For Quick Alerts
ALLOW NOTIFICATIONS  
For Daily Alerts

ನೆನಪಿನ ಶಕ್ತಿ ಹೆಚ್ಚಿಸಬೇಕೆ? ಹಾಗಾದರೆ ಇಂತಹ ಆಹಾರಗಳನ್ನು ಸೇವಿಸಿ

By Deepu
|

ಜಂಜಾಟದ ಇಂದಿನ ವ್ಯಸ್ತ ಜೀವನದಲ್ಲಿ ನಮ್ಮ ಮೆದುಳು ತುಂಬಾ ಬಳಲಿದ ಮತ್ತು ಕ್ರಿಯೆಯಿಲ್ಲದಂತಿರುತ್ತದೆ. ನಮ್ಮ ಮೆದುಳಿಗೆ ನಿರಂತರ ವರ್ಧಕ ಬೇಕಿರುತ್ತದೆ ಮತ್ತು ಮೆದುಳಿಗೆ ನಾವು ಮಾಲೀಕರಾಗಿರುವ ಕಾರಣ ನೈಸರ್ಗಿಕ ಔಷಧಿಯೊಂದಿಗೆ ಇದನ್ನು ಒದಗಿಸುವುದು ತುಂಬಾ ಮುಖ್ಯ. ನಾವು ದಿನಾಲೂ ಸೇವಿಸುವ ಆಹಾರದಲ್ಲಿ ಮೆದುಳಿಗೆ ಬೇಕಾಗಿರುವ ಆಹಾರವಿದೆಯೆಂದು ಹೆಚ್ಚಿನವರು ಹೇಳಬಹುದು. ಅದಾಗ್ಯೂ, ಮೆದುಳಿನ ಶಕ್ತಿ ಉನ್ನತ ಮಟ್ಟದಲ್ಲಿಡಲು ನಾವು ಸ್ವಲ್ಪ ಹೆಚ್ಚಿನ ಮಟ್ಟದ ಆಹಾರ ಸೇವಿಸುವ ಅಗತ್ಯವಿದೆ.

ವಿವಿಧ ವರ್ಗದ ಬೆರ್ರಿಗಳಿಂದ ಹಿಡಿದು ವಿಟಮಿನ್ ಆಹಾರಗಳು ನಮ್ಮ ಮೆದುಳಿನ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕವಾಗಿ ನೀವು ಬಳಲಿದರೆ ಇದು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಒಂದು ವಿಧದ ಆಹಾರ ಬೇಕೆಂಬುದರ ಲಕ್ಷಣವಾಗಿದೆ. ಕೆಳಗೆ ಕೊಟ್ಟಿರುವ ಕೆಲವೊಂದು ಆಹಾರಗಳು ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವುದರೊಂದಿಗೆ ಸಂಪೂರ್ಣವಾಗಿ ನಿಮ್ಮ ಉತ್ತಮ ಆರೋಗ್ಯಕ್ಕೆ ನೆರವಾಗುತ್ತದೆ. ಪರ್ಕಿನ್ಸನ್ ನಂತಹ ಕಾಯಿಲೆಯಿಂದ ದೂರವಿಡಲು ಮೆದುಳಿನ ಆಹಾರ ಅತ್ಯಗತ್ಯ.

ಮೆದುಳಿನ ಶಕ್ತಿಯನ್ನೇ ಕುಗ್ಗಿಸುವ ಆಹಾರಗಳಿವು! ಯಾವುದಕ್ಕೂ ಎಚ್ಚರ...

ಈ ಆಹಾರಗಳಲ್ಲಿರುವ ಕೆಲವೊಂದು ರಾಸಾಯನಿಕಗಳು ಮಕ್ಕಳಲ್ಲಿ ಐಕ್ಯೂ ಹೆಚ್ಚಿಸುತ್ತದೆ. ಇದರಿಂದ ಅವರು ಕಲಿಕೆಯಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ. ತಜ್ಞರ ಪ್ರಕಾರ ಮೆದುಳಿನ ಆಹಾರಗಳನ್ನು ಮಕ್ಕಳ ಪರೀಕ್ಷೆಯ ಸಮಯದಲ್ಲಿ ಅವರಿಗೆ ನೀಡಬೇಕು. ಇದರಿಂದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವುದು ತಪ್ಪುತ್ತದೆ. ನಿಮ್ಮ ಮೆದುಳಿಗೆ ಅಗತ್ಯವಿರುವ ಮತ್ತು ಅದರ ಶಕ್ತಿ ಹೆಚ್ಚಿಸಬಲ್ಲ ಕೆಲವೊಂದು ಆರೋಗ್ಯಕರ ಆಹಾರಗಳು ಇಲ್ಲಿವೆ....

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ಸಾಧ್ಯವಾದಷ್ಟು ಒಣ ಹಣ್ಣುಗಳನ್ನು ಸೇವಿಸಿ

ವಾಲ್‍ನಟ್‍ಗಳು, ಬಾದಾಮಿ ಬೀಜಗಳು ಮತ್ತು ಹಝೆಲ್‍ನಟ್‍ಗಳಂತಹ ಒಣಹಣ್ಣುಗಳು ನಿಮ್ಮ ಸ್ಮರಣೆ ಶಕ್ತಿ ಮತ್ತು ಏಕಾಗ್ರತೆಗಳನ್ನು ಸುಧಾರಿಸಲು ತಮ್ಮದೆ ಆದ ಕೊಡುಗೆಯನ್ನು ನೀಡುತ್ತವೆ. ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟೀನ್‍ಗಳು ನಿಮ್ಮ ಮೆದುಳಿನ ಕೋಶಗಳನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತವೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಒಣ ಹಣ್ಣುಗಳು ಹೇಳಿ ಮಾಡಿಸಿದಂತಹ ಆಹಾರ ಪದಾರ್ಥಗಳಾಗಿವೆ.

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ದಿನಕ್ಕೊಂದು ಕಪ್ ಪುದೀನಾ ಚಹಾ ಕುಡಿಯಿರಿ

ಪುದೀನಾ ತಾಜಾ ಪುದೀನಾದ ಸುವಾಸನೆಯು ಪ್ರಚೋದಕದಂತೆ ಕೆಲಸ ಮಾಡಿ ಜಾಗೃತಾವಸ್ಥೆ ಮತ್ತು ಮೆದುಳಿನ ಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ದಿನದಲ್ಲಿ ಒಂದು ಕಪ್ ಪುದೀನಾ ಚಹಾ ಕುಡಿಯಿರಿ.

ತಯಾರಿಸುವ ವಿಧಾನ

ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್‌ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಸಿ

ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಸಿ

ಇತರ ಎಣ್ಣೆಗಳ ಬದಲಿಗೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಅಡುಗೆ ಮಾಡಿ. ಇದರಿಂದ ಸಂತುಲಿತ ಕೊಬ್ಬು ಕಡಿಮೆಯಾಗುತ್ತದೆ ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಇವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಸೊಪ್ಪನ್ನು ಹೆಚ್ಚು ಸೇವಿಸಿ

ಬಸಲೆ ಹಾಗೂ ಪಾಲಕ್ ಏಕಾಗ್ರತೆಯನ್ನು ಹೆಚ್ಚಿಸುವುದರೊಂದಿಗೆ ಜ್ಞಾಪಕ ಶಕ್ತಿಯನ್ನು ಸುಧಾರಣೆ ಮಾಡುತ್ತದೆ. ಒಮೆಗಾ-3 ಕೊಬ್ಬಿನ ಆಮ್ಲವನ್ನು ಒಳಗೊಂಡಿರುವ ಬಸಲೆಯು ಮೆದುಳಿನ ಕಾರ್ಯಚಟುವಟಿಕೆಯನ್ನು ಉತ್ತಮಪಡಿಸುವಂತಹ ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

 ಮೊಟ್ಟೆಯ ಲೋಳೆ

ಮೊಟ್ಟೆಯ ಲೋಳೆ

ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಮೊಟ್ಟೆಯ ಲೋಳೆಯು ವ್ಯಕ್ತಿಯ ಮೆದುಳಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಮೊಟ್ಟೆಯ ಲೋಳೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎಂದು ಅಧ್ಯಯನಗಳು ಹೇಳಿವೆ.

