For Quick Alerts
ALLOW NOTIFICATIONS  
For Daily Alerts

ಒಂದು ಸಣ್ಣ ಡಬ್ಬ 'ವಿಕ್ಸ್ ವೇಪೋರಬ್‌'ನಲ್ಲಿದೆ ಹತ್ತಾರು ಲಾಭ!

By Arshad
|

ವಿಕ್ಸ್ ವೇಪೋರಬ್‌ ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ವಿಶ್ವದಾದ್ಯಂತ ಶೀತ ಕೆಮ್ಮು ನೆಗಡಿಗೆ ಸಿದ್ಧೌಷಧಿಯ ರೂಪದಲ್ಲಿ ಬಳಸಲ್ಪಡುತ್ತಾ ಬಂದಿದೆ. ವಿಕ್ಸ್ ಇಲ್ಲದ ಮನೆಯೇ ಇಲ್ಲವೆನ್ನಬಹುದು. ಮುಖ್ಯವಾಗಿ ಕಟ್ಟಿರುವ ಮೂಗು ತೆರೆಯಲು ವಿಕ್ಸ್ ಬೇಕೇ ಬೇಕು ಎಂದಾಗಿದೆ.

ಇದರ ಪರಿಮಳ ನಮಗೆಲ್ಲಾ ಎಷ್ಟು ಪರಿಚಿತ ಎಂದರೆ ಇದಕ್ಕೆ ಹತ್ತಿರವಿರುವ ಯಾವುದೇ ಪರಿಮಳವನ್ನು ವಿಕ್ಸ್ ಪರಿಮಳಕ್ಕೆ ಹೋಲಿಸಲಾಗುತ್ತದೆ. ಆದರೆ ವಿಕ್ಸ್ ನ ಉಪಯೋಗ ಇಷ್ಟಕ್ಕೇ ಸೀಮಿತವಾಗಿಲ್ಲ. ಇದನ್ನು ತಯಾರಿಸುವವರಿಗೂ ಗೊತ್ತಿರದ ಕೆಲವಾರು ಪ್ರಯೋಜನಗಳು ಅಚ್ಚರಿ ತರುವಂತಹದ್ದಾಗಿವೆ. ಈ ವಿನೂತನ ಪ್ರಯೋಗಗಳನ್ನು ಪ್ರಯತ್ನಿಸಬಯಸುವಿರೇ?

ಕಟ್ಟಿಕೊಂಡಿರುವ ಎದೆಯನ್ನು ತೆರೆಯುತ್ತದೆ

ಕಟ್ಟಿಕೊಂಡಿರುವ ಎದೆಯನ್ನು ತೆರೆಯುತ್ತದೆ

ವಿಕ್ಸ್ ಅನ್ನು ಪ್ರಮುಖವಾಗಿ ಕಟ್ಟಿಕೊಂಡಿರುವ ಗಂಟಲು ಹಾಗೂ ಎದೆಯನ್ನು ತೆರೆಯಲು ಬಳಸಲಾಗುತ್ತದೆ. ವಿಕ್ಸ್ ಅನ್ನು ತೆಳುವಾಗಿ ಎದೆಯ ಮೇಲ್ಭಾಗ ಹಾಗೂ ಗಂಟಲ ಹೊರಭಾಗದಲ್ಲಿ ಹಚ್ಚಿಕೊಂಡಾಗ ಕಫ ಕರಗಿ ಕೆಮ್ಮು ಹಾಗೂ ಇತರ ತೊಂದರೆಗಳು ನಿವಾರಣೆಯಾಗುತ್ತದೆ.

