ಬಾಯಿ ದುರ್ವಾಸನೆ ಬರುತ್ತಿದೆಯೇ? ಹಾಗಾದರೆ ಈ ಟಿಪ್ಸ್ ತಪ್ಪದೇ ಅನುಸರಿಸಿ...

Posted By: Arshad
Subscribe to Boldsky

ಉಸಿರಿನ ದುರ್ವಾಸನೆಯಲ್ಲಿ ದಂತಗಳ ಸ್ವಚ್ಛತೆಯ ಪಾತ್ರ ಹಿರಿದು. ಒಸಡಿನಲ್ಲಿ ಸಿಲುಕಿರುವ ಆಹಾರಕಣಗಳು ಕೊಳೆಯುವ ಮೂಲಕ ಈ ದುರ್ವಾಸನೆ ಎದುರಾಗುತ್ತದೆ. ಒಂದು ವೇಳೆ ನೀವು ನಿತ್ಯವೂ ಹಲ್ಲುಗಳನ್ನು ಸ್ವಚ್ಛಗೊಳಿಸಿದರೂ ಕೆಲವರಲ್ಲಿ ಬಾಯಿಯ ದುರ್ವಾಸನೆ ಇದ್ದೇ ಇರುತ್ತದೆ. ನಿಮಗೂ ಹೀಗಾಗುತ್ತಿದ್ದರೆ ಏನೋ ತೊಂದರೆ ಇದೆ ಎಂದೆನ್ನಿಸುವುದಿಲ್ಲವೇ? ಅಥವಾ ನಿಮ್ಮ ಯಾವುದೋ ಒಂದು ನಿತ್ಯದ ಅಭ್ಯಾಸ ಇದಕ್ಕೆ ಕಾರಣವಿರಬಹುದೇ?

ಹೌದು, ನಮ್ಮ ನಿತ್ಯದ ಕೆಲವು ಅಭ್ಯಾಸಗಳು ನಿಮಗೇ ಗೊತ್ತಿಲ್ಲದೇ ತಪ್ಪು ಕ್ರಮವಾಗಿದ್ದು ಈ ದುರ್ವಾಸನೆಗೆ ನೇರವಾಗಿ ಕಾರಣವಾಗಿರಬಹುದು. ವಿಶ್ವದಾದ್ಯಂತ ಸುಮಾರು ಎಂಟು ಕೋಟಿ ಜನರಿಗೆ ಉಸಿರಿನ ದುರ್ವಾಸನೆ ಅಥವಾ chronic halitosis ಎಂಬ ತೊಂದರೆ ಇದೆ. ಇವುಗಳಲ್ಲಿ ಹೆಚ್ಚಿನವರಿಗೆ ಒಸಡುಗಳಲ್ಲಿ ಸೋಂಕು ಈ ದುರ್ವಾಸನೆಯ ಪ್ರಮುಖ ಕಾರಣವಾಗಿದೆ.

ಇದು ಸಾಮಾನ್ಯ ತೊಂದರೆಯಾಗಿದ್ದು ಇದನ್ನು ತಡೆಗಟ್ಟಲು ಕೆಲವಾರು ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದ ಕೆಲವನ್ನು ಇಂದು ಸಂಗ್ರಹಿಸಲಾಗಿದ್ದು ನಿಮ್ಮ ಉಸಿರಿನ ದುರ್ವಾಸನೆಯನ್ನು ಯಶಸ್ವಿಯಾಗಿ ತೊಡೆಯಲು ನೆರವಾಗುತ್ತದೆ ಹಾಗೂ ಬಾಯಿ ಮತ್ತು ಒಸಡುಗಳನ್ನು ಆರೋಗ್ಯಕರವಾಗಿರಿಸಲು ನೆರವಾಗುತ್ತದೆ. ಈ ಕ್ರಮಗಳಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿ ನಿತ್ಯವೂ ಅನುಸರಿಸುವ ಮೂಲಕ ಮಾತ್ರ ಇದರ ಪೂರ್ಣ ಪ್ರಯೋಜನ ಪಡೆಯಬಹುದು....  

