Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ತೂಕ ಇಳಿಸಬೇಕೇ? ದಿನಕ್ಕೊಂದು ಗ್ಲಾಸ್ ಈ ಜ್ಯೂಸ್ ಕುಡಿಯಿರಿ...
ತೂಕ ಇಳಿಸಬೇಕೇ? ಹಾಗಾದರೆ ಇಲ್ಲಿದೆ ನೋಡಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ, ಸಿಂಪಲ್ ಜ್ಯೂಸ್, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....
ಸ್ಥೂಲಕಾಯದಿಂದ ಪಾರಾಗಲು ಕೆಲವಾರು ಪ್ರಯತ್ನಗಳನ್ನು ಮಾಡಿ ಸೋಲೊಪ್ಪಿಕೊಂಡವರಲ್ಲಿ ನೀವೂ ಒಬ್ಬರೇ? ಹಾಗಾದರೆ ಕೊಂಚ ಭಿನ್ನವಾದ ಪ್ರಯತ್ನವನ್ನೇಕೆ ಮಾಡಬಾರದು? ತೂಕ ಹೆಚ್ಚಾಗಿ ಕಳೆದುಕೊಂಡ ಆರೋಗ್ಯ ಮತ್ತು ಸೌಂದರ್ಯವನ್ನು ಮತ್ತೆ ಪಡೆಯಲು ನಿಸರ್ಗ ಕೆಲವೊಂದು ಪರಿಕರಗಳನ್ನು ನೀಡಿದೆ. ಇವುಗಳ ಸಮರ್ಥವಾದ ಬಳಕೆಯಿಂದ ಹಿಂದಿನ ಮೈಕಟ್ಟನ್ನು ಮತ್ತೊಮ್ಮೆ ಪಡೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್
ಆದ್ದರಿಂದ ಉತ್ತಮ ಆರೋಗ್ಯ ಹೊಂದಲು ಉತ್ತಮ ಶರೀರವೂ ಅಗತ್ಯ. ಸ್ಥೂಲಕಾಯದಿಂದ ಕೇವಲ ಶರೀರದ ಸೌಂದರ್ಯ ಹಾಳಾಗುವುದು ಮಾತ್ರವಲ್ಲ, ಹತ್ತು ಹಲವು ಕಾಯಿಲೆಗಳೂ ಆವರಿಸುವ ಸಾಧ್ಯತೆ ಹೆಚ್ಚುತ್ತವೆ.... ಹಾಗಾಗಿ ಇವೆಲ್ಲಾ ಸಮಸ್ಯೆಯಿಂದ ಪಾರಾಗಲು ಈ ಲೇಖನದಲ್ಲಿ ನೀಡಿರುವ ಜ್ಯೂಸ್ ಅನ್ನು ದಿನಕ್ಕೊಂದು ಗ್ಲಾಸಿನಂತೆ ಮಾಡಿಕೊಂಡು ಕುಡಿಯುವ ಮೂಲಕ ಒಂದು ತಿಂಗಳಲ್ಲಿ ಗರಿಷ್ಠ ಏಳು ಕೇಜಿಗಳನ್ನಾದರೂ ಕಡಿಮೆ ಮಾಡಿಕೊಳ್ಳಬಹುದು.....

ಈ ಜ್ಯೂಸ್ ತಯಾರಿಸುವ ವಿಧಾನ
*ಅಗತ್ಯವಿರುವ ಸಾಮಾಗ್ರಿಗಳು
*ಚಕ್ಕೋತ ಹಣ್ಣಿನ (Grapefruit) ತಿರುಳು: ಅರ್ಧ ಕಪ್
*ಲಿಂಬೆ ರಸ: ಎರಡು ದೊಡ್ಡ ಚಮಚ
ಜೇನು : ಒಂದು ದೊಡ್ಡ ಚಮಚ

ಇವು ಹೇಗೆ ಕಾರ್ಯ ನಿರ್ವಹಿಸುತ್ತದೆ....
ಸ್ಥೂಲಕಾಯವನ್ನು ಕಡಿಮೆಗೊಳಿಸಲು ದೇಹದಲ್ಲಿ ಅನಗತ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಕಡಿಮೆಗೊಳಿಸಬೇಕು. ಈ ಕಾರ್ಯವನ್ನು ಮೇಲಿನ ಸಾಮಾಗ್ರಿಗಳು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ಬಳಸಿಕೊಂಡು ತೂಕವನ್ನು ಸಮರ್ಥವಾಗಿ ಇಳಿಸುತ್ತವೆ.

