For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

By Manu
|

ತೂಕ ಹೆಚ್ಚಳ ಇಂದು ಬಡವ-ಬಲ್ಲಿದ, ಚಿಕ್ಕವ-ದೊಡ್ಡವ, ಪುರುಷ-ಮಹಿಳೆ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಆವರಿಸುತ್ತಿದೆ. ಸವಲತ್ತುಗಳು ಹೆಚ್ಚಾಗಿರುವ ಮೂಲಕ ಕಡಿಮೆಯಾಗಿರುವ ವ್ಯಾಯಾಮ ಒಂದು ಕಾರಣವಾದರೆ ಅರಿವಿಲ್ಲದೇ ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸುವ ಅನಾರೋಗ್ಯಕರ ಪೋಷಕಾಂಶಗಳ ಮಹಾಪೂರ ಇನ್ನೊಂದೆಡೆ.

ಒಟ್ಟಾರೆ ಒಮ್ಮೆ ಸ್ಥೂಲಕಾಯ ಅಥವಾ ದೇಹದಲ್ಲಿ ತೂಕ ಹೆಚ್ಚಾಗಿ ಬಿಟ್ಟರೆ ಸಾಕು, ಹಿಂದಿರುಗಿ ಬರುವುದು ಬಹಳ ಕಷ್ಟ! ಆದರೆ ಅಸಾಧ್ಯವೇನಲ್ಲ. ಇದಕ್ಕೆ ಬೇಕಾಗಿರುವುದು ಕೊಂಚ ವ್ಯಾಯಮ ಹಾಗೂ ಆಹಾರ ಸೇವನೆಯಲ್ಲಿ ಮಿತಿ ಮತ್ತು ಸೇವಿಸುವ ಆಹಾರದಲ್ಲಿ ಬದಲಾವಣೆ ಇಷ್ಟೇ. ಮೊದಲೆರಡು ವಿಧಾನಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅವಲಂಬಿಸಿದ್ದರೆ ಮೂರನೆಯದು ನಮ್ಮ ಆಯ್ಕೆಯನ್ನು ಅವಲಂಬಿಸಿದೆ.

ಮುಖ್ಯವಾಗಿ ನಾವು ಸೇವಿಸುವ ಆಹಾರದಲ್ಲಿ ಅಗತ್ಯವಿರಬೇಕಾದ ಪೋಷಕಾಂಷಗಳು ತಕ್ಕಷ್ಟು ಪ್ರಮಾಣದಲ್ಲಿರಬೇಕೇ ವಿನಃ ಅತಿ ಹೆಚ್ಚಾಗಿ ಇರಬಾರದು. ಅದರಲ್ಲೂ ಕೆಲವೊಂದು ನೈಸರ್ಗಿಕ ಪಾನೀಯಗಳು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಬನ್ನಿ ಅಂತಹ ಜ್ಯೂಸ್‌ಗಳು ಯಾವುದು ಎಂಬುದನ್ನು ನೋಡೋಣ.... ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!

ಲೋಳೆಸರದ ಜ್ಯೂಸ್

ಲೋಳೆಸರದ ಕೋಡೊಂದನ್ನು ಮುರಿದು ಅದರ ಹೊರಗಿನ ಸಿಪ್ಪೆಯನ್ನು ಆಲುಗಡ್ಡೆಯ ಸಿಪ್ಪೆ ಸುಲಿದಂತೆ ಸುಲಿಯಿರಿ

*ಸಿಪ್ಪೆಯಿಲ್ಲದ ಈ ಭಾಗವನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ. *ಈ ಮಿಶ್ರಣವನ್ನು ಬಟ್ಟೆಯಲ್ಲಿ ಕೊಂಚ ನೀರಿನೊಂದಿಗೆ ಹಿಂಡಿ ರಸ ತೆಗೆದು ಒಂದು ಬಾಟಲಿಯಲ್ಲಿ ಸಂಗ್ರಹಿಸಿ

*ಈ ದ್ರವವನ್ನು ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಕಪ್ ಸೇವಿಸಿ ಮತ್ತು ದಿನದ ಮೂರೂ ಹೊತ್ತಿನ ಊಟಕ್ಕೂ ಹದಿನೈದು ನಿಮಿಷ ಮೊದಲು ಸೇವಿಸಿ. ಸುಮಾರು ಎರಡು ವಾರಗಳವರೆಗೆ ಈ ವಿಧಾನವನ್ನು ಅನುಸರಿಸಿ.

