ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

By: manu
Subscribe to Boldsky

ಅರೆ ತೆಂಗಿನ ಎಣ್ಣೆ ಕೂದಲಿಗೆ ಒಳ್ಳೆಯದಲ್ಲವೇ? ಕರಾವಳಿಯಲ್ಲಿ ತೆಂಗಿನ ಎಣ್ಣೆಯನ್ನು ಅಡುಗೆಗೂ ಸಹ ಬಳಸುತ್ತಾರೆ? ಓಹ್ ತೆಂಗಿನ ಎಣ್ಣೆಯನ್ನು ಹಲ್ಲುಜ್ಜಲು ಸಹ ಬಳಸಬಹುದೇ? ಎಂಬಿತ್ಯಾದಿ ಪ್ರಶ್ನೆಗಳು ಈ ಶೀರ್ಷಿಕೆಯನ್ನು ನೋಡಿದ ತಕ್ಷಣ ನಿಮ್ಮ ಮನದಲ್ಲಿ ಮೂಡಿರಬೇಕಲ್ಲವೇ?  ಇದು ಕೊಬ್ಬರಿ ಎಣ್ಣೆಯಿಂದ ತಯಾರಿಸಿದ 'ಹಲ್ಲುಜ್ಜುವ ಪೇಸ್ಟ್'!

ಅದೆಲ್ಲ ಇರಲಿ ಸರಿಯಾದ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲವೆಂದಾದಲ್ಲಿ, ನಿಮ್ಮ ಹಲ್ಲುಗಳ ಆರೋಗ್ಯ ಹಾಳಾಗುತ್ತವೆ. ದಂತಕುಳಿ, ದಂತ ಸವಕಳಿ ಮತ್ತು ಹಲ್ಲು ನೋವು ಇತ್ಯಾದಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಹಲ್ಲು ನೋವು ತಾನೇ ಎಂದು ಉದಾಸೀನ ಮಾಡಲು ಹೋಗಬೇಡಿ. ಈ ನೋವು ಹೃದ್ರೋಗ, ಡಿಮೆನ್ಶಿಯಾ ಮತ್ತು ಉಸಿರಾಟದ ಸಮಸ್ಯೆಗಳ ಜೊತೆಗೆ ತಳುಕು ಹಾಕಿಕೊಂಡಿರುತ್ತವೆ. ಹಲ್ಲುಗಳು ಕಪ್ಪೆಂದು ಕೊರಗಬೇಡಿ, ಬೆಳ್ಳಗಾಗಲು ಹೀಗೆ ಮಾಡಿ

ನಿಮ್ಮ ಸಾಮಾನ್ಯ ಟೂಥ್‌ಪೇಸ್ಟ್ ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ಅದರಲ್ಲಿಯೂ ನಮ್ಮಲ್ಲಿ ಬಹುತೇಕ ಜನ ಫ್ಲಾಸ್ಸಿಂಗ್ ಸಹ ಮಾಡುವುದಿಲ್ಲ. ಹಾಗಾಗಿ ನಮ್ಮ ಬಾಯಿಯ ಆರೋಗ್ಯ ಹಾಳಾಗುವುದು ಸಹಜ. ಬನ್ನಿ ಇದಕ್ಕೆ ಪರಿಹಾರವಾಗಿಯೇ ನಾವು ನೀಡುತ್ತಿದ್ದೇವೆ. ತೆಂಗಿನ ಎಣ್ಣೆಯ ಪರಿಹಾರವನ್ನು. ಮುಂದೆ ಓದಿ ಇದನ್ನು ಹೇಗೆ ಮಾಡುವುದು ಎಂದು ತಿಳಿದುಕೊಂಡು ಅದನ್ನು ಉಪಯೋಗಿಸಿಕೊಳ್ಳಿ....  

ಅಗತ್ಯವಾದ ಪದಾರ್ಥಗಳು

ಅಗತ್ಯವಾದ ಪದಾರ್ಥಗಳು

ಇದಕ್ಕಾಗಿ ನಿಮಗೆ ಮೂರು ಟೇಬಲ್ ಸ್ಪೂನ್ ತೆಂಗಿನ ಎಣ್ಣೆ, ಒಂದು ಹನಿ ಪುದೀನಾ ಎಣ್ಣೆ (ಪೆಪ್ಪರ್‌ಮಿಂಟ್ ಎಣ್ಣೆ) ಮತ್ತು 2 ಟೇಬಲ್‌ಸ್ಪೂನ್ ಬೇಕಿಂಗ್ ಸೋಡಾ (ಅಡುಗೆ ಸೋಡಾ) ಬೇಕಾಗುತ್ತದೆ.

