ಎಚ್ಚರಿಕೆ! ನೊಣಗಳು ಸಾಂಕ್ರಾಮಿಕ ಕಾಯಿಲೆಗಳು ಹರಡಬಲ್ಲವು

By: Arshad
Subscribe to Boldsky

ಮುಂದಿನ ಬಾರಿ ರಸ್ತೆಯ ಬದಿಯ ಸಿದ್ಧ ಆಹಾರಗಳನ್ನು ತಿನ್ನುವ ಮುನ್ನ ಕೊಂಚ ಜಾಗರೂಕರಾಗಿರುವುದು ಮೇಲು. ಏಕೆಂದರೆ ಈ ಆಹಾರದ ಮೇಲೆ ಅಥವಾ ಆಹಾರ ತಯಾರಿಸುತ್ತಿರುವ ಉಪಕರಣ, ಸಾಮಾಗ್ರಿಗಳ ಮೇಲೆ ನೊಣಗಳು ಹಾರಾಡ್ತುತಿದ್ದರೆ ಇದರ ಮೂಲಕ ನಿಮಗೆ ಹಲವಾರು ಕಾಯಿಲೆಗಳು ಎದುರಾಗಬಹುದು. ಇತ್ತೀಚಿನ ಒಂದು ಸಂಶೋಧನೆಯಲ್ಲಿ ನೊಣಗಳು ಕೊಂಡೊಯ್ಯುವ ಹಲವಾರು ಬಗೆಯ ಬ್ಯಾಕ್ಟೀರಿಯಾಗಳಲ್ಲಿ ಹೆಚ್ಚಿನವು ಮಾನವರಿಗೆ ರೋಗ ತರಬಲ್ಲವಾಗಿವೆ.

ಈ ಮಾತನ್ನು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದರೂ ಈ ಮಾತನ್ನೀಗ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಕೆಲವಾರು ಪ್ರಯೋಗಗಳಿಂದ ಸಾಬೀತುಪಡಿಸಿದ ಬಳಿಕವೇ ಹೇಳಿದ್ದರಿಂದ ನಮ್ಮ ಹಿರಿಯರನ್ನು ಸರಿ ಎನ್ನದೇ ವಿಧಿಯಿಲ್ಲ. ಈ ಸಂಶೋಧಕರು ಇದಕ್ಕಾಗಿ 116 ಬಗೆಯ ನೊಣಗಳನ್ನೂ ಇತರ ಹಾತೆಗಳನ್ನೂ ಸೂಕ್ಷ್ಮವಾಗಿ ಗಮನಿಸಿ ಅಭ್ಯಸಿಸಿದ್ದಾರೆ.

 flies

ನೊಣಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವಾಗ ತನ್ನ ಕಾಲು, ಮೈಗಳಿಗೆ ಅಂಟಿಸಿಕೊಂಡ ಬ್ಯಾಕ್ಟೀರಿಯಾಗಳು ಇನ್ನೊಂದು ಕಡೆಗೆ ದಾಟಿಕೊಂಡು ಹೊಸ ಸ್ಥಳದಲ್ಲಿ ಸೋಂಕು ಹರಡುತ್ತವೆ. ಆದ್ದರಿಂದ ಸಂಶೋಧಕರು ನೊಣಗಳು ಕೂರಬಹುದಾದ ಹೊರಗಿನ ಯಾವುದೇ ಆಹಾರವನ್ನು, ಅದು ನಮ್ಮ ವಿಹಾರದ ಸ್ಥಳದಲ್ಲಿದ್ದರು ಸಹಾ, ಸೇವಿಸದಿರುವಂತೆ ಸಲಹೆ ಮಾಡುತ್ತಾರೆ. "ಸಾಮಾನ್ಯವಾಗಿ ಪರಾವಲಂಬಿ ಜೀವಿಗಳನ್ನು ಹೊತ್ತು ತರುವ ನೊಣಗಳನ್ನು ನಾವೆಲ್ಲರೂ ಗೊತ್ತಿದ್ದೂ ಅಲಕ್ಷಿಸುತ್ತೇವೆ. 

