ಕಿಡ್ನಿ ಸ್ಟೋನ್ ಉಂಟಾಗಲು ಪ್ರಮುಖವಾದ ಕಾರಣಗಳು ಇವು...

Posted By: Divya
Subscribe to Boldsky

ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವ ಕಲ್ಲು ಚಿಕ್ಕದಿರಲಿ ಅಥವಾ ದೊಡ್ಡದಿರಲಿ. ಅದರಿಂದ ಉಂಟಾಗುವ ನೋವು ಹಾಗೂ ವೇದನೆ ವ್ಯಕ್ತಿಯನ್ನು ಹಿಂಡಿ ಹಿಪ್ಪೆಯಾಗುವಂತೆ ಮಾಡುತ್ತದೆ. ಈ ಸಮಸ್ಯೆಯಿಂದ ಆರೋಗ್ಯದಲ್ಲಿ ಅನೇಕ ಬಗೆಯ ಅಪಸಾಮಾನ್ಯತೆಯನ್ನು ಅನುಭವಿಸಬೇಕಾಗುವುದು. ನೀವೇನಾದರೂ ಈ ಸಮಸ್ಯೆಯನ್ನು ಈ ಮೊದಲೇ ಅನುಭವಿಸಿದ್ದೀರಾಗಿದ್ದರೆ, ಖಂಡಿತವಾಗಿಯೂ ಹೆಚ್ಚು ನೀರನ್ನು ಕುಡಿಯಲು ಉಪದೇಶ ನೀಡುತ್ತೀರಿ.

ಗಡಿಬಿಡಿಯ ಜೀವನ, ಒತ್ತಡದ ಬದುಕು, ಅಸಮರ್ಪಕ ಆಹಾರ ಕ್ರಮಗಳಿಂದ ಇಂದು ಅನೇಕರು ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಬಲಿಯಾಗಿರುತ್ತಾರೆ. ಒಮ್ಮೆ ಕಾಣಿಸಿಕೊಂಡ ಮೂತ್ರ ಪಿಂಡದ ಕಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ಕಲ್ಲನ್ನು ನಿವಾರಿಸಿದ್ದರೂ ಸಹ ಪುನಃ ಪುನಃ ಮರುಕಳಿಸುವ ಸಾಧ್ಯತೆಗಳಿರುತ್ತವೆ. ಟೊಮೆಟೊ, ಬಸಳೆಗಳಂತಹ ತರಕಾರಿಗಳನ್ನು ಅಧಿಕವಾಗಿ ಬಳಸುವುದರಿಂದಲೂ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳುತ್ತದೆ.

kidney stones

ಹಾಗಾಗಿಯೇ ನಾವು ಸೇವಿಸುವ ಆಹಾರ ಪದಾರ್ಥಗಳ ಮೇಲೆ ನಮಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆ ಇರಬೇಕಾಗುತ್ತದೆ. ಯಾವೆಲ್ಲಾ ಪದಾರ್ಥಗಳಿಂದ ಅಥವಾ ಕಾರಣಗಳಿಂದ ಪುನಃ ಪುನಃ ಸಮಸ್ಯೆಯು ಉಲ್ಭಣಗೊಳ್ಳುವುದು ಎನ್ನುವುದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ಲೇಖನ ನೀಡುತ್ತದೆ.

ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಕ್ಯಾಲಿಯಂ ಸೇವನೆ

ಮೂತ್ರ ಪಿಂಡದಲ್ಲಿ ಕಲ್ಲುಗಳ ಉತ್ಪತ್ತಿಗೆ ಕ್ಯಾಲ್ಸಿಯಂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮೂತ್ರ ತಜ್ಞರಾದ ಪ್ಯಾರಿ ಎಮ್.ಆರ್ ಹೇಳುವ ಪ್ರಕಾರ ಆಹಾರದಲ್ಲಿ ಹೆಚ್ಚು ಕ್ಯಾಲ್ಸಿಯಂ ಸೇವಿಸುವುದರಿಂದ ಮೂತ್ರ ಪಿಂಡದಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಹಾರ್ವಾರ್ಡ್ ಮೆಡಿಕಲ್ ಶಾಲೆಯೊಂದು 2013ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಆಹಾರ ಸೇವನೆಯಿಂದ ಕಲ್ಲು ಉತ್ಪತ್ತಿಯಾಗುವುದನ್ನು ತಡೆಯಬಹುದು ಎಂದು.

kidney stones

ಮಾಂಸ ಸೇವನೆ

ಅತಿಯಾಗಿ ಮಾಂಸಾಹಾರ ಸೇವಿಸುವುದರಿಂದಲೂ ಕಿಡ್ನಿ ಸ್ಟೋನ್ ಉಂಟಾಗುವುದು. 2014 ಅಧ್ಯಯನವೊಂದು ತಿಳಿಸಿರುವ ಪ್ರಕಾರ ಮಾಂಸದಲ್ಲಿ ಅತಿಯಾದ ಪ್ರೋಟೀನ್‍ಗಳು ಇರುತ್ತವೆ. ಇವು ಸಸ್ಯಾಹಾರ ಪದಾರ್ಥಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಇದನ್ನು ಅತಿಯಾಗಿ ಸೇವಿಸಿದರೆ ಕಿಡ್ನಿ ಸ್ಟೋನ್ ಉಂಟಾಗುವುದು ಎಂದು.

