆ ಸೇರಿಸುತ್ತಿದ್ದರೆ ಎಂಬ ಕುತೂಹಲ ಮೂಡಿರಬಹುದು.   ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್

ಕೆಳಗಿನ ಮಾಹಿತಿಗಳು ನಿಮ್ಮ ಕುತೂಹಲವನ್ನು ತಣಿಸಲಿವೆ ಹಾಗೂ ಟಿಂಬರ್ ಮೇಲೆ ಅಭಿಮಾನವನ್ನು ಹೆಚ್ಚಿಸಲಿವೆ....  

ಪ್ರಯೋಜನ #1

ಪ್ರಯೋಜನ #1

ನುಗ್ಗೇಕಾಯಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನುಗಳು, ಕ್ಯಾರೋಟಿನಾಯ್ಡು ಮತ್ತು ವಿಟಮಿನ್ ಸಿ ಇದೆ. ನುಗ್ಗೇಕಾಯಿಯನ್ನು ಸಾಂಬಾರ್, ಸೂಪ್‌ಗಳಲ್ಲಿ ಸೇರಿಸುವ ಮೂಲಕ ಇವುಗಳ ರುಚಿಯೂ ಹೆಚ್ಚುತ್ತದೆ ಹಾಗೂ ಈ ಎಲ್ಲಾ ಪೋಷಕಾಂಶಗಳು ಲಭ್ಯವಾಗುತ್ತವೆ.

ಪ್ರಯೋಜನ #2

ಪ್ರಯೋಜನ #2

ಕಾಮಾಲೆ ಅಥವಾ ಜಾಂಡೀಸ್ ಕಾಯಿಲೆಗೆ ನುಗ್ಗೇಕಾಯಿ ಅತ್ಯುತ್ತಮವಾಗಿದೆ. ಅಲ್ಲದೇ ಆಮಶಂಕೆ, ಅತಿಸಾರ ಮೊದಲಾದ ತೊಂದರೆಗಳಿಗೂ ನುಗ್ಗೇಕಾಯಿ ಔಷಧಿಯಂತೆ ಕೆಲಸ ಮಾಡುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚದಷ್ಟು ನುಗ್ಗೇಸೊಪ್ಪಿನ ಎಲೆಗಳ ರಸಕ್ಕೆ ಕೆಲವು ಹನಿ ಜೇನು ಸೇರಿಸಿ ಒಂದು ಕಪ್ ಎಳನೀರಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯುವ ಮೂಲಕ ಅತಿಸಾರ, ಕಾಮಾಲೆಗಳು ಕಡಿಮೆಯಾಗುತ್ತವೆ.ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!

ಪ್ರಯೋಜನ #3

ಪ್ರಯೋಜನ #3

ಮೂಳೆಗಳ ದೃಢತೆ ಹೆಚ್ಚಲು ಒಂದು ಚಮಚ ನುಗ್ಗೆಸೊಪ್ಪಿನ ರಸವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ನೆರವಾಗುತ್ತದೆ.

ಪ್ರಯೋಜನ #4

ಪ್ರಯೋಜನ #4

ನುಗ್ಗೆಸೊಪ್ಪಿನ ರಸದ ಸೇವನೆಯಿಂದ ರಕ್ತವೂ ಶುದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಈ ಸೊಪ್ಪಿನ ರಸವನ್ನು ವಾರಕ್ಕೆರಡು ಬಾರಿ ಸೇವಿಸುವುದರಿಂದ ರಕ್ತದ ಗುಣಮಟ್ಟ ಹೆಚ್ಚುತ್ತದೆ.ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಪ್ರಯೋಜನ #5

ಪ್ರಯೋಜನ #5

ನುಗ್ಗೆಸೊಪ್ಪಿನ ಸೇವನೆಯಿಂದ ಕ್ಷಯ, ಅಸ್ತಮಾ ಮತ್ತು ಬ್ರಾಂಕೈಟಿಸ್ ನಂತರ ರೋಗಗಳನ್ನು ಗುಣಪಡಿಸಬಹುದು.

ಪ್ರಯೋಜನ #6

ಪ್ರಯೋಜನ #6

ಈ ಎಲೆಗಳಿಂದ ತಯಾರಿಸಲ್ಪಟ್ಟ ಸೂಪ್ ರುಚಿಕರವೂ ಹೌದು, ಕೆಮ್ಮು, ನೆಗಡಿ, ಎದೆಯಲ್ಲಿ ಕಫ ತುಂಬಿಕೊಂಡಿರುವುದು ಮೊದಲಾದ ಸೋಂಕಿನಿಂದ ಬಾಧಿತ ತೊಂದರೆಗಳಿತೆ ಔಷಧಿಯೂ ಹೌದು.

ಪ್ರಯೋಜನ #7

ಪ್ರಯೋಜನ #7

ಹಿಂದಿನ ದಿನಗಳಲ್ಲಿ ಪುರುಷರಲ್ಲಿ ಲೈಂಗಿಕ ಶಕ್ತಿ ಉಡುಗಿದ್ದರೆ ಇವರಿಗೆ ನೆರವಾಗಲು ನುಗ್ಗೇಕಾಯಿಯಿಂದ ತಯಾರಿಸಿದ ಸೂಪ್ ಅನ್ನು ನಿಯಮಿತವಾಗಿ ಸೇವಿಸಲು ನೀಡಲಾಗುತ್ತಿತ್ತು. ಆಯುರ್ವೇದ ಟಿಪ್ಸ್: ಗುಪ್ತ ಸಮಸ್ಯೆಗೆ ಸೂಕ್ತ ಪರಿಹಾರ

 
English summary

Why Its Good To Add Drumsticks To Sambar

Drumstick is a very tasty addition to rasam and sambar. In India, drumsticks are added to many other recipes including pickles, curries and soups. Rasam and sambar are like Indian soups. Both of them are very healthy as they provide all the health benefits of many vegetables and lentils. In the same way, when a drumstick is added to sambar, its nutritious value increases a lot.
Subscribe Newsletter