ಕೊಲೆಸ್ಟ್ರಾಲ್ ಬಗ್ಗೆ ಚಿಂತಿಸಬೇಕಿಲ್ಲ, ಇವುಗಳನ್ನು ಸೇವಿಸಿದರೆ ಸಾಕು...

By Divya
Subscribe to Boldsky

ಕೊಲೆಸ್ಟ್ರಾಲ್ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪದಾರ್ಥ. ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ (ಬೇಡದ) ಕೊಲೆಸ್ಟ್ರಾಲ್ ಎಂದು ಎರಡು ಪ್ರಕಾರ ಇರುವುದನ್ನು ಕಾಣಬಹುದು.

ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಹಾರ್ಮೋನ್‍ಗಳ ಉತ್ಪಾದನೆಗೆ, ಜೀರ್ಣಕ್ರಿಯೆಗೆ, ವಿಟಮಿನ್-ಡಿಯ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹಕ್ಕೆ ಬೇಡದ ಕೊಲೆಸ್ಟ್ರಾಲ್ ಅನಗತ್ಯವಾದ ಕೊಬ್ಬಿನಂಶವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತಸಂಚಾರಕ್ಕೆ ಅಡ್ಡಿಯನ್ನುಂಟುಮಾಡುವುದು.

ಆಯುರ್ವೇದ ಟಿಪ್ಸ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದು

ನಾವು ಸೇವಿಸುವ ಆಹಾರವು ದೇಹಕ್ಕೆ ಅಗತ್ಯವಿರುವ ಪೂರಕ ಮತ್ತು ಮಾರಕವಾದ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುವುದು. ಹಾಗಾಗಿ ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚು ಗಮನವಹಿಸಬೇಕು. ಕೆಲವು ಸಂಶೋಧನೆಯ ಪ್ರಕಾರ ಭಾರತೀಯರ ಆಹಾರ ಪದ್ಧತಿಯು ಬಹಳ ಸರಳ ಹಾಗೂ ಆರೋಗ್ಯ ಪೂರ್ಣವಾದದ್ದು. ಇವರು ಬಳಸುವ ಆಹಾರ ಉತ್ಪನ್ನಗಳು ದೇಹಕ್ಕೆ ಅಗತ್ಯ ಕೊಲೆಸ್ಟ್ರಾಲ್ ಅನ್ನು ನೀಡಿ, ಅನಗತ್ಯ ಕೊಲೆಸ್ಟ್ರಾಲ್ಅನ್ನು ಹೋಗಲಾಡಿಸುತ್ತದೆ. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು ಎನ್ನುವುದನ್ನು ತಿಳಿಯಬೇಕಾದರೆ ಈ ಲೇಖನ ಓದುವುದನ್ನು ಮುಂದುವರಿಸಿ.

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜ

ಕೊತ್ತಂಬರಿ ಬೀಜವು ಕೊಲೆಸ್ಟ್ರಾಲ್ ಮಟ್ಟ ಮತ್ತು ಟ್ರೈಗ್ಲಿಸರೈಡ್‍ಗಳನ್ನು ಕಡಿಮೆಮಾಡಲು ಸಮರ್ಥವಾಗಿದೆ ಎಂದು ಅನೇಕ ಅಧ್ಯಯನಗಳು ಸಾಬೀತು ಪಡಿಸಿವೆ. ಇದು ಯಕೃತ್ತಿನ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಎಚ್‍ಡಿಎಲ್ ಕೊಲೆಸ್ಟ್ರಾಲ್‍ಅನ್ನು ಹೆಚ್ಚಿಸುವುದು.

ಕೊತ್ತಂಬರಿ ಬೀಜ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...

ಮೆಂತೆ

ಮೆಂತೆ

ಯಕೃತ್ತು ಮತ್ತು ಕರುಳಿಗೆ ಬೇಡದ ಅನಗತ್ಯ ಕೊಬ್ಬನ್ನು ಹೀರಿಕೊಂಡು, ಅಗತ್ಯವಿರುವ ಎಚ್‍ಡಿಎಲ್ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ದೇಹಕ್ಕೆ ಬೇಕಾಗುವ ನಾರಿನಂಶವನ್ನು ಒದಗಿಸುತ್ತದೆ.

