ವಯಸ್ಸು 40 ಕಳೆದರೂ ಯಂಗ್ ಆಗಿ ಕಾಣಿಸಿಕೊಳ್ಳಬೇಕೆ? ಈ ತಪ್ಪುಗಳನ್ನು ಮಾಡದಿರಿ...

Posted By: Lekhaka
Subscribe to Boldsky

ದೇಹಕ್ಕೆ ವಯಸ್ಸಾಗುವುದು ಮನಸ್ಸಿಗಲ್ಲ ಎನ್ನುವ ಜನರಿದ್ದಾರೆ. ಇದು ನಿಜ ಕೂಡ. ಯಾಕೆಂದರೆ ಕೆಲವರು ತುಂಬಾ ಇಳಿವಯಸ್ಸಿನಲ್ಲಿಯೂ ಕೆಲವೊಂದು ಸಾಹಸಗಳನ್ನು ಮಾಡುತ್ತಾರೆ. ಇಂತಹ ಜನರನ್ನು ನೋಡುವಾಗ ದೇಹಕ್ಕೆ ಮಾತ್ರ ಮುಪ್ಪು ಬರುವುದು ಎನ್ನಬಹುದು. ಒಬ್ಬ ವ್ಯಕ್ತಿಯು ತನ್ನ ವಯಸ್ಸಿನ ಬಗ್ಗೆ ಚಿಂತಿಸುತ್ತಾ, ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಆತಂಕಕ್ಕೆ ಈಡಾದರೆ ಆಗ ಪರಿಸ್ಥಿತಿಯು ಮತ್ತಷ್ಟು ಕೆಡುತ್ತದೆ ಎಂದು ಅಮೆರಿಕಾದ ಲೇಖನ ಮಾರ್ಕ್ ಟ್ವೈನ್ ಹೇಳಿದ್ದಾರೆ.

ದೇಹಕ್ಕೆ ವಯಸ್ಸಾಗುತ್ತಾ ಇದ್ದರೂ ಯುವಕರಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರಮುಖವಾಗಿ ಆರೋಗ್ಯವು ಅತೀ ಅಗತ್ಯವಾಗಿರುವುದು. ಪ್ರತಿಯೊಬ್ಬರಿಗೂ ವಯಸ್ಸಾಗುವುದು ಸಹಜ. ಆದರೆ ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಚಟುವಟಿಕೆಗಳಿಂದ ದೂರ ಉಳಿಯುವುದು ತಪ್ಪು. ಇಂದಿನ ದಿನಗಳಲ್ಲಿ 30 ದಾಟುತ್ತಾ ಇರುವಂತೆ ದೇಹದಲ್ಲಿನ ಶಕ್ತಿಯು ಕುಂದುತ್ತಾ ಹೋಗುತ್ತದೆ. ಇದರಿಂದ ಆರೋಗ್ಯವು ಕೈಕೊಡುವುದು, ಕೂದಲು ಬಿಳಿಯಾಗುವುದು, ನೆರಿಗೆ ಕಾಣಿಸಿಕೊಳ್ಳುವುದು, ಚರ್ಮವು ಸುಕ್ಕುಗಟ್ಟಿದಂತೆ ಆಗುವುದು ಇತ್ಯಾದಿ ಸಮಸ್ಯೆಗಳು ಆವರಿಸಿಕೊಳ್ಳುತ್ತದೆ.  

