ಕೊತ್ತಂಬರಿ ಬೀಜ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...

By: Arshad
Subscribe to Boldsky

ವಿವಿಧ ಅಡುಗೆಗೆ ಮಸಾಲೆ ಕಡೆಯಬೇಕಾದರೆ ಅಗತ್ಯವಾಗಿ ಬೇಕಾಗಿರುವ ಒಂದು ಸಾಮಾಗ್ರಿ ಎಂದರೆ ಕೊತ್ತಂಬರಿ ಬೀಜ ಅಥವಾ ಧನಿಯ. ಸಾರು, ಹುರಿದ ತಿಂಡಿಗಳು, ಗರಂ ಮಸಾಲಾ ಮೊದಲಾದವುಗಳಲ್ಲಿ ಧನಿಯ ಕಾಳುಗಳನ್ನು ತಪ್ಪದೇ ಬಳಸಲಾಗುತ್ತದೆ. ಅಡುಗೆಯಲ್ಲಿ ಬೀಜ ಅಥವಾ ಧನಿಯ ಪುಡಿ ಹಾಗೂ ಕೊತ್ತಂಬರಿ ಸೊಪ್ಪನ್ನೂ ಬಳಸಲಾಗುತ್ತದೆ.  ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ!

ಧನಿಯ ಬೀಜಗಳನ್ನು ಪುಡಿಮಾಡಿ ಬಳಸುವುದೇ ಹೆಚ್ಚು. ಆದರೆ ಕೊತ್ತಂಬರಿ ಸೊಪ್ಪನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಕಡೆಯದಾಗಿ ಹಸಿಯಾಗಿಯೇ ಉಪಯೋಗಿಸಲಾಗುತ್ತದೆ. ಕೊತ್ತಂಬರಿ ಇಲ್ಲದೇ ತಯಾರಿಸಿದ ಖಾದ್ಯದ ರುಚಿಯೇ ಬೇರೆಯಾಗಿರುತ್ತದೆ. ಕೊತ್ತಂಬರಿ ಪುಡಿಯಲ್ಲಿರುವ ಪ್ರಯೋಜನಗಳು

ಪೋಷಕಾಂಶಗಳನ್ನು ಗಣನೆಗೆ ತೆಗೆದುಕೊಂಡರೆ ಕೊತ್ತಂಬರಿ ಸೊಪ್ಪಿಗಿಂತಲು ಬೀಜಗಳಲ್ಲಿಯೇ ಇವು ಹೆಚ್ಚಿರುತ್ತವೆ. ಈ ಬೀಜಗಳಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ಹೆಚ್ಚಿನವರು ಅರಿತಿಲ್ಲ. ಬನ್ನಿ, ಕೊತ್ತಂಬರಿ ಬೀಜ ಮತ್ತು ಇದರ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ....  

ಚರ್ಮ ವ್ಯಾಧಿಗಳನ್ನು ಕಡಿಮೆಗೊಳಿಸುತ್ತದೆ

ಚರ್ಮ ವ್ಯಾಧಿಗಳನ್ನು ಕಡಿಮೆಗೊಳಿಸುತ್ತದೆ

ಸಾಮಾನ್ಯ ಚರ್ಮದ ತೊಂದರೆಗಳಾದ ತುರಿಕೆ, ಎಕ್ಸಿಮಾ, ಹುಳಕಡ್ಡಿ, ಕೆಂಪಗಾಗುವುದು, ಉರಿ ಮೊದಲಾದವುಗಳಿಗೆ ಕೊಂಚ ಕೊತ್ತಂಬರಿ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ನಯವಾದ ಲೇಪನ ತಯಾರಿಸಿ ಹೆಚ್ಚಿಕೊಳ್ಳುವ ಮೂಲಕ ಶೀಘ್ರ ಉಪಶಮನ ದೊರಕುತ್ತದೆ.

