For Quick Alerts
ALLOW NOTIFICATIONS  
For Daily Alerts

ಎಳೆ ನೀರು ಕುಡಿಯುವುದರಿಂದ ದೇಹದಲ್ಲಿ ಯಾವೆಲ್ಲಾ ಬದಲಾವಣೆ ಆಗುವುದು ನೋಡಿ...

By Divya Pandith
|

ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಸಹಕಾರಿ ಅಥವಾ ಅಮೃತ ಸಂಜೀವಿನಿ ಎಂದರೆ ಎಳೆ ನೀರು . ಸಾಮಾನ್ಯವಾಗಿ ಕಾಡುವ ಅನೇಕ ಕಾಯಿಲೆಗಳಿ ದಿವ್ಯ ಔಷಧವೂ ಹೌದು. ಬಳಲಿ ಬೆಂಡಾದ ದೇಹಕ್ಕೆ ಕೆಲವೇ ಗಂಟೆಗಳಲ್ಲಿ ಹೊಸ ಚೈತನ್ಯ ನೀಡಬಹುದಾದ ನೈಸರ್ಗಿಕ ಔಷಧ ಇದು. ಬೇಸಿಗೆ ಬಿಸಿಗೆ ಒಣಗಿದ ಬಾಯನ್ನು ತಂಪಾಗಿಸಿ, ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಬಲ್ಲ ಶಕ್ತಿ ಇರುವುದು ಇದೇ ಎಳನೀರಿಗೆ ಮಾತ್ರ.

ಬಾಯಾರಿಕೆಯನ್ನು ತಣಿಸುವ ಪಾನೀಯವಾಗಿ, ಸೌಂದರ್ಯ ಹೆಚ್ಚಿಸುವ ಸೌಂದರ್ಯ ವರ್ಧಕವಾಗಿ, ಅನಾರೋಗ್ಯದಿಂದ ಬಳಲುತ್ತಿದ್ದರೆ ಔಷಧ ರೂಪದಲ್ಲಿ ಚೈತನ್ಯ ನೀಡುವ ಅಮೃತ ಎಳೆ ನೀರು . ಇದನ್ನು ಸೇವಿಸುವುದರಿಂದ ದೇಹದಲ್ಲಿ ಮಹತ್ತರವಾದ ಬದಲಾವಣೆಯನ್ನು ಅಥವಾ ಚೈತನ್ಯವನ್ನು ಕಾಣಬಹುದು. ಉಷ್ಣವಲಯಗಳಲ್ಲಿ, ಸಮುದ್ರ ತೀರಗಳಲ್ಲಿ ಬೆಳೆಯುವ ನೈಸರ್ಗಿಕ ಹಣ್ಣು. ಬಲಿಯದ ತೆಂಗಿನಕಾಯಿ ರೂಪವೇ ಎಳೆ ನೀರು. ಕರಾವಳಿ ಪ್ರದೇಶದಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ರಾಜ್ಯದೆಲ್ಲೆಡೆಯೂ ಇದನ್ನು ಪಡೆದುಕೊಳ್ಳಬಹುದು.

ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಪುರಾತನ ಕಾಲದಿಂದಲೂ ಔಷಧ ಹಾಗೂ ತಂಪಾದ ಪಾನೀಯ ರೂಪದಲ್ಲಿ ಇದನ್ನು ಸೇವಿಸುತ್ತಲೇ ಬರಲಾಗಿದೆ. ಇದರಿಂದ ಮನುಷ್ಯ ಸಂಕುಲಕ್ಕೆ ಅಪಾರವಾದ ಲಾಭವಿದೆ. ಇದು ಅಧಿಕ ಪ್ರಮಾಣದ ಪ್ರೋಟೀನ್, ಕಾರ್ಬೋ ಹೈಡ್ರೇಟ್, ಖನಿಜಗಳು, ವಿವಿಧ ಜೀವಸತ್ವಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಸಿಗುವ ಈ ದಿವ್ಯ ಔಷಧದಿಂದ ಅನೇಕ ಬಗೆಯ ಆರೋಗ್ಯದ ಆರೈಕೆಯನ್ನು ಪಡೆದುಕೊಳ್ಳಬಹುದು. ಅವುಗಳ ಪರಿಚಯವನ್ನು ಬೋಲ್ಡ್ ಸ್ಕೈ ನಿಮಗಾಗಿ ಪರಿಚಯಿಸುತ್ತಿದೆ...