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ನಿತ್ಯವೂ ಸಾಕಷ್ಟು ನೀರನ್ನು ಕುಡಿಯುವ ಮೂಲಕ ಲಾಲಾರಸದ ಗ್ರಂಥಿಗಳಿಗೆ ಹೆಚ್ಚು ಲಾಲಾರಸ ಸ್ರವಿಸಲು ನೆರವಾಗುತ್ತದೆ. ಇದರಿಂದ ಬಾಯಿಯನ್ನು ಒಣಗುವುದರಿಂದ ತಡೆದಂತಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಉಸಿರಿನ ದುರ್ವಾಸನೆಗೆ ಇದು ಮುಖ್ಯ ಕಾರಣವಾಗಿದೆ.

ಕಾಫಿ ಹೆಚ್ಚು ಕುಡಿಯಬೇಡಿ

ಕಾಫಿ ಹೆಚ್ಚು ಕುಡಿಯಬೇಡಿ

ಒಂದು ವೇಳೆ ದಿನದಲ್ಲಿ ಹಲವು ಕಪ್ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಇದು ನಿಮ್ಮ ಬಾಯಿಯಲ್ಲಿ ಲಾಲಾರಸದ ಉತ್ಪಾದನೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ. ಪರಿಣಾಮವಾಗಿ ಉಸಿರಿನ ದುರ್ವಾಸನೆ ಎದುರಾಗುತ್ತದೆ. ಆದ್ದರಿಂದ ಕಾಫಿಯನ್ನು ಮಿತಗೊಳಿಸಿ ಆ ಸ್ಥಳದಲ್ಲಿ ಟೀ ಕುಡಿಯುವುದೇ ಉತ್ತಮ.

ಹಲ್ಲುಗಳನ್ನು ಸ್ವಚ್ಛಗೊಳಿಸಿ

ಹಲ್ಲುಗಳನ್ನು ಸ್ವಚ್ಛಗೊಳಿಸಿ

ದುರ್ವಾಸನೆ ತಡೆಯಲು ಹಲ್ಲುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುವುದು ಅಗತ್ಯ. ಅಲ್ಲದೇ ಇದು ನಿತ್ಯಕರ್ಮದ ಭಾಗವಾಗಬೇಕು. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛಗೊಳಿಸಿಯೇ ಮಲಗಬೇಕು. ಇದರಿಂದ ಹಲ್ಲು ಒಸಡುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಕಡಿಮೆಯಾಗುತ್ತದೆ.

ಪ್ರತಿಬಾರಿ ಊಟದ ಬಳಿಕ ಫ್ಲಾಸ್ ಮೂಲಕ ಸ್ವಚ್ಛಗೊಳಿಸಿ

ಪ್ರತಿಬಾರಿ ಊಟದ ಬಳಿಕ ಫ್ಲಾಸ್ ಮೂಲಕ ಸ್ವಚ್ಛಗೊಳಿಸಿ

ಊಟದ ಬಳಿಕ ಕೆಲವರಿಗೆ ಮುಕ್ಕಳಿಸುವ ಅಭ್ಯಾಸವೇ ಇರುವುದಿಲ್ಲ. ಇದು ಆಹಾರಕಣಗಳು ಉಳಿದುಕೊಳ್ಳಲು ನೆರವಾಗುತ್ತದೆ ಹಾಗೂ ಬ್ಯಾಕ್ಟೀರಿಯಾಗಳಿಗೆ ಪುಷ್ಕಳ ಹಾಗೂ ಪುಕ್ಕಟೆ ಆಹಾರ ದೊರೆತು ಒಂದೇ ರಾತ್ರಿಯಲ್ಲಿ ಆಹಾರವನ್ನೆಲ್ಲಾ ಕೊಳೆಸುವುದು ಮಾತ್ರವಲ್ಲ, ಒಸಡುಗಳಿಗೂ ಸೋಂಕು ಹರಡಿಸಬಲ್ಲವು. ಆದ್ದರಿಂದ ಪ್ರತಿ ಊಟದ ಬಳಿಕ ಬಾಯಿಯನ್ನು ಮುಕ್ಕಳಿಸಿ ತೊಳೆದುಕೊಳ್ಳುವುದು ಅನಿವಾರ್ಯ. ಹಲ್ಲುಗಳ ನಡುವಣ ಸಂಧಿನಲ್ಲಿ ಫ್ಲಾಸ್ ಎಂಬ ನೂಲನ್ನು ಬಳಸಿ ಸ್ವಚ್ಛಗೊಳಿಸುವ ಮೂಲಕ ಹೆಚ್ಚಿನ ಸ್ವಚ್ಛತೆ ಪಡೆಯಬಹುದು. ಇದು ದುರ್ವಾಸನೆಯನ್ನು ತಡೆಯಲು ನೆರವಾಗುತ್ತದೆ.