ನಿಮ್ಮ ಯೌವನ ಕಾಪಾಡುವ ಸೂಪರ್‍ ಆಹಾರಗಳು

40 ದಾಟಿದ ಬಳಿಕ ನಮ್ಮ ಚಯಪಚಾಯ ಕ್ರಿಯೆ, ಶಕ್ತಿಯ ಮಟ್ಟ ಮತ್ತು ಪ್ರತಿರೋಧಕ ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದಾಗಿ ಹಲವಾರು ಕಾಯಿಲೆಗಳು ದೇಹವನ್ನು ಮುತ್ತಿಕೊಳ್ಳುವುದು. ಅದೇ ರೀತಿಯಾಗಿ ದೇಹದಲ್ಲಿ ಕೆಲವೊಂದು ಹಾರ್ಮೋನುಗಳು ಕೂಡ ಪರಿಣಾಮ ಬೀರಲು ಆರಂಭಿಸುವುದು. 30-35 ದಾಟಿದವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವಂತಹ ವಯಸ್ಸಾಗುತ್ತಿರುವುದರ ಲಕ್ಷಣಗಳು ಇದಾಗಿದೆ. ಆದರೆ ಕೆಲವೊಂದು ಆರೋಗ್ಯಕಾರಿ ಹವ್ಯಾಸಗಳನ್ನು ಬೆಳೆಸಿಕೊಂಡರೆ ವಯಸ್ಸಾದ ದೇಹವು ಯುವಕರಂತೆ ಇರುವುದು. ಅದು ಯಾವುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ.....

ನಗು ನಗುತ್ತಾ ನಲಿಯಿರಿ!

ನಗು ನಗುತ್ತಾ ನಲಿಯಿರಿ!

ನಗು ನಮ್ಮ ದೇಹದ ಸೌಂದರ್ಯವನ್ನು ವೃದ್ಧಿಸುವುದು ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ದಿನದಲ್ಲಿ ಹಲವಾರು ಸಲ ನಗುವಂತಹ ಪ್ರಸಂಗ ಬಂದರೂ ನಾವು ನಗುವುದಿಲ್ಲ. ಆದರೆ ನಕ್ಕರೆ ಅದರಿಂದ ಆರೋಗ್ಯಕರವಾಗಿ ರಕ್ತ ಸಂಚಾರವಾಗಿ ಮುಖದಲ್ಲಿನ ಸ್ನಾಯುಗಳು ಬಲಗೊಳ್ಳುವುದು. ಇದರಿಂದ ನೆರಿಗೆ ಕಾಣಿಸಿಕೊಳ್ಳುವುದು ನಿಧಾನವಾಗುವುದು.

ಹಣ್ಣುಗಳನ್ನು ಹೆಚ್ಚು ಸೇವಿಸಿ

ಹಣ್ಣುಗಳನ್ನು ಹೆಚ್ಚು ಸೇವಿಸಿ

ಹಣ್ಣುಗಳು ತುಂಬಾ ಆರೋಗ್ಯಕಾರಿ ಮತ್ತು ಹಲವಾರು ಕಾಯಿಲೆಗಳನ್ನು ಇದು ತಡೆಯುತ್ತದೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಕೆಲವೊಂದು ಹಣ್ಣುಗಳಾದ ಬೆರ್ರಿಗಳು, ದ್ರಾಕ್ಷಿ, ಪ್ಲಮ್ಸ್, ಇತ್ಯಾದಿಗಳಲ್ಲಿ ಅತ್ಯಧಿಕ ಮಟ್ಟದ ವಿಟಮಿನ್ ಸಿ ಮತ್ತು ಸೊರ್ಬಿಟೊಲ್ ಇದೆ. ಇವೆರಡು ಚರ್ಮದಲ್ಲಿ ಆರೋಗ್ಯಕರವಾಗಿ ಮಾಯಿಶ್ಚರೈಸರ್ ಉಳಿಸಿಕೊಳ್ಳುವುದು. ಇದರಿಂದ ನೆರಿಗೆ, ಚರ್ಮ ಸುಕ್ಕುಗಟ್ಟುವುದು ಇತ್ಯಾದಿ ಸಮಸ್ಯೆ ನಿವಾರಣೆಯಾಗುವುದು.