ರಕ್ತದೊತ್ತಡದ ನಿಯಂತ್ರಣ

ರಕ್ತದೊತ್ತಡದ ನಿಯಂತ್ರಣ

ಸಾಮಾನ್ಯವಾಗಿ ಬಹುತೇಕ ಜನರು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರು ಎಳೆ ನೀರು ಸೇವನೆಯಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ತಾಜಾ ಎಳೆ ನೀರಿನಲ್ಲಿ ಅಧಿಕ ಪ್ರಮಾಣದ ಪೊಟ್ಯಾಸಿಯಮ್ ಮತ್ತು ಮ್ಯಾಗ್ನಿಸಿಯಮ್ ಇರುತ್ತದೆ. ಇದರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.

ಹೃದಯದ ಸಮಸ್ಯೆಯನ್ನು ನಿಯಂತ್ರಿಸುತ್ತದೆ

ಹೃದಯದ ಸಮಸ್ಯೆಯನ್ನು ನಿಯಂತ್ರಿಸುತ್ತದೆ

ಎಳೆ ನೀರಿನಲ್ಲಿ ಯಾವುದೇ ರೀತಿಯ ಹಾನಿಕಾರಕ ಕೊಬ್ಬಿನಂಶ ಇರುವುದಿಲ್ಲ. ಹೃದಯ ಸಮಸ್ಯೆ ಇರುವವರು ನೈಸರ್ಗಿಕವಾದ ಈ ಪಾನೀಯವನ್ನು ಸೇವಿಸಬಹುದು. ಇದರಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯು ಒಳಗೊಂಡಿರುತ್ತದೆ. ಇದರಿಂದ ದೇಹದೆಲ್ಲೆಡೆಯು ಸುಗಮವಾದ ರಕ್ತ ಪರಿಚಲನೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಲಿಪೊಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಪಧಮನಿಗೆ ಹಾನಿಯನ್ನುಂಟುಮಾಡುವ ಕೆಟ್ಟ ಕೊಲೆಸ್ಟ್ರಾಲ್‌ಗಳನ್ನು ತಡೆಯುತ್ತದೆ. ಜೊತೆಗೆ ಹೃದಯಘಾತ ಉಂಟಾಗುವುದನ್ನು ತಡೆಯುವುದು.

 ತೂಕ ನಷ್ಟಕ್ಕೆ ಸಹಕಾರಿ

ತೂಕ ನಷ್ಟಕ್ಕೆ ಸಹಕಾರಿ

ಅಧಿಕ ತೂಕ ಇರುವವರಿಗೆ ಇದೊಂದು ಉತ್ತಮವಾದ ನೈಸರ್ಗಿಕವಾದ ಪಾನೀಯ. ಇದರಲ್ಲಿ ಯಾವುದೇ ರೀತಿಯ ಕೊಬ್ಬಿನಂಶ ಇಲ್ಲದಿರುವುದರಿಂದ ನಿಶ್ಚಿಂತೆಯಾಗಿ ಕುಡಿಯಬಹುದು. ಪೊಟ್ಯಾಸಿಯಮ್ ಅಧಿಕ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿರುವ ದುರ್ಬಲ ವಿಷಕಾರಿ ವಸ್ತುಗಳನ್ನು ತೆಗೆಯುವುದು. ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಕಾರಿ ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ದೇಹದಲ್ಲಿ ಜೀರ್ಣ ಕ್ರಿಯೆಯು ಸುಗಮವಾಗಿ ನೆರವೇರುವುದು. ಸಂಗ್ರಹಗೊಂಡ ಅನಗತ್ಯ ಕೊಬ್ಬುಗಳನ್ನು ಬಹು ವೇಗವಾಗಿ ಸುಡುವುದು.

