ಈತನಿಗೆ ಎರಡೂ ಕೈಗಳಿಲ್ಲ, ಆದರೆ ತಾಯಿಯನ್ನು ಮಗುವಿನಂತೆ ಸಾಕುತ್ತಿದ್ದಾನೆ!

By: Deepu
Subscribe to Boldsky

ತಾಯಿಯೇ ದೇವರು ಎನ್ನುವ ಮಾತಿದೆ. ಅದೇ ತಾಯಿಯ ಸೇವೆ ಮಾಡುವುದು ಪ್ರತಿಯೊಬ್ಬ ಮಗನ ಕರ್ತವ್ಯವಾಗಿದೆ. ತಾಯಿಯ ಸೇವೆ ಮಾಡಲು ಮಗನಿಗೂ ಒಳ್ಳೆಯ ಆರೋಗ್ಯ ಹಾಗೂ ದೈಹಿಕ ಶಕ್ತಿ ಕೂಡ ಬೇಕು. ಆದರೆ ಇಲ್ಲೊಬ್ಬ ರೈತ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದರೂ ತಾಯಿಯ ಸೇವೆಯನ್ನು ಮಾಡುತ್ತಿದ್ದಾನೆ.

ಯೌವನದಲ್ಲಿಯೇ ತನ್ನ ಕೈಗಳನ್ನು ಕಳೆದುಕೊಂಡು ಈತ 91 ವರ್ಷದ ತಾಯಿಯನ್ನು ಸಾಕುತ್ತಾ ಇದ್ದಾನೆ. ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಹಾಕುತ್ತಿರುವ ಇಂದಿನ ದಿನಗಳಲ್ಲಿ ಈತ ಪ್ರತಿಯೊಬ್ಬರಿಗೂ ಮಾದರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ... ಬನ್ನಿ ಈ ಆಧುನಿಕ ಕಾಲದ ಶ್ರವಣಕುಮಾರ ರೈತನ ಕಥೆಯನ್ನು ನಾವು ತಿಳಿದುಕೊಳ್ಳುವ.... 

ಆತ ಯಾರು?

ಆತ ಯಾರು?

ಚೆನ್ ಕ್ಸಿಯಾಗ್ಯಿನ್ ಚೊಂಗ್ಕಿಂಗ್ ಎನ್ನುವ 48 ವರ್ಷದ ರೈತ. ಆರು ಜನರ ಕುಟುಂಬದಲ್ಲಿ ಈತ ಕಿರಿಯವನಾಗಿದ್ದಾನೆ. ಈತ ತನ್ನ ಕೈಗಳೆರಡನ್ನು ಕಳೆದುಕೊಂಡಿದ್ದರೂ ಕೃಷಿಯಲ್ಲಿ ತೊಡಗಿಕೊಂಡು ತನ್ನ ಕುಟುಂಬವನ್ನು ಸಲಹುತ್ತಿದ್ದಾನೆ. ಅಡುಗೆ ಮಾಡುತ್ತಾನೆ ಮತ್ತು ಜಾನುವಾರುಗಳನ್ನು ಸಾಕುತ್ತಾನೆ. Image courtesy

ವಿದ್ಯುತ್ ಆಘಾತದಲ್ಲಿ ಕೈಗಳನ್ನು ಕಳೆದುಕೊಂಡ

ವಿದ್ಯುತ್ ಆಘಾತದಲ್ಲಿ ಕೈಗಳನ್ನು ಕಳೆದುಕೊಂಡ

ಈತ ಏಳು ವರ್ಷದವನಿದ್ದಾಗ ವಿದ್ಯುತ್‌ನ ಅಪಘಾತವೊಂದರಲ್ಲಿ ತನ್ನ ಕೈಗಳನ್ನು ಕಳೆದುಕೊಂಡ. ಇದರಿಂದ ಆತನಿಗೆ ಸಾಮಾನ್ಯ ಜನರಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಆದರೆ ಆತ ಒಳ್ಳೆಯ ಜೀವನವನ್ನು ನಡೆಸುತ್ತಲೇ ಇದ್ದಾನೆ.

Image courtesy

ಗಂಟಲೂತದಿಂದ ಬಳಲುತ್ತಿರುವ ತಾಯಿ

ಗಂಟಲೂತದಿಂದ ಬಳಲುತ್ತಿರುವ ತಾಯಿ

ವಯಸ್ಸಾಗುತ್ತಿರುವಂತೆ ಈತನ ತಾಯಿಗೆ 88ರ ಹರೆಯದಲ್ಲಿ ಗಂಟಲೂತ ಸಮಸ್ಯೆ ಕಾಣಿಸಿಕೊಂಡಿತು. ಇದರ ಬಳಿಕ ಆಕೆ ಹಾಸಿಗೆ ಹಿಡಿದಿದ್ದಾಳೆ. ಆದರೆ ಆತ ಮಾತ್ರ ಶ್ರವಣಕುಮಾರನಂತೆ ತಾಯಿಯ ಆರೈಕೆ ಮಾಡುತ್ತಿದ್ದಾನೆ.

Image courtesy

ಅಡುಗೆ ಮಾಡುತ್ತಾನೆ

ಅಡುಗೆ ಮಾಡುತ್ತಾನೆ

ಆತ ತನ್ನ ಕಾಲುಗಳನ್ನು ಬಳಸಿಕೊಂಡು ತಾಯಿಗೆ ಹಾಗೂ ತನಗೆ ಆಹಾರವನ್ನು ತಯಾರಿಸುತ್ತಾನೆ. ತನ್ನ ಬಾಯಿಯಲ್ಲಿ ಚಮಚವನ್ನು ಇಟ್ಟು ತಾಯಿಗೆ ಆಹಾರವುನಿಸುತ್ತಾನೆ. ಈತ ನಿಜವಾಗಿಯೂ ಆಧುನಿಕ ಶ್ರವಣಕುಮಾರನಲ್ಲವೇ? Image courtesy

 
English summary

meet-the-farmer-who-still-manages-to-feeds-his-mom

The most incredible thing about this case is that despite having no arms, he works hard to take care of his mom! This is the story of a man who lost both his arms at a very young age and yet he manages to lead a normal life and also feeds his 91-year old mother...
Story first published: Tuesday, January 10, 2017, 23:33 [IST]
Please Wait while comments are loading...
Subscribe Newsletter