ಕೂದಲ ಬೆಲವಣಿಗೆ ಹೆಚ್ಚಿಸುತ್ತದೆ

ಕೂದಲ ಬೆಲವಣಿಗೆ ಹೆಚ್ಚಿಸುತ್ತದೆ

ನಿತ್ಯವೂ ಕೊತ್ತಂಬರಿ ಬೀಜವನ್ನು ಅಡುಗೆಯಲ್ಲಿ ಉಪಯೋಗಿಸುವ ಮೂಲಕ ಕೂದಲ ಬುಡಕ್ಕೆ ಹೆಚ್ಚಿನ ಬಲ ದೊರಕುತ್ತದೆ ಹಾಗೂ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ.

ಶೀತ ಮತ್ತು ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ಶೀತ ಮತ್ತು ಫ್ಲೂ ಜ್ವರವನ್ನು ಕಡಿಮೆಗೊಳಿಸುತ್ತದೆ

ಕೊತ್ತಂಬರಿ ಪುಡಿಯಲ್ಲಿ ವಿಟಮಿನ್ ಎ, ಸಿ, ಬೀಟಾ-ಕ್ಯಾರೋಟಿನ್ ಹಾಗೂ ಫೋಲಿಕ್ ಆಮ್ಲಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಸಾಮಾನ್ಯ ಶೀತ ಮತ್ತು ಫ್ಲೂ ಜ್ವರವನ್ನು ತಡೆಗಟ್ಟಲು ಸಮರ್ಥವಾಗಿವೆ.

ಮಧುಮೇಹದ ಚಿಕಿತ್ಸೆಗೆ ಸಹಕರಿಸುತ್ತದೆ

ಮಧುಮೇಹದ ಚಿಕಿತ್ಸೆಗೆ ಸಹಕರಿಸುತ್ತದೆ

ಕೊತ್ತಂಬರಿ ಬೀಜಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಾಮಾನ್ಯ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ಮಧುಮೇಹಕ್ಕೆ ನೀಡಲಾಗುವ ಚಿಕಿತ್ಸೆಗೆ ದೇಹ ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ.

ಜೀರ್ಣಕ್ರಿಯೆಯನ್ನುಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನುಉತ್ತಮಗೊಳಿಸುತ್ತದೆ

ಕೊತ್ತಂಬರಿ ಪುಡಿಯಲ್ಲಿರುವ ಪೋಷಕಾಂಶಗಳು ಜೀರ್ಣಾಂಗಗಳಲ್ಲಿ ಹೆಚ್ಚಿನ ಜೀರ್ಣರಸವನ್ನು ಉತ್ಪತ್ತಿಯಾಗಲು ನೆರವಾಗುವ ಮೂಲಕ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ.

ಮಹಿಳೆಯರ ಮಾಸಿಕ ದಿನಗಳನ್ನು ಕ್ರಮಬದ್ಧವಾಗಿಸುತ್ತದೆ

ಮಹಿಳೆಯರ ಮಾಸಿಕ ದಿನಗಳನ್ನು ಕ್ರಮಬದ್ಧವಾಗಿಸುತ್ತದೆ

ಒಂದು ವೇಳೆ ಮಾಸಿಕ ಸ್ರಾವ ತೀವ್ರವಾಗಿದ್ದರೆ ನಿಮ್ಮ ಆಹಾರದಲ್ಲಿ ನಿತ್ಯವೂ ಕೊತ್ತಂಬರಿ ಬೀಜಗಳು ಹೆಚ್ಚಿರುವಂತೆ ವೈದ್ಯರು ಸಲಹೆ ಮಾಡುತ್ತಾರೆ. ಇದು ಮಾಸಿಕ ದಿನಗಳನ್ನು ಕ್ರಮಬದ್ಧವಾಗಿಸಲು ನೆರವಾಗುವ ಜೊತೆಗೇ ಈ ದಿನಗಳಲ್ಲಿ ಕಾಡುವ ನೋವನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ.

 
English summary

Amazing Health Benefits Of Coriander Seeds

It is considered better to go for coriander seeds instead of coriander leaves due to the former's abundant health benefits. Many people are actually not aware of the health benefits that these seeds have for your health. So, continue reading to know more about the health benefits of coriander seeds.
Please Wait while comments are loading...
Subscribe Newsletter