ಧಾನ್ಯಗಳು

ಧಾನ್ಯಗಳು

ಧಾನ್ಯಗಳು ಮೆದುಳಿನ ಆರೋಗ್ಯಕ್ಕೆ ಬೇಕಾಗುವ ಅಸಂಖ್ಯಾತ ಪೋಷಕಾಂಶಗಳು ದೊರೆಯುತ್ತವೆ. ಇವು ನಾರಿನಂಶ, ಸಂಕೀರ್ಣವಾದ ಕಾರ್ಬೊಹೈಡ್ರೇಟ್‍ಗಳು ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ವಿಟಮಿನ್ ಬಿ ಸಹ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳಿಗೆ ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತವೆ.

ಚಾಕೊಲೆಟ್!!

ಚಾಕೊಲೆಟ್!!

ಚಾಕೊಲೆಟ್ ಸೇವಿಸಲು ಇದಕ್ಕಿಂತ ಒಳ್ಳೆಯ ನೆಪ ಬೇಕಾಗಿಲ್ಲ. ಅಲ್ಲವೇ!!? ಚಾಕೊಲೆಟ್‍ಗಳು, ವಿಶೇಷವಾಗಿ ಡಾರ್ಕ್ ಚಾಕೊಲೆಟ್‍ಗಳು ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಹೇಳಿ ಮಾಡಿಸಿದಂತಹ ಆಹಾರವಾಗಿರುತ್ತದೆ. ಇದು ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಮೆದುಳಿಗೆ ರಕ್ತವು ಸರಾಗವಾಗಿ ಸಾಗುವಂತೆ ಮಾಡುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ತುಂಬಾ ಒಳ್ಳೆಯದೆಂದು ಸಾಬೀತಾಗಿದೆ. ಇದು ಮೆದುಳಿಗೆ ಶಕ್ತಿಯನ್ನು ಒದಗಿಸುವುದು ಮಾತ್ರವಲ್ಲದೆ ಮೆದುಳಿಗೆ ಆಗಿರುವಂತಹ ಸಣ್ಣಪುಟ್ಟ ತೊಂದರೆಗಳನ್ನು ಇದು ನಿವಾರಿಸುತ್ತದೆ. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ಹಹಿಸುತ್ತದೆ. ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ಇದು ನೆರವಾಗುವುದು, ಪ್ರತಿ ದಿನ ನೆನೆಸಿಟ್ಟ ಎರೆಡು-ಮೂರು ಬಾದಾಮಿಗಳನ್ನು ಸೇವಿಸಿ

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಈ ಬೀಜಗಳಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆ್ಯಸಿಡ್ ಸಮೃದ್ಧವಾಗಿದೆ. ಇದು ನರಪೇಕ್ಷಕವು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ ಸಾಮಾಜಿಕ ಆತಂಕ ಕಡಿಮೆ ಮಾಡಲು ಅಗತ್ಯವಿದೆ.

ಒಣದ್ರಾಕ್ಷಿ

ಒಣದ್ರಾಕ್ಷಿ

ನಿಯಮಿತ ಒಣದ್ರಾಕ್ಷಿಯಲ್ಲಿ ಬೊರೊನ್ ಎನ್ನುವ ಅಂಶವಿದ್ದು, ಇದು ಎಚ್ಚರಿಕೆ ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಸ್ವಲ್ಪ ಒಣದ್ರಾಕ್ಷಿ ತಿನ್ನುವುದರಿಂದ ನಿಮ್ಮ ಮೆದುಳಿಗೆ ಒಳ್ಳೆಯದು.

ಸೇಬು

ಸೇಬು

ಕೆಂಪು ಸೇಬಿನಲ್ಲಿರುವ ಕೆಲವು ವರ್ಗದ ರಾಸಾಯನಿಕಗಳು ನರನಾಶ ಮಾಡುವಂತಹ ಕಾಯಿಲೆಗಳಾದ ಪರ್ಕಿಸನ್ ಮತ್ತು ಅಲ್ಝೆಮರ್ ನಿಂದ ಮೆದುಳನ್ನು ರಕ್ಷಿಸುತ್ತದೆ. ದಿನಕ್ಕೊಂದು ಸೇಬು, ವೈದ್ಯರಿಂದ ನಮ್ಮನ್ನು ದೂರವಿಡುತ್ತದೆ ಎನ್ನುವ ಮಾತು ನಿಜ.