 ಕೆಮ್ಮು ನಿವಾರಣೆಗೆ ಪಾದಕ್ಕೆ ಹಚ್ಚಿಕೊಳ್ಳಿ

ಕೆಮ್ಮು ನಿವಾರಣೆಗೆ ಪಾದಕ್ಕೆ ಹಚ್ಚಿಕೊಳ್ಳಿ

ಒಂದು ವೇಳೆ ಕೆಮ್ಮು ಸತತವಾಗಿದ್ದು ವಿಶೇಷವಾಗಿ ರಾತ್ರಿ ಹೊತ್ತು ನಿದ್ದೆ ಭಂಗಗೊಳಿಸುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಎರಡೂ ಪಾದಗಳ ಅಡಿಗೆ ಸಾಕಷ್ಟು ಪ್ರಮಾಣದಲ್ಲಿ ವಿಕ್ಸ್ ಹಚ್ಚಿ ಬೆಚ್ಚಗಿನ ಕಾಲುಚೀಲ ಧರಿಸಿ ಪವಡಿಸಿ. ರಾತ್ರಿ ನಿಮ್ಮ ನಿದ್ದೆ ಗಾಢವಾಗುವುದು ಮಾತ್ರವಲ್ಲ, ಬೆಳಿಗ್ಗೆದ್ದಾ ಕೆಮ್ಮು ಇಲ್ಲದೇ ಸರಾಗವಾದ ಉಸಿರಾಟದ ಮೂಲಕ ನವತಾರುಣ್ಯದ ಮಹಿಳೆಯಾಗಿರುತ್ತೀರಿ.

ಮೈ ಕೈ ನೋವು ನಿವಾರಣೆಗೆ

ಮೈ ಕೈ ನೋವು ನಿವಾರಣೆಗೆ

ಇಡಿಯ ದಿನದ ಮೈಮುರಿಯುವ ಕೆಲಸದಿಂದ ಸಂಜೆ ಇಡಿಯ ದೇಹ ನೋವಿನಿಂದ ನಲುಗುತ್ತಿದ್ದರೆ ಇದಕ್ಕೂ ವಿಕ್ಸ್ ನೆರವಾಗುತ್ತದೆ. ನೋವಿರುವ ಭಾಗಗಳಿಗೆಲ್ಲಾ ವಿಕ್ಸ್ ಹಚ್ಚಿಕೊಳ್ಳುವ ಮೂಲಕ ದೇಹದಲ್ಲಿ ರಕ್ತಪರಿಚಲನೆ ಚುರುಕುಗೊಳ್ಳುತ್ತದೆ ಹಾಗೂ ತನ್ಮೂಲಕ ಬೆಳಿಗ್ಗೆದ್ದಾಗ ನೋವಿಲ್ಲದ ದೇಹ ಲವಲವಿಕೆಯಿಂದ ಕೂಡಿರುತ್ತದೆ. ಆದರೆ ಇದರ ಪರಿಮಳ ಸಂಗಾತಿಗೆ ಕಿರಿಕಿರಿ ಎನಿಸುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಮೊದಲೇ ಹೇಳಿದ್ದರೆ ಒಳ್ಳೆಯದು.

ಉಗುರಿನ ಸಂಧುಗಳ ಸೋಂಕು ನಿವಾರಣೆಗೆ

ಉಗುರಿನ ಸಂಧುಗಳ ಸೋಂಕು ನಿವಾರಣೆಗೆ

ಒಂದು ವೇಳೆ ಕಾಲುಬೆರಳುಗಳ ಉಗುರುಗಳ ಅಡಿಯಲ್ಲಿ ಶಿಲೀಂಧ್ರದ ಸೋಂಕು ಉಂಟಾಗಿರುವ ಅನುಮಾನವಿದ್ದರೆ ವಿಕ್ಸ್ ಹಚ್ಚಿಕೊಳ್ಳುವ ಮೂಲಕ ಒಂದು ವೇಳೆ ಸೋಂಕು ಇದ್ದರೆ ನಿವಾರಣೆಯಾಗುತ್ತದೆ. ಇದನ್ನು ಕೆಲವಾರು ದಿನಗಳವರೆಗೆ ಮುಂದುವರೆಸಬೇಕು. ಕ್ರಮೇಣ ಉಗುರಿನ ಅಡಿಯಭಾಗ ಗಾಢವಾಗುತ್ತಾ ಹೋಗುತ್ತದೆ. ಅಂದರೆ ಇಲ್ಲಿನ ಶಿಲೀಂಧ್ರ ನಾಶವಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ಕನಿಷ್ಟ ಎರಡು ವಾರಗಳವರೆಗಾದರೂ ಹಚ್ಚಿಕೊಳ್ಳುತ್ತಿರಬೇಕು. ಇದರಿಂದ ಅಳಿದುಳಿದ ಸೋಂಕು ಸಹಾ ನಿವಾರಣೆಯಾಗುತ್ತದೆ.