ಹಣ್ಣನ್ನು ಆಕ್ರಮಿಸುವ ನೊಣಗಳಿಂದ ಸಂರಕ್ಷಣೆ ಹೇಗೆ?

ಆದರೆ ಈ ನಿರ್ಲಕ್ಷ್ಯದಿಂದ ಹರಡುವ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳಲು ನಾವೇ ಪರೋಕ್ಷವಾಗಿ ಕಾರಣರಾಗುತ್ತೇವೆ" ಎಂದು ವಿಶ್ವವಿದ್ಯಾಲಯದ ಡೋನಾಲ್ಡ್ ಬೈರಾಂಟ್ ರವರು ತಿಳಿಸುತ್ತಾರೆ. ಈ ಸಂಶೋಧನೆಯಲ್ಲಿ ಪ್ರತಿ ಒಂದು ನೊಣವನ್ನೂ ಸೂಕ್ಷ್ಮದರ್ಶಕದ ಅಡಿಯಲ್ಲಿ ಪರೀಕ್ಷಿಸಿದಾದ ನೊಣಗಳ ಕಾಲುಗಳಲ್ಲಿ ಗರಿಷ್ಟ ಮಟ್ಟದ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಇವೇ ಬ್ಯಾಕ್ಟೀರಿಯಾಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಹರಡಲು ಪ್ರಮುಖ ಮಾಧ್ಯಮವಾಗಿದೆ ಎಂದು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸ್ಟೀಫನ್ ಶುಸ್ಟರ್ ರವರು ತಿಳಿಸುತ್ತಾರೆ.

Road side food

"ಕಾಲು ಮತ್ತು ರೆಕ್ಕೆಗಳಲ್ಲಿ ಹೆಚ್ಚಿನ ವಿಧದ ಬ್ಯಾಕ್ಟೀರಿಯಾಗಳು ಕಂಡುಬಂದಿವೆ ಹಾಗೂ ಈ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಹಾರಾಡುವ ಸಮಯದಲ್ಲಿ ತೇವವಿಲ್ಲದಿದ್ದರೂ ಬದುಕುಳಿಯುವ ಸಾಮರ್ಥ್ಯ ಹೊಂದಿವೆ ಹಾಗೂ ಹೊಸ ಸ್ಥಳಕ್ಕೆ ಬಂದ ತಕ್ಷಣವೇ ಈ ನೆಲದಲ್ಲಿ ನೆಲೆಗೊಂಡು ಅಭಿವೃದ್ದಿಗೊಳ್ಳುತ್ತವೆ" ಎಂದು ಅವರು ತಿಳಿಸುತ್ತಾರೆ.

ವಾಸ್ತವವಾಗಿ, ಈ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಒಂದು ಕಡೆಯಿಂದ ಸಾಗಿ ಇನ್ನೊಂದು ಕಡೆಗೆ ಬಂದ ಬಳಿಕ ಈ ಬ್ಯಾಕ್ಟೀರಿಯಾಗಳು ಸಾಂಕ್ರಾಮಿಕ ರೋಗ ಹರಡುವಷ್ಟರಲ್ಲಿ ಒಂದು ನೊಣ ಕನಿಷ್ಟ ನೂರು ಕಡೆಗಾದರೂ ಹೋಗಿ ಕುಳಿತುಕೊಂಡಿರುತ್ತದೆ. ಅಂದರೆ ಒಂದು ನೊಣದಿಂದ ನೂರು ಕಡೆ ಈ ರೋಗ ಹರಡಿದಂತಾಗುವುವೇ ರೋಗ ಸಾಂಕ್ರಾಮಿಕ ರೂಪ ಪಡೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಬರೆಯ ನೊಣಗಳು ಮಾತ್ರವಲ್ಲ, ಹಾತೆ ಹಾಗೂ ಮನೆಯಲ್ಲಿ ಹಾರಾಡುವ ಇತರ ಕೀಟಗಳೂ ರೋಗವನ್ನು ಹರಡುತ್ತವೆ. ಸಾಮಾನ್ಯವಾಗಿ ಕೊಳಕು ಇರುವಲ್ಲೇ ನೊಣ ಹಾರಾಡುವ ಕಾರಣ ಮನೆಯ ಒಳಗೆ ಮತ್ತು ಹೊರಗೆ ಸ್ವಚ್ಛಗೊಳಿಸದಿರುವುದು ನೊಣಗಳಿಗೆ ಆಹಾರ ಪಡೆದಂತಾಗುತ್ತದೆ ಹಾಗೂ ರೋಗ ಹರಡಬಲ್ಲ ಬ್ಯಾಕ್ಟೀರಿಯಾಗಳನ್ನು ಬೇರೆಡೆ ಕೊಂಡೊಯ್ದು ಬರೆಯ ಮಾನವರಿಗೆ ಮಾತ್ರವಲ್ಲ, ಸಸ್ಯ ಹಾಗೂ ಸುತ್ತಮುತ್ತ ಇರುವ ಇತರ ಪ್ರಾಣಿಗಳಿಗೂ ರೋಗ ಹರಡುತ್ತವೆ. 