ಮಸಾಜ್ ಮಾಡಿಸಿಕೊಳ್ಳಿ

ಮಸಾಜ್ ಮಾಡಿಸಿಕೊಳ್ಳಿ

ವೃತ್ತಿಪರವಾಗಿ ಮಸಾಜ್ ಮಾಡುವವರಿಂದ ನಿಮ್ಮ ದೇಹ, ಮುಖ, ಕೈಗಳು ಮತ್ತು ಕಾಲಿಗೆ ಸರಿಯಾಗಿ ಮಸಾಜ್ ಮಾಡಿಕೊಂಡರೆ ಅದರಿಂದ ಆ ಭಾಗಗಳಲ್ಲಿ ಹೊಸ ಕೋಶಗಳು ಉತ್ಪತ್ತಿಯಾಗುವುದು ಮತ್ತು ಕೋಶಗಳಿಗೆ ವಯಸ್ಸಾಗುವುದನ್ನು ತಡೆಯುವುದು. ಇದರಿಂದ ದೇಹದ ಹೊರಭಾಗದಲ್ಲಿ ವಯಸ್ಸಾಗುವ ಲಕ್ಷಣಗಳು ಕಾಣಿಸಿಕೊಳ್ಳುವುದು ನಿಧಾನವಾಗುವುದು.

 ಹಸಿರು ತರಕಾರಿ ಸೇವಿಸಿ

ಹಸಿರು ತರಕಾರಿ ಸೇವಿಸಿ

ಹಸಿರು ತರಕಾರಿಗಳು ತುಂಬಾ ಆರೋಗ್ಯಕಾರಿ ಎಂದು ಹೇಳಲಾದ ಕಾರಣ ಇದನ್ನು ಹೆಚ್ಚು ಸೇವನೆ ಮಾಡಬೇಕು. ಇದನ್ನು ನಿಯಮಿತವಾಗಿ ತಿನ್ನಲು ಮತ್ತೊಂದು ಕಾರಣವಿದೆ. ಯಾಕೆಂದರೆ ಇದು ಕೂಡ ವಯಸ್ಸಾಗುವ ಲಕ್ಷಣಗಳನ್ನು ನಿಧಾನವಾಗಿಸುವುದು. ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಕೆ ಇರುವಂತಹ ಬಸಳೆ, ಪಾಲಕ, ಪುದೀನಾ ಸೊಪ್ಪುಗಳು ಇತ್ಯಾದಿ ತುಂಬಾ ಪರಿಣಾಮಕಾರಿ.

ಮೀನು ತಿನ್ನಿ

ಮೀನು ತಿನ್ನಿ

ನೀವು ಮಾಂಸಾಹಾರಿಗಳಾಗಿದ್ದು, ಮೀನಿನಿಂದ ಅಲರ್ಜಿ ಇಲ್ಲವೆಂದಾದರೆ ನೀವು ಮೀನು ತಿನ್ನಬೇಕು. ನಿಮ್ಮ ಅಹಾರ ಕ್ರಮದಲ್ಲಿ ಮೀನಿನ ಸೇರ್ಪಡೆ ಮಾಡಿ. ಅದರಲ್ಲೂ ವಿಟಮಿನ್ ಇ ಮತ್ತು ಡೈಮೆಥ್ಲ್ಯಾಮಿನಿಯೆಥೆನಾಲ್ ದೇಹದಲ್ಲಿ ಕೋಶಗಳಿಗೆ ವಯಸ್ಸಾಗುವುದನ್ನು ನಿಧಾನವಾಗಿಸುವುದು ಮತ್ತು ಹೊಸ ಕೋಶಗಳಿಗೆ ಪೋಷಣೆ ನೀಡುವುದು.

ವ್ಯಾಯಾಮ

ವ್ಯಾಯಾಮ

ವ್ಯಾಯಾಮವು ತುಂಬಾ ಆರೋಗ್ಯಕರ ಹವ್ಯಾಸವಾಗಿದೆ. ಇದರಿಂದ ತೂಕ ನಿಯಂತ್ರಣ, ಹೃದಯದ ಕಾಯಿಲೆ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ವಾರದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಅದರಿಂದ ಕೋಶಗಳು ಪುನಶ್ಚೇತನಗೊಳ್ಳುವುದು ಮತ್ತು ರಕ್ತ ಸಂಚಾರವು ಸುಗಮವಾಗುವುದು. ಇದರಿಂದ ಚರ್ಮ ಜೋತುಬೀಳುವುದು, ಗಂಟುನೋವು, ಬೊಜ್ಜಿನಂತಹ ಸಮಸ್ಯೆ ನಿವಾರಣೆಯಾಗುವುದು.