ಪ್ರತಿ ಎರಡು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಶ್ ಬದಲಿಸಿ

ಪ್ರತಿ ಎರಡು ತಿಂಗಳಿಗೊಮ್ಮೆ ಹಲ್ಲುಜ್ಜುವ ಬ್ರಶ್ ಬದಲಿಸಿ

ಹಲ್ಲುಜ್ಜುವ ಬ್ರಶ್ ಸಹಾ ತೇವವಾಗಿರುವ ಕಾರಣ ಇಲ್ಲಿಯೂ ಹೆಚ್ಚಿನ ಬ್ಯಾಕ್ಟೀರಿಯಾ ಬೆಳೆಯಲು ಸಾಧ್ಯವಾಗುತ್ತದೆ. ಇದು ಹಳೆದದಾಷ್ಟೂ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ಕನಿಷ್ಟ ಎರಡು ತಿಂಗಳಿಗೊಂದಾದರೂ ಬಾರಿ ಬ್ರಶ್ ಬದಲಿಸಬೇಕು. ತಿಂಗಳಿಗೊಂದಾದರೆ ತುಂಬಾ ಒಳ್ಳೆಯದು.

ನಾಲಿಗೆಯನ್ನು ಮರೆಯದಿರಿ

ನಾಲಿಗೆಯನ್ನು ಮರೆಯದಿರಿ

ಹಿಂದಿನವರು ಬೇವಿವ ಕಡ್ಡಿಯಿಂದ ಹಲ್ಲುಜ್ಜಿದ ಬಳಿಕ ಈ ಕಡ್ಡಿಯನ್ನು ಅಡ್ಡಲಾಗಿ ಸೀಳಿ ಇದರ ಅಂಚಿನಿಂದ ನಾಲಿಗೆಯನ್ನೂ ಸ್ವಚ್ಛಗೊಳಿಸುತ್ತಿದ್ದರು. ಇಂದು ಟಂಗ್ ಕ್ಲೀನರ್ ಎಂಬ ಉಪಕರಣ ಲಭ್ಯವಿದ್ದು ನಿತ್ಯವೂ ಇದರಿಂದ ನಾಲಿಗೆಯನ್ನು ಸ್ವಚ್ಛಗೊಳಿಸುವ ಮೂಲಕ ದುರ್ವಾಸನೆಯ ಸಾಧ್ಯತೆಯನ್ನು 70%. ರಷ್ಟು ಕಡಿಮೆ ಮಾಡಬಹುದು.

ಆಲ್ಕೋಹಾಲ್ ರಹಿತ ಮೌತ್ ವಾಶ್ ಬಳಸಿ

ಆಲ್ಕೋಹಾಲ್ ರಹಿತ ಮೌತ್ ವಾಶ್ ಬಳಸಿ

ಹೆಚ್ಚಿನ ಮೌತ್ ವಾಶ್ ಗಳಲ್ಲಿ 27%ರಷ್ಟು ಆಲ್ಕೋಹಾಲ್ ಇರುತ್ತದೆ. ಇದು ಬಾಯಿಯನ್ನು ಒಣಗಿಸಲು ಕಾರಣವಾಗುತ್ತದೆ ಹಾಗೂ ದುರ್ವಾಸನೆಗೆ ಮೂಲವಾಗುತ್ತದೆ. ಆದ್ದರಿಂದ ಆಲ್ಕೋಹಾಲ್ ಇಲ್ಲದೇ ಇರುವ ಮೌತ್ ವಾಶ್ ಆಯ್ದುಕೊಳ್ಳಿ.

