For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಕಾಮಾಸಕ್ತಿ ಹೆಚ್ಚಿಸುವ ನೈಸರ್ಗಿಕ ಆಹಾರಗಳು

By Arshad
|

ಕೆಲಸದ ಒತ್ತಡ, ಸೇವಿಸುವ ಆಹಾರ ಇತ್ಯಾದಿಗಳು ನಿಮ್ಮ ದೇಹ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ದೇಹದಲ್ಲಿ ಅನಾರೋಗ್ಯ ಬರದೆ ಇರುವಂತೆ ನೋಡಿಕೊಳ್ಳಲು ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕೇಬೇಕು. ವಿಟಮಿನ್ ಡಿ ಕೊರತೆಯಿಂದ ಹಲವಾರು ರೀತಿಯ ಕಾಯಿಲೆಗಳು ಬರುವುದು. ಇಷ್ಟು ಮಾತ್ರವಲ್ಲದೆ ವಿಟಮಿನ್ ಡಿ ಕೊರತೆಯಿಂದಾಗಿ ಕಾಮಾಸಕ್ತಿಯು ಕಡಿಮೆಯಾಗುವುದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಬೆಳಗ್ಗಿನ ಉಪಾಹಾರವು ಅತೀ ಅಗತ್ಯವಾಗಿರುವುದು.

ನೀವು ಸೇವಿಸುವಂತಹ ಬೆಳಗ್ಗಿನ ಉಪಾಹಾರದಲ್ಲಿ ನಿಮಗೆ ಬೇಕಾಗುವ ವಿಟಮಿನ್ ಡಿ ಲಭ್ಯವಾಗುವುದು. ವಿಟಮಿನ್ ಡಿ ಕೊರತೆ ನೀಗಿಸಲು ಅಣಬೆ, ಕಾರ್ನ್ ಫ್ಲೆಕ್ಸ್, ಮೊಟ್ಟೆ ಸೇವನೆ ಮಾಡಬೇಕು. ಸುಮಾರು ಎರಡು ಸಾವಿರ ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ ವಿಟಮಿನ್ ಡಿ ಕೊರತೆಯಿಂದ ಕಾಮಾಸಕ್ತಿ ಕಡಿಮೆಯಾಗುವುದಾಗಿ ಕಂಡುಬಂದಿದೆ. ಕೆಲವೊಂದು ಆಹಾರಗಳ ಸೇವನೆಯಿಂದ ಕಾಮಾಸಕ್ತಿ ಹೆಚ್ಚಿಸಬಹುದು. ಆ ಆಹಾರಗಳನ್ನು ಇಲ್ಲಿ ನಿಮಗಾಗಿ ನೀಡಲಾಗಿದೆ.....

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕಾಮಾಸಕ್ತಿ ಹೆಚ್ಚಿಸುವ ಪ್ರಮುಖ ಆಹಾರಗಳಲ್ಲಿ ಬೆಳ್ಳುಳ್ಳಿಯು ಒಂದಾಗಿದೆ. ಬೆಳ್ಳುಳ್ಳಿಯಲ್ಲಿ ನೈಸರ್ಗಿಕ ಕಾಮೋತ್ತೇಕವಿದ್ದು, ಇದು ಪುರುಷರು ಹಾಗೂ ಮಹಿಳೆಯರಲ್ಲಿ ಕಾಮಾಸಕ್ತಿ ಹೆಚ್ಚಿಸುವುದು. ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ಎನ್ನುವ ಅಂಶವು ಜನನಾಂಗಗಳಿಗೆ ರಕ್ತ ಸಂಚಾರವನ್ನು ಸುಗಮಗೊಳಿಸುವುದು. ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ ಸೇರಿಸಿಕೊಳ್ಳಬಹುದು ಅಥವಾ ಹೆಚ್ಚುವರಿಯಾಗಿ ಬೆಳ್ಳುಳ್ಳಿ ಎಸಲುಗಳನ್ನು ಸೇವಿಸಬಹುದು.

ಕಡು ಚಾಕಲೇಟ್

ಕಡು ಚಾಕಲೇಟ್

ಹೆಚ್ಚಿನವರು ಸಿಹಿಯಿಂದ ದೂರ ಉಳಿಯುವರು. ಆದರೆ ಇದನ್ನು ಹಿತಮಿತವಾಗಿ ಸೇವಿಸಿದರೆ ಅದು ತುಂಬಾ ಒಳ್ಳೆಯದು. ಕಡು ಚಾಕಲೇಟ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡಿ ಜನನಾಂಗದ ರಕ್ತನಾಳಗಳನ್ನು ಹಿಗ್ಗಿಸುವುದು. ಇದರಿಂದ ನಿಮಿರುವಿಕೆ ಉಂಟಾಗುವುದು. ಹೀಗೆ ಕಾಮಾಸಕ್ತಿ ಬರುವುದು.

