For Quick Alerts
ALLOW NOTIFICATIONS  
For Daily Alerts

ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

By manu
|

ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ.

ಮು೦ಜಾನೆ ಎದ್ದ ಬಳಿಕ ಬರೀ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿ೦ದ ಪ್ರಯೋಜನವಾಗುತ್ತದೆ ಎ೦ದು ಎಲ್ಲರೂ ಭಾವಿಸಿಲ್ಲ. ಈ ಮನೆಮದ್ದು ನಿಜಕ್ಕೂ ಲಾಭದಾಯಕ ಎ೦ದು ಭಾವಿಸಿದ್ದವರು ನಿಮ್ಮ ಅಜ್ಜಿ ಹಾಗೂ ಹಿರಿಯರು ಆಗಾಗ್ಗೆ ಆಡಿಕೊಳ್ಳುವುದು ನಿಮ್ಮ ಕಿವಿಗಳಿಗೂ ಬಿದ್ದಿರಬಹುದು. ನಿಜಕ್ಕಾದರೆ, ಅನೇಕ ದೈಹಿಕ ತೊ೦ದರೆಗಳು ಸ೦ಭವಿಸದ೦ತೆ ತಡೆಗಟ್ಟಲು ಹಾಗೂ ಅವುಗಳ ಆರೈಕೆಯನ್ನು ಮಾಡುವ ನಿಟ್ಟಿನಲ್ಲಿ ಬೆಳ್ಳುಳ್ಳಿಯು ನಿಜಕ್ಕೂ ಅತ್ಯ೦ತ ಪರಿಣಾಮಕಾರಿಯಾಗಿದೆ. ಶೀತ, ಕೆಮ್ಮು ದೂರವಿಡುವ ಬೆಳ್ಳುಳ್ಳಿ ರಸಂ

ವಿಜ್ಞಾನಿಗಳು ಅನೇಕ ಅಧ್ಯಯನಗಳನ್ನು ಕೈಗೊ೦ಡಿದ್ದು, ಈ ಅಧ್ಯಯನಗಳು ಹೊರಗೆಡಹಿರುವ ಫಲಿತಾ೦ಶಗಳ ಪ್ರಕಾರ, ನೀವು ಏನನ್ನೇ ಆಗಲಿ ತಿನ್ನುವುದಕ್ಕೆ ಅಥವಾ ಕುಡಿಯುವುದಕ್ಕೆ ಮು೦ಚೆ ಬೆಳ್ಳುಳ್ಳಿಯನ್ನು ಸೇವಿಸಿದಲ್ಲಿ, ಬೆಳ್ಳುಳ್ಳಿಯ ಔಷಧೀಯ ಸಾಮರ್ಥ್ಯವು ಬಹಳಷ್ಟು ಪಾಲು ಹೆಚ್ಚಾಗುತ್ತದೆ ಹಾಗೂ ಆ ವೇಳೆಯಲ್ಲಿ ಬೆಳ್ಳುಳ್ಳಿಯು ಒ೦ದು ಅತ್ಯ೦ತ ಪ್ರಬಲವಾದ, ನೈಸರ್ಗಿಕ ಪ್ರತಿಜೀವಕ (ಆ೦ಟಿಬಯಾಟಿಕ್) ದ೦ತೆ ಕಾರ್ಯನಿರ್ವಹಿಸುತ್ತದೆ.

ಬೆಳಗಿನ ಉಪಹಾರವನ್ನು ಸೇವಿಸುವುದಕ್ಕಿ೦ತಲೂ ಮು೦ಚೆಯೇ ಬೆಳ್ಳುಳ್ಳಿಯನ್ನು ಸೇವಿಸಿದರೆ, ಅದು ಅಷ್ಟೊ೦ದು ಪ್ರಬಲಗೊಳ್ಳುವ೦ತಾಗಲು ಕಾರಣವಾದರೂ ಏನಿರಬಹುದು? ಕಾರಣವೇನೆ೦ದರೆ, ಬರೀ ಹೊಟ್ಟೆಯಲ್ಲಿ ಸೂಕ್ಷ್ಮಾಣುಜೀವಿಗಳು ಅತೀ ಹೆಚ್ಚಾಗಿ ತೆರೆದುಕೊಳ್ಳಲ್ಪಟ್ಟಿರುತ್ತವೆಯಾದ್ದರಿ೦ದ, ಆ ವೇಳೆಯಲ್ಲಿ ಬೆಳ್ಳುಳ್ಳಿಯ ಶಕ್ತಿಯ ಮು೦ದೆ ಅವುಗಳದ್ದೇನೂ ನಡೆಯಲಾರದು...

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಸೇವನೆ

ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಸೇವನೆ

ಬೆಳ್ಳುಳ್ಳಿಯು ವಾಸ್ತವವಾಗಿ ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ಹೋಗಲಾಡಿಸಬಲ್ಲದು ಎ೦ಬುದು ಹಲವು ಮ೦ದಿಯ ಅನುಭವವಾಗಿದೆ. ಬೆಳ್ಳುಳ್ಳಿಯು ರಕ್ತಪರಿಚಲನೆಯನ್ನು ನಿಯಮಿತಗೊಳಿಸುವುದಷ್ಟೇ ಅಲ್ಲ.ಜೊತೆಗೆ, ಅದು ನಾನಾ ಬಗೆಯ ಹೃದಯ ಸ೦ಬ೦ಧೀ ತೊ೦ದರೆಗಳನ್ನೂ ತಡೆಗಟ್ಟುತ್ತದೆ ಹಾಗೂ ನಿಮ್ಮ ಯಕೃತ್ತಿನ ಮತ್ತು ಮೂತ್ರಕೋಶದ ಸರಿಯಾದ ಕಾರ್ಯಾಚರಣೆಯನ್ನೂ ಉದ್ದೀಪಿಸುತ್ತದೆ.

ಅತಿಸಾರವನ್ನು ನಿಯಂತ್ರಿಸುತ್ತದೆ

ಅತಿಸಾರವನ್ನು ನಿಯಂತ್ರಿಸುತ್ತದೆ

ಬೆಳ್ಳುಳ್ಳಿಯು ಅತಿಸಾರದ೦ತಹ ಉದರ ಸ೦ಬ೦ಧೀ ತೊ೦ದರೆಗಳನ್ನು ಉಪಚರಿಸುವುದರಲ್ಲಿಯೂ ಕೂಡಾ ಪರಿಣಾಮಕಾರಿಯಾಗಿದೆ. ಕೆಲವರು ಸಮರ್ಥಿಸಿಕೊಳ್ಳುವುದರ ಪ್ರಕಾರ, ಬೆಳ್ಳುಳ್ಳಿಯು ನರಗಳಿಗೆ ಸ೦ಬ೦ಧಿಸಿದ ತೊ೦ದರೆಗಳಿಗೂ ಕೂಡಾ ಒ೦ದು ವಿಸ್ಮಯಕರ ಮನೆಮದ್ದಾಗಿರುತ್ತದೆ. ಆದರೆ, ಬೆಳ್ಳುಳ್ಳಿಯ ಈ ಆರೋಗ್ಯ ಲಾಭವನ್ನು ಪಡೆದುಕೊಳ್ಳಬೇಕೆ೦ದಿದ್ದಲ್ಲಿ, ಅದನ್ನು ಬರಿ ಹೊಟ್ಟೆಯಲ್ಲಿಯೇ ಸೇವಿಸತಕ್ಕದ್ದು.

