ಹೆತ್ತು, ಸಲಹಿ ಸಾಕಿದ 'ತಾಯಿ'ಯ ಆರೋಗ್ಯದ ಕಡೆಗೂ ಕಾಳಜಿ ಇರಲಿ!

By: Hemanth
Subscribe to Boldsky

ವಯಸ್ಸಾಗುತ್ತಾ ಹೋದಂತೆ ಪ್ರತಿಯೊಬ್ಬರಿಗೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ 40 ದಾಟಿದ ಬಳಿಕ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿದೆ. ಯಾಕೆಂದರೆ 40 ದಾಟಿದ ಬಳಿಕ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಇವುಗಳ ಬಗ್ಗೆ ಎಚ್ಚರ ವಹಿಸಬೇಕಾದರೆ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಬೇಕು.  ಡಬ್ಬಿ ತುಂಬ ಭಕ್ಕರಿ ಅಲ್ಲ ಅಮ್ಮನ ಪ್ರೀತಿ ಇತ್ತು

ನಮ್ಮನ್ನು ಹುಟ್ಟಿನಿಂದ ದೊಡ್ಡವರಾಗುವ ತನಕ ಪ್ರತಿಯೊಂದು ಹಂತದಲ್ಲೂ ನಮಗೆ ನೆರಳಾಗಿದ್ದ ತಾಯಿಯ ಆರೋಗ್ಯದ ಬಗ್ಗೆ ಗಮನಹರಿಸಬೇಕು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಯಾವುದೇ ಭೇದಭಾವವಿಲ್ಲ. ಆದರೆ ಹೆಣ್ಣು ಮಕ್ಕಳು ತಾಯಿಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಅವರ ಆರೋಗ್ಯ ತಪಾಸಣೆ ಮಾಡಿಸಬೇಕು. ತಾಯಿಯಂದಿರ ದಿನದಂದು ನೀವು ತಾಯಿಯ ಆರೋಗ್ಯದ ಬಗ್ಗೆ ಯಾವ ರೀತಿ ಕಾಳಜಿ ವಹಿಸಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ...  

ಆಕೆಯ ಆಹಾರ ಕ್ರಮ ಬದಲಾಯಿಸಿ

ಆಕೆಯ ಆಹಾರ ಕ್ರಮ ಬದಲಾಯಿಸಿ

ನಿಮ್ಮ ತಾಯಿ ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗುತ್ತಿಲ್ಲವೆಂದು ನಿಮಗೆ ಅನಿಸಿದರೆ ಆಕೆಗೆ ಪೋಷಕಾಂಶಗಳು ಇರುವ ಆಹಾರವನ್ನು ನೀಡಿ. ಹೆಚ್ಚಿನ ಪ್ರೋಟೀನ್, ಕಬ್ಬಿನಾಂಶ ಮತ್ತು ಇತರ ಪೋಷಕಾಂಶಗಳು ಇರುವ ಆಹಾರವನ್ನು ಆಕೆಗೆ ನೀಡಿ.

ಯಾವುದಾದರೂ ಕ್ಲಬ್‌ಗೆ ಸೇರಿಸಿ

ಯಾವುದಾದರೂ ಕ್ಲಬ್‌ಗೆ ಸೇರಿಸಿ

ತಾಯಿಯಂದಿರ ದಿನದಂದು ನೀಡುವ ಅತ್ಯುತ್ತಮ ಸಲಹೆ ಏನೆಂದರೆ ತಾಯಿಯನ್ನು ಯಾವುದಾದರೂ ಫಿಟ್ನೆಸ್, ಯೋಗ ಅಥವಾ ಮನೋರಂಜನೆಯ ಕ್ಲಬ್ ಗೆ ಸೇರಿಸಿ. ಮಹಿಳೆ ಆಥವಾ ತಾಯಿ ತನ್ನ ನಿವೃತ್ತಿ ಬಳಿಕ ಸಂತೋಷವಾಗಿರಲು ಬಯಸುತ್ತಾಳೆ.

ಮಸಾಜ್ ಮಾಡಿ ಮಲಗಿಸಿ

ಮಸಾಜ್ ಮಾಡಿ ಮಲಗಿಸಿ

ತಾಯಿಯಂದಿರ ದಿನದಂದು ಆಕೆಗೆ ಮಸಾಜ್ ಮಾಡಿ. ಇದು ತಾಯಿಯಂದಿರ ದಿನದಂದು ನಿಮ್ಮ ತಾಯಿಗೆ ನೀಡುವ ಅತ್ಯುತ್ತಮ ಆರೋಗ್ಯದ ಸಲಹೆ. ಆಕೆಯ ದೇಹದಲ್ಲಿ ಯಾವುದೇ ರೀತಿಯ ನೋವಿದ್ದರೂ ಇದು ನಿವಾರಿಸುತ್ತದೆ.

ವಿಟಮಿನ್‌ಗಳನ್ನು ನೀಡಿ

ವಿಟಮಿನ್‌ಗಳನ್ನು ನೀಡಿ

ನಿಮ್ಮ ತಾಯಿ ಒಳ್ಳೆಯ ಆಹಾರ ಕ್ರಮವನ್ನು ಪಾಲಿಸುತ್ತಾ ಇರಬಹುದು. ಆದರೂ ಆಕೆಗೆ ಹಲವಾರು ರೀತಿಯ ವಿಟಮಿನ್ ಗಳು ಬೇಕಾಗಬಹುದು. ಇದರಿಂದ ಆಕೆಗೆ ಹೆಚ್ಚಿನ ಶಕ್ತಿ ಮತ್ತು ಆಹಾರದಿಂದ ಸಿಗದೇ ಇರುವಂತಹ ವಿಟಮಿನ್ ಗಳು ಲಭ್ಯವಾಗುತ್ತದೆ.

ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗಿ

ಆರೋಗ್ಯ ತಪಾಸಣೆಗೆ ಕರೆದುಕೊಂಡು ಹೋಗಿ

ನಿಯಮಿತವಾಗಿ ಸಂಪೂರ್ಣ ದೇಹವನ್ನು ತಪಾಸಣೆ ಮಾಡುವುದು ತಾಯಿಯಂದಿರ ದಿನದಂದು ತಾಯಿಗೆ ನೀಡುವಂತಹ ಒಳ್ಳೆಯ ಆರೋಗ್ಯ ಸಲಹೆಯಾಗಿದೆ. ಇದರಿಂದ ತಾಯಿ ಆರೋಗ್ಯಕರ ಹಾಗೂ ಫಿಟ್ ಇದ್ದಾರೆಂದು ನೀವು ತಿಳಿಯಬಹುದು.

ಹಣ್ಣುಗಳನ್ನು ನೀಡಿ

ಹಣ್ಣುಗಳನ್ನು ನೀಡಿ

ಯಾವಾಗಲೂ ತಾಯಿಯ ಆಹಾರ ಕ್ರಮದಲ್ಲಿ ಹಣ್ಣುಗಳು ಹಾಗೂ ತರಕಾರಿಗಳನ್ನು ನೀಡಿ. ಫ್ರಿಡ್ಜ್ ನಲ್ಲಿ ಕೂಡ ತರಕಾರಿ ಹಾಗೂ ಹಣ್ಣುಗಳನ್ನು ತುಂಬಿಡಿ. ಆಕೆಗೆ ಹೂವಿನ ಬುಕ್ಕೆ ನೀಡಲು ಮರೆಯದಿರಿ.

ಶೂ ಉಡುಗೊರೆ ನೀಡಿ

ಶೂ ಉಡುಗೊರೆ ನೀಡಿ

ತುಂಬಾ ಮೃಧುವಾಗಿರುವಂತಹ ಕ್ರೀಡಾ ಶೂಗಳನ್ನು ತಾಯಿಗೆ ಉಡುಗೊರೆಯಾಗಿ ನೀಡಿ. ಇದರಿಂದ ಆಕೆ ತುಂಬಾ ಖುಷಿಪಡಬಹುದು. ಫಿಟ್ನೆಸ್ ತರಬೇತಿ ವೇಳೆ ಆಕೆ ಈ ಶೂಗಳನ್ನು ಧರಿಸಬಹುದು.

ಗ್ರೀನ್ ಟೀ ಕುಡಿಸಿ

ಗ್ರೀನ್ ಟೀ ಕುಡಿಸಿ

ಯಾವುದೇ ಮಹಿಳೆಗೆ ಗ್ರೀನ್ ಟೀ ಒಳ್ಳೆಯ ಪಾನೀಯವಾಗಿದೆ. 50 ದಾಟಿದ ಮಹಿಳೆಯರು ಪ್ರತೀ ದಿನ ಎರಡು ಕಪ್ ಗ್ರೀನ್ ಟೀ ಕುಡಿಯಲೇಬೇಕು.

ಶಕ್ತಿವರ್ಧಕ ಆಹಾರಗಳು

ಶಕ್ತಿವರ್ಧಕ ಆಹಾರಗಳು

ತಾಯಿಯನ್ನು ಯಾವಾಗಲೂ ಫಿಟ್ ಆಗಿಡಲು ಆಕೆಗೆ ಯಾವಾಗಲೂ ಕೆಲವೊಂದು ಕಾರ್ಬೋಹೈಡ್ರೇಟ್ಸ್ ಮತ್ತು ಶಕ್ತಿವರ್ಧಕ ಆಹಾರವನ್ನು ನೀಡಿ.

ತಾಯಿ ಮತ್ತು ಮಗಳ ಆರೋಗ್ಯ ಚಟುವಟಿಕೆಗಳು

ತಾಯಿ ಮತ್ತು ಮಗಳ ಆರೋಗ್ಯ ಚಟುವಟಿಕೆಗಳು

ತಾಯಿಯೊಂದಿಗೆ ಸಮಯ ಕಳೆಯಿರಿ ಮತ್ತು ಆಕೆಗೆ ವಿಶೇಷವೆನಿಸುವಂತಹ ಕೆಲಸಗಳನ್ನು ಮಾಡಿ. ಕೆಲವೊಂದು ಆರೋಗ್ಯಕರ ಚಟುವಟಿಕೆಗಳನ್ನು ಆಕೆಯ ಜತೆ ಮಾಡಿ. ಇದು ಆಕೆಗೆ ನೀವು ನೀಡುವಂತಹ ತಾಯಂದಿರ ದಿನದ ಒಳ್ಳೆಯ ಉಡುಗೊರೆಯಾಗಿದೆ.

English summary

Best Health Tips For Mums On Mother's Day

Here are some of the best health tips for mums on Mother's Day. Daughters must ensure that your mother is looked after and extra cared for on this lovely day.
Subscribe Newsletter