For Quick Alerts
ALLOW NOTIFICATIONS  
For Daily Alerts

  ಸಿಕ್ಕಾಪಟ್ಟೆ ತಲೆನೋವಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಪರಿಹಾರ...

  By Arshad
  |

  ತಲೆನೋವು ಆವರಿಸಿದಾಗ ನಮ್ಮ ಯೋಚನಾ ಶಕ್ತಿ ಕುಂದುತ್ತದೆ ಹಾಗೂ ನಾವು ಮಾಡುವ ಕೆಲಸದಲ್ಲಿ ಗಮನವಿಡಲು ಸಾಧ್ಯವಾಗದ ಕಾರಣ ಆ ಸಮಯದಲ್ಲಿ ಮುಗಿಸಿಕೊಡಬೇಕಾದ ಮುಖ್ಯ ಕೆಲಸಗಳಿಗೆ ಅಥವಾ ಪೂರ್ಣ ಗಮನ ನೀಡಲೇಬೇಕಾದ ಕೆಲಸಗಳಲ್ಲಿ ಏಕಾಗ್ರತೆ ಸಾಧ್ಯವಾಗದೇ ಹೋಗುತ್ತದೆ. ತಲೆನೋವು ಅಂದರೆ ಸರಿಸುಮಾರು ಕಣ್ಣುಗಳ ಹಿಂದೆ ಅಥವಾ ಮೆದುಳಿನ ಎಡ ಅಥವಾ ಬಲಭಾಗದಲ್ಲಿ ಅಥವಾ ಕುತ್ತಿಗೆಯ ಭಾಗದಲ್ಲಿ ಅತೀವ ನೋವಾಗುವುದು ಹಾಗೂ ತಲೆ ಎತ್ತಲಾಗದೇ ಇರುವುದು, ಕಣ್ಣು ತೆರೆಯಲು ಅಸಾಧ್ಯವಾಗುವುದು, ಸುಸ್ತು ಆವರಿಸುವುದು, ವಾಕರಿಕೆ ಬಂದಂತಾಗುವುದು ಮೊದಲಾದವು ನಿತ್ಯದ ಚಟುವಟಿಕೆಗಳಿಗೆ ಬಾಧೆಯುಂಟುಮಾಡುತ್ತವೆ.

  ತಲೆನೋವಿಗೆ ಏನು ಕಾರಣ ಎಂಬ ಪ್ರಶ್ನೆಗೆ ಇದುವರೆಗೆ ಸೂಕ್ತವಾದ ಉತ್ತರ ದೊರಕಿಲ್ಲ. ಏಕೆಂದರೆ ತಲೆನೋವುಗಳಲ್ಲಿ ಹಲವು ವಿಧಗಳಿವೆ. ಕೆಲವು ವಾತಾವರಣದ ಏರುಪೇರಿನ ಮೂಲಕ ಎದುರಾಗದೆ ಕೆಲವು ಕುಹರ (ಅಥವಾ ಸೈನಸ್) ನಲ್ಲಿ ಸೋಂಕು ಉಂಟಾಗುವ ಮೂಲಕ ಎದುರಾಗುತ್ತದೆ. ಕೆಲವೊಮ್ಮೆ ಬೆಚ್ಚಗಿನ ಕೋಣೆಯಿಂದ ನೇರವಾಗಿ ಅತಿಶೀತಲವಿರುವ ಹೊರಾಂಗಣಕ್ಕೆ ಅಥವಾ ಸ್ಥಳಕ್ಕೆ ಕಾಲಿಟ್ಟ ತಕ್ಷಣ ನಮ್ಮ ಮೂಗಿನ ಮೂಲಕ ಒಳಬರುವ ಕುಳಿರ್ಗಾಳಿ ಮೆದುಳಿಗೆ ಸಾಗುವ ಒಂದು ವಿಶಿಷ್ಟ ನರ (trigeminal nerve) ಸಂಕುಚಿತಗೊಂಡು ಮೆದುಳಿಗೆ ರಕ್ತಪರಿಚಲನೆ ಕಡಿಮೆಯಾಗುತ್ತದೆ. ಇದು ಥಟ್ಟನೇ ತಲೆನೋವಿಗೆ ಕಾರಣವಾಗುತ್ತದೆ. ಅಲ್ಲದೇ ಚಳಿಗಾಲದಲ್ಲಿ ತಣ್ಣನೆಯ ಗಾಳಿ ಕಿವಿಯ ತಮಟೆಗೆ ಸೋಕಿದಾಗ ಈ ಸೂಕ್ಷ್ಮಭಾಗದಲ್ಲಿಯೂ ನೋವು ಕಂಡುಬರುತ್ತದೆ ಹಾಗೂ ಇದರ ಪರಿಣಾಮವಾಗಿಯೂ ತಲೆನೋವು ಬರಬಹುದು. ತಲೆನೋವು ಯಾರಿಗೂ ಬಾಧಿಸಬಹುದಾದ, ವಿಶೇಷವಾಗಿ ತಮ್ಮ ಕೆಲಸದಲ್ಲಿ ಪೂರ್ಣ ಗಮನ ನೀಡಲೇಬೇಕಾದ (ಉದಾಹರಣೆಗೆ ಬಸ್ ಚಾಲಕ) ಉದ್ಯೋಗಿಗಳಿಗೆ ಭಾರೀ ತೊಂದರೆ ಕೊಡುವ ನೋವಾಗಿದೆ.

  ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

  ತಲೆನೋವು ಬಂದಾಗ ಹೆಚ್ಚಿನವರು ಕೈಗೊಳ್ಳುವ ಮೊದಲ ಚಿಕಿತ್ಸೆ ಎಂದರೆ ನೋವು ನಿವಾರಕ ಮಾತ್ರೆಗಳನ್ನು ನುಂಗುವುದು. ವಾಸ್ತವವಾಗಿ ಈ ಮಾತ್ರೆಗಳು ನೋವು ನಿವಾರಕವೇ ಅಲ್ಲ! ಬದಲಿಗೆ, ನೋವಿನ ಸಂಕೇತಗಳನ್ನು ನಡುವಿನಲ್ಲಿಯೇ ತುಂಡರಿಸಿ ನೋವಿನ ಅನುಭವ ಮೆದುಳು ಪಡೆಯದಂತೆ ಮಾಡುತ್ತದೆ ಅಷ್ಟೇ. ಇದರಿಂತ ತಾತ್ಕಾಲಿಕವಾಗಿ ನೋವಿಲ್ಲದ ಅನುಭವವಾದರೂ ಇದರ ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಭಾರಿಯಾಗಿ ಪರಿಣಮಿಸಬಹುದು. ವಿಶೇಷವಾಗಿ ಪಾರಾಸೆಟಮಾಲ್ ಎಂಬ ಔಷಧಿ ನಮ್ಮ ಯಕೃತ್ ಅನ್ನು ನಿಧಾನವಾಗಿ ಗಟ್ಟಿಯಾಗಿಸುತ್ತಾ ಹೋಗುತ್ತದೆ ಎಂಬ ಕಾರಣಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ಇದ ಬಳಕೆಯನ್ನು ನಿಧಾನವಾಗಿ ಹಿಂಪಡೆಯಲಾಗುತ್ತಿದೆ. ಆದ್ದರಿಂದ ತಲೆನೋವಿನ ನಿವಾರಣೆಗೆ ನೈಸರ್ಗಿಕ ಸಾಮಾಗ್ರಿಗಳನ್ನು ಉಪಯೋಗಿಸುವುದೇ ಜಾಣತನದ ಹಾಗೂ ಸುರಕ್ಷಿತ ಕ್ರಮವಾಗಿದೆ. ಬನ್ನಿ, ತಲೆನೋವನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ನೋಡೋಣ...

  ಸಾಕಷ್ಟು ದ್ರವಾಹಾರಗಳನ್ನು ಸೇವಿಸಿ

  ಸಾಕಷ್ಟು ದ್ರವಾಹಾರಗಳನ್ನು ಸೇವಿಸಿ

  ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ತಲೆನೋವು ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಆದ್ದರಿಂದ ಸಾಕಷ್ಟು ನೀರು ಹಾಗೂ ದ್ರವಾಹಾರಗಳನ್ನು ಸೇವಿಸುವುದು ಅಗತ್ಯ. ತಲೆನೋವು ಸತತವಾಗಿ ಬಾಧಿಸುವ ವ್ಯಕ್ತಿಗಳು ಗಂಟೆಗೊಂದು ಲೋಟವಾದರೂ ನೀರನ್ನು ಕುಡಿಯುತ್ತಾ ಇದ್ದರೆ ತಲೆನೋವು ಬರದೇ ಇರದಂತೆ ನೋಡಿಕೊಳ್ಳಬಹುದು.

  ಬಿಸಿ ಅಥವಾ ತಣ್ಣನೆಯ ಪಟ್ಟಿ ಕಟ್ಟುವುದು

  ಬಿಸಿ ಅಥವಾ ತಣ್ಣನೆಯ ಪಟ್ಟಿ ಕಟ್ಟುವುದು

  ಸಾಮಾನ್ಯವಾಗಿ ಮೆದುಳಿಗೆ ಸಾಗುವ trigeminal nerve ಎಂಬ ನರ ಸಂಕುಚಿತಗೊಳ್ಳುವ ಮೂಲಕ ತಲೆನೋವು ಆವರಿಸುತ್ತದೆ. ಈ ನರದ ಭಾಗದಲ್ಲಿ ಒಂದು ಬಟ್ಟೆಯ ಪಟ್ಟಿಯನ್ನು ಬಿಸಿನೀರಿನಲ್ಲಿ ಅದ್ದಿ ಆವರಿಸುವ ಮೂಲಕ ನರದ ಭಾಗವನ್ನು ಹಿಗ್ಗಿಸಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಮೆದುಳಿಗೆ ರಕ್ತಪರಿಚಲನೆ ಹೆಚ್ಚಿಸಲೂ ನೆರವಾಗುತ್ತದೆ. ಇದೇ ರೀತಿ ತಲೆ ಹಾಗೂ ಕುತ್ತಿಗೆಯ ಹಿಂಭಾಗದ ಸ್ನಾಯುಗಳ ಸೆಳೆತದಿಂದಲೂ ಕೆಲವೊಮ್ಮೆ ನರಗಳು ಸಂಕುಚಿತಗೊಳ್ಳುತ್ತವೆ. ಈ ಭಾಗದಲ್ಲಿ ತಣ್ಣನೆಯ ನೀರಿನಿಂದ ತೋಯ್ದಿರುವ ಬಟ್ಟೆಯ ಪಟ್ಟಿಯನ್ನು ಇರಿಸಿಕೊಳ್ಳುವ ಮೂಲಕ ಸೆಳೆತ ಕಡಿಮೆಯಾಗಿ ರಕ್ತಪರಿಚಲನೆ ಹೆಚ್ಚುವ ಮೂಲಕವೂ ತಲೆನೋವು ಕಡಿಮೆಯಾಗುತ್ತದೆ. ಈ ವಿಧಾನ ಸಾಮಾನ್ಯವಾಗಿ ತಲೆಯ ಹಿಂಭಾಗ ಹಾಗೂ ಹಣೆಯ ಪಕ್ಕದಲ್ಲಿ ಎದುರಾಗುವ ನೋವುಗಳಿಗೆ ಸೂಕ್ತವಾಗಿದೆ.

  ಪುದಿನಾ ಟೀ ಸೇವಿಸಿ

  ಪುದಿನಾ ಟೀ ಸೇವಿಸಿ

  ಪುದಿನಾ ದಲ್ಲಿರುವ ಪೋಷಕಾಂಶಗಳು ಮೆದುಳಿನ ನರಗಳನ್ನು ಸಡಿಲಿಸಿ ರಕ್ತಪರಿಚಲನೆ ಸುಗಮವಾಗಲು ನೆರವಾಗುತ್ತವೆ. ಈ ಟೀಯಲ್ಲಿರುವ ಪೋಷಕಾಂಶಗಳು ಶೀತದ ವಿರುದ್ಧ ಹೋರಾಡುವ ಮೂಲಕ ಶೀತದಿಂದಾಗಿ ಎದುರಾಗುವ ತಲೆನೋವನ್ನು ಕಡಿಮೆ ಮಾಡಲು ಈ ವಿಧಾನ ಹೆಚ್ಚು ಸೂಕ್ತವಾಗಿದೆ. ನೋವು ನಿವಾರಕ ಗುಳಿಗೆ ಸೇವಿಸುವ ಮೊದಲು ಒಂದು ಲೋಟ ಕುದಿಯುವ ನೀರಿಗೆ ಕೆಲವು ಪುದಿನಾ ಎಲೆಗಳನ್ನು ಕೊಂಚವೇ ಜಜ್ಜಿ ಒಂದೆರಡು ನಿಮಿಷ ಬಿಟ್ಟು ಒಂದೆರಡು ತೊಟ್ಟು ಲಿಂಬೆರಸ ಬೆರೆಸಿ ಕುಡಿಯುವ ಮೂಲಕ ಶೀತದಿಂದಾಗಿ ಎದುರಾಗಿದ್ದ ತಲೆನೋವು ಕ್ಷಣಗಳಲ್ಲಿಯೇ ಇಲ್ಲವಾಗುತ್ತದೆ.

  ನೀಲಗಿರಿ ಎಣ್ಣೆಯನ್ನು ಆಘ್ರಾಣಿಸಿ

  ನೀಲಗಿರಿ ಎಣ್ಣೆಯನ್ನು ಆಘ್ರಾಣಿಸಿ

  ನೀಲಗಿರಿ ಎಣ್ಣೆ ಒಂದು ಅದ್ಭುತವಾದ ಕಫಹಾರಿ (expectorant) ಔಷಧಿಯಾಗಿದೆ. ಇದು ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ಮೂಗಿನ ನಾಳಗಳನ್ನು ವಿಸ್ತರಿಸಲು ನೆರವಾಗುತ್ತದೆ. ಇದರಿಂದ ಮೂಗಿನ ಹಿಂಭಾಗದ ಕುಹರ (ಸೈನಸ್) ದಲ್ಲಿ ಯಾವುದೇ ಕಲ್ಮಶ ಅಥವಾ ಕಫ ತುಂಬಿಕೊಂಡು ಸೋಂಕು ಎದುರಾಗಿದ್ದರೆ ಅದು ಕರಗಿ ವಿಸರ್ಜನೆಗೊಳ್ಳುವ ಮೂಲಕ ತಲೆನೋವು ಸಹಾ ಕಡಿಮೆಯಾಗುತ್ತದೆ. ಅಲ್ಲದೇ ಈ ಎಣ್ಣೆಯ ಪರಿಮಳ ಮೆದುಳಿಗೂ ಮುದ ನೀಡುವಂತಹದ್ದಾಗಿದ್ದು ಮೆದುಳಿಗೆ ತಲುಪುವ ನೋವಿನ ಸೂಚನೆಗಳನ್ನೂ ಇಲ್ಲವಾಗಿಸುತ್ತದೆ. ಒಂದು ಸ್ವಚ್ಛವಾದ ಕರವಸ್ತ್ರದ ಮೇಲೆ ಸುಮಾರು ಮೂರು ನಾಲ್ಕು ಹನಿ ನೀಲಗಿರಿ ಎಣ್ಣೆಯನ್ನು ಹಾಕಿ ತಕ್ಷಣವೇ ಇದರ ಪರಿಮಳವನ್ನು ಪೂರ್ಣವಾಗಿ ಒಳಗೆಳೆದುಕೊಳ್ಳಬೇಕು. ಪರ್ಯಾಯವಾಗಿ ಹಣೆಯ ಪಕ್ಕದ ಭಾಗದಲ್ಲಿ (ಅಂದರೆ ಕನ್ನಡಕದ ಕಡ್ಡಿ ತಾಕುವ ಭಾಗ) ಮೂರು ಅಥವಾ ನಾಲ್ಕು ಹನಿ ನೀಲಗಿರಿ ಎಣ್ಣೆಯನ್ನು ಹಚ್ಚಿದಾಗಲೂ ತಲೆನೋವು ಕಡಿಮೆಯಾಗುತ್ತದೆ. ಜೊತೆಗೇ ಎದೆ ಮತ್ತು ಬೆನ್ನಿನ ಮೇಲ್ಭಾಗದಲ್ಲಿಯೂ ಕೊಂಚ ಹಚ್ಚಿಕೊಳ್ಳುವ ಮೂಲಕ ಶೀತ ಹಾಗೂ ತಲೆನೋವು ಕಡಿಮೆಯಾಗುತ್ತದೆ.

  ಶುಂಠಿಯ ಟೀ ಕುಡಿಯಿರಿ

  ಶುಂಠಿಯ ಟೀ ಕುಡಿಯಿರಿ

  ಶುಂಠಿಯ ಉರಿಯೂತ ನಿವಾರಕ ಗುಣ ಮೆದುಳಿನಲ್ಲಿ ಎದುರಾಗಿದ್ದ ಊತವನ್ನು ಕಡಿಮೆ ಮಾಡುವ ಮೂಲಕ ತಲೆನೋವು ಕಡಿಮೆಮಾಡುತ್ತದೆ. ನಮ್ಮ ಮೆದುಳಿನ ಒಂದು ಭಾಗವಾದ prostaglandins ಗಳು ನೋವಿನ ಸಂಕೇತವನ್ನು ಸ್ವೀಕರಿಸಿ ನೋವಿನ ಅನುಭವವನ್ನು ನೀಡುವ ಭಾಗಗಳಾಗಿದ್ದು ಈ ಭಾಗಕ್ಕೆ ನೋವಿನ ಸಂಕೇತಗಳು ತಲುಪದಂತೆ ಮಾಡುವ ಮೂಲಕ ಶುಂಠಿ ತಲೆನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದಕ್ಕಾಗಿ ಸುಮಾರು ಅರ್ಧ ಇಂಚು ಶುಂಠಿಯನ್ನು ಒಂದು ಕಪ್ ನೀರಿನಲ್ಲಿ ಸುಮಾರು ಎರಡು ನಿಮಿಷಗಳವರೆಗೆ ಕುದಿಸಿ ಸೋಸಿ ಕುಡಿಯಿರಿ.

  ಹಣೆ ಮತ್ತು ಹಣೆಯ ಪಕ್ಕದ ಭಾಗಕ್ಕೆ ದಾಲ್ಚಿನ್ನಿ ಪುಡಿಯ ಲೇಪನ ಹಚ್ಚಿ

  ಹಣೆ ಮತ್ತು ಹಣೆಯ ಪಕ್ಕದ ಭಾಗಕ್ಕೆ ದಾಲ್ಚಿನ್ನಿ ಪುಡಿಯ ಲೇಪನ ಹಚ್ಚಿ

  ದಾಲ್ಚಿನ್ನಿಯ ಲೇಪನವನ್ನು ಹಚ್ಚಿಕೊಳ್ಳುವ ಮೂಲಕ ನಮ್ಮ ದೇಹದ ಸ್ನಾಯುಗಳನ್ನು ಸಡಿಲಗೊಳಿಸಲು ಸಾಧ್ಯವಾಗುತ್ತದೆ. ಹಣೆ ಮತ್ತು ಹಣೆಯ ಪಕ್ಕದ ಭಾಗದಲ್ಲಿ ತೆಳುವಾಗಿ ಹಚ್ಚಿಕೊಂದಾಗ ಇದು ಈ ಭಾಗದಲ್ಲಿರುವ ಸ್ನಾಯುಗಳನ್ನು ಸಡಿಲಿಸಿ ನರಗಳ ಮೂಲಕ ರಕ್ತಸಂಚಾರ ಸುಗಮಗೊಳ್ಳಲು ನೆರವಾಗುತ್ತದೆ. ಇದರ ಪರಿಮಳ ಸಹಾ ಮೆದುಳಿಗೆ ಮುದ ನೀಡುವಂತಹದ್ದಾಗಿದ್ದು ಕುಹರದ ಸೋಂಕು ಕಡಿಮೆ ಮಾಡಲೂ ನೆರವಾಗುತ್ತದೆ. ಇದಕ್ಕಾಗಿ ಸುಮಾರು ಎರಡು ಮಧ್ಯಮ ಗಾತ್ರದ ದಾಲ್ಚಿನ್ನಿ ಚೆಕ್ಕೆಗಳನ್ನು ಗ್ರೈಂಡರ್ ನಲ್ಲಿ ಒಣದಾಗಿ ಪುಡಿಮಾಡಿ. ಈ ಪುಡಿಯನ್ನು ಕೊಂಚವೇ ನೀರಿನಲ್ಲಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನವನ್ನು ಹಣೆ ಮತ್ತು ಹಣೆಯ ಪಕ್ಕ ಹಚ್ಚಿಕೊಂಡು ಕೊಂಚ ಹೊತ್ತು ವಿರಮಿಸಿ.

  ತುಳಸಿ ಎಲೆಗಳ ಟೀ ಹಾಗೂ ಹಬೆ

  ತುಳಸಿ ಎಲೆಗಳ ಟೀ ಹಾಗೂ ಹಬೆ

  ತುಳಸಿ ಒಂದು ಅದ್ಭುತ ಔಷಧೀಯ ಮೂಲಕೆಯಾಗಿದ್ದು ಇದರ ಉರಿಯೂತ ನಿವಾರಕ ಗುಣ ಹಾಗೂ ತಡೆತಡೆದು ಬರುವ ನೋವನ್ನು ಗುಣಪಡಿಸುವ ಗುಣದ ಮೂಲಕ ತಲೆನೋವನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ. ಇದರ ಬಳಕೆಯಿಂದ ತಲೆಯ ಸ್ನಾಯುಗಳು ಸಡಿಲಗೊಂಡು ತಕ್ಷಣವೇ ತಲೆ ನೋವನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ತಲೆನೋವು ತಲೆಯ ಮಧ್ಯಭಾಗದಲ್ಲಿದ್ದು ವಾಕರಿಕೆ ಅಥವಾ ವಾಂತಿಯೂ ಆಗಿದ್ದರೆ ಈ ವಿಧಾನ ಸೂಕ್ತವಾಗಿದೆ.

  ತುಳಸಿಯ ಟೀ

  ಒಂದು ಲೋಟ ನೀರಿನಲ್ಲಿ ಕೊಂಚ ತುಳಸಿ ಎಲೆಗಳನ್ನು ಹಾಕಿ ಸುಮಾರು ಐದು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ತಣಿಸಿ ಉಗುರುಬೆಚ್ಚಗಾದಾಗ ಈ ನೀರನ್ನು ಸೋಸಿ ಎಲೆಗಳನ್ನು ನಿವಾರಿಸಿ ನೀರನ್ನು ಕುಡಿಯಿರಿ.

  ತುಳಸಿಯ ಹಬೆ:

  ಒಂದು ಅಗಲವಾದ ಪಾತ್ರೆಯಲ್ಲಿ ಕುದಿನೀರನ್ನು ಹಾಕಿ ಪಾತ್ರೆಯನ್ನು ನೆಲದ ಮೇಲಿಡಿ. ಈ ಪಾತ್ರೆಯ ಮೇಲೆ ಮುಖ ಬರುವಂತೆ ಇರಿಸಿ ಒಂದು ದಪ್ಪನೆಯ ಟವೆಲ್ ಅಥವಾ ಬಟ್ಟೆಯಿಂದ ತಲೆಯನ್ನು ಆವರಿಸಿ ಹಬೆ ಹೊರಹೋಗಂದತೆ ಮಾಡಿ. ಈಗ ಕೊಂಚ ತುಳಸಿ ಎಲೆಗಳನ್ನು ಕೊಂಚವೇ ಜಜ್ಜಿ ಈ ನೀರಿಗೆ ಹಾಕಿ ಈಗ ಏಳುವ ಹಬೆಯನ್ನು ದೀರ್ಘ ಉಸಿರಾಟದ ಮೂಲಕ ಒಳಗೆಳೆದುಕೊಳ್ಳಿ. ದಿನಕ್ಕೆ ಕೆಲವಾರು ಬಾರಿ ಈ ವಿಧಾನ ಅನುಸರಿಸಿ.

  ಹಣೆಯ ಭಾಗದಲ್ಲಿ ಲವಂಗದ ಎಣ್ಣೆಯ ಮಸಾಜ್ ಮಾಡಿ

  ಹಣೆಯ ಭಾಗದಲ್ಲಿ ಲವಂಗದ ಎಣ್ಣೆಯ ಮಸಾಜ್ ಮಾಡಿ

  ಒಂದು ವೇಳೆ ಖಿನ್ನತೆಯ ಕಾರಣದಿಂದಾಗಿ ಈ ತಲೆನೋವು ಎದುರಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಲವಂಗದ ಎಣ್ಣೆ ಮುದನೀಡುವ ಹಾಗೂ ನೋವು ನಿವಾರಕ ಎಣ್ಣೆಯಾಗಿದ್ದು ಖಿನ್ನತೆಯಿಂದ ಹೊರಬರಲೂ ನೆರವಾಗುತ್ತದೆ. ಹಣೆಯ ಹಾಗೂ ಹಣೆಯ ಪಕ್ಕದ ಭಾಗದಲ್ಲಿ ತೆಳುವಾಗಿ ಈ ಎಣ್ಣೆಯ ಕೆಲವು ಹನಿಗಳಿಂದ ನಯವಾಗಿ ಮಸಾಜ್ ಮಾಡುವ ಮೂಲಕ ಈ ಭಾಗದ ನರಗಳು ಸಡಿಲಗೊಂಡು ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ತಲೆನೋವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಕನಿಷ್ಟ ದಿನಕ್ಕೆ ಮೂರು ಬಾರಿ ಅನುಸರಿಸಿ.

  ಸೇಬಿನ ಶಿರ್ಕಾದ ಹಬೆ

  ಸೇಬಿನ ಶಿರ್ಕಾದ ಹಬೆ

  ಸೇವಿನ ಶಿರ್ಕಾ (Apple cider vinegar) ಅನ್ನು ಶತಮಾನಗಳಿಂದಲೂ ಕುಹರದ ಸೋಂಕಿನಿಂದ ಉಂಟಾಗುವ ತಲೆನೋವಿನ ಪರಿಹಾರಕ್ಕಾಗಿ ