ಈರುಳ್ಳಿ ಮತ್ತು ಬೆಳ್ಳುಳ್ಳಿ- ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ

By: manu
Subscribe to Boldsky

ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆದಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇದೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸಿಕೊಳ್ಳುತ್ತಾ ಇದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಕೆಲವರಿಗೆ ಇಷ್ಟವಾಗಲ್ಲ. ಯಾಕೆಂದರೆ ಇದರ ಘಾಟು ವಾಸನೆ.

ಅಲ್ಲಿಯುಮ್ಸ್ ಪ್ರಭೇದಕ್ಕೆ ಸೇರಿರುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಅನ್ನು ತಡೆಯುವ ಗುಣಗಳು ಇವೆಯಂತೆ. ಇದರಲ್ಲಿ ಇರುವಂತಹ ಕೆಲವೊಂದು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್‌ನ್ನು ತಡೆಯುತ್ತದೆ. ಕ್ಯಾನ್ಸರ್ ಬರುವ ಮೊದಲೇ ಅದನ್ನು ತಡೆದರೆ ತುಂಬಾ ಒಳ್ಳೆಯದು. ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ವಿಧದ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ...

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್‌ಗಳು ಡಿಎನ್ ಎ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ ಅನ್ನು ತಡೆಯುತ್ತದೆ. ಇದರಲ್ಲಿ ಕ್ಯಾನ್ಸರ್ ಅನ್ನು ತಡೆಯುವಂತಹ ಹಲವಾರು ಗುಣಗಳು ಇವೆ.

ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಒಳ್ಳೆಯದು ಈರುಳ್ಳಿ

ಕ್ಯಾನ್ಸರ್ ನಿಯಂತ್ರಿಸುವ ಶಕ್ತಿ

ಕ್ಯಾನ್ಸರ್ ನಿಯಂತ್ರಿಸುವ ಶಕ್ತಿ

ಕೆಲವೊಂದು ಕಿಣ್ವಗಳಿಗೆ ಶಕ್ತಿಯನ್ನು ನೀಡುವಂತಹ ಅಂಶಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇದೆ. ಇದು ಕ್ಯಾನ್ಸರ್ ಅಂಶಗಳನ್ನು ದುರ್ಬಲಗೊಳಿಸುತ್ತದೆ, ಅಲ್ಲದೆ ಕ್ಯಾನ್ಸರ್ ಅಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಇವು ನೆರವಾಗುವುದು. ಕ್ಯಾನ್ಸರ್ ಕೋಶಗಳು ಬೆಳೆಯುವ ಪ್ರಕ್ರಿಯೆಯನ್ನು ಇವು ನಿಧಾನಗೊಳಿಸುವುದು.

ಈರುಳ್ಳಿಯ ಪವರ್

ಈರುಳ್ಳಿಯ ಪವರ್

ಈರುಳ್ಳಿಯು ಕರುಳಿನ ಕ್ಯಾನ್ಸರ್ ಅನ್ನು ಶೇ.56ರಷ್ಟು, ಸ್ತನ ಕ್ಯಾನ್ಸರ್ ನ್ನು ಶೇ.25ರಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯು ಜನನಾಂಗ ಗ್ರಂಥಿ ಮತ್ತು ಸ್ತನ ಕ್ಯಾನ್ಸರ್ ಹೊರತುಪಡಿಸಿ ಇತರ ಹಲವಾರು ರೀತಿಯ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಸಮರ್ಥವಾಗಿದೆ.

ಹಲವಾರು ವಿಧದ ಕ್ಯಾನ್ಸರ್‌ಗೆ ರಾಮಬಾಣ

ಹಲವಾರು ವಿಧದ ಕ್ಯಾನ್ಸರ್‌ಗೆ ರಾಮಬಾಣ

ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಅಂಶಗಳು ಕರುಳಿನ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಕಿಡ್ನಿಯ ಕ್ಯಾನ್ಸರ್, ಜನನಾಂಗ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಯಕೃತ್ ಕ್ಯಾನ್ಸರ್ ಅನ್ನು ತಡೆಯುತ್ತದೆ.

ಈರುಳ್ಳಿಯನ್ನು ಹಸಿಯಾಗಿ ತಿಂದರೆ ಒಳ್ಳೆಯದು...

ಈರುಳ್ಳಿಯನ್ನು ಹಸಿಯಾಗಿ ತಿಂದರೆ ಒಳ್ಳೆಯದು...

ಈರುಳ್ಳಿಯ ಲಾಭಗಳನ್ನು ಪಡೆಯಬೇಕಾದರೆ ಅದನ್ನು ಯಾವ ರೀತಿಯಿಂದ ತಿನ್ನಬೇಕು? ಈರುಳ್ಳಿಯನ್ನು ಕತ್ತರಿಸಿಕೊಂಡು ಹಸಿಯಾಗಿಯೇ ತಿಂದರೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ಕತ್ತರಿಸಿಕೊಂಡ 15 ನಿಮಿಷದ ಒಳಗಾಗಿ ತಿಂದರೆ ಅದರಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಗಳು ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ.