ಹಂತ #1

ಹಂತ #1

ಈ ಮೇಲಿನ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಚೆನ್ನಾಗಿ ಬೆರೆಸಿ. ಇದರಿಂದ ಪೇಸ್ಟ್ ಒಂದನ್ನು ತಯಾರಿಸಿಕೊಳ್ಳಿ.

ಹಂತ #2

ಹಂತ #2

ಇದನ್ನು ಮಾಮೂಲಿ ಟೂತ್ ಪೇಸ್ಟ್‌ನಂತೆ ಬ್ರಶ್ ಮಾಡಿ. ಇನ್ನೊಂದು ವಿಧಾನವೆಂದರೆ ತೆಂಗಿನ ಎಣ್ಣೆಯಿಂದ ಹದಿನೈದು ನಿಮಿಷಗಳ ಕಾಲ ಆಯಿಲ್ ಪುಲ್ಲಿಂಗ್ ಮಾಡಿ.

ತೆಂಗಿನ ಎಣ್ಣೆಯೇ ಏಕೆ ಬೇಕು?

ತೆಂಗಿನ ಎಣ್ಣೆಯೇ ಏಕೆ ಬೇಕು?

ಹಲವಾರು ಅಧ್ಯಯನಗಳು ತೆಂಗಿನ ಎಣ್ಣೆ ಟೂತ್ ಪೇಸ್ಟ್‌ಗೆ ಪರಿಣಾಮಕಾರಿಯಾದ ಬದಲಿ ಉತ್ಪನ್ನ ಎಂದು ಸಾಭೀತು ಮಾಡಿವೆ. ಹಾಗು ಇದರಲ್ಲಿ ಸ್ವಾಭಾವಿಕವಾದ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇದ್ದು, ಇದು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗು ಟಾಕ್ಸಿನ್‌ಗಳು ನಿವಾರಿಸುತ್ತದೆ.

ದಂತ ಸವಕಳಿ

ದಂತ ಸವಕಳಿ

ತೆಂಗಿನ ಎಣ್ಣೆಯು ದಂತ ಸವಕಳಿಯನ್ನು ಇನ್ನಿತರ ಓರಲ್-ಕ್ಲೀನ್ಸಿಂಗ್ ಉತ್ಪನ್ನಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ.

ದಂತ ಕುಳಿ

ದಂತ ಕುಳಿ

ಒಂದು ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯು ಪ್ಲಾಕ್ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತದೆಯಂತೆ. ತೆಂಗಿನ ಎಣ್ಣೆಯನ್ನು 20-25 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ವ್ಯತ್ಯಾಸವನ್ನು ಗಮನಿಸಿ. ಮಸಾಜ್‌ಗಾಗಿ 9-10 ನಿಮಿಷ ಸಮಯ ನೀಡಿ.

ಟೂತ್‌ಪೇಸ್ಟ್ ಏಕೆ ಬೇಡ?

ಟೂತ್‌ಪೇಸ್ಟ್ ಏಕೆ ಬೇಡ?

ಟೂತ್‌ಪೇಸ್ಟ್‌ನಲ್ಲಿ ಟ್ರೈಕ್ಲೋಸನ್ ಎಂಬ ಆಂಟಿಬ್ಯಾಕ್ಟೀರಿಯಾ ಅಂಶವಿರುತ್ತದೆ. ಇದರಲ್ಲಿರುವ ರಾಸಾಯಾನಿಕವು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ಮೇಲೆ ನಿರೋಧಕತೆಯನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿರುವ ಎಂಡೋಕ್ರೈನ್‌ಗಳ ಮೇಲೆ ಪರಿಣಾಮ ಬೀರುತ್ತದೆ.ಜೊತೆಗೆ ಟೂತ್‌ಪೇಸ್ಟ್‌ನಲ್ಲಿರುವ ಫ್ಲೋರೈಡ್ ಅಂಶವು ಸಹ ದೇಹಕ್ಕೆ ಒಳ್ಳೆಯದಲ್ಲ.

 
English summary

Brush Your Teeth With Coconut Oil

If your oral hygiene isn't in place, you are inviting tooth decay, cavities and other related issues too. Yes, poor oral health is indirectly linked to several other issues like heart disease, dementia and breathing problems too. Of course, most of us don't have time for flossing and other procedures that keep the teeth clean. Is there any way to boost oral health? Well, here is one simple remedy that can help you much better than regular brushing.
Subscribe Newsletter