ಬೆಕ್ಕನ್ನು ಕೆರೆಯುವುದರಿಂದ ತಡೆಯಲು

ಬೆಕ್ಕನ್ನು ಕೆರೆಯುವುದರಿಂದ ತಡೆಯಲು

ಬೆಕ್ಕುಗಳು ಕುತೂಹಲವುಳ್ಳ ಪ್ರಾಣಿಗಳಾಗಿದ್ದು ಯಾವುದೇ ಗಟ್ಟಿವಸ್ತುವನ್ನು ತಮ್ಮ ಉಗುರುಗಳಿಂದ ಕೆರೆದು ನೋಡುವ ಕುತೂಹಲ ಹೊಂದಿವೆ. ನಿಮ್ಮ ಮನೆಯ ಸುಂದರ ಬಾಗಿಲು, ಗೋಡೆ, ಕಿಟಕಿಗಳನ್ನೆಲ್ಲಾ ನಿಮ್ಮ ಸಾಕುಬೆಕ್ಕು ಕೆರೆದು ವಿರೂಪಗೊಳಿಸುವುದನ್ನು ತಡೆಯಲು ಹೀಗೆ ಮಾಡಿ. ಕೊಂಚ ವಿಕ್ಸ್ ವಿಪೋರಬ್ ಅನ್ನು ಬೆಕ್ಕು ಸಾಮಾನ್ಯವಾಗಿ ಕೆರೆಯುವ ಸ್ಥಳಗಳಲ್ಲೆಲ್ಲಾ ತೆಳುವಾಗಿ ಹೆಚ್ಚಿ. ವಿಕ್ಸ್ ನ ಪರಿಮಳನ್ನು ಸೂಕ್ಷ್ಮಘ್ರಾಣಿಯಾದ ಬೆಕ್ಕು ಸಹಿಸುವುದಿಲ್ಲ ಹಾಗೂ ಈ ವಾಸನೆಯಿಂದ ದೂರ ಓಡುತ್ತದೆ. ಒಂದು ವೇಳೆ ನಿಮ್ಮ ಮೈ ಕೆರೆಯುವ ಅಭ್ಯಾಸವಿದ್ದರೂ ಈ ಭಾಗದಲ್ಲಿ ಕೊಂಚ ವಿಕ್ಸ್ ಹಚ್ಚಿಕೊಳ್ಳಿ, ಬೆಕ್ಕು ನಿಮ್ಮ ತಂಟೆಗೆ ಬರದು.

