ಪ್ರೀತಿಯ ಅಮ್ಮನಿಗಾಗಿ ಆರೋಗ್ಯ ಕಾಳಜಿ

By: manu
Subscribe to Boldsky

ಭೂಮಿಯ ಮೇಲೆ ಹೆಣ್ಣಿನ ಸೃಷ್ಟಿ ಅದ್ಭುತವಾದದ್ದು. ಹುಟ್ಟಿದಾಗಿನಿಂದ ಸಾಯುವವರೆಗೂ ಸದಾ ಇತರರಿಗಾಗಿಯೇ ಬಾಳುವವಳು ಇವಳು. ಬದುಕಿನುದ್ದಕ್ಕೂ ಮಗಳಾಗಿ, ಸಹೋದರಿಯಾಗಿ, ಅಮ್ಮನಾಗಿ, ಹೆಂಡತಿಯಾಗಿ, ಸ್ನೇಹಿತೆಯಾಗಿ, ಪುಟಾಣಿಗಳಿಗೆ ಅಜ್ಜಿಯಾಗಿ ಜೀವನವನ್ನು ಸವೆಯುತ್ತಾಳೆ. ಮಕ್ಕಳ ಬಾಳನ್ನು ಬೆಳಗಲು ಸದಾ ಸಿದ್ಧರಿರುವ ತಾಯಂದಿರು ಸ್ನೇಹಿತೆಯಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕಿಯಾಗಿ ಸನ್ನಡತೆಯನ್ನು ಮಕ್ಕಳಿಗೆ ಭೋದಿಸುವುದು ನಿಸರ್ಗದ ಒಂದು ವರ.  ಹೆತ್ತು, ಸಲಹಿ ಸಾಕಿದ 'ತಾಯಿ'ಯ ಆರೋಗ್ಯದ ಕಡೆಗೂ ಕಾಳಜಿ ಇರಲಿ!

ಪ್ರತಿ ಕ್ಷಣವೂ ಕುಟುಂಬದ ಕಾಳಜಿ ಹಾಗೂ ಏಳಿಗೆಗಾಗಿ ದುಡಿಯುವ ಈ ಮಹಾತಾಯಂದಿರು ತಮ್ಮ ಬಗ್ಗೆ ಅಷ್ಟಾಗಿ ಚಿಂತಿಸುವುದಿಲ್ಲ. ಸದಾ ಸಂಸಾರದ ಚಿಂತೆಯಲ್ಲಿ ಮುಳುಗಿರುವ ಅಮ್ಮಂದಿರಿಗೆ ವಯಸ್ಸಿಗನುಗುಣವಾಗಿ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ. ಅವುಗಳ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವವು. ಅದರಲ್ಲೂ ಮುಟ್ಟು(ಮೆನೊಪೌಸ್) ನಿಲ್ಲುವ ಸಂದರ್ಭದಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವಾರು ಬದಲಾವಣೆಗಳು ಹಾಗೂ ಒತ್ತಡಗಳು ಉಂಟಾಗುತ್ತವೆ. ಆ ಸಮಯದಲ್ಲಿ ಅವಳ ಆರೋಗ್ಯದ ಕುರಿತು ಕಾಳಜಿ ಹಾಗೂ ಪ್ರೀತಿಯನ್ನು ತೋರಬೇಕು.  ಈತನಿಗೆ ಎರಡೂ ಕೈಗಳಿಲ್ಲ, ಆದರೆ ತಾಯಿಯನ್ನು ಮಗುವಿನಂತೆ ಸಾಕುತ್ತಿದ್ದಾನೆ!

ಈ ಸಮಯದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ರೀತಿಯ ಹಾರ್ಮೋನ್‍ಗಳ ಉತ್ಪಾದನೆ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತದೆ. ಆಗ ಅತಿಯಾದ ನಿದ್ರೆ, ಮಾನಸಿಕ ಒತ್ತಡ, ಕೆರಳಿಕೆಯ ಸ್ವಭಾವ ಹೆಚ್ಚಾಗುವುದು. ಜೊತೆಗೆ ಇನ್ನಿತರ ಕಾಯಿಲೆಗಳು ಕಾಡಬಹುದು.

ಅವರ ವಯಸ್ಸು 40ಅನ್ನು ಸಮೀಪಿಸುವುದರಿಂದ ಶಾಸ್ವಸಕೋಶ ಹಾಗೂ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸದಾ ನಮಗಾಗಿಯೇ ಜೀವನವನ್ನು ಮುಡಿಪಾಗಿಡುವ ತಾಯಂದಿರಿಗೆ "ಅಂತಾರಾಷ್ಟ್ರೀಯ ತಾಯಂದಿರ ದಿನಾಚರಣೆಯ' ಶುಭಕೋರಿ, ಈ ಕೆಳಗಿನ ಚಿಕಿತ್ಸಾ ಕ್ರಮ ಹಾಗೂ ಆರೋಗ್ಯ ಸಮಸ್ಯೆಯ ಬಗ್ಗೆ ಅರಿವು ಮೂಡಿಸೋಣ...         

ಮೆಮೊಗ್ರಾಮ್ಸ್

ಮೆಮೊಗ್ರಾಮ್ಸ್

ನಲ್ವತ್ತು ವರ್ಷಕ್ಕೆ ಕಾಲಿಟ್ಟ ಪ್ರತಿಯೊಬ್ಬ ಮಹಿಳೆಯೂ ಮೆಮೊಗ್ರಾಮ್ಸ್‍ಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಶ್ವದಾದ್ಯಂತ ಸಾವಿರಾರು ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದಲೇ ಸಾವನ್ನಪ್ಪುತ್ತಿರುವುದು ವಿಪರ್ಯಾಸ. ಈ ರೋಗದ ಆರಂಭದಲ್ಲಿಯೇ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಂಡರೆ ಕ್ಯಾನ್ಸರ್‌ನಿಂದ ದೂರ ಇರಬಹುದು. ಹಾಗಾಗಿ ಪ್ರತಿಯೊಬ್ಬ ಮಹಿಳೆಯು ಎರಡು ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನ ಕ್ಯಾನ್ಸರ್ ಬಗ್ಗೆ ಗರ್ಭಿಣಿಯರಿಗೆ ಒಂದಿಷ್ಟು ಕಿವಿಮಾತು

ಮೂಳೆಯ ತಪಾಸಣೆ

ಮೂಳೆಯ ತಪಾಸಣೆ

ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರಿಗೆ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆ ಮೂಳೆಯ ಸಮಸ್ಯೆ. ಬೆನ್ನು ನೋವು, ಗಂಟು ನೋವು, ಸಂಧಿವಾತಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಪರೀತವಾಗಿ ಮದ್ಯ ಮತ್ತು ಧೂಮಪಾನ ಮಾಡುವ ಮಹಿಳೆಯರಿಗೆ ಹೆಚ್ಚು ಸಮಸ್ಯೆ ಕಾಣಬಹುದು. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ತಿಂಗಳಿಗೊಮ್ಮೆ ಮೂಳೆ ಸಾಂದ್ರತೆಯ ಬಗ್ಗೆ ತಪಾಸಣೆ ಮಾಡಿಸಬೇಕು.ವಿಶೇಷ ಲೇಖನ: ಮೂಳೆಗಳ ಆಯುಷ್ಯ ಹೆಚ್ಚಿಸಬೇಕೆ?

ಕೊಲೊನೋಸ್ಕೋಪಿ

ಕೊಲೊನೋಸ್ಕೋಪಿ

ಮುಟ್ಟು ನಿಲ್ಲುವ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯ ಸ್ಥಿತಿಯೂ ದುರ್ಬಲವಾಗುವುದರಿಂದ ಕರಳು ಕ್ಯಾನ್ಸರ್ ಕಾಣಿಸಿಕೊಳ್ಳುವ ಸಂಭವವಿರುತ್ತದೆ. 50 ವರ್ಷದ ನಂತರ ಪ್ರತಿಯೊಬ್ಬ ಮಹಿಳೆಯು ಕೊಲೊನೋಸ್ಕೋಪಿ ತಪಾಸಣೆ ಮಾಡಿಸುತ್ತಿರಬೇಕು. ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

ಕಣ್ಣಿನ ಪರೀಕ್ಷೆ

ಕಣ್ಣಿನ ಪರೀಕ್ಷೆ

ನಲ್ವತ್ತಕ್ಕೆ ಕಾಲಿಡುತ್ತಿದ್ದಂತೆ ಮಹಿಳೆಯರಲ್ಲಿ ಕಣ್ಣಿನ ಸಮಸ್ಯೆಗಳಾದ ದೃಷ್ಟಿ ದೋಷ, ಮೈಮೋಪಿಯಾ, ಪ್ರಿಸ್ಬಯೋಪಿಯಾ, ಗ್ಲುಕೋಮಾದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಧುಮೇಹ ಇರುವಂತಹ ಮಹಿಳೆಯರು ಕಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ದಂತ ಪರೀಕ್ಷೆ

ದಂತ ಪರೀಕ್ಷೆ

ವಯಸ್ಸಾದಂತೆ ಮಹಿಳೆಯರು ದಂತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಬಾಯಿಯ ಕ್ಯಾನ್ಸರ್, ದಂತಕ್ಷಯ, ಗಮ್‍ಲೈನ್‍ನಂತಹ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ದಂತ ಪರೀಕ್ಷೆಗೆ ಒಳಗಾಗುವುದು ಸೂಕ್ತ.

ಹೃದಯ ಪರೀಕ್ಷೆ

ಹೃದಯ ಪರೀಕ್ಷೆ

ಮುಟ್ಟು ನಿಲ್ಲುವ ಸಂದರ್ಭದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರಕ್ತದೊತ್ತಡ, ಮದ್ಯಪಾನ ಹಾಗೂ ಧೂಮಪಾನ ವ್ಯಸನ ಇರುವ ಮಹಿಳೆಯರು ಹೆಚ್ಚು ಕಾಳಜಿ ವಹಿಸಬೇಕು. ಅಲ್ಲದೆ ಹೃದಯ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸುತ್ತಿರಬೇಕು.

ಗರ್ಭಕೋಶದ ಕ್ಯಾನ್ಸರ್

ಗರ್ಭಕೋಶದ ಕ್ಯಾನ್ಸರ್

ಮಹಿಳೆಯರಿಗೆ 40 ವರ್ಷದ ನಂತರ ಗರ್ಭಕೋಶದ ತೊಂದರೆಗಳು ಕಾಣಿಸಿಕೊಳ್ಳಬಹುದು. ಜೊತೆಗೆ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಆದಷ್ಟು ಗರ್ಭಕೋಶದ ಪರೀಕ್ಷೆಯನ್ನು ಮಾಡುತ್ತಿರಬೇಕು. ಕಾಫಿಯಿಂದ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಬಹುದು!

ರಕ್ತ ಪರೀಕ್ಷೆ

ರಕ್ತ ಪರೀಕ್ಷೆ

ವಯಸ್ಸಾದಂತೆ ಒಂದೊಂದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆಗಾಗ ರಕ್ತಪರೀಕ್ಷೆ ಮಾಡಿಕೊಳ್ಳುತ್ತಿದ್ದರೆ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮಟ್ಟ, ರಕ್ತದೊತ್ತಡ, ರಕ್ತದಲ್ಲಿರುವ ಸೋಂಕು ಸೇರಿದಂತೆ ಇನ್ನಿತರ ಕಾಯಿಲೆಗಳ ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬಹುದು.

English summary

Mother's Day Special: important-tests-for-your-mother

Women are the most beautiful creations on earth. Our mothers are our friends, philosophers and guides. Over the years, they have been a beacon of strength and endurance. Yet menopause can take a toll on their health. Menopause is a condition, after which a woman stops menstruating and is incapable of bearing a child.
Subscribe Newsletter