ದಿನನಿತ್ಯ ಖಾಲಿ ಹೊಟ್ಟೆಗೆ ಸೇವಿಸಿ ಗರಂ ಗರಂ 'ಬೆಳ್ಳುಳ್ಳಿ ಚಹಾ'

By: manu
Subscribe to Boldsky

ಬೆಳ್ಳುಳ್ಳಿ ಹಲವು ಔಷಧೀಯ ಗುಣಗಳಿರುವ ಒಂದು ಅದ್ಭುತ ಆಹಾರ. ಬೆಳ್ಳುಳ್ಳಿಯನ್ನು ಹಸಿಯಾಗಿಯೇ ತಿನ್ನುವ ಮೂಲಕ ಹಲವಾರು ಪ್ರಯೋಜನಗಳಿವೆ. ಆದರೆ ಇದರ ಟೀ ಮಾಡಿಕೊಂಡು ಕುಡಿಯುವುದು? ಈ ಕಲ್ಪನೆ ಹೊಸದಾಗಿದ್ದು ಹಸಿಯಾಗಿ ಸೇವಿಸುವ ಪ್ರಯೋಜನಗಳನ್ನು ಇದರ ಟೀ ಮಾಡಿಕೊಂಡು ಕುಡಿಯುವ ಮೂಲಕವೂ ಪಡೆಯಬಹುದು. ಸತತ ಏಳು ದಿನ ಬೆಳ್ಳುಳ್ಳಿ-ಜೇನು ಸೇವಿಸಿ, ಆರೋಗ್ಯ ವೃದ್ಧಿಸಿ!

ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟುಗಳು ಯಥೇಚ್ಛವಾಗಿದ್ದು ಉತ್ತಮ ಪ್ರತಿಜೀವಕ ಗುಣಗಳನ್ನೂ ಹೊಂದಿದೆ. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಟೀ ಕುಡಿದರೆ ಹೆಚ್ಚಿನ ಪ್ರಯೋಜನ ಪಡೆಯಬಹುದು. ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಈ ಟೀ ಸೇವನೆಯಿಂದ ದೇಹದ ಒಳಗಣ ಸೋಂಕು, ಶಿಲೀಂಧ್ರಗಳ ಬೆಳವಣಿಗೆಗೆ ಕಡಿವಾಣ, ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳ ನಾಶ ಮೊದಲಾದ ಪ್ರಯೋಜನಗಳಿವೆ. ಆದರೆ ಬೆಳ್ಳುಳ್ಳಿಯ ಪ್ರಮಾಣ ಮಿತವಾಗಿರುವುದು ಅಗತ್ಯ. ಅಲ್ಲದೇ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಮೂಲಕ ಇದು ಜೀರ್ಣರಸಗಳ ಆಮ್ಲೀಯತೆಯನ್ನು ಹೆಚ್ಚಿಸುವ ಕಾರಣ ಇದು ನಿಮ್ಮ ಆರೋಗ್ಯಕ್ಕೆ ಸೂಕ್ತವೇ ಎಂಬುದನ್ನು ನಿಮ್ಮ ವೈದ್ಯರ ಬಳಿ ಸಮಾಲೋಚಿಸಿಕೊಂಡ ಬಳಿಕವೇ ಸೇವಿಸುವುದು ಉತ್ತಮ. ಅಲ್ಲದೇ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೂ ಈ ವಿಧಾನ ಸೂಕ್ತವಲ್ಲ.....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*1-2 ಎಸಳು ಬೆಳ್ಳುಳ್ಳಿ,

*ಒಂದು ದೊಡ್ಡಚಮಚ ಜೇನು

*ಒಂದು ದೊಡ್ಡಚಮಚ ಲಿಂಬೆರಸ

*ಒಂದು ಇಂಚಿನಷ್ಟು ಚಿಕ್ಕ ಶುಂಠಿಯ ತುಂಡು (ಚಿಕ್ಕದಾಗಿ ತುರಿದದ್ದು)

ವಿಧಾನ:

ವಿಧಾನ:

ಹಂತ #1 ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಬೆಳ್ಳುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಬೆರೆಸಿ. ಶುಂಠಿಯ ತುರಿಯನ್ನು ಜಜ್ಜಿ ನೀರಿಗೆ ಸೇರಿಸಿ.ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ

ಹಂತ #2

ಹಂತ #2

ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಸುಮಾರು ಹದಿನೈದು ನಿಮಿಷದವರೆಗೆ ಮಧ್ಯಮ ಉರಿಯಲ್ಲಿ ಕುದಿಸಿ ಬಳಿಕ ಉರಿ ಆರಿಸಿ 11 ನಿಮಿಷ ಹಾಗೇ ಬಿಡಿ.

ಹಂತ #3

ಹಂತ #3

ಬಳಿಕ ಜೇನು ಮತ್ತು ಲಿಂಬೆರಸ ಸೇರಿಸಿ ಕುಡಿದು ರುಚಿಯನ್ನು ಆಸ್ವಾದಿಸಿ.

ಪ್ರಯೋಜನ #1

ಪ್ರಯೋಜನ #1

ಈ ಟೀಯಲ್ಲಿ ಕೊಬ್ಬನ್ನು ಕರಗಿಸುವ ಗುಣವಿರುವ ಕಾರಣ ತೂಕದಲ್ಲಿ ಇಳಿಕೆಯಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವ ಮೂಲಕ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಪ್ರಯೋಜನ #2

ಪ್ರಯೋಜನ #2

ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ. ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತಎ ಹಾಗೂ ಪೆಡಸಾಗಿದ್ದ ರಕ್ತನಾಳಗಳು ಸಡಿಲಗೊಳ್ಳುತ್ತವೆ.

ಪ್ರಯೋಜನ #3

ಪ್ರಯೋಜನ #3

ಈ ಪೇಯವನ್ನು ಕುಡಿಯುವ ಮೂಲಕ ದಿನದ ಅಗತ್ಯದ ವಿಟಮಿನ್ ಎ, ಸಿ. ಬಿ1 ಮತ್ತು ಬಿ2 ಲಭ್ಯವಾಗುತ್ತವೆ. ಅಲ್ಲದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ವೃದ್ದಾಪ್ಯವನ್ನು ದೂರಾಗಿಸುತ್ತವೆ.

 ಪ್ರಯೋಜನ #4

ಪ್ರಯೋಜನ #4

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಪ್ರತಿಜೀವಕ ಗುಣ ಹಲವಾರು ಸೋಂಕುಗಳಿಂದ ರಕ್ಷಣೆ ನೀಡುತ್ತದೆ.

 
English summary

Garlic Tea: A Magic Potion!

Garlic is a good remedy to fight infections, inhibit the growth of fungi, virus and bacteria. But garlic needs to be consumed in moderation. Also, consult your doctor to know whether you can consume garlic on empty stomach. People suffering from certain health conditions are not supposed to take garlic on empty stomach.
Please Wait while comments are loading...
Subscribe Newsletter