ಸಾಕುಪ್ರಾಣಿಗಳು ಮನೆಯೊಳಗೆ ಗಲೀಜು ಮಾಡದಂತೆ ತಡೆಯಲು

ಸಾಕುಪ್ರಾಣಿಗಳು ಮನೆಯೊಳಗೆ ಗಲೀಜು ಮಾಡದಂತೆ ತಡೆಯಲು

ಒಂದು ವೇಳೆ ನಿಮ್ಮ ಸಾಕುಪ್ರಾಣಿಯಾದ ಬೆಕ್ಕು ಅಥವಾ ನಾಯಿ ಮನೆಯೊಳಗೇ ಗಲೀಜು ಮಾಡುವ ಅಭ್ಯಾಸ ಹೊಂದಿದ್ದರೆ ಹೀಗೆ ಮಾಡಿ. ಇವು ಸಾಮಾನ್ಯವಾಗಿ ನಿಮ್ಮ ಮನೆಯ ಕೆಲವು ಭಾಗಗಳನ್ನು ತಮ್ಮ ಗಡಿಯನ್ನಾಗಿ ಪರಿಗಣಿಸಿರುತ್ತವೆ. ಇಲ್ಲೆಲ್ಲಾ ಒಂದು ಚಿಕ್ಕ ತೆರೆದ ಬಾಟಲಿಯಲ್ಲಿ ವಿಕ್ಸ್ ಹಾಕಿ ಇರಿಸಿ. ಇದರ ಪರಿಮಳದಿಂದ ನಿಮ್ಮ ಸಾಕುಪ್ರಾಣಿಗಳು ತಮ್ಮ ಗಡಿಯನ್ನು ಅಲ್ಲಿಂದ ಬೇರೆಲ್ಲೋ ಕೊಂಡೊಯ್ಯುತ್ತವೆ. ಪರಿಣಾಮವಾಗಿ ನಿಮ್ಮ ಮನೆಯ ಕಾರ್ಪೆಟ್, ನೆಲಗಳು ಸ್ವಚ್ಛವಾಗಿ ಉಳಿಯುತ್ತವೆ.

ತಲೆನೋವಿನ ನಿವಾರಣೆಗೆ

ತಲೆನೋವಿನ ನಿವಾರಣೆಗೆ

ಒಂದು ವೇಳೆ ನಿಮ್ಮ ತಲೆಯಲ್ಲಿ ನೋವಿದ್ದರೆ ಕೊಂಚ ವಿಕ್ಸ್ ಅನ್ನು ಹಣೆಯ ಪಕ್ಕದ ಭಾಗ ಹಾಗೂ ಹಣೆಯ ಮೇಲೆ ತೆಳುವಾಗಿ ಹಚ್ಚಿಕೊಳ್ಳಿ. ಕಣ್ಣುಗಳ ಬಳಿ ಹಚ್ಚಬೇಡಿ, ಇದು ಕಣ್ಣುಗಳಿಗೆ ಉರಿ ತರಿಸಬಹುದು. ಇದರ ಮೆಂಥಾಲ್ ಯುಕ್ತ ಪರಿಮಳ ರಕ್ತನಾಳಗಳ ಮೇಲಿನ ಒತ್ತಡವನ್ನು ಕಡಿಮೆಯಾಗಿಸಿ ಹೆಚ್ಚಿನ ರಕ್ತಸಂಚಾರ ಒದಗಿಸುವ ಮೂಲಕ ತಲೆನೋವನ್ನು ಇಲ್ಲವಾಗಿಸುತ್ತದೆ.