ಅರಿಶಿನ

ಅರಿಶಿನ

ಅಲ್ಝೆಮರ್ ಕಾಯಿಲೆಯಲ್ಲಿ ವಿಶ್ವದಲ್ಲೇ ಭಾರತದ ಪ್ರಮಾಣವು ತುಂಬಾ ಕಡಿಮೆಯಿದೆ. ಯಾವುದೇ ಪದಾರ್ಥದಲ್ಲಿ ಅರಶಿನವನ್ನು ಸೇರಿಸುವುದರಿಂದ ಅಪಾಯಕಾರಿ ಕಾಯಿಲೆ ಬರುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಅಲ್ಝೆಮರ್ ಕಾಯಿಲೆಯು ಮೆದುಳಿನಲ್ಲಿ ಉರಿಯೂತ ಕಾರ್ಯದಿಂದ ಆರಂಭವಾಗುತ್ತದೆ.

ಅವಕೋಡ್

ಅವಕೋಡ್

ಮೆದುಳಿಗೆ ಶಕ್ತಿಯನ್ನು ನೀಡುವ ಮತ್ತೊಂದು ಆಹಾರವೆಂದರೆ ಅವಕೋಡ್. ಇದು ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಅವಕೋಡ್ ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗುಣಗಳು ಮೆದುಳಿನ ಕ್ರಿಯೆಯನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವಾಲ್ ನಟ್ಸ್

ವಾಲ್ ನಟ್ಸ್

ವಾಲ್ ನಟ್ಸ್ ನಲ್ಲಿರುವ ಪಾಲಿಫೀನಾಲ್ ಗಳು ಮೆದುಳಿನಲ್ಲಿ ನರಕೋಶಗಳ ಮಧ್ಯೆ ಸಂಪರ್ಕವನ್ನು ಸುಧಾರಿಸುತ್ತದೆ. ನೀವು ದಿನದಲ್ಲಿ ಕೆಲವೊಂದು ವಾಲ್ ನಟ್ಸ್ ಗಳನ್ನು ತಿಂದರೆ ನಿಮ್ಮ ಮೆದುಳಿನ ಶಕ್ತಿ ಶೇ.19ರಷ್ಟು ಹೆಚ್ಚಾಗುತ್ತದೆ.

ಚಾಕಲೇಟ್

ಚಾಕಲೇಟ್

ತಿಂದರೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಆದರೆ ಗಾಢ ಬಣ್ಣದ ಚಾಕಲೇಟ್ ಅನ್ನು ತಿಂದರೆ ಅದು ಮೆದುಳಿಗೆ ರಕ್ತ ಸಂಚಲನೆಯಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯು ವೃದ್ಧಿಯಾಗುವುದು. ಯಾವಾಗೊಲೊಮ್ಮೆ ಚಾಕಲೇಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಸೋಡಿಯಂ ಲವಣ ಹೆಚ್ಚಿರುವ ಆಹಾರಗಳಿಂದ ದೂರವಿರಿ