ನಿರ್ಜಲೀಕರಣವನ್ನು ತಡೆಯುತ್ತದೆ

ನಿರ್ಜಲೀಕರಣವನ್ನು ತಡೆಯುತ್ತದೆ

ಎಳೆ ನೀರಿನಲ್ಲಿ ಸುಲಭವಾಗಿ ಜೀರ್ಣವಾಗುವಂತಹ ಕಾರ್ಬೋಹೈಡ್ರೇಟ್ಗಳು ಮತ್ತು ಲವಣಗಳು ಸಮೃದ್ಧವಾಗಿವೆ. ಹೀಗಾಗಿ, ಅತಿಸಾರ ಮತ್ತು ವಾಕರಿಕೆಗಳಿಂದ ಬಳಲುತ್ತಿರುವ ರೋಗಿಗಳ ನಿರ್ಜಲೀಕರಣ ಸ್ಥಿತಿಯ ಅತ್ಯುತ್ತಮ ಪಾನೀಯವಾಗಿ ಇದು ಕಾರ್ಯನಿರ್ವಹಿಸುತ್ತದೆ. ಅಲ್ಲಿ ದೇಹವು ಹೆಚ್ಚಿನ ಪ್ರಮಾಣದಲ್ಲಿ ದ್ರವದ ನಷ್ಟವನ್ನು ಎದುರಿಸುತ್ತದೆ ಮತ್ತು ತಕ್ಷಣದ ಜಲಸಂಚಯನ ಅಗತ್ಯವಿರುತ್ತದೆ. ಕ್ರೀಡಾ ವ್ಯಕ್ತಿಗಳಿಗೆ ತ್ವರಿತ ಶಕ್ತಿಯ ಪಾನೀಯವಾಗಿ ಕಾರ್ಯ ನಿರ್ವಹಿಸುತ್ತದೆ.

ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ

ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ

ದೇಹ ಜೀವಕೋಶಗಳಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪ್ರೋಟೀನ್ ಮತ್ತು ಫೈಬರ್ ಎಳನೀರಿನಲ್ಲಿ ಸಮೃದ್ಧವಾಗಿದೆ. ಹೀಗಾಗಿ, ಮಧುಮೇಹ ರೋಗಿಗಳಿಗೆ ನಿಯಮಿತವಾಗಿ ಈ ಪಾನೀಯವನ್ನು ನೀಡಬಹುದು. ಇದು ಮಧುಮೇಹದ ಕೆಲವು ಹಾನಿಕಾರಕ ಅಡ್ಡಪರಿಣಾಮಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಮೂತ್ರದ ತೊಂದರೆಗಳನ್ನು ಗುಣಪಡಿಸುತ್ತದೆ

ಮೂತ್ರದ ತೊಂದರೆಗಳನ್ನು ಗುಣಪಡಿಸುತ್ತದೆ

ಎಳನೀರಿನಲ್ಲಿ ಪೊಟ್ಯಾಸಿಯಮ್ ಮತ್ತು ಆರೋಗ್ಯಕರ ಕಿಣ್ವಗಳ ಉಪಸ್ಥಿತಿಯು ಮೂತ್ರದ ಹೆಚ್ಚಿನ ಉತ್ಪಾದನೆಯ ಮೂಲಕ ದೇಹದಿಂದ ಹೊರಬರುವ ಎಲ್ಲಾ ಜೀವಾಣುಗಳನ್ನು ತೆಗೆದುಹಾಕಲು ಪರಿಪೂರ್ಣ ಪಾನೀಯ. ಹೀಗಾಗಿ, ಮೂತ್ರದ ಆಮ್ಲೀಯ ಪ್ರಕೃತಿಯು ತೆಂಗಿನ ನೀರಿನ ಅಧಿಕ ಲವಣಗಳಿಂದ ಉಂಟಾಗುತ್ತದೆ. ಇದು ಮೂತ್ರದ ಸೋಂಕನ್ನು ತಡೆಗಟ್ಟುವಲ್ಲಿ ಸಹಾಯಕವಾಗುತ್ತದೆ.