ನಿಮ್ಮ ನಿದ್ದೆಯಲ್ಲಿ ಹೆಚ್ಚಿನ ಆರ್ದ್ರತೆಗೆ

ನಿಮ್ಮ ನಿದ್ದೆಯಲ್ಲಿ ಹೆಚ್ಚಿನ ಆರ್ದ್ರತೆಗೆ

ಇಂದು ಮನೆಯೊಳಗೆ ಹೆಚ್ಚಿನ ಆದ್ರತೆ ನೀಡಲು ಹ್ಯೂಮಿಡಿಫಯರ್, ವೇಪೋರೈಸರ್ ಅಥವಾ ತೇವ ಒದಗಿಸುವ ಯಂತ್ರಗಳನ್ನು ಬಳಸಲಾಗುತ್ತದೆ. ಈ ಉಪಕರಣಗಳಲ್ಲಿ ಸಾಮಾನ್ಯವಾಗಿ ಸುಗಂಧವನ್ನು ಬೆರೆಸಿ ಆರ್ದ್ರತೆಯೊಂದಿಗೆ ಕೋಣೆಯಲ್ಲಿ ಪಸರಿಸಲು ಸೌಲಭ್ಯ ನೀಡಲಾಗಿರುತ್ತದೆ. ಈ ಸೌಲಭ್ಯವಿರುವ ಉಪಕರಣದಲ್ಲಿ ಸುಗಂಧದ್ರವ್ಯದ ಬದಲು ವಿಕ್ಸ್ ಬಳಸಿದರೆ ರಾತ್ರಿ ನಿಮಗೆ ಗಾಢನಿದ್ದೆ ಆವರಿಸುವುದು ಮಾತ್ರವಲ್ಲ, ಉಸಿರಾಟವೂ ಸರಾಗವಾಗುತ್ತದೆ.

ಚಿಕ್ಕ ಪುಟ್ಟ ಗಾಯಗಳು, ಬೊಬ್ಬೆಗಳಿಗೆ

ಚಿಕ್ಕ ಪುಟ್ಟ ಗಾಯಗಳು, ಬೊಬ್ಬೆಗಳಿಗೆ

ನಿತ್ಯದ ಕೆಲಸಗಳಲ್ಲಿ ಎದುರಾಗುವ ಚಿಕ್ಕ ಪುಟ್ಟ ಗಾಯ, ಬೊಬ್ಬೆ ಮೊದಲಾದವುಗಳನ್ನು ಶೀಘ್ರವಾಗಿ ಮಾಗಿಸಿ ಸೋಂಕಿನಿಂದ ರಕ್ಷಿಸಲು ಕೊಂಚ ವಿಕ್ಸ್ ಅನ್ನು ಈ ಭಾಗದ ಮೇಲೆ ಹಚ್ಚಿಕೊಳ್ಳಿ.

ಕೀಟ ಕಡಿತದ ಉರಿ ಕಡಿಮೆ ಮಾಡಲು

ಕೀಟ ಕಡಿತದ ಉರಿ ಕಡಿಮೆ ಮಾಡಲು

ಒಂದು ವೇಳೆ ಸೊಳ್ಳೆ ಅಥವಾ ಇತರ ಕೀಟಗಳ ಕಡಿತದಿಂದ ಗುಳ್ಳೆ ಎದ್ದು ಭಾರೀ ಉರಿ ಎದುರಾದರೆ ತಕ್ಷಣವೇ ಕೊಂಚ ವಿಕ್ಸ್ ಹಚ್ಚಿಕೊಳ್ಳಬೇಕು. ಇದರಿಂದ ಉರಿ ಕಡಿಮೆಯಾಗುತ್ತದೆ. ಕೀಟಗಳು ಹೆಚ್ಚಿರುವ ಸ್ಥಳಗಳಲ್ಲಿದ್ದರೆ ಮುಂಚಿತವಾಗಿಯೇ ವಿಕ್ಸ್ ಹಚ್ಚಿಕೊಂಡರೆ ಈ ಪರಿಮಳಕ್ಕೆ ಕೀಟಗಳು ಹತ್ತಿರ ಬರುವುದಿಲ್ಲ.

ರೇಸ್ ಕುದುರೆಯ ಗುರಿ ಹೆಚ್ಚಿಸಲು

ರೇಸ್ ಕುದುರೆಯ ಗುರಿ ಹೆಚ್ಚಿಸಲು

ವೃತ್ತಿಪರ ರೇಸ್ ಕುದುರೆಗಳು ಕೆಲವೊಮ್ಮೆ ಹೆಣ್ಣುಕುದುರೆಗಳ ವಾಸನೆಯಿಂದ ತಮ್ಮ ಗುರಿಯಿಂದ ವಿಮುಖಗೊಳ್ಳುತ್ತವೆ. ಹೀಗಾಗದಿರಲು ಕುದುರೆಯ ಮೂಗಿನ ಹೊಳ್ಳೆಗಳಿಗೆ ಕೊಂಚ ವಿಕ್ಸ್ ಹಚ್ಚುವ ಮೂಲಕ ಕುದುರೆ ತನ್ನ ರೇಸ್ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ.