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

ವಾರದಲ್ಲಿ ಒಂದು ಎಸಲು ಬೆಳ್ಳುಳ್ಳಿ!

ವಾರದಲ್ಲಿ ಒಂದು ಎಸಲು ಬೆಳ್ಳುಳ್ಳಿ!

ವಾರದಲ್ಲಿ ಒಂದು ಎಸಲು ಬೆಳ್ಳುಳ್ಳಿಯನ್ನು ತಿಂದರೆ ಶೇ.30ರಷ್ಟು ಕರುಳಿನ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಎಂದು ಅಮೆರಿಕಾದ ಸಂಶೋಧನೆಯೊಂದು ಹೇಳಿದೆ. ವಾರದಲ್ಲಿ ಐದು ಎಸಲು ಬೆಳ್ಳುಳ್ಳಿ ತಿಂದರೆ ಹೊಟ್ಟೆಯ ಕ್ಯಾನ್ಸರ್ ನ ಸಾಧ್ಯತೆ ಶೇ. 50ರಷ್ಟು ಕಡಿಮೆ ಮಾಡಬಹುದು ಎಂದು ಚೀನಾದ ಅಧ್ಯಯನವೊಂದು ಹೇಳಿದೆ. ಪ್ರತೀ ದಿನ ಬೆಳಿಗ್ಗೆ ಒಂದು ಎಸಲು ಬೆಳ್ಳುಳ್ಳಿ ತಿಂದರೆ ಶ್ವಾಸಕೋಶದ ಕ್ಯಾನ್ಸರ್ ನ ಅಪಾಯವನ್ನು ಶೇ.44ರಷ್ಟು ತಪ್ಪಿಸಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಒಂದೆರಡು ಬೆಳ್ಳುಳ್ಳಿಯ ಎಸಳನ್ನು ಹಸಿಯಾಗಿಯೇ ತಿಂದರೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯನ್ನು ಜಜ್ಜಿಕೊಳ್ಳಿ ಮತ್ತು ಇದು ಹತ್ತು ನಿಮಿಷ ಕಾಲ ಗಾಳಿಯ ಸಂಪರ್ಕದಲ್ಲಿ ಇರಲಿ. ಬೆಳ್ಳುಳ್ಳಿಯನ್ನು ಕತ್ತರಿಸಿ ಗಾಳಿಯೊಂದಿಗೆ ಬೆರೆಯಲು ಬಿಟ್ಟಾಗ ಅದರ ಪರಿಣಾಮ ಹೆಚ್ಚಿರುತ್ತದೆ.

ಈರುಳ್ಳಿ ಬೇಯಿಸಿದ ನೀರು

ಈರುಳ್ಳಿ ಬೇಯಿಸಿದ ನೀರು

ಈರುಳ್ಳಿಯನ್ನು ಬೇಯಿಸುವ ಯೋಚನೆಯಿದ್ದರೆ ಅದರ ನೀರನ್ನು ಬಿಸಾಡಬೇಡಿ. ಯಾಕೆಂದರೆ ಈರುಳ್ಳಿಯಲ್ಲಿರುವ ಕೆಲವೊಂದು ಅಂಶಗಳು ನೀರಿನಲ್ಲಿ ಬೆರೆತಿರುತ್ತದೆ.

ಹಾಗಲಕಾಯಿ-ಈರುಳ್ಳಿ ಮಿಶ್ರಿತ ಜ್ಯೂಸ್‌ನಲ್ಲಿದೆ ಆರೋಗ್ಯದ ಪವರ್

ಈರುಳ್ಳಿ-ಬೆಳ್ಳುಳ್ಳಿ ಸೇವಿಸುವ ವಿಧಾನ

ಈರುಳ್ಳಿ-ಬೆಳ್ಳುಳ್ಳಿ ಸೇವಿಸುವ ವಿಧಾನ

ಎಷ್ಟು ಸೇವಿಸಬೇಕು? ಅರ್ಧ ಕಪ್ ಈರುಳ್ಳಿಯನ್ನು ಪ್ರತಿದಿನ ಸೇವಿಸಿ. ಬೆಳ್ಳುಳ್ಳಿಯಾದರೆ ವಾರದಲ್ಲಿ ಐದು ಎಸಲು ತಿನ್ನಿ. ಹೀಗೆ ಮಾಡುವುದರಿಂದ ಕೆಲವೊಂದು ವಿಧದ ಕ್ಯಾನ್ಸರ್ ತಡೆಯಬಹುದು.

English summary

Do Onions And Garlic Prevent Cancer?

adding onion or garlic, none of your spicy dishes get the taste and flavour. The best thing about both of them is their anti-cancer properties. Yes, this is something else that's common in them. So, let us discuss everything about eating onions and garlic in an attempt to keep many types of cancers at bay.
Story first published: Saturday, May 27, 2017, 7:01 [IST]
Subscribe Newsletter