ಬಸಳೆ

ಬಸಳೆ

ಹಸಿರೆಳೆ ತರಕಾರಿಗಳು ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ಅದರಿಂದ ಕಾಮಾಸಕ್ತಿಯು ಹೆಚ್ಚಾಗುವುದು. ಬಸಳೆಯಂತಹ ಹಸಿರೆಳೆ ತರಕಾರಿಗಳು ಯೋನಿಯಲ್ಲಿ ರಕ್ತಸಂಚಾರವನ್ನು ಉತ್ತಮಪಡಿಸುವುದು ಮತ್ತು ಕಾಮಾಸಕ್ತಿ ಹೆಚ್ಚು ಮಾಡುವುದು. ನಿಮಗೆ ಕಾಮಾಸಕ್ತಿ ಕಡಿಮೆ ಇದ್ದರೆ ಬಸಳೆ ಸೇವಿಸಿ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ತುಂಬಾ ಪ್ರಾಮುಖ್ಯವಾದ ಎಲ್-ಅರ್ಜಿನೈನ್ ಇದೆ. ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚು ಮಾಡುವುದು ಮತ್ತು ಕಾಮಾಸಕ್ತಿ ಹೆಚ್ಚಿಸುವುದು. ಮೊಟ್ಟೆಯಲ್ಲಿ ಇರುವಂತಹ ಪ್ರೋಟೀನ್ ಹಾಸಿಗೆಯಲ್ಲಿ ಪುರುಷನ ಶಕ್ತಿಯನ್ನು ಹೆಚ್ಚು ಮಾಡುವುದು.

ಬೀಜಗಳು

ಬೀಜಗಳು

ಒಮೆಗಾ-3 ಕೊಬ್ಬಿನಾಮ್ಲವು ಹೆಚ್ಚಾಗಿರುವ ಆಹಾರಗಳು ಕಾಮಾಸಕ್ತಿ ಹೆಚ್ಚು ಮಾಡುವುದು. ಗೋಡಂಬಿ, ಕಡಲೆಕಾಯಿ, ಬಾದಾಮಿ ಮತ್ತು ಪಿಸ್ತಾದಂತಹ ಬೀಜಗಳಲ್ಲಿ ಇರುವ ಒಮೆಗಾ-3 ಕೊಬ್ಬಿನಾಮ್ಲವು ಕಾಮಾಸಕ್ತಿ ಹೆಚ್ಚಿಸುವುದು. ಒಂದು ಹಿಡಿಯಷ್ಟು ಈ ಬೀಜಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಾಗುವುದು. ಇದರಿಂದ ಕಾಮಾಸಕ್ತಿ ವೃದ್ಧಿಸುವುದು.

ಕೆಂಪು ವೈನ್

ಕೆಂಪು ವೈನ್

ಮಿತ ಪ್ರಮಾಣದಲ್ಲಿ ಕೆಂಪು ವೈನ್ ಸೇವನೆ ಮಾಡಿದರೆ ಅದರಿಂದ ಕಾಮಾಸಕ್ತಿಯು ಹೆಚ್ಚಾಗುವುದು. ಕೆಂಪು ವೈನ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಇದೆ. ಇದು ನೈಟ್ರಿಕ್ ಆಮ್ಲವನ್ನು ಉತ್ಪತ್ತಿ ಮಾಡುವುದು. ಇದು ರಕ್ತನಾಳಗಳಿಗೆ ಆರಾಮ ನೀಡಿ ಯೋನಿಗೆ ಸರಿಯಾಗಿ ರಕ್ತಸಂಚಾರವಾಗುವಂತೆ ಮಾಡುವುದು.

ಕೇಸರಿ

ಕೇಸರಿ

ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

ಒಣಫಲಗಳು

ಒಣಫಲಗಳು

ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕಲ್ಲಂಗಡಿ

ಕಲ್ಲಂಗಡಿ

ಇದರಲ್ಲಿ ಅತಿಹೆಚ್ಚು ಪ್ರಮಾಣದ ನೀರು ಇದ್ದರೂ ಉಳಿದ ಪೋಷಕಾಂಶಗಳಲ್ಲಿ ಸಿಟ್ರುಲೈನ್ ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ವಿಶೇಷವಾಗಿ ಜನನಾಂಗಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ಹೆಚ್ಚಿನ ರಕ್ತಪೂರೈಕೆ ಸಾಧ್ಯವಾಗುತ್ತದೆ ಹಾಗೂ ವಯಾಗ್ರಾದಷ್ಟೇ ಪರಿಣಾಮಕಾರಿಯಾಗಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ.

ಲೆಟ್ಯೂಸ್

ಲೆಟ್ಯೂಸ್

ಇದು ಹಸಿಯಾಗಿ ಸೇವಿಸಬಹುದಾದ ಎಲೆಗಳಾಗಿದ್ದು ಜೀರ್ಣಕ್ರಿಯೆಗೆ ಅಗತ್ಯವಾದ ಕರಗದ ನಾರು ಒದಗಿಸುವ ಜೊತೆಗೇ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ, ತನ್ಮೂಲಕ ಕಾಮಾಸಕ್ತಿಯನ್ನೂ ಹೆಚ್ಚಿಸುತ್ತದೆ.

English summary

This Is One Major Factor Affecting Your Libido, Check It Out!

If you have low sexual desire then here are some breakfast foods that may get you better luck in the sack as what we eat has a major influence on our sex drive.According to the study, if you have a low sex drive you could be lacking in vitamin D. Further the study also suggested that, what you eat can have a major influence on our sex drive.
X
Desktop Bottom Promotion