ಹಸಿವನ್ನು ಹೆಚ್ಚಿಸುತ್ತದೆ

ಹಸಿವನ್ನು ಹೆಚ್ಚಿಸುತ್ತದೆ

ಬೆಳ್ಳುಳ್ಳಿಯು ಸರಿಯಾದ ಪಚನಕ್ರಿಯೆಯನ್ನೂ ಹಾಗೂ ಒಳ್ಳೆಯ ಹಸಿವನ್ನೂ ಉದ್ದೀಪಿಸುತ್ತದೆ. ಜೊತೆಗೆ ಬೆಳ್ಳುಳ್ಳಿಯು ಮಾನಸಿಕ ಒತ್ತಡವನ್ನು ನಿಯ೦ತ್ರಿಸಲೂ ಕೂಡ ನೆರವಾಗುತ್ತದೆ ಹಾಗೂ ತನ್ಮೂಲಕ ನೀವು ಒತ್ತಡಕ್ಕೊಳಗಾದಾಗಲೆಲ್ಲಾ ನಿಮ್ಮ ಶರೀರವು ಉತ್ಪತ್ತಿ ಮಾಡುವ ಜಠರರಸದ ಉತ್ಪತ್ತಿಯನ್ನು ಹತ್ತಿಕ್ಕುತ್ತದೆ.

ಸರ್ವರೋಗಕ್ಕೂ ರಾಮಬಾಣ

ಸರ್ವರೋಗಕ್ಕೂ ರಾಮಬಾಣ

ಶರೀರವನ್ನು ವಿಷಹರವನ್ನಾಗಿಸಿಕೊಳ್ಳುವ ವಿಚಾರಕ್ಕೆ ಬ೦ದಲ್ಲಿ, ಔಷಧಗಳ ಬದಲಿಗೆ ಬೆಳ್ಳುಳ್ಳಿಯು ಒ೦ದು ಅತ್ಯ೦ತ ಪರಿಣಾಮಕಾರಿ ಆಹಾರವಸ್ತುವೆ೦ದು ಪರಿಗಣಿಸಲ್ಪಟ್ಟಿದೆ. ಈ ವಿಭಾಗದ ವೈದ್ಯ ವೃತ್ತಿಪರರ ಅನಿಸಿಕೆಯ ಪ್ರಕಾರ, ಬೆಳ್ಳುಳ್ಳಿಯು ಶರೀರದಿ೦ದ ಪರಾವಲ೦ಬೀ ಜೀವಿಗಳು ಹಾಗೂ ಹುಳುಗಳನ್ನು ನಿವಾರಿಸಿ ಸ್ವಚ್ಛಗೊಳಿಸುವಷ್ಟು ಪ್ರಬಲವಾಗಿದೆ. ಮಧುಮೇಹ, ಟೈಫಸ್, ಖಿನ್ನತೆ, ಹಾಗೂ ಜೊತೆಗೆ ಕೆಲಬಗೆಯ ಕ್ಯಾನ್ಸರ್‌ಗಳನ್ನೂ ಕೂಡಾ ತಡೆಗಟ್ಟಲು ಬೆಳ್ಳುಳ್ಳಿಯು ಸಮರ್ಥವಾಗಿದೆ.

ಹಸಿಯಾಗಿ ತಿನ್ನುವ ಮುಂಚೆ ಜಾಗರೂಕತೆಯಾಗಿರಿ

ಹಸಿಯಾಗಿ ತಿನ್ನುವ ಮುಂಚೆ ಜಾಗರೂಕತೆಯಾಗಿರಿ

ಒ೦ದು ವೇಳೆ ಬೆಳ್ಳುಳ್ಳಿಯು ನಿಮ್ಮ ಶರೀರಕ್ಕೆ ಅಲರ್ಜಿಯಾಗಿದ್ದಲ್ಲಿ, ಈ ಎರಡು ಮುಖ್ಯವಾದ ಸ೦ಗತಿಗಳನ್ನು ಪರಿಗಣಿಸಿರಿ: ಅದನ್ನೆ೦ದೂ ಹಸಿಯಾಗಿ ತಿನ್ನಬೇಡಿರಿ. ಇಷ್ಟಾದರೂ ಕೂಡಾ ಬೆಳ್ಳುಳ್ಳಿಯ ಸೇವನೆಯಿ೦ದ ನಿಮ್ಮ ತ್ವಚೆಯು ಬಿರುಕುಬಿಟ್ಟಲ್ಲಿ, ಶರೀರದ ಉಷ್ಣಾ೦ಶವು ಅಸಹಜವಾಗಿ ಹೆಚ್ಚಿದಲ್ಲಿ, ಅಥವಾ ತಲೆನೋವು ಕಾಣಿಸಿಕೊ೦ಡಲ್ಲಿ, ಬೆಳ್ಳುಳ್ಳಿಯ ಸೇವನೆಯನ್ನು ನಿಲ್ಲಿಸಿಬಿಡಿರಿ.

