For Quick Alerts
ALLOW NOTIFICATIONS  
For Daily Alerts

  ಮನೆ ಔಷಧಿ: ಕೆಮ್ಮಿನ ನಿವಾರಣೆಗೆ ಅರಿಶಿನ ಬೆರೆಸಿದ ಮಸಾಲೆ ಹಾಲು

  By Arshad
  |

  ಆಧುನಿಕ ವಿಜ್ಞಾನದ ಬಳಿ ಬಹುತೇಕ ಎಲ್ಲಾ ಕಾಯಿಲೆಗಳಿಗೆ ಇಂದು ಔಷಧಿ ಲಭ್ಯವಿದೆ. ಆದರೆ ಸಾಮಾನ್ಯವಾಗಿರುವ ಫ್ಲೂ ಕಾಯಿಲೆಗೆ ಇದುವರೆಗೆ ಸಮರ್ಥವಾದ ಔಷಧಿಯನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈಗಿರುವ ಔಷಧಿಗಳು ಫ್ಲೂ ತಾನಾಗಿ ಕಡಿಮೆಯಾಗುವಂತೆ ಮಾಡಲು ಕೊಂಚ ನೆರವಗುತ್ತವೆ ಅಷ್ಟೇ. ಇದಕ್ಕೆ ಕಾರಣವೆಂದರೆ ಇದೊಂದು ಶ್ವಾಸನಾಳಗಳಿಗೆ ಸಂಬಂಧಿಸಿದ ವಿಶಿಷ್ಟ ರೋಗವಾಗಿದ್ದು ಇದಕ್ಕೆ ಕೋಟಿಗಟ್ಟಲೇ ಸಂಖ್ಯೆಯ ವಿವಿಧ ವೈರಸ್ಸುಗಳು ಕಾರಣವಾಗಿವೆ. ಇದರೊಂದಿಗೆ ಬ್ಯಾಕ್ಟೀರಿಯಾಗಳೂ, ಅತಿಸೂಕ್ಷ್ಮ ಕಣಗಳೂ, ಅಲರ್ಜಿಯುಂಟುಮಾಡುವ ಕಣಗಳೂ ಫ್ಲೂ ಬರಲು ಕಾರಣವಾಗಿರುತ್ತವೆ.

  ವೈದ್ಯವಿಜ್ಞಾನ ಯಾವುದಾದರೊಂದು ಬಗೆಯ ವೈರಸ್ಸು ಅಥವಾ ಬ್ಯಾಕ್ಟೀರಿಯಾಕ್ಕೆ ಮಾತ್ರ ವ್ಯಾಕ್ಸೀನ್ ಅಥವಾ ಲಸಿಕೆಯನ್ನು ತಯಾರಿಸಬಹುದು. ವಿವಿಧ ವೈರಸ್ಸುಗಳು ಒಟ್ಟಾಗಿ ಬಂದರೆ? ಇದಕ್ಕೆ ಸೂಕ್ತ ಲಸಿಕೆ ತಯಾರಿಸುವುದು ಅಷ್ಟು ಸುಲಭವಲ್ಲ. ಆದರೆ ಫ್ಲೂ ಗುಣಪಡಿಸಲಾರದ ಕಾಯಿಲೆಯೇನಲ್ಲ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಈ ರೋಗವನ್ನು ವಿರೋಧಿಸಲು ಹೆಚ್ಚು ಸಮರ್ಥಗೊಳಿಸುವ ಮೂಲಕ ಕಾಯಿಲೆಯಿಂದ ಶೀಘ್ರವೇ ಗುಣವಾಗಬಹುದು.

  ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು

  ಇಂದಿನ ಲೇಖನದಲ್ಲಿ ವಿವರಿಸಲಾಗಿರುವ ಅರಿಶಿನ ಬೆರೆಸಿದ ಮಸಾಲೆ ಹಾಲನ್ನು ನಿಯಮಿತವಾಗಿ ಕುಡಿಯುತ್ತಾ ಬರುವ ಮೂಲಕ ರೋಗ ನಿರೋಧಕ ಶಕ್ತಿ ಬಲಗೊಂಡು ಇಡಿಯ ವರ್ಷ ಫ್ಲೂ ಬರದಂತೆ ತಡೆಯುತ್ತದೆ. ಬನ್ನಿ, ಈ ಅದ್ಭುತ ಪೇಯವನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ...

  ಅಗತ್ಯವಿರುವ ಸಾಮಾಗ್ರಿಗಳು

  ಅಗತ್ಯವಿರುವ ಸಾಮಾಗ್ರಿಗಳು

  ಒಂದು ಕಪ್ ಹಾಲು

  ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ

  ಎರಡರಿಂದ ಮೂರು ಕಾಳುಮೆಣಸು

  ಒಂದು ಏಲಕ್ಕಿ, ಬಿಡಿಸಿದ್ದು.

  ತಗಲುವ ಸಮಯ:

  ಸುಮಾರು ಐದು ನಿಮಿಷಗಳು

  ಹಂತ 1

  ಹಂತ 1

  ಎಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದಕ್ಕೆ ಕಾಳುಮೆಣಸು, ಸೀಳಿದ ಏಲಕ್ಕಿ ಮತ್ತು ಹಾಲು ಹಾಕಿ ಕುದಿಸಿ.

  ಹಂತ 2

  ಹಂತ 2

  ಹಾಲಿಗೆ ಕುದಿಬಂದ ಬಳಿಕ ಅರ್ಧ ಚಿಕ್ಕ ಚಮಚ ಅರಿಶಿನ ಪುಡಿ ಹಾಕಿ ಕುದಿಸುವುದನ್ನು ಚಿಕ್ಕ ಉರಿಯಲ್ಲಿ ಮುಂದುವರೆಸಿ ಹಾಲಿನ ಬಣ್ಣ ಹೊಂಬಣ್ಣವಾಗುವಂತೆ ಮಾಡಿ.

  ಹಂತ 3

  ಹಂತ 3

  ಸುಮಾರು ಮೂರರಿಂದ ಐದು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸುತ್ತಾ ಹಾಲು ಉಕ್ಕದಂತೆ ನೋಡಿಕೊಳ್ಳಿ.

  ಹಂತ 4

  ಹಂತ 4

  ಬಳಿಕ ಈ ಹಾಲನ್ನು ಒಂದು ಕಪ್ ನಲ್ಲಿ ಬಗ್ಗಿಸಿಕೊಳ್ಳಿ. ಇದನ್ನು ಸೋಸಿ ಕಾಳುಮೆಣಸು, ಏಲಕ್ಕಿಗಳನ್ನು ನಿವಾರಿಸಿ. ಬಳಿಕ ಈ ಹಾಲನ್ನು ಮುಚ್ಚಿಟ್ಟು ತಣಿಯಲು ಬಿಡಿ. ನೀವು ಕುಡಿಯಲು ಸಾಧ್ಯವಾದಷ್ಟು ತಣಿದ ಬಳಿಕ ಕುಡಿಯಿರಿ.ಸಾಧ್ಯವಾದಷ್ಟು ಬೆಚ್ಚಗೇ ಇರುವಾಗ ಕುಡಿಯಿರಿ. ಕುದಿಸುವ ಮುನ್ನ ಒಂದು ಚಿಕ್ಕ ಚಮಚದಷ್ಟು ಜೇನನ್ನು ಬೆರೆಸಿದರೆ ಇದನ್ನು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಇಷ್ಟಪಟ್ಟು ಕುಡಿಯುತ್ತಾರೆ.

  ಮಸಾಲೆ ಹಾಲು ಏಕೆ ಆರೋಗ್ಯಕರ ಎಂಬುದಕ್ಕೆ ಕಾರಣಗಳೇನು?