 ಸಂಸ್ಕರಿತ ಆಹಾರ ತ್ಯಜಿಸಿ

ಸಂಸ್ಕರಿತ ಆಹಾರ ತ್ಯಜಿಸಿ

ಸಂಸ್ಕರಿಸಲ್ಪಟ್ಟ ಆಹಾರಗಳಾದ ಫಿಜ್ಜಾ, ಬರ್ಗರ್, ಚಿಪ್ಸ್ ಇತ್ಯಾದಿಗಳನ್ನು ನೀವು ತ್ಯಜಿಸಬೇಕು. ಇದು ಆರೋಗ್ಯಕಾರಿಯಲ್ಲ. ಇದರಿಂದ ತೂಕ ಹೆಚ್ಚಳವಾಗಿ ಹೃದಯ ಹಾಗೂ ಇನ್ನಿತರ ಸಮಸ್ಯೆ ಬರಬಹುದು. ಸಂಸ್ಕರಿತ ಆಹಾರದಲ್ಲಿ ಇರುವಂತಹ ಅನಾರೋಗ್ಯಕರ ಕೊಬ್ಬು ಮತ್ತು ವಿಷಕಾರಿ ಅಂಶಗಳು ಕೋಶಗಳು ಬೇಗನೆ ವಯಸ್ಸಾಗುವಂತೆ ಮಾಡುವುದು. ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದು.

ಒತ್ತಡ ನಿವಾರಿಸಿ

ಒತ್ತಡ ನಿವಾರಿಸಿ

ಒತ್ತಡದಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಖಿನ್ನತೆ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಗಳು ಒತ್ತಡದಿಂದ ಬರುವುದು. ಅತಿಯಾದ ಒತ್ತಡದಿಂದ ನಿಮ್ಮ ದೇಹದ ಒಳಗಿನ ಕೋಶಗಳು ದುರ್ಬಲವಾಗುವುದು ಮತ್ತು ಇದರಿಂದ ವಯಸ್ಸಾಗುವ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುವುದು. ಇದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಿ.

ಅತಿಯಾಗಿ ಮಾಡಬೇಡಿ

ಅತಿಯಾಗಿ ಮಾಡಬೇಡಿ

ಕಂಪ್ಯೂಟರ್, ಮೊಬೈಲ್ ಮತ್ತು ಇತರ ಆಧುನಿಕ ಪರಿಕರಗಳನ್ನು ಇಂದಿನ ದಿನಗಳಲ್ಲಿ ಉಪಯೋಗಿಸದೆ ಇರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇವುಗಳ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಅತಿಯಾಗಿ ಮೊಬೈಲ್ ಬಳಸಿದರೆ ಅದರಿಂದ ಮುಖದ ಮೇಲೆ ನೆರಿಗೆಗಳು ಮತ್ತು ಕಣ್ಣಿನ ಸುತ್ತ ಕಪ್ಪು ಕಲೆಗಳು ಮೂಡುವುದು ಎಂದು ಅಧ್ಯಯನಗಳು ಹೇಳಿವೆ.

ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ!

English summary

Simple Daily Habits That Can Slow Down Your Ageing Process!

After 40, our metabolic rate, energy levels and immune systems slow down, giving rise to a number of health issues. In addition, a number of age-related hormonal changes occur in our body, which also gives rise to negative symptoms. All of the above-mentioned signs of ageing are triggered by the degeneration of cells which starts to happen post the age of 30-35. So, there are a few healthy habits that you can follow on a daily basis to slow down the degeneration of cells and prevent the early signs of ageing; have a look at them, here.
Please Wait while comments are loading...
Subscribe Newsletter