ಸಕ್ಕರೆ ಇರುವ ಮಿಂಟ್ ಸೇವಿಸದಿರಿ

ಸಕ್ಕರೆ ಇರುವ ಮಿಂಟ್ ಸೇವಿಸದಿರಿ

ಬಾಯಿಯಾಡಿಸುತ್ತಲೇ ಇರಲು ಮಿಂಟ್, ಚ್ಯೂಯಿಂಗ್ ಗಮ್ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಬಳಸಲಾಗುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಮಿಂಟ್ ಮುಗಿದ ಬಳಿಕವೂ ಸಕ್ಕರೆಯ ಪ್ರಮಾಣ ಹಾಗೇ ಉಳಿಯುವ ಕಾರಣ ಇದು ಉಸಿರಿನ ದುರ್ವಾಸನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ನಿಮ್ಮ ಔಷಧಿಗಳ ಬಗ್ಗೆ ಗಮನವಿರಲಿ

ನಿಮ್ಮ ಔಷಧಿಗಳ ಬಗ್ಗೆ ಗಮನವಿರಲಿ

ಒಂದು ವೇಳೆ ನೀವು ಖಿನ್ನತೆ ನಿವಾರಿಸಲು ಅಥವಾ ನೋವು ನಿವಾರಿಸಲು ಹಾಗೂ ಇತರ ಔಷಧಿಗಳನ್ನು ಸೇವಿಸುತ್ತಿದ್ದರೆ ಇವುಗಳ ಅಡ್ಡಪರಿಣಾಮದಿಂದಾಗಿ ಬಾಯಿಯಲ್ಲಿ ಲಾಲಾರಸ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಇದು ಸಹಾ ಬಾಯಿಯ ದುರ್ವಾಸನೆಗೆ ಕಾರಣವಾಗಬಹುದು. ಇದನ್ನು ನಿವಾರಿಸಲು ನಿಮ್ಮ ವೈದ್ಯರು ಸೂಕ್ತ ಸಲಹೆ ನೀಡಬಲ್ಲರು.

ಟಾನ್ಸಿಲ್ ಗಂಟನ್ನು ಗಮನಿಸಿ

ಟಾನ್ಸಿಲ್ ಗಂಟನ್ನು ಗಮನಿಸಿ

ಗಂಟಲ ಹಿಂಭಾಗದಲ್ಲಿ ಬ್ಯಾಕ್ಟೀರಿಯಾ ಹಾಗೂ ಇತರ ಕಣಗಳು ಸಂಗ್ರಹಗೊಂಡು ಗಟ್ಟಿಯಾದ ಗಡ್ಡೆಯಂತಾಗುತ್ತದೆ. ಇದೇ ಟಾನ್ಸಿಲ್ ಗಂಟು ಅಥವಾ Tonsil stones. ಇದು ನೋಡಲಿಕ್ಕೆ ಬಿಳಿಯ ಚುಕ್ಕೆಗಳ ರೂಪದಲ್ಲಿರುತ್ತದೆ. ಇದು ಸಹಾ ಬಾಯಿಯ ದುರ್ವಾಸನೆಗೆ ಕಾರಣವಾಗಿರಬಹುದು.

English summary

Things That You Need To Start/Stop Doing To Avoid Bad Breath

Bad breath is a common condition and there are several ways to prevent it. Following these tips that we have listed here will help you fight bad breath better and also keep your mouth or oral cavity healthy on a daily basis. Read further to know how to avoid bad breath.