For Quick Alerts
ALLOW NOTIFICATIONS  
For Daily Alerts

  ಮೆದುಳಿನ ಶಕ್ತಿಯನ್ನೇ ಕುಗ್ಗಿಸುವ ಆಹಾರಗಳಿವು! ಯಾವುದಕ್ಕೂ ಎಚ್ಚರ...

  By Manu
  |

  ಗೋಧಿ ತಿನ್ನು ಮೈ ಬೆಳೆಯುತ್ತದೆ, ಅಕ್ಕಿ ತಿನ್ನು ಮೆದುಳು ಬೆಳೆಯುತ್ತದೆ ಎಂಬ ಮಾತನ್ನು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಅಂದರೆ ಅಕ್ಕಿ ತಿನ್ನುವ ಮೂಲಕ ಬುದ್ಧಿ ಶಕ್ತಿ ಹೆಚ್ಚುತ್ತದೆ. ಈ ಮಾತನ್ನು ಇಂದಿನ ವಿಜ್ಞಾನ ದೃಢೀಕರಿಸಿದ್ದು ಮೆದುಳಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ ವೈದ್ಯರು ಹಾಗೂ ಸಂಶೋಧಕರು ಈ ಬಗ್ಗೆ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ.   ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು

  ಈ ಪ್ರಕಾರ ಮೆದುಳಿಗೆ ಎಲ್ಲಾ ಬಗೆಯ ಆಹಾರಗಳು ಸೂಕ್ತವಲ್ಲ, ಬದಲಿಗೆ ಕೆಲವು ಆಹಾರಗಳನ್ನು ಹೆಚ್ಚು ಕಾಲ ಸೇವಿಸಿದರೆ ಮೆದುಳಿಗೆ ಹಾನಿಯುಂಟುಮಾಡಬಹುದು. ಇವುಗಳ ಸೇವನೆಯಿಂದ ಪರೋಕ್ಷವಾಗಿ ದೇಹದ ಮೇಲೆಯೂ ಪರಿಣಾಮ ಬೀರಿ ಆರೋಗ್ಯ ಏರುಪೇರಾಗಬಹುದು. ಮುಖ್ಯವಾಗಿ ಮಾನಸಿ ಕಾಯಿಲೆಗಳು, ಹಲ್ಲುಗಳಲ್ಲಿ ಕುಳಿ, ಟೈಪ್ 2 ಮಧುಮೇಹ, ಹೃದಯಸಂಬಂಧಿ ತೊಂದರೆಗಳು ಮೊದಲಾದವು ಎದುರಾಗಬಹುದು.  ಟೈಪ್‌-2 ಮಧುಮೇಹಕ್ಕೆ, ಇಲ್ಲಿದೆ ನೋಡಿ ಆಯುರ್ವೇದ ಚಿಕಿತ್ಸೆ

  ಯಾವ ಬಗೆಯ ಆಹಾರಗಳು ಮೆದುಳಿಗೆ ಸೂಕ್ತವಲ್ಲ ಎಂಬ ಪ್ರಶ್ನೆಗೆ ಯಾವ ಆಹಾರದಲ್ಲಿ ಪೋಷಕಾಂಶಗಳ ಸಂಖ್ಯೆ ಕಡಿಮೆ ಇರುತ್ತದೆ ಅಥವಾ ಇರುವುದೇ ಇಲ್ಲವೋ ಇವುಗಳ ಸೇವನೆಯಿಂದ ಮೆದುಳಿನ ಜೀವಕೋಶಗಳಿಗೆ ಹಾನಿಯಾಗಬಹುದು. ಈ ಗುಂಪಿನಲ್ಲಿ ಕೆಲವಾರು ಆಹಾರಗಳಿದ್ದು ಇವುಗಳ ಸೇವನೆಯಿಂದ ಮೆದುಳಿನ ಜೀವಕೋಶಗಳು ಮತ್ತೆ ಹುಟ್ಟಲಾರದಂತೆ ನಷ್ಟಹೊಂದುತ್ತವೆ ಎಂದು ಈ ತಜ್ಞರು ಕಂಡುಕೊಂಡಿದ್ದಾರೆ. ಬನ್ನಿ, ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ.......   

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ನಮ್ಮ ಮೆದುಳಿಗೊಂದು ವಿಚಿತ್ರ ಶಕ್ತಿ ಇದೆ. ಅದೆಂದರೆ ತಿನ್ನುವ ಆಹಾರ ನೋಡಲು ಚೆನ್ನಾಗಿರಬೇಕು. ಇದೇ ಕಾರಣಕ್ಕೆ ಆಹಾರಗಳನ್ನು ಸಿದ್ಧಪಡಿಸಿದ ಬಳಿಕ ಇದನ್ನು ಹೇಗೆ ಅಲಂಕರಿಸುತ್ತೀರಿ ಎಂಬುದನ್ನೂ ಮುಖ್ಯವಾಗಿ ಪರಿಗಣಿಸಲಾಗುತ್ತದೆ.

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ಆಹಾರವಸ್ತುಗಳು ನೋಡಲಿಕ್ಕೆ ಚೆನ್ನಾಗಿರಬೇಕು ಎಂದು ಸೇರಿಸುವ ಕೃತಕ ಬಣ್ಣ, ರುಚಿ

  ಹೆಚ್ಚಿಸಲು ಕೃತಕ ಸ್ವಾದಗಳು ಮೊದಲಾದವು ಆ ಕ್ಷಣಕ್ಕೆ ಆಹಾರವನ್ನು ಸೇವಿಸಲು ಮೆದುಳಿಗೆ ಪ್ರಚೋದನೆ ನೀಡಿದರೂ ಹೊಟ್ಟೆ ಸೇರಿದ ಬಳಿಕ ಮಾತ್ರ ಬೇರೆಯೇ ಕೆಲಸ ಮಾಡುತ್ತವೆ.

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ಆಹಾರದ ಗುಣ ಹೆಚ್ಚಿಸುವ ವಸ್ತುಗಳು

  ಬಹಳ ಕಾಲ ಈ ಕೃತಕ ಆಹಾರಗಳನ್ನು ಸೇವಿಸುತ್ತಾ ಇರುವ ಮೂಲಕ ಮೆದುಳಿಗೂ ಹಾನಿಯುಂಟಾಗುತ್ತದೆ. ಹುಳಿರುಚಿಯ ಶಿರ್ಕಾ, ಉಪ್ಪು, ಸಕ್ಕರೆ, ಕೃತಕ ರಾಸಾಯನಿಕಗಳನ್ನು ಸೇರಿಸಿರುವ ಸಿದ್ಧ ಆಹಾರಗಳೆಲ್ಲವೂ ಈ ಪಟ್ಟಿಗೆ ಸೇರುತ್ತವೆ.

  ಮೋನೋಸೋಡಿಯಂ ಗ್ಲುಟಮೇಟ್

  ಮೋನೋಸೋಡಿಯಂ ಗ್ಲುಟಮೇಟ್

  ನೋಡಲಿಕ್ಕೆ ಅಪ್ಪಟ ಉಪ್ಪಿನ ಪುಡಿಯಂತೆಯೇ ಇರುವ ಈ ರಾಸಾಯನಿಕ ನಾಲಿಗೆಯನ್ನು ಚುರುಗುಟ್ಟಿಸುವ ಮೂಲಕ ಆಹಾರದ ಸ್ವಾದವನ್ನು ಹೆಚ್ಚಿಸುತ್ತದೆ. ಆದರೆ ಹೊಟ್ಟೆಗೆ ಹೋದ ಬಳಿಕ ಇದು ರಕ್ತವನ್ನು ಸೇರಿ ಮೆದುಳನ್ನು ಸೇರಿದ ಬಳಿಕ ಮೆದುಳಿನ ಜೀವಕೋಶಗಳನ್ನು ನಷ್ಟಪಡಿಸುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಇದು ಅಪಾಯಕಾರಿಯಾಗಿದೆ.

  ಆಹಾರ ಸಂರಕ್ಷಕಗಳು

  ಆಹಾರ ಸಂರಕ್ಷಕಗಳು

  ಇಂದು ದೊರೆಯುತ್ತಿರುವ ಹೆಚ್ಚಿನ ಆಹಾರವಸ್ತುಗಳಲ್ಲಿ ಇವು ಹೆಚ್ಚು ಕಾಲ ಕೆಡದೇ ಇರದಂತೆ ಕೆಲವು ಸಂರಕ್ಷಕಗಳನ್ನು ಸೇರಿಸಿರುತ್ತಾರೆ. ಇವುಗಳಲ್ಲಿ ಸಲ್ಫೈಟ್ ಎಂಬ ಕಣಗಳಿದ್ದು ಆಹಾರವನ್ನು ಸಂರಕ್ಷಿಸಿದರೂ ಹೊಟ್ಟೆಗೆ ಹೋದ ಬಳಿಕ ಅಲರ್ಜಿ, ತಲೆಸುತ್ತು, ಉಸಿರಾಟದಲ್ಲಿ ತೊಂದರೆ, ಆಮಶಂಕೆ ಮೊದಲಾದ ತೊಂದರೆಗಳನ್ನು ಹುಟ್ಟುಹಾಕುತ್ತದೆ. ಆಹಾರದಲ್ಲಿ ಹಳದಿ ಬಣ್ಣ ಬರಲು ಉಪಯೋಗಿಸುವ tartrazinea ಮತ್ತು benzoate ಎಂಬ ರಾಸಾಯನಿಕಗಳು ಚರ್ಮದಲ್ಲಿ ದದ್ದುಗಳೆದ್ದು ಕೆಂಪಗಾಗುವ urticaria ಎಂಬ ರೋಗ ಆವರಿಸಲು ಕಾರಣವಾಗಬಹುದು.

  ಸಕ್ಕರೆಯ ಬದಲಿಗೆ ಬಳಸುವ ಆಸ್ಪರ್ಟೇಮ್ ಸಿಹಿಕಾರಕ

  ಸಕ್ಕರೆಯ ಬದಲಿಗೆ ಬಳಸುವ ಆಸ್ಪರ್ಟೇಮ್ ಸಿಹಿಕಾರಕ

  ಕೆಲವು ಪಾನೀಯಗಳಲ್ಲಿ ಸಕ್ಕರೆ ಇಲ್ಲದೇ 'ನೋ ಶುಗರ್' ಎಂದು ಕಣ್ಣಿಗೆ ಚೆನ್ನಾಗಿ ಕಾಣುವಂತೆ ಮುದ್ರಿಸಿ ಮಾರಲಾಗುತ್ತದೆ. ವಾಸ್ತವವಾಗಿ ಈ ಪಾನೀಯಗಳಲ್ಲಿ ಸಕ್ಕರೆಯ ಬದಲಿಗೆ ಆಸ್ಪರ್ಟೇಮ್ (aspartame) ಎಂಬ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಇದರ ಬಳಕೆಯ ವ್ಯಾಪ್ತಿ ಇಂದು ಎಷ್ಟು ಹೆಚ್ಚಿದೆಯೆಂದರೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಉತ್ಪನ್ನಗಳಲ್ಲಿ ಇದನ್ನು ಬಳಸಲಾಗುತ್ತಿದೆ.

  ಸಕ್ಕರೆಯ ಬದಲಿಗೆ ಬಳಸುವ ಆಸ್ಪರ್ಟೇಮ್ ಸಿಹಿಕಾರಕ

  ಸಕ್ಕರೆಯ ಬದಲಿಗೆ ಬಳಸುವ ಆಸ್ಪರ್ಟೇಮ್ ಸಿಹಿಕಾರಕ

  ಮಕ್ಕಳ ಚ್ಯೂಯಿಂಗ್ ಗಮ್ ನಿಂದ ಹಿಡಿದು ಜೆಲ್ಲಿ, ಸಿದ್ಧ ಲಘುಪಾನೀಯಗಳವರೆಗೆ ಇದನ್ನು ಸೇರಿಸಲಾಗುತ್ತದೆ. ಈ ಆಸ್ಪರ್ಟೇಮ್ ನಲ್ಲಿ aspartic acid ಮತ್ತು phenylalanine ಎಂಬ ಎರಡು ರಾಸಾಯನಿಕಗಳಿವೆ. ಇವೆರಡೂ ರಾಸಾಯನಿಕಗಳ ಜೋಡಿ ಹೊಟ್ಟೆ ಸೇರಿದ ಬಳಿಕ ಮದ್ಯ ಕುಡಿಸಿದ ಮಂಗನಂತೆ ವರ್ತಿಸಲು ಪ್ರಾರಂಭಿಸಿ ಮೆದುಳಿನ ಜೀವಕೋಶಗಳಿಗೆ ಹಾನಿ ಎಸಗುತ್ತವೆ.

  ಮೀನಿನಲ್ಲಿರುವ ಪಾದರಸ

  ಮೀನಿನಲ್ಲಿರುವ ಪಾದರಸ

  ಕೆಲವು ಮೀನುಗಳಲ್ಲಿ ಕೊಂಚ ಪ್ರಮಾಣದ ಪಾದರಸ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಮೆದುಳಿನ ಮುಖ್ಯ ಭಾಗವಾದ cerebellum ಮೇಲೆ ಪ್ರಭಾವ ಬೀರಿ ಯೋಚನಾ ಶಕ್ತಿಯನ್ನು ಉಡುಗಿಸುತ್ತದೆ.

  ಮೀನಿನಲ್ಲಿರುವ ಪಾದರಸ

  ಮೀನಿನಲ್ಲಿರುವ ಪಾದರಸ

  ಕೆಲವು ಆಹಾರಗಳಲ್ಲಿರುವ ಟ್ರಾನ್ಸ್ ಫ್ಯಾಟ್ ಎಂಬ ಕೊಬ್ಬು ಸಹಾ ಇದೇ ರೀತಿಯ ಹಾನಿ ಎಸಗುತ್ತದೆ. ಆದ್ದರಿಂದ ಈ ಆಹಾರಗಳನ್ನು ಸೇವಿಸದಿರುವಂತೆ ಮೆದುಳಿನ ತಜ್ಞರು ಸಲಹೆ ಮಾಡುತ್ತಾರೆ.

   

  English summary

  Why Brain Doctors Ask You To Avoid These Foods

  There are certain foods that are great for our brain. Brain doctors ask us to have certain foods like berries and fish that have been proved to be great for the brain. However, there are certain foods that brain doctors ask us to avoid as these could prove to be harmful for the brain in the long run
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more