ಉಷ್ಣವಲಯದಲ್ಲಿ ವಾಸಿಸುವುದು

ನೀವು ವಾಸಿಸುವ ಪ್ರದೇಶದ ಹವಾಮಾನ ಅತಿಯಾದ ಉಷ್ಣತೆಯಿಂದ ಕೂಡಿದ್ದರೂ ಮೂತ್ರ ಪಿಂಡದಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ನೀರಿನಂಶ ಬಹು ಬೇಗ ಕಡಿಮೆಯಾಗುತ್ತವೆ. ಅತಿಸಾರದ ಪ್ರಭಾವದಿಂದ ಕಲ್ಲುಗಳ ಬೆಳವಣಿಗೆ ಶೀಘ್ರವಾಗಿ ಉತ್ಪತ್ತಿಯಾಗುತ್ತದೆ. ಹಾಗಾಗಿ ಪದೇ ಪದೇ ನೀರನ್ನು ಕುಡಿಯುವುದರ ಮೂಲಕ ನಿಯಂತ್ರಿಸಬಹುದು.

kidney stones

ಹವಾಮಾನದ ಬದಲಾವಣೆ

ಹವಾಮಾನ ಬದಲಾವಣೆ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಉತ್ಪಾದನೆಯು ನಿಕಟವಾದ ಸಂಬಂಧವನ್ನು ಪಡೆದುಕೊಂಡಿದೆ. ವಾತಾವರಣದಲ್ಲಿ ಹೆಚ್ಚಿನ ತಾಪಮಾನ ಉಂಟಾದಂತೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಅತಿಯಾದ ಬೆವರುವಿಕೆ ಉಂಟಾಗುವುದು. ಇಂತಹ ಸಮಯದಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳ ಉದ್ಭವಕ್ಕೆ ಅನುಕೂಲವಾಗುವುದು.

ಆನುವಂಶಿಕತೆ

ಮೂತ್ರ ಪಿಂಡದಲ್ಲಿ ಸಿಸ್ಟೀನ್ ಕಲ್ಲುಗಳು ಉತ್ಪತ್ತಿಯಾಗಲು ಆನುವಂಶಿಕತೆಯೂ ಪ್ರಮುಖ ಕಾರಣವಾಗುತ್ತವೆ. ಅಲ್ಲದೆ ನಿಮ್ಮ ಪೋಷಕರಿಗೆ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ, ಆನುವಂಶಿಕವಾಗಿ ನಿಮಗೂ ಬರುವ ಸಾಧ್ಯತೆ ಇರುತ್ತದೆ. ಅದನ್ನು ನಿಯಂತ್ರಿಸಲು ಅಥವಾ ಹತೋಟಿಯಲ್ಲಿಡಲು ಸೂಕ್ತ ಆಹಾರ ಕ್ರಮ ಮತ್ತು ಹೆಚ್ಚು ನೀರನ್ನು ಕುಡಿಯುವ ಪದ್ಧತಿಯನ್ನು ರೂಢಿಸಿಕೊಳ್ಳಬೇಕು.

kidney stones

ಕರುಳಿನ ಕಾಯಿಲೆ

ಐಬಿಡಿಯ ವಿಭಾಗದಲ್ಲಿ ಬರುವ ರೋಗಗಳು ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರೋನ್ಸ್ ರೋಗ. ಈ ಆಧಾರವಾಗಿರುವ ಪರಿಸ್ಥಿತಿಗಳೊಂದಿಗಿನ ಜನರಲ್ಲಿ ಮೂತ್ರಪಿಂಡದ ಕಲ್ಲು ಸಂಭವಿಸುತ್ತವೆ ಎಂದು ಒಂದು ಅಧ್ಯಯನವು ತೋರಿಸುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಅತಿಸಾರ ಉಂಟಾಗುವುದು. ಇದು ಸಹ ಕಲ್ಲಿನ ಉತ್ಪಾದನೆಗೆ ಸಹಕಾರ ನೀಡುವ ಪರಿಯಾಗಿರುತ್ತದೆ ಎನ್ನಲಾಗುವುದು.

English summary

Strange things that can cause kidney stones

Kidney stones may be tiny, but anyone who had to suffer from the condition will vouch for the fact that they can cause you a lot of discomfort. If you have experienced it before, you were probably advised to drink loads of water and avoid certain risky foods. But despite taking utmost care, many people experience a repeat episode of kidney stones. A study says that among patients who have passed one kidney stone, the recurrence rate is 60 – 80 percent. While you do your best to stay away from the usual offenders like tomatoes and spinach, some other surprising things may be responsible for the recurrence of kidney stones.
Story first published: Thursday, December 14, 2017, 18:20 [IST]