  ಮಸಾಲೆ ಹಾಲು ಏಕೆ ಆರೋಗ್ಯಕರ ಎಂಬುದಕ್ಕೆ ಕಾರಣಗಳೇನು?

  ಅರಿಶಿನ ನಿಸರ್ಗ ನೀಡಿರುವ ಅದ್ಭುತ ಔಷಧಿಯಾಗಿದ್ದು ಇದರಲ್ಲಿರುವ ಸೂಕ್ಷ್ಮಜೀವಿ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳು ಹಲವಾರು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ವಿಶೇಷವಾಗಿ ಗಂಟಲಿಗೆ ಎದುರಾಗುವ ಸೋಂಕು ಹಾಗೂ ಗಂಟಲಿನ ಒಳಭಾಗ, ಮೂಗಿನ ಒಳಭಾಗದಲ್ಲಿ ಕಫ ಹೆಚ್ಚಿಸಿ ಉಸಿರಾಟದ ಭಾಗಗಳನ್ನು ಹೆಚ್ಚು ತೇವಗೊಳಿಸಿ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಹಾಲಿನಲ್ಲಿ ಬೆರೆಸಿರುವ ಕಾಳುಮೆಣಸು ಹಾಗೂ ಏಲಕ್ಕಿಗಳ ಔಷಧೀಯ ಗುಣಗಳೂ ಈಗ ಹಾಲಿನಲ್ಲಿ ಬೆರೆತಿರುವ ಕಾರಣ ಈ ಪೇಯ ದೇಹವನ್ನು ಹಲವಾರು ಸೋಂಕುಗಳಿಂದ ರಕ್ಷಿಸುವ ಅದ್ಭುತ ಪೇಯವಾಗಿದೆ.

  ಅರಿಶಿನ+ಕಾಳುಮೆಣಸು = ಶಕ್ತಿಶಾಲಿ ಜೋಡಿ

  ಅರಿಶಿನ+ಕಾಳುಮೆಣಸು = ಶಕ್ತಿಶಾಲಿ ಜೋಡಿ

  ಆಯುರ್ವೇದದ ಕಾಲದಿಂದಲೂ ಅರಿಶಿನವನ್ನು ಹಲವಾರು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತಾ ಬರಲಾಗಿದೆ. ಇದಕ್ಕೆ ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಹದ ಒಂದು ಕೊರತೆ ಎಂದರೆ ಅರಿಶಿನದಲ್ಲಿರುವ ಎಲ್ಲಾ ಕುರ್ಕುಮಿನ್ ಪ್ರಮಾಣವನ್ನು ನಮ್ಮ ದೇಹ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಸಾಧ್ಯವಾಗಿಸಲು ಕಾಳುಮೆಣಸಿನ ಜೊತೆ ಬೇಕು. ಕಾಳುಮೆಣಸಿನಲ್ಲಿರುವ ಪೋಷಕಾಂಶಗಳಲ್ಲಿ ಪ್ರಮುಖವಾಗಿರುವ

  ಪೈಪರಿನ್ ಎಂಬ ಸಂಯುಕ್ತವಸ್ತು ಅರಿಶಿನದ ಜೊತೆಯಲ್ಲಿದ್ದರೆ ಕುರ್ಕುಮಿನ್ ಅನ್ನು ದೇಹ ಜೀರ್ಣಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಎಷ್ಟರ ಮಟ್ಟಿಗೆ ಎಂದರೆ 2000%ದಷ್ಟು! ಇದೇ ಕಾರಣದಿಂದ ಈ ಮಿಶ್ರಣವನ್ನು ಶಕ್ತಿಶಾಲಿ ಜೋಡಿ ಎಂದು ಆಯುರ್ವೇದದಲ್ಲಿ ಕರೆಯಲಾಗಿದೆ.