ಮೆಂತೆ ಕಾಳು ನೆನೆಸಿದ ನೀರು- ಆಯಸ್ಸು ನೂರು!

ಬೆಳ್ಳುಳ್ಳಿ

ಬೆಳ್ಳುಳ್ಳಿ

ಕೆಲವು ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರದಿದ್ದರೂ, ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳ ಆರೋಗ್ಯವನ್ನು ಕಾಪಾಡುತ್ತದೆ. ನಿತ್ಯ ಬೆಳ್ಳುಳ್ಳಿ ಸೇವನೆ ಮಾಡಿದರೆ ಸೆರಮ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಚ್‍ಡಿಎಲ್ ಮತ್ತು ಟ್ರೈಗ್ಲಿಸರೈಡ್‍ಗಳ ಮೇಲೆ ಯಾವುದೇ ಪರಿಣಾಮ ಬೀರದು.

ದಾಲ್ಚಿನ್ನಿ

ದಾಲ್ಚಿನ್ನಿ

ಇದು ಎಚ್‍ಡಿಎಲ್, ಟ್ರೈಗ್ಲಿಸರೈಡ್ ಮತ್ತು ಸೆರಮ್ ಗ್ಲೂಕೋಸ್‍ಅನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಇಲಿ ಮತ್ತು ಕೋಳಿಗಳ ಮೇಲೆ ನಡೆಸಿದ ಅಧ್ಯಯನಗಳು ಈ ವಿಷಯದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ನೀಡಿವೆ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳಲ್ಲಿ ನಾರಿನಂಶವು ಸಮೃದ್ಧವಾಗಿರುವುದು. ಇವು ಕೊಲೆಸ್ಟ್ರಾಲ್‌ಗಳನ್ನು ಕಡಿಮೆ ಮಾಡಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತವೆ ಎಂದು ಹೇಳಲಾಗುತ್ತದೆ.

ಬೀಜಗಳು

ಬೀಜಗಳು

ಬಾದಾಮಿ, ಪಿಸ್ತಾ, ಆಕ್ರೋಡು ಸೇರಿದಂತೆ ಇನ್ನಿತ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಂಶ ಇರುತ್ತದೆ. ಇವು ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ನೀಡುತ್ತದೆ. ಇವುಗಳ ಸೇವನೆ ಸೂಕ್ತ ರೀತಿಯಲ್ಲಿ ಇರಬೇಕಷ್ಟೆ.

ಈರುಳ್ಳಿ

ಈರುಳ್ಳಿ

ಇದರಲ್ಲಿ ಅಲೈಯನೇಸ್, ಕ್ವೆರ್ಸೆಟಿನ್ ಸಪೋನಿನ್ಸ್ ಎನ್ನುವ ಸಂಯುಕ್ತಗಳಿವೆ. ಇವು ಉತ್ತಮ ಕೊಲೆಸ್ಟ್ರಾಲ್ ಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ ಎಚ್‍ಡಿಎಲ್ ಹೆಚ್ಚಿಸಿ ಎಲ್‍ಡಿಎಲ್‍ಅನ್ನು ಕಡಿಮೆ ಮಾಡುವಲ್ಲಿ ಧನಾತ್ಮಕ ಫಲಿತಾಂಶವನ್ನು ನೀಡಿದೆ ಎನ್ನಲಾಗಿದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ- ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಇದರಲ್ಲಿರುವ ಪಾಲಿಫಿನಾಲ್ ಅಂಶವು ಕೊಲೆಸ್ಟ್ರಾಲ್ಮಟ್ಟ, ಟ್ರೈಗ್ಲಿಸರೈಡ್, ಫಾಸ್ಫೋಲಿಪಿಡ್ ಮತ್ತು ಎಲ್‍ಡಿಎಲ್‍ಅನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇತರ ತೈಲಗಳಿಗಿಂತ ಇದು ಉತ್ತಮವಾದದ್ದು ಎನ್ನಲಾಗುತ್ತದೆ.

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

For Quick Alerts
ALLOW NOTIFICATIONS
For Daily Alerts

    English summary

    These Indian Foods Help Reduce Cholesterol Quickly

    The good news is cholesterol can be controlled with simple yet powerful lifestyle changes. Here are a few ingredients you can add to your diet without hassles and get your cholesterol under check.
    Story first published: Wednesday, May 31, 2017, 7:02 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more