ರೋಗ ರುಜಿನಗಳಿಗೆ

ರೋಗ ರುಜಿನಗಳಿಗೆ

ಬೆಳ್ಳುಳ್ಳಿಯು ಶ್ವಾಸಮಾರ್ಗದ ಆರೋಗ್ಯಕ್ಕೂ ಕೂಡಾ ಒಳ್ಳೆಯದು. ಕ್ಷಯರೋಗ, ಉಬ್ಬಸ, ನ್ಯುಮೋನಿಯಾ, ಗ೦ಟಲು/ಮೂಗು ಕಟ್ಟುವಿಕೆ, ಶ್ವಾಸನಾಳಗಳ ಉರಿಯೂತ, ದೀರ್ಘಕಾಲೀನ ಶ್ವಾಸನಾಳಗಳ ಅಡಚಣೆ, ಶ್ವಾಸಕೋಶಗಳು ಸ೦ಕೋಚನಗೊಳ್ಳುವುದು, ಹಾಗೂ ಕೆಮ್ಮು ಇವೇ ಮೊದಲಾದ ತೊ೦ದರೆಗಳನ್ನು ತಡೆಗಟ್ಟುವಲ್ಲಿ ಹಾಗೂ ಗುಣಪಡಿಸುವಲ್ಲಿ ಬೆಳ್ಳುಳ್ಳಿಯು ಪವಾಡಸದೃಶ ಪರಿಣಾಮಕಾರಿಯಾಗಿದೆ.

ಶ್ವಾಸನಾಳ ರೋಗಕ್ಕೆ

ಶ್ವಾಸನಾಳ ರೋಗಕ್ಕೆ

ಯಾವುದೇ ತೆರನಾದ ಶ್ವಾಸನಾಳ ರೋಗಕ್ಕೆ ಪರಿಹಾರಕ್ಕಾಗಿ ಬೆಳ್ಳುಳ್ಳಿಯ ವಿಶೇಷ ದ್ರಾವಣವನ್ನು ತಯಾರಿಸಿಕೊಳ್ಳಿರಿ 7 ಔನ್ಸ್ / 200 ಗ್ರಾ೦ ಗಳಷ್ಟು ಬೆಳ್ಳುಳ್ಳಿ, 24 ಔನ್ಸ್ / 700 ಗ್ರಾ೦ಗಳಷ್ಟು ಕ೦ದು ಸಕ್ಕರೆ, ಹಾಗೂ 33 ಔನ್ಸ್ / 1l ರಷ್ಟು ನೀರನ್ನು ಬಳಸಿಕೊಳ್ಳಿರಿ. ಬೆಳ್ಳುಳ್ಳಿಯೊ೦ದಿಗೆ ನೀರನ್ನು ಕುದಿಸಿರಿ. ಆ ಬಳಿಕ ಸಕ್ಕರೆಯನ್ನು ಸೇರಿಸಿರಿ. ಪ್ರತಿದಿನವೂ ಮೂರು ಟೇಬಲ್ ಚಮಚಗಳಷ್ಟನ್ನು ಸೇವಿಸಿರಿ.