   ಈ ಅದ್ಭುತ ಹಾಲಿನ ಸೇವನೆಯ ಪ್ರಯೋಜನಗಳು

  ಈ ಅದ್ಭುತ ಹಾಲಿನ ಸೇವನೆಯ ಪ್ರಯೋಜನಗಳು

  ಏಲಕ್ಕಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಒಂದು ವೇಳೆ ನಿಮಗೆ ಏಲಕ್ಕಿ ಇಷ್ಟವಿದ್ದರೆ ಇದನ್ನು ಹೆಚ್ಚು ಹೆಚ್ಚು ಸೇವಿಸುವ ಮೂಲಕ ಕಾಲಕ್ರಮೇಣ ಇನ್ನಷ್ಟು ಹೆಚ್ಚು ಇಷ್ಟಪಡುತ್ತೀರಿ. ಇದೇ ಗುಣದಿಂದ ಇದರ ಬೇಡಿಕೆಯೂ ಹೆಚ್ಚಾಗುತ್ತಾ ಇದರ ಬೆಲೆ ವಿಶ್ವದ ಮೂರನೆಯ ಅತಿ ದುಬಾರಿ ಮಸಾಲೆ ವಸ್ತು ಎಂಬಷ್ಟರ ಮಟ್ಟಿಗೆ ಏರಿದೆ. ಪ್ರಥಮ ಪಟ್ಟಿಯಲ್ಲಿ ಕೇಸರಿ ಹಾಗೂ ವನಿಲ್ಲಾಗಳಿವೆ ಹಾಗೂ ಇವೆರಡನ್ನೂ ಸಾಮಾನ್ಯ ಉಪಯೋಗಕ್ಕೆ ಮನೆಗೆ ನಾವಾರೂ ತರುವುದಿಲ್ಲ. ಮಸಾಲೆ ಹಾಲು ಕುಡಿಯಲು ಇಷ್ಟವಾಗುವಂತಿರಬೇಕು ಎಂಬ ಕಾರಣಕ್ಕೆ ಏಲಕ್ಕಿಯನ್ನು ಸೇರಿಸಲಾಗಿದೆ. ಏಲಕ್ಕಿಯ ಉಪಸ್ಥಿತಿಯಿಂದ ಕೇವಲ ರುಚಿ ಮಾತ್ರವಲ್ಲ, ಬದಲಿಗೆ ಹಸಿವನ್ನು ಹೆಚ್ಚಿಸುವಂತೆ ಪ್ರಚೋದಿಸಿ ಸೋಂಕಿಗೊಳಗಾಗಿದ್ದ ದಿನಗಳಲ್ಲಿ ಹಸಿವು ಕಡಿಮೆಯಾಗಿರುವ ಕೊರತೆಯನ್ನು ನೀಗಿಸುತ್ತದೆ. ಅಲ್ಲದೇ ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಮನೋಭಾವವೂ ಉತ್ತಮಗೊಳ್ಳುತ್ತದೆ ಎಂದು ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಈಗ ಈ ಮಸಾಲೆ ಹಾಲನ್ನು ನಿತ್ಯವೂ ಮಲಗುವ ಮುನ್ನ ಕುಡಿಯದೇ ಇರಲು ನಿಮಗೆ ಯಾವುದೇ ಕಾರಣ ಉಳಿಯಲಾರದು.

  English summary

  how-to-make-spiced-turmeric-milk-for-cough

  If there is one ailment that modern health care has failed to protect us from, then it is the flu. Why? Because this unique respiratory problem is caused by millions of different viruses, bacteria, and other microbial particles, including allergens. And you cannot create a vaccine that covers them all. But don't let that knowledge make you throw down the towel and resign yourself to suffering through at least 2-4 bouts of cough and cold every year. Because in this article we have outlined a simple and effective recipe for spiced turmeric milk that will get rid of your cough in record time, and boost your immunity (if drunk regularly), so you can fight off other invaders throughout the year.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more