ಕೋಣೆಯ ದುರ್ಗಂಧ

ಕೋಣೆಯ ದುರ್ಗಂಧ

ನಿವಾರಿಸಲು ಕೋಣೆಯಲ್ಲಿ ಯಾವುದೋ ಕಾರಣದಿಂದಾಗಿ ಕೆಟ್ಟ ವಾಸನೆ ಆವರಿಸಿದ್ದರೆ ಇದನ್ನು ಹೊರಹಾಕಿ ವಾತಾವಣವನ್ನು ಆರೋಗ್ಯಕರವಾಗಿಸಲು ವಿಕ್ಸ್ ನೆರವಿಗೆ ಬರುತ್ತದೆ. ಕೋಣೆಯಲ್ಲಿ ಆವಿಯನ್ನು ಸೂಸುವ ವೆಪೋರೈಸರ್ ನಲ್ಲಿ ಕೊಂಚ ನೀರು ತುಂಬಿ ಇದರ ಮೇಲೆ ಕೊಂಚವೇ ವಿಕ್ಸ್ ವೆಪೋರಬ್ ಸೇರಿಸಿ ಉಪಕರಣವನ್ನು ಚಾಲೂ ಮಾಡಿ. ಕೊಂಚವೇ ಹೊತ್ತಿನಲ್ಲಿ ಕೋಣೆಯಲ್ಲಿ ತುಂಬಿಕೊಳ್ಳುವ ವಿಕ್ಸ್ ನ ಪರಿಮಳ ದುರ್ಗಂಧವನ್ನು ಹೊಡೆದೋಡಿಸುತ್ತದೆ. ವಿಕ್ಸ್ ನ ನವಿರಾದ ಪುದೀನಾದಂತಹ ಪರಿಮಳವನ್ನು ಎಲ್ಲರೂ ಇಷ್ಟಪಡುವ ಕಾರಣ ವಾತಾವರಣದಲ್ಲಿ ಆಹ್ಲಾದತೆ ಮೂಡುತ್ತದೆ. ಈ ಗಾಳಿಯನ್ನು ಸೇವಿಸುವ ಮೂಲಕ ಶೀತವಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಒಡೆದ ತುಟಿಗಳಿಗೆ

ಒಡೆದ ತುಟಿಗಳಿಗೆ

ಚಳಿ ಅಥವಾ ಆರ್ದ್ರತೆ ಇಲ್ಲದ ವಾತಾವರಣದ ಕಾರಣ ಸಾಮಾನ್ಯವಾಗಿ ತುಟಿಗಳು ಒಡೆಯುತ್ತವೆ. ದೈಹಿಕವಾದ ಇತರ ಕಾರಣಗಳಿಂದಲೂ ತುಟಿಗಳು ಒಡೆಯಬಹುದು, ರಕ್ತ ಬರಬಹುದು ಹಾಗೂ ಪೊರೆ ಏಳಬಹುದು. ಇದಕ್ಕೆ ತುಟಿಯ ಚರ್ಮಕ್ಕೆ ಆರ್ದ್ರತೆ ನೀಡುವುದು ಅಗತ್ಯ. ಈ ಕೆಲಸವನ್ನು ವಿಕ್ಸ್ ಸಮರ್ಥವಾಗಿ ಮಾಡುತ್ತದೆ. ಒಣಗಿ ಒಡೆದ ತುಟಿಗಳಿಗೆ ಕೊಂಚ ವಿಕ್ಸ್ ಅನ್ನು ತುಟಿಗಳಿಗೆ ತೆಳುವಾಗಿ ದಿನಕ್ಕೊಂದು ಬಾರಿ ಹಚ್ಚಿ.