ನೊಣಗಳನ್ನು ಹೋಗಲಾಡಿಸಲು 16 ಮನೆಮದ್ದುಗಳು

ಸಂಶೋಧನೆಯಲ್ಲಿ ಕಂಡುಕೊಂಡಂತೆ, ನೊಣ ಮತ್ತು ಹಾತೆಗಳು ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಸೂಕ್ಷ್ಮಜೀವಿಗಳನ್ನು ಹರಡಲು ಸಮಾನವಾಗಿ ಕಾರಣವಾಗಿವೆ ಹಾಗೂ ಇದರಲ್ಲಿ 50ಶೇಖಡಾದಷ್ಟು ಈ ಪ್ರದೇಶಕ್ಕೆ ಈಗ ಹೊಸದಾಗಿ ಬಂದಿರುವಂತಹದ್ದಾಗಿವೆ. ಅಚ್ಚರಿ ಎಂದರೆ ಹಳ್ಳಿಗಳ ನೊಣಗಳಲ್ಲಿ ಕೆಲವೇ ಪ್ರಕಾರದ ಬ್ಯಾಕ್ಟೀರಿಯಾಗಳಿದ್ದರೆ ನಗರಗಳಲ್ಲಿ ಹೆಚ್ಚಿನ ವಿಧದ ಬ್ಯಾಕ್ಟೀರಿಯಾಗಳು ಕಂಡುಬಂದಿವೆ. ಇನ್ನೊಂದು ಅಚ್ಚರಿ ಎಂದರೆ ಮಾನವರ ಕರುಳುಗಳಲ್ಲಿ ಅಲ್ಸರ್ ಉಂಟುಮಾಡುವ ಪರಾವಲಂಬಿ ಕ್ರಿಮಿಯಾದ ಹೆಲಿಕೋಬಾಕ್ಟರ್ ಪೈಲೋರಿ ಎಂಬ ಕ್ರಿಮಿಯನ್ನು ಕನಿಷ್ಟ 15 ಪ್ರಕರಣಗಳಲ್ಲಿ ಕಂಡುಕೊಳ್ಳಲಾಗಿದ್ದು ಇದನ್ನು ಹರಡಲು ನೊಣಗಳಿಗಿಂತಲೂ ಹಾತೆಗಳೇ ಪ್ರಮುಖ ಪಾತ್ರ ವಹಿಸಿವೆ. ಈ ವರದಿಗಳನ್ನೆಲ್ಲಾ ಇತ್ತೀಚಿನ Scientific Reports ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಬನ್ನಿ, ನೊಣಗಳಿಂದ ಹೇಗೆ ರೋಗಗಳು ಹರಡುತ್ತವೆ ಎಂಬುದನ್ನು ನೋಡೋಣ:

Cleaning floor

ಆಹಾರದ ಸ್ವಚ್ಛತೆ

ಹಸಿ ಆಹಾರಗಳಾದ ತರಕಾರಿ ಮತ್ತು ಹಣ್ಣುಗಳನ್ನು ಅಡುಗೆಗೂ ಮುನ್ನ ಚೆನ್ನಾಗಿ ತೊಳೆದುಕೊಳ್ಳದೇ ಇರುವುದು, ಇವುಗಳನ್ನು ಮುಚ್ಚಿಡುವುದು, ಕೊಳೆಯುತ್ತಿರುವ ಅಥವಾ ಒಂದು ಭಾಗ ಕೊಳೆತ ತರಕಾರಿಗಳನ್ನು ತೆರೆದ ನೆಲದ ಮೇಲೆ ಎಸೆಯುವುದು ಮೊದಲಾದವು ನಾವೆಲ್ಲಾ ಅರಿವಿಲ್ಲದೇ ನೊಣಗಳಿಗೆ ಮಾಡುವ ಉಪಕಾರಗಳಾಗಿವೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು.

ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳದೇ ಇರುವುದು ನಮ್ಮ ಮನೆಯೊಳಗೆ ಸ್ವಚ್ಛವಾಗಿದ್ದರೆ ಸಾಕು, ಹೊರಗೆ ಹೇಗಿದ್ದರೆ ನಮಗೇನು, ಎಂಬ ಮನೋಭಾವ ನಮ್ಮಲ್ಲಿ ಹೆಚ್ಚಿನವರಲ್ಲಿ ಇರುತ್ತದೆ. ಆದರೆ ಮನೆಯ ಹೊರಗೆ ಇರುವ ತ್ಯಾಜ್ಯದ ಮೇಲೆ ಹಾರಾಡುವ ನೊಣಗಳಿಗೆ ಮಾತ್ರ ಈ ನಿರ್ಲಕ್ಷ್ಯವೇ ಬಂಡವಾಳವಾಗಿದ್ದು ಹಲವಾರು ಬಗೆಯ ರೋಗಗಳನ್ನು ಹರಡುವ ಮೂಲಕ ತನ್ನ ಜೀವನವನ್ನು ಸಾರ್ಥಕವಾಗಿಸಿಕೊಳ್ಳುತ್ತವೆ.

Dustbin

ತ್ಯಾಜ್ಯ ನಿರ್ವಹಣೆ

ತ್ಯಾಜ್ಯವಿಲ್ಲದ ಮನೆಯೇ ಇಲ್ಲ. ಇದನ್ನು ನಿರ್ವಹಿಸುವುದು ಮುಖ್ಯ ಸವಾಲು. ರೋಗಗಳನ್ನು ತಡೆಯಬೇಕೆಂದರೆ ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸಲೇ ಬೇಕು. ತ್ಯಾಜ್ಯಗಳನ್ನು ಎಸೆಯುವ ತೊಟ್ಟಿಗಳನ್ನು ಸದಾ ಮುಚ್ಚಿರುವಂತೆ ನೋಡಿಕೊಳ್ಳುವುದು, ಕೊಳೆಯುವ, ಹಸಿ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ನಲ್ಲಿ ಮುಚ್ಚಿರುವುದು, ಸೋರದಂತೆ ನೋಡಿಕೊಳ್ಳುವುದು ಮೊದಲಾದವುಗಳ ಮೂಲಕ ತ್ಯಾಜ್ಯದ ಮೇಲೆ ನೊಣಗಳು ಹಾರಾಡದಂತೆ ನೋಡಿಕೊಳ್ಳಬಹುದು. ಈ ಸ್ಥಳಗಳು ನೊಣಗಳಿಗೆ ಅದ್ಭುತವಾದ ಅಭಿವೃದ್ಧಿ ಕೇಂದ್ರಗಳಾಗಂತೆ ನೋಡಿಕೊಳ್ಳಬೇಕು.

English summary

Houseflies Can Spread These Diseases, Be Careful!

The next time you try eating snacks from a roadside vendor, you need to be careful. If you see a housefly hovering around the food then you need to avoid it, as this can lead to numerous health issues. In a new study, researchers have found that flies carry hundreds of different species of bacteria, many of which are harmful to humans. The researchers from the Pennsylvania State University in the US had taken into account microbiomes of 116 houseflies and blowflies for the study.
Please Wait while comments are loading...
Subscribe Newsletter