ಕೂದಲಿನ ಸಮಸ್ಯೆಯನ್ನು ನಿವಾರಿಸುವುದು

ಕೂದಲಿನ ಸಮಸ್ಯೆಯನ್ನು ನಿವಾರಿಸುವುದು

ಎಳೆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲಿನ ಬೇರುಗಳು ಹೆಚ್ಚು ಪ್ರಬಲವಾಗುತ್ತವೆ. ಹೀಗಾಗಿ ಕೂದಲು ನಷ್ಟವನ್ನು ತಡೆಗಟ್ಟಬಹುದು. ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ತೆಂಗಿನ ನೀರನ್ನು ತಯಾರಿಸಿದ ಪೇಸ್ಟ್ ಮಾಡಿ ಅನ್ವಯಿಸಬಹುದು. ಇದರಿಂದ ಹೊಟ್ಟು, ಮಾಲಿನ್ಯ, ಧೂಳು, ಸೂರ್ಯನ ಕಿರಣದಿಂದ ಉಂಟಾಗುವ ಕೇಶ ಸಮಸ್ಯೆಗಳು ದೂರವಾಗುವುದು. ಈ ನೈಸರ್ಗಿಕ ಪಾನೀಯದ ಬಳಕೆಯಿಂದ ಆರೋಗ್ಯಕರ ಮತ್ತು ಉದ್ದವಾದ ಕೂದಲುಗಳನ್ನು ಪಡೆಯಬಹುದು.

ಮಾನಸಿಕ ಶಕ್ತಿಯನ್ನು ಬಲಪಡಿಸುತ್ತದೆ

ಮಾನಸಿಕ ಶಕ್ತಿಯನ್ನು ಬಲಪಡಿಸುತ್ತದೆ

ಎಳನೀರಿನಲ್ಲಿ ಗ್ಲುಟಮಿಕ್ ಆಮ್ಲ ಸಮೃದ್ಧವಾಗಿದೆ. ಇದು ಮೆದುಳಿನ ಕೋಶಗಳ ಸ್ಮರಣೆಯನ್ನು ಹೆಚ್ಚಿಸುವ ಶಕ್ತಿ ಹೊಂದಿರುವ ಅಮೈನೊ ಆಮ್ಲವಾಗಿದೆ. ಹೀಗಾಗಿ ಈ ನೈಸರ್ಗಿಕ ಪಾನೀಯ ಸೇವನೆಯು ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ತೆಂಗಿನ ನೀರಿನಲ್ಲಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಿ, ವ್ಯಕ್ತಿಯ ಮಾನಸಿಕ ಸ್ಥಿತಿಯು ಉತ್ತಮವಾಗಿರುವಂತೆ ಮಾಡುವುದು.

 ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಎಳನೀರು ಅತ್ಯುತ್ತಮವಾದ ಮೂತ್ರವರ್ಧಕವಾಗಿದೆ. ಅಂದರೆ ಮೂತ್ರವನ್ನು ಹೆಚ್ಚಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಈಗಾಗಲೇ ಕಲ್ಲುಗಳಾಗಲು ಪ್ರಾರಂಭವಾಗಿದ್ದರೆ ಅವನ್ನು ಕರಗಿಸಿ ಕಲ್ಲುಗಳಾಗದಂತೆ ರಕ್ಷಿಸುತ್ತದೆ. ಇವೆರಡೂ ಕಾರಣಗಳಿಂದ ಮೂತ್ರಪಿಂಡಗಳ ಕ್ಷಮತೆ ಹೆಚ್ಚುತ್ತದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ವಿಶೇಷವಾಗಿ ಮೂತ್ರಕೋಶ, ಮೂತ್ರವ್ಯವಸ್ಥೆ ಮತ್ತು ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುವ ಮೂಲಕ ಮೂತ್ರವ್ಯವಸ್ಥೆಯಲ್ಲಿ ಕಂಡುಬರುವ ಸೋಂಕು, ಜ್ವರ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ವಿಶೇಷವಾಗಿ ಒಸಡುಗಳಲ್ಲಿ ರಕ್ತ ಬರುವ, ಸಡಿಲವಾಗುವ, ಸೋಂಕು ಉಂಟಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮಕ್ಕೆ ಆರ್ದ್ರತೆ ನೀಡುತ್ತದೆ

ಚರ್ಮದ ಆರೈಕೆಯಲ್ಲಿ ಎಳನೀರು ಮಹತ್ವದ ಪಾತ್ರ ವಹಿಸುತ್ತದೆ ವಿಶೇಷವಾಗಿ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ಒಳಗಿನಿಂದ ನೀಡುವ ಮೂಲಕ ಚರ್ಮವನ್ನು ಆರೋಗ್ಯಕರ, ಕಾಂತಿಯುತವಾಗಿಡಲು ನೆರವಾಗುತ್ತದೆ.