ಸೊಳ್ಳೆಗಳನ್ನು ಓಡಿಸಲು

ಸೊಳ್ಳೆಗಳನ್ನು ಓಡಿಸಲು

ವಿಕ್ಸ್ ನ ಪರಿಮಳ ಇದ್ದೆಡೆ ಸೊಳ್ಳೆಗಳು ಬರುವುದಿಲ್ಲ. ನಿಮ್ಮ ಪರಿಸರದಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದರೆ ಕೊಂಚ ವಿಕ್ಸ್ ಅನ್ನು ಚರ್ಮದ ಮೇಲೆ ಹಾಗೂ ನಿಮ್ಮ ಬಟ್ಟೆಗಳ ಮೇಲೆ ಹಚ್ಚಿಕೊಳ್ಳಿ. ಒಂದು ವೇಳೆ ಸೊಳ್ಳೆ ಕಚ್ಚಿದರೆ ತಕ್ಷಣ ಕೊಂಚ ವಿಕ್ಸ್ ಹಚ್ಚಿಕೊಳ್ಳಿ ಹಾಗೂ ಒಂದು ಬ್ಯಾಂಡ್ ಏಡ್ ಪಟ್ಟಿಯಿಂದ ಆವರಿಸಿ. WebMD ತಾಣದ ಪ್ರಕಾರ ಒಂದು ವೇಳೆ ವಿಕ್ಸ್ ಅನ್ನು ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಉಪಯೋಗಿಸದಿದ್ದರೆ ಕೆಲವು ತೊಂದರೆಗಳು ಎದುರಾಗಬಹುದು. ಕೆಲವು ಮಕ್ಕಳ ಮೂಗಿನ ಕೆಳಗೆ ವಿಕ್ಸ್ ಹಚ್ಚಿದಾಗ ಇದರ ಘಾಟನ್ನು ತಡೆಯಲಾರದೇ ಮಕ್ಕಳು ಆಸ್ಪತ್ರೆ ಸೇರುವಂತಾಗಿತ್ತು. ಆದ್ದರಿಂದ ಮಕ್ಕಳು ಅಥವಾ ಹಿರಿಯರು ಯಾರೇ ಆಗಲಿ ವಿಕ್ಸ್ ಆಲರ್ಜಿಕಾರಕವಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ವಿಕ್ಸ್ ನ ಉಪಯೋಗ ಇಷ್ಟೆಲ್ಲಾ ಇರುವಾಗ ನಿಮ್ಮ ಮನೆಯಲ್ಲಿ ವಿಕ್ಸ್ ಇಲ್ಲದೇ ಇದ್ದರೆ ಇದೊಂದು ದೊಡ್ಡ ಕೊರತೆಯಾಗುತ್ತದೆ. ಆದ್ದರಿಂದ ಇದರ ಪರಿಮಳ ನಿಮ್ಮ ಕೆಲವು ಸ್ನೇಹಿತರಿಗೆ ಇಷ್ಟವಾಗದೇ ಇದ್ದರೂ ಇದರ ಪ್ರಯೋಜನಗಳನ್ನು ಅಲ್ಲಗಳೆಯುಂತೆಯೇ ಇಲ್ಲ. ಯಾರಿಗೆ ಗೊತ್ತು, ಇದರ ಅಗತ್ಯತೆ ನಿಮಗೆ ನಡುರಾತ್ರಿಯಲ್ಲಿಯೂ ಎದುರಾಗಬಹುದು!

English summary

Surprising Uses For Vicks VapoRub

Vicks VapoRub has been around for more than 100 years and is one of the most widely used over-the-counter decongestants. Lately, there’s been a lot of buzz about unique and unconventional ways to use this odiferous ointment. You’ll be surprised to learn that Vicks is a supposed treatment for so much more than just a congested chest. Will you give these ideas a shot?
X
Desktop Bottom Promotion