ಈ ಜ್ಯೂಸ್ ಜೊತೆ ವ್ಯಾಯಾಮ ಕೂಡ ಅತ್ಯಗತ್ಯ....
ಆದರೆ ಬರೆಯ ಜ್ಯೂಸ್ ಕುಡಿದು ತೂಕ ಹೆಚ್ಚಿಸುವ ಇತರ ಅಭ್ಯಾಸಗಳನ್ನು ಬಿಡದೇ ಇದ್ದರೆ ಈ ವಿಧಾನ ಸರ್ವಥಾ ಉಪಯೋಗಕ್ಕೆ ಬರದು. ಆದ್ದರಿಂದ ತೂಕ ಹೆಚ್ಚಿಸುವ ಇತರ ಆಹಾರಗಳ ವರ್ಜನೆ ಮತ್ತು ಸಾಕಷ್ಟು ವ್ಯಾಯಮ ಮಾಡುವುದೂ ಅಗತ್ಯವಾಗಿದೆ.

ಚಕ್ಕೋತದಲ್ಲಿ ಉತ್ತಮ ಪೋಷಕಾಂಶಗಳಿವೆ.....
ಸಾಮಾನ್ಯವಾಗಿ ನಾವೆಲ್ಲರೂ ಹುಳಿ ಎಂಬ ಕಾರಣ ಕೊಟ್ಟು ಅವಗಣಿಸುವ ಚಕ್ಕೋತ, ವಿಶೇಷವಾಗಿ ಕಡುಗೆಂಪು ಬಣ್ಣದ ಚಕ್ಕೋತದಲ್ಲಿ ಉತ್ತಮ ಪೋಷಕಾಂಶಗಳಿವೆ. ಅಲ್ಲದೇ ಲಿಂಬೆರಸ ಮತ್ತು ಜೇನಿನಲ್ಲಿಯೂ ಹಲವು ಪೋಷಕಾಂಶಗಳಿವೆ. ವಿಶೇಷವಾಗಿ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಚಕ್ಕೋತದಲ್ಲಿ ಉತ್ತಮ ಪೋಷಕಾಂಶಗಳಿವೆ.....
ಈ ಜ್ಯೂಸ್ ಅನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದ್ದು ತೂಕ ಇಳಿಸುವ ನಿಮ್ಮ ದೃಢನಿರ್ಧಾರಕ್ಕೆ ಬೆಂಬಲ ನೀಡುತ್ತದೆ.

ಈ ಜ್ಯೂಸ್ ತಯಾರಿಸುವ ಮತ್ತು ಬಳಕೆಯ ವಿಧಾನ....
*ಮೇಲೆ ತಿಳಿಸಿದ ಮೂರೂ ವಿಧಾನಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಕೊಂಚ ನೀರಿನೊಂದಿಗೆ ಚೆನ್ನಾಗಿ
ಗೊಟಾಯಿಸಿ.
*ಇದನ್ನು ಸೋಸದೇ ಒಂದು ಲೋಟದಲ್ಲಿ ಸಂಗ್ರಹಿಸಿ.

ಈ ಜ್ಯೂಸ್ ತಯಾರಿಸುವ ಮತ್ತು ಬಳಕೆಯ ವಿಧಾನ....
*ಇನ್ನು ಈ ಜ್ಯೂಸ್ ಅನ್ನು ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಪೂರ್ಣಪ್ರಮಾಣವನ್ನು ಸೇವಿಸಿ.
ಕೆಲವೇ ದಿನಗಳಲ್ಲಿ ತೂಕ ಗಣನೀಯವಾಗಿ ಇಳಿಯಲು ಪ್ರಾರಂಭವಾಗುವುದನ್ನು ಗಮನಿಸಬಹುದು.



Click it and Unblock the Notifications