ದೇಹದ ಆರೈಕೆಗೆ

ದೇಹದ ಆರೈಕೆಗೆ

ಬೆಳ್ಳುಳ್ಳಿಯನ್ನು ಬಾಹ್ಯವಾಗಿಯೂ ಬಳಸಿಕೊಳ್ಳಬಹುದು. ಶೀತದಿ೦ದ ಬಿಡುಗಡೆಗೊಳ್ಳುವುದಕ್ಕಾಗಿ ಬೆಳ್ಳುಳ್ಳಿಯ ಸವರಬಹುದಾದ ಮೇಣದ ರೂಪಕ್ಕೆ ತ೦ದುಕೊ೦ಡು ಹೊಟ್ಟೆಯ ಮೇಲೆ ಇರಿಸಿಕೊಳ್ಳಿರಿ. ವಿಷಯುಕ್ತವಾದ ಕೀಟ ಅಥವಾ ಪ್ರಾಣಿಯು ಕಚ್ಚಿದ್ದಲ್ಲಿ, ಆ ಭಾಗದ ಮೇಲೆಯೇ ನೇರವಾಗಿ ಬೆಳ್ಳುಳ್ಳಿಯ ಮೇಣವನ್ನು ಲೇಪಿಸಿರಿ. ತ್ವಚೆಯ ಮೇಲಿನ ವ್ರಣಗಳನ್ನು ಹೋಗಲಾಡಿಸಲು ಸಣ್ಣ ಪ್ರಮಾಣದ ಬೆಳ್ಳುಳ್ಳಿಯು ಸಾಕಾಗುತ್ತದೆ. ಬೆಳ್ಳುಳ್ಳಿಯನ್ನು ಬಳಸಿದಾಗ ಇವು ಯಾವುದೇ ನೋವಿಲ್ಲದೇ ಗುಣಕಾಣುತ್ತವೆ. ಹಲ್ಲುನೋವನ್ನು ನಿವಾರಿಸಿಕೊಳ್ಳಲೂ ಕೂಡಾ ಬೆಳ್ಳುಳ್ಳಿಯನ್ನು ಬಳಸಿಕೊಳ್ಳಬಹುದು. ಇದಕ್ಕೆ ನೀವು ಮಾಡಬೇಕಾದುದಿಷ್ಟೇ.....ನೋವು೦ಟು ಮಾಡುತ್ತಿರುವ ಹಲ್ಲಿನ ಮೇಲೆ ಬೆಳ್ಳುಳ್ಳಿಯ ಸಣ್ಣ ಚೂರೊ೦ದನ್ನು ಇರಿಸಿಕೊಳ್ಳಿರಿ.

ರಕ್ತದ ಒತ್ತಡ ಕಡಿಮೆಗೊಳಿಸಲು

ರಕ್ತದ ಒತ್ತಡ ಕಡಿಮೆಗೊಳಿಸಲು

ನಮ್ಮ ರಕ್ತದ ಒತ್ತಡವನ್ನು ಹೆಚ್ಚಿಸಲು angiotensin II ಎಂಬ ಪ್ರೋಟೀನ್ ಕಾರಣವಾಗಿದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಈ ಪ್ರೋಟೀನ್ ನೊಂದಿಗೆ ಮಿಳಿತಗೊಂಡು ಅದರ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಹೆಚ್ಚುವುದನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ polysulphide ಎಂಬ ರಾಸಾಯನಿಕಗಳು ದೇಹದಲ್ಲಿ ಪ್ರವೇಶ ಪಡೆದ ಬಳಿಕ ಅನಿಲವಾಗಿ ಪರಿವರ್ತನೆಗೊಂಡು hydrogen sulphide ಎಂಬ ರೂಪ ತಳೆಯುತ್ತವೆ. ಈ ಅನಿಲ ರಕ್ತನಾಳಗಳನ್ನು ಒಳಗಿನಿಂದ ಹಿಗ್ಗಿಸಿ ಹೆಚ್ಚಿನ ರಕ್ತ ಪೂರೈಕೆಗೆ ನೆರವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚಿನ ರಕ್ತದೊತ್ತಡ ಇರುವ ರೋಗಿಗಳು ತಮ್ಮ ವೈದ್ಯರ ಸಲಹೆ ಪಡೆದು ಬೆಳ್ಳುಳ್ಳಿಯನ್ನು ಔಷಧಿಯಾಗಿ ಸೇವಿಸಬಹುದು. ಉಪಯೋಗಿಸುವ ವಿಧಾನ ಪ್ರತಿ ಊಟದಲ್ಲಿ ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಊಟದ ನಡುವೆ ತಿನ್ನಿರಿ. ಪ್ರತಿ ಊಟದಲ್ಲಿ ನಾಲ್ಲ್ಕೈದು ಎಸಳುಗಳು ಸಾಕು.ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಿಕ್ಕ ಎಸಳುಗಳನ್ನು ತಿನ್ನುವುದೂ ಫಲಕಾರಿಯಾಗಿದೆ.

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ತೂಕ ಕಡಿಮೆಗೊಳಿಸಲು ನೆರವಾಗುತ್ತದೆ

ಹಲವು ಸಂಶೋಧಕರ ನಂಬಿಕೆಯ ಪ್ರಕಾರ ಒಬೆಸಿಟಿಯು ದೀರ್ಘಕಾಲದ ಉರಿಯಿಂದುಂಟಾಗಬಹುದು. ಇತ್ತೀಚಿನ ಸಂಶೋಧನೆಯ ಪ್ರಕಾರ ಬೆಳ್ಳುಳ್ಳಿಯು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಬೆಳ್ಳುಳ್ಳಿಯಲ್ಲಿ ರಕ್ತದ ಟ್ರಿಗ್ಲೈಸೆರಿಡೆಸ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ ಮತ್ತು ಆರ್ಟೀರಿಯಲ್ ಪ್ಲೆಕ್ಯೂ ರಚನೆಗೊಳ್ಳುವುದನ್ನು ಕಡಿಮೆಗೊಳಿಸುತ್ತದೆ.

ಒಟ್ಟಾರೆ ಬೆಳ್ಳುಳ್ಳಿ ಔಷಧಿಯ ಗುಣಗಳ ಆಗರ

ಒಟ್ಟಾರೆ ಬೆಳ್ಳುಳ್ಳಿ ಔಷಧಿಯ ಗುಣಗಳ ಆಗರ

ಬೆಳ್ಳುಳ್ಳಿಯ ಆರೋಗ್ಯದಾಯಕ ಗುಣಲಕ್ಷಣಗಳನ್ನು ಪಟ್ಟಿ ಮಾಡುತ್ತಾ ಸಾಗಿದರೆ ಅದಕ್ಕೆ ಕೊನೆಯೆ೦ಬುದೇ ಇಲ್ಲ. ಬೆಳ್ಳುಳ್ಳಿಯು ಮೂಲವ್ಯಾಧಿ, ಮಲಬದ್ಧತೆ, ಹಾಗೂ ಕಿವಿನೋವನ್ನೂ ಕೂಡಾ ಗುಣಪಡಿಸಬಲ್ಲದು. ಒ೦ದಿಷ್ಟು ನೀರನ್ನು ಕುದಿಸಿ ಅದಕ್ಕೆ ಸಾಕಷ್ಟು ಬೆಳ್ಳುಳ್ಳಿಯನ್ನು ಸೇರಿಸಿಕೊ೦ಡು ಸೇವಿಸಿದಲ್ಲಿ ಮೂಲವ್ಯಾಧಿ ಹಾಗೂ ಮಲಬದ್ಧತೆಗೆ ಒ೦ದು ಉತ್ತಮ ಪರಿಹಾರವಾದೀತು.


English summary

Why Is Eating Garlic on an Empty Stomach Good?

Not everyone thinks that eating garlic on an empty stomach is beneficial. You may often hear people say that it is only your grandmother and her friends who think that this home remedy is really beneficial. However, it is actually quite effective in preventing and treating many diseases.
X
Desktop Bottom Promotion