ಸೋಡಿಯಂ ಲವಣ ಹೆಚ್ಚಿರುವ ಆಹಾರಗಳಿಂದ ದೂರವಿರಿ

ಆಹಾರದಲ್ಲಿ ಸೋಡಿಯಂ ಹೆಚ್ಚಿದ್ದಷ್ಟೂ ದೈಹಿಕ ಚಟುವಟಿಕೆಯ ಮಟ್ಟ ಕಡಿಮೆಯಾಗುತ್ತದೆ. ಈ ಪರಿಣಾಮ ಮೆದುಳಿನ ಮೇಲೂ ಬಿದ್ದು ಯೋಚನಾಸಾಮರ್ಥ್ಯ ಕಡಿಮೆಯಾಗುತ್ತದೆ. ಯಾವುದೇ ಆಹಾರದಲ್ಲಿ ಕೊಂಚವಾದರೂ ಸೋಡಿಯಂ ಲವಣ ಇದ್ದೇ ಇರುತ್ತದೆ. ಇದರ ಪರಿಣಾಮವನ್ನು ಕಡಿಮೆಗೊಳಿಸಲು ದೈಹಿಕ ಚಟುವಟಿಕೆ ಅಗತ್ಯವಾಗಿದೆ. ಹಾಗಾಗಿ ಇಡಿಯ ದಿನ ಬಸವನಹುಳದಂತೆ ಬಿದ್ದಿರುವ ವ್ಯಕ್ತಿಗಳು ಸರಿಯಾಗಿ ಯೋಚಿಸಲು ಅಸಮರ್ಥರಾಗುವುದು ಇದೇ ಕಾರಣಕ್ಕೆ. ಆದ್ದರಿಂದ ಸೋಡಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು ಅಥವಾ ಅತಿ ಕಡಿಮೆ ಮಾಡಬೇಕು.

ಕೊಬ್ಬಿನ ಆಮ್ಲ ಆಧಾರಿತ ಆಹಾರಗಳನ್ನು ಸೇವಿಸಬೇಡಿ

ಕೊಬ್ಬಿನ ಆಮ್ಲ ಆಧಾರಿತ ಆಹಾರಗಳನ್ನು ಸೇವಿಸಬೇಡಿ

ಟ್ರಾನ್ಸ್ ಫ್ಯಾಟ್ ಅಥವಾ ಕೊಬ್ಬಿನ ಆಮ್ಲದ ಪ್ರಮಾಣ ಹೆಚ್ಚಿರುವ ಆಹಾರಗಳು ಮೆದುಳಿನ ಕ್ಷಮತೆಗೆ ಅಪಾಯಕಾರಿಯಾಗಿವೆ. ವಿಶೇಷವಾಗಿ ಕೆಲವು ಎಣ್ಣೆಗೆ ಜಿಡ್ಡುತನವನ್ನು ನೀಡಲು ಅನುಸರಿಸುವ ಹೈಡ್ರೋಜಿನೇಶನ್ ಅಥವಾ ಜಲಜನೀಕರಣ ಪ್ರಕ್ರಿಯೆಯ ಮೂಲಕ ಉತ್ಪತ್ತಿಯಾಗುವ ಆಹಾರಗಳು ಮೆದುಳಿನ ಕ್ಷಮತೆಯನ್ನು ನಿಧಾನವಾಗಿ ಉಡುಗಿಸುತ್ತಾ ಹೋಗುತ್ತದೆ.

ಟ್ಯೂನಾ ಮೀನು ಸೇವಿಸಬೇಡಿ...

ಟ್ಯೂನಾ ಮೀನು ಸೇವಿಸಬೇಡಿ...

ಮೀನು ಮೆದುಳಿಗೆ ಒಳ್ಳೆಯದೇ ಆದರೆ ಎಣ್ಣೆಯ ಅಂಶ ಹೆಚ್ಚಿರುವ ಟ್ಯೂನಾ ಮೀನು ಇಂದು ಡಬ್ಬಿಯಲ್ಲಿ ಲಭಿಸುತ್ತಿದ್ದು ಈ ಆಹಾರವೂ ಮೆದುಳಿನ ಕ್ಷಮತೆಯನ್ನು ಉಡುಗಿಸುತ್ತದೆ. ಸಾಮಾನ್ಯ ಪ್ರಮಾಣದಲ್ಲಿ ಈ ಮೀನನ್ನು ವಾರದಲ್ಲಿ ಮೂರು ಹೊತ್ತಿಗಿಂತ ಹೆಚ್ಚು ತಿನ್ನಲೇಬಾರದು.

English summary

Foods to increase brain power & memory

As the control center of your body, it's in charge of keeping your heart beating and lungs breathing and allowing you to move, feel and think. That's why it's a good idea to keep your brain in peak working condition. The foods you eat play a role in keeping your brain healthy and can improve specific mental tasks, such as memory and concentration.
X
Desktop Bottom Promotion