Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸತತ ಏಳು ದಿನ ಬೆಳ್ಳುಳ್ಳಿ-ಜೇನು ಸೇವಿಸಿ, ಆರೋಗ್ಯ ವೃದ್ಧಿಸಿ!
ನೀವು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಾ? ಯಾವುದೇ ಸ್ಪಷ್ಟ ಕಾರಣವಿಲ್ಲದೇ ಇಡಿಯ ದಿನ ಸುಸ್ತು ಆವರಿಸಿರುತ್ತದೆಯೇ? ನಿತ್ಯದ ಕಾರ್ಯಗಳಲ್ಲಿ ಉತ್ಸಾಹ ಉಡುಗಿದಂತೆ ಅನ್ನಿಸುತ್ತದೆಯೇ? ಇದಕ್ಕೆ ನಿಮ್ಮ ರೋಗ ನಿರೋಧಕ ವ್ಯವಸ್ಥೆ ಕುಂಠಿತಗೊಂಡಿರುವುದು ಒಂದು ಕಾರಣವಾಗಿರಬಹುದು. ಉತ್ತಮ ಆರೋಗ್ಯವನ್ನು ಹೊಂದುವುದಷ್ಟೇ ಇದನ್ನು ಉಳಿಸಿಕೊಳ್ಳುವುದೂ ಮುಖ್ಯ. ಆದ್ದರಿಂದ ರೋಗ ನಿರೋಧಕ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಅತ್ಯುತ್ತಮ ಸ್ಥಿತಿಯಲ್ಲಿರಿಸಿಕೊಳ್ಳುವ ಮೂಲಕ ನಮ್ಮ ಶರೀರದ ಮೇಲೆ ಧಾಳಿ ಎಸಗುವ ಕ್ರಿಮಿಗಳಿಂದ ರಕ್ಷಣೆ ಪಡೆಯಬಹುದು.
ನಮ್ಮ ರೋಗ ನಿರೋಧಕ ಶಕ್ತಿ ಶಿಥಿಲವಾಗುತ್ತಿದ್ದಂತೆಯೇ ನಮ್ಮ ವಿರುದ್ದ ಪ್ರಾಬಲ್ಯ ಮೆರೆಯುವ ವೈರಸ್ಸು ಬ್ಯಾಕ್ಟೀರಿಯಾಗಳ ಸಂಖ್ಯೆ ಮತ್ತು ವಿಧಗಳಲ್ಲಿಯೂ ಹೆಚ್ಚಳವಾಗುತ್ತಾ ಬರುತ್ತದೆ. ಅಂದರೆ ನಾವು ಒಂದಕ್ಕಿಂತ ಹೆಚ್ಚಿನ ತರಹದ ರೋಗಗಳಿಗೆ ಸುಲಭವಾಗಿ ತುತ್ತಾಗುತ್ತೇವೆ. ಅನಾರೋಗ್ಯಕ್ಕೆ ತುತ್ತಾದರೆ ಆಗುವ ದೈಹಿಕ ಸುಸು ಒಂದೆಡೆ, ಇದರಿಂದ ಪರೋಕ್ಷವಾಗಿ ಆಗುವ ನಷ್ಟ ಇನ್ನೊಂದೆಡೆ. ಅಚ್ಚರಿಗೆ ತಳ್ಳುವ ಈ ಪುಟ್ಟ ಬೆಳ್ಳುಳ್ಳಿಯ ಕಾರುಬಾರು!
ಸ್ನೇಹಿತರೊಂದಿಗೆ ಸೇರಲಿಕ್ಕಾಗದೇ ಇರುವುದು, ಮುಖ್ಯವಾದ ಕಾರ್ಯದಲ್ಲಿ ಭಾಗಿಯಾಗದೇ ಇರುವುದು, ಆಲಸಿತನ, ಮೈಕೈನೋವು, ನಿತ್ಯದ ಕೆಲಸಗಳೆಲ್ಲಾ ಮುಂದೆ ಹೋಗುವುದು, ತಪ್ಪಿಸಿಕೊಂಡ ಕೆಲಸಗಳು ಮುಂದೆ ಭಾರಿಯಾಗುವುದು, ವಿದ್ಯಾರ್ಥಿಗಳಿಗೆ ತಪ್ಪಿದ ಪಾಠಗಳು ಇತ್ಯಾದಿ. ಆದ್ದರಿಂದ ಉತ್ತಮ ಆರೋಗ್ಯದ ಜೊತೆಗೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವೈದ್ಯರು ಕೆಲವು ಔಷಧಿಗಳನ್ನು ನೀಡುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಬೆಳ್ಳುಳ್ಳಿ ಮತ್ತು ಜೇನು ಸಹಾ ಉತ್ತಮ ರಕ್ಷಣೆಯನ್ನು ನೀಡುತ್ತದೆ. ಹೇಗೆ? ಎಂಬ ಪ್ರಶ್ನೆಗೆ ಕೆಳಗಿನ ಸ್ಲೈಡ್ ಶೋ ಉತ್ತರ ನೀಡಲಿದೆ, ಮುಂದೆ ಓದಿ...

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಈ ಜೋಡಿಯ ಶಕ್ತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಎತ್ತಿದ ಕೈ. ಇದರಿಂದ ದೇಹ ಹತ್ತು ಹಲವು ವಿಧದ ರೋಗಕಾರಕ ಕ್ರಿಮಿಗಳ ಧಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಸಮರ್ಥವಾಗುತ್ತದೆ.