ಟಿಪ್ಪಣಿ: ಫ್ರಿಜ್ಜಿನಲ್ಲಿಟ್ಟ ಲೋಳೆಸರ ಕೊಂಚ ಕಹಿಯಾಗುವುದರಿಂದ ಪ್ರತಿದಿನ ಹೊಸತಾದ ಕೋಡನ್ನು ಮುರಿದು ಒಂದು ಚಮಚ ತಿರುಳನ್ನು ಚಮಚದಲ್ಲಿ ಕೆರೆದು ಉಪಯೋಗಿಸಬಹುದು.

Best Juice Diet Recipes for Weight Loss

ಮೂಸಂಬಿ ಜ್ಯೂಸ್

ಮೂಸಂಬಿರಸದಲ್ಲಿರುವ ಸಿಟ್ರಿಕ್ ಆಮ್ಲ ಮತ್ತು ಇತರ ಆಮ್ಲಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಉತ್ತಮವಾಗಿವೆ, ಅಲ್ಲದೆ ದೇಹದ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಿತಿಗಳಲ್ಲಿಡುವ ಮೂಲಕ (ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದು) ದೇಹ ತೂಕವಿಳಿಸುವ ನಿಟ್ಟಿನಲ್ಲಿ ಉತ್ತಮವಾಗಿ ಸ್ಪಂದಿಸುತ್ತದೆ. ಪರಿಣಾಮವಾಗಿ ತೂಕವಿಳಿಸುವ ನಿಮ್ಮ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.

ಇದರ ಉತ್ತಮ ಪರಿಣಾಮಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ಮೂಸಂಬಿ ರಸವನ್ನು ಕೊಂಚ ಜೇನುತುಪ್ಪ ಸೇರಿಸಿ ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಅತ್ಯುತ್ತಮ ಪರಿಣಾಮ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿಯುವುದರಿಂದ ತೂಕವಿಳಿಸುವ ಪ್ರಯತ್ನಗಳು ಅತಿ ಹೆಚ್ಚಿನ ಪ್ರತಿಫಲ ನೀಡುತ್ತವೆ. ಸಿಟ್ರಸ್ ಹಣ್ಣುಗಳಲ್ಲಿ ಅಡಗಿದೆ ತೂಕ ಇಳಿಸುವ ತಾಕತ್ತು!

ನೆಲ್ಲಿಕಾಯಿ ಜ್ಯೂಸ್

ಚೆನ್ನಾಗಿ ತೊಳೆದ ನೆಲ್ಲಿಕಾಯಿಯ ಬೀಜವನ್ನು ನಿವಾರಿಸಿ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಕೊಂಚವೇ ನೀರಿನೊಡನೆ ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಈ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಪ್ರತಿದಿನದ ಸೇವನೆಯಾಗಿ ಫ್ರಿಜ್ಜಿನಲ್ಲಿಡಿ. ಪ್ರತಿದಿನ ಬೆಳಿಗ್ಗೆ, ಅದರಲ್ಲೂ ಖಾಲಿಹೊಟ್ಟೆಯಲ್ಲಿ ಒಂದು ಲೋಟದಷ್ಟು ಒಂದು ಪ್ರಮಾಣ ನೆಲ್ಲಿಕಾಯಿ ರಸಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಸೇರಿಸಿ ಕುಡಿಯಿರಿ. ಸಕ್ಕರೆ, ಬೆಲ್ಲ, ಜೇನು ಯಾವುದನ್ನೂ ಸೇರಿಸಬೇಡಿ.

ಲೋಳೆಸರ ಮತ್ತು ಲಿಂಬೆಯರಸದ ಜ್ಯೂಸ್

Best Juice Diet Recipes for Weight Loss

ಒಂದು ಲೋಳೆಸರದ ಕೋಡನ್ನು ಮುರಿದು ಮಧ್ಯಕ್ಕೆ ಉದ್ದನಾಗಿ ಸೀಳಿ. ಇದನ್ನು ಲಿಂಬೆ ಹಿಂಡಿದಂತೆ ಹಿಂಡಿ ರಸ ತೆಗೆಯಿರಿ. ಇಲ್ಲದಿದ್ದರೆ ಸಿಪ್ಪೆ ನಿವಾರಿಸಿದ ಬಳಿಕ ಲಿಂಬೆ ಹಿಸುಕುವ ಉಪಕರಣದಿಂದಲೂ ರಸ ತೆಗೆಯಬಹುದು. ಇನ್ನು ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ. ಸಾಕಷ್ಟು ನೀರು ಮತ್ತು ಕೊಂಚ ಸಕ್ಕರೆ ಅಥವಾ ಬೆಲ್ಲ (ರುಚಿಗೆ ಮಾತ್ರ) ಸೇರಿಸಿ ಎರಡರಿಂದ ಮೂರು ನಿಮಿಷ ಕಲಕಿ ನಿಯಮಿತವಾಗಿ ಕುಡಿಯಿರಿ. ಇದು ಸ್ಥೂಲಕಾಯದ ವ್ಯಕ್ತಿಗಳಿಗೆ ಸೂಕ್ತವಾದ ವಿಧಾನವಾಗಿದೆ.

ಬೀಟ್‌ರೂಟ್, ಪಾಲಕ್ ಸೊಪ್ಪು ಹಾಗೂ ಕೊತ್ತ೦ಬರಿ ಸೊಪ್ಪಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಬೀಟ್‌ರೂಟ್ - ಒ೦ದು (ಮಧ್ಯಮ ಗಾತ್ರದ್ದು)

ಪಾಲಕ್ ಸೊಪ್ಪು - ಒ೦ದು ಸಣ್ಣ

ಕೊತ್ತ೦ಬರಿ ಸೊಪ್ಪು - ಒ೦ದು ಕಟ್ಟು

ಉಪ್ಪು - ಒ೦ದು ಟೀ ಚಮಚದಷ್ಟು

ತಯಾರಿಕಾ ವಿಧಾನ:

ಬೀಟ್‌ರೂಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿರಿ. ಪಾಲಕ್ ಸೊಪ್ಪು,ಹಾಗೂ ಕೊತ್ತ೦ಬರಿ ಸೊಪ್ಪುಗಳನ್ನು ಹದವಾಗಿ ಕತ್ತರಿಸಿರಿ. ಈಗ, ಇವೆಲ್ಲವನ್ನೂ ಮಿಕ್ಸರ್ ಒ೦ದನ್ನು ಬಳಸಿಕೊ೦ಡು ಜ್ಯೂಸ್ ಜಾರ್‌ನಲ್ಲಿ ಮಿಶ್ರಗೊಳಿಸಿ ಮೈನವಿರೇಳಿಸುವ, ಸ್ವಾದಿಷ್ಟವಾದ ತರಕಾರಿ ಜ್ಯೂಸ್ ಅನ್ನು ತಯಾರಿಸಿಕೊಳ್ಳಿರಿ.

ಕಲ್ಲ೦ಗಡಿ, ಲಿ೦ಬೆ, ಹಾಗೂ ಪುದಿನಾದ ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಕಲ್ಲ೦ಗಡಿ ಹಣ್ಣು - ಒ೦ದು (ಮಧ್ಯಮ ಗಾತ್ರದ್ದು)

ಲಿ೦ಬೆ - ಒ೦ದು

ಪುದಿನಾ - ಒ೦ದು ಕಟ್ಟು

Best Juice Diet Recipes for Weight Loss

ತಯಾರಿಕಾ ವಿಧಾನ

ಬೀಜಗಳನ್ನು ಹಾಗೆಯೇ ಇರಿಸಿಕೊಳ್ಳುವುದರೊ೦ದಿಗೆ ಕಲ್ಲ೦ಗಡಿ ಹಣ್ಣನ್ನು ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿರಿ. ಲಿ೦ಬೆಯನ್ನು ಹಿ೦ಡಿ ರಸವನ್ನು ಪಡೆದುಕೊಳ್ಳಿರಿ ಹಾಗೂ ತಾಜಾ ಪುದಿನಾ ಸೊಪ್ಪನ್ನು ಚೆನ್ನಾಗಿ ಹೆಚ್ಚಿರಿ. ಈಗ, ಇವೆಲ್ಲವನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿ, ಮಿಕ್ಸರ್ ಅನ್ನು ಬಳಸಿಕೊ೦ಡು ತಿರುವುದರ ಮೂಲಕ ಸ್ವಾದಿಷ್ಟವಾದ ನೀರಿನ ಮಿಶ್ರಣವನ್ನು (ಜ್ಯೂಸ್) ಅನ್ನು ಪಡೆದುಕೊಳ್ಳಿರಿ.

English summary

Best Juice Diet Recipes for Weight Loss

Fasting is one way for weight loss but not a must. If you simple integrate green juicing into your regular diet, you shed the extra pounds naturally because juicing enhances your digestion and elimination system and the accumulated waste leaves your body and makes you more supple and efficient in digesting regular food.
Story first published: Tuesday, November 3, 2015, 11:50 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more