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ವ್ಯಾಯಾಮದ ಬಳಿಕ ಕುಡಿಯಲು ಅತ್ಯುತ್ತಮವಾಗಿದೆ

ವ್ಯಾಯಾಮದ ಬಳಿಕ ದಣಿದ ದೇಹ ಹೆಚ್ಚಿನ ಪೋಷಕಾಂಶಗಳಿರುವ ಆಹಾರವನ್ನು ಬೇಡುತ್ತದೆ. ಹೆಚ್ಚಿನವರು ಗ್ಲೂಕೋಸ್ ನೀರನ್ನು ಕುಡಿಯುವುದು ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಕೆಲವು ಸಂಸ್ಥೆಗಳು ಈ ಬೇಡಿಕೆಯನ್ನೇ ಬಂಡವಾಳವಾಗಿಸಿ ಎನರ್ಜಿ ಡ್ರಿಂಕ್ ಎಂಬ ಅಪಾಯಕಾರಿಯಾದ ಪೇಯವನ್ನು ದುಬಾರಿ ಬೆಲೆಗೆ ಮಾರುತ್ತಿದೆ. ಆ ಕ್ಷಣಕ್ಕೆ ಇದು ಶಕ್ತಿಯನ್ನು ನೀಡಿದರೂ ನಂತರ ಇದರ ಪರಿಣಾಮ ಭೀಕರವಾಗಿರುತ್ತದೆ. ಬದಲಿಗೆ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಗೊಟಾಯಿಸಿದ ಎಳನೀರು ಅದ್ಭುತ ಪೇಯವಾಗಿದ್ದು ಯಾವುದೇ ಎನರ್ಜಿ ಡ್ರಿಂಕ್ ಗಿಂತಲೂ ಹೆಚ್ಚಿನ ಪ್ರೋಟೀನ್ ಮತ್ತು ಶಕ್ತಿಯನ್ನು ಯಾವುದೇ ಅಡ್ಡಪರಿಣಾಮವಿಲ್ಲದೇ ನೀಡುತ್ತದೆ.

ಮದ್ಯಪಾನದ ಬಳಿಕದ ಮಂಪರು ಮತ್ತು ತಲೆನೋವನ್ನು ನಿವಾರಿಸುತ್ತದೆ

ಮದ್ಯಪಾನದ ಬಳಿಕದ ಮಂಪರು ಮತ್ತು ತಲೆನೋವನ್ನು ನಿವಾರಿಸುತ್ತದೆ

ಒಂದು ವೇಳೆ ರಾತ್ರಿಯ ಕೂಟಗಳಲ್ಲಿ ಮದ್ಯಪಾನ ಮಾಡಿ ತಡವಾಗಿ ಬಂದು ಮನೆ ಸೇರಿದ್ದರೆ ಎದ್ದಾಗ ಇನ್ನೂ ಮಂಪರು ಇದ್ದು ತಲೆನೋವೂ ಆವರಿಸಿಕೊಂಡಿದ್ದರೆ ತಕ್ಷಣ ಒಂದು ಇಡಿಯ ಎಳನೀರನ್ನು ಕುಡಿದು ಕೊಂಚ ವಿರಮಿಸಿ ಶೀಘ್ರವೇ ದೇಹ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ.

English summary

Reasons Why You Should Drink Coconut Water All Through The Year

Coconut water is known to contain several healthy nutrients; like proteins, carbohydrates, different kinds of vitamins and minerals, as well as antioxidant elements. So, this drink serves as a natural cure for numbers of ailments that people often suffer in daily life. In olden days many Rishis and gurus survived for years just by consuming coconut water as it is believed to have all minerals, proteins what we have in one course meal. So, let's have a look at the health benefits of coconut water.
X
Desktop Bottom Promotion