ರಕ್ತಸಂಚಾರ ಸುಗಮಗೊಳಿಸುತ್ತದೆ
ರಕ್ತನಾಳಗಳಲ್ಲಿ ಅಂಟಿಕೊಂಡಿರುವ ಕೊಬ್ಬು ಹಲವು ರೋಗಗಳಿಗೆ ಕಾರಣವಾಗಿದೆ. ಇದರಲ್ಲಿ ಪ್ರಮುಖವಾದುದು ಹೃದಯ ಸಂಬಂಧಿ ತೊಂದರೆಗಳು. ಬೆಳ್ಳುಳ್ಳಿ ಮತ್ತು ಜೇನಿನ ಸೇವನೆಯಿಂದ ಈ ಕೊಬ್ಬು ಸಡಿಲಗೊಂಡು ನಿವಾರಣೆಯಾಗುವ ಮೂಲಕ ರಕ್ತಸಂಚಾರ ಸುಲಭವಾಗುತ್ತದೆ, ತನ್ಮೂಲಕ ಹೃದಯದ ಒತ್ತಡ ಮತ್ತು ಇತರ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಗಂಟಲ ಬೇನೆ ಕಡಿಮೆಗೊಳಿಸುತ್ತದೆ
ಬೆಳ್ಳುಳ್ಳಿ ಮತ್ತು ಜೇನಿನ ಸೇವನೆಯಿಂದ ಗಂಟಲ ಬೇನೆ, ಗಂಟಲ ಸೋಂಕು ಮತ್ತು ಕೆರೆತ ನಿವಾರಣೆಯಾಗುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಗಂಟಲ ಒಳಭಾಗದ ಉರಿಯೂತ, ಸೋಂಕು ಮತ್ತು ಕೆಂಪಗಾಗುವುದನ್ನು ತಡೆದು ಈಗಾಗಲೇ ಬಾಧೆಗೊಳಗಾಗಿದ್ದರೆ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

ಆಮಶಂಕೆ ನಿವಾರಿಸುತ್ತದೆ
ಬೆಳ್ಳುಳ್ಳಿ ಮತ್ತು ಜೇನು ಒಂದು ಪ್ರಬಲ ಆಮಶಂಕೆ ನಿವಾರಕವಾಗಿದ್ದು ಹಲವು ಕಾರಣಗಳಿಂದ ಉಂಟಾಗಿದ್ದ ಅತಿಸಾರವನ್ನು ತಡೆಯುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಕೆಲವು ಪರಾವಲಂಬಿ ಕ್ರಿಮಿಗಳಿಂದ ಈ ತೊಂದರೆ ಉಂಟಾಗಿದ್ದರೆ ಬೆಳ್ಳುಳ್ಳಿ ಮತ್ತು ಜೇನು ಉತ್ತಮ ಪರಿಣಾಮ ಬೀರುತ್ತದೆ. ಅಲ್ಲದೇ ಇದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಕರುಳು ಮತ್ತು ಹೊಟ್ಟೆಯಲ್ಲಿ ಆಗಿದ್ದ ಸೋಂಕುಗಳನ್ನು ನಿವಾರಿಸಿ ಆಮಶಂಕೆಯನ್ನು ನಿವಾರಿಸುತ್ತದೆ.

ಶೀತ ಕಡಿಮೆಯಾಗುತ್ತದೆ
ಸಾಮಾನ್ಯ ಶೀತ, ಫ್ಲೂ ಜ್ವರ, ಸೈನಸ್ ಸೋಂಕು ಮೊದಲಾದ ತೊಂದರೆಗಳಿಗೆ ಬೆಳ್ಳುಳ್ಳಿ ಮತ್ತು ಜೇನು ಉತ್ತಮ ಪರಿಹಾರವಾಗಿದೆ. ಇದರ ಸೇವನೆಯಿಂದ ದೇಹದ ತಾಪಮಾನ ಕೊಂಚ ಹೆಚ್ಚಾಗಿ ರೋಗಕ್ಕೆ ಕಾರಣವಾದ ಕ್ರಿಮಿಗಳ ವಿರುದ್ಧ ಹೋರಾಡಲು ಶಕ್ತಿ ದೊರಕುತ್ತದೆ.

ಶಿಲೀಂಧ್ರಗಳ ಸೋಂಕನ್ನು ನಿವಾರಿಸುತ್ತದೆ
ಬೆಳ್ಳುಳ್ಳಿ ಮತ್ತು ಜೇನಿನ ಸೇವನೆಯಿಂದ ಹಲವು ವಿಧದ ಶಿಲೀಂಧ್ರಗಳ ಸೋಂಕನ್ನು ತಡೆಯಬಹುದಾಗಿದ್ದು ಇದರಿಂದ ದೇಹದ ವಿವಿಧ ಭಾಗಗಳಿಗೆ ಎದುರಾಗಬಹುದಾಗಿದ್ದ ಧಾಳಿಯನ್ನು ಎದುರಿಸಬಹುದಾಗಿದೆ. ಇದರ ಬ್ಯಾಕ್ಟೀರಿಯಾನಿವಾರಕ ಗುಣಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನಿಂದ ರಕ್ಷಿಸಿ ಹಲವು ರೋಗಗಳಿಂದ ಕಾಪಾಡುತ್ತವೆ.

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ
ಬೆಳ್ಳುಳ್ಳಿ ಮತ್ತು ಜೇನು ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಮರ್ಥವಾದ ಜೋಡಿಯಾಗಿದೆ. ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು, ವಾಯು, ದ್ರವಗಳನ್ನು ಆದಷ್ಟು ಬೇಗನೇ ಹೊರಹಾಕುವ ಮೂಲಕ ಇದರಿಂದ ಎದುರಾಗಬಹುದಾಗಿದ್ದ ಹಲವು ತೊಂದರೆಗಳಿಂದ ರಕ್ಷಿಸುತ್ತದೆ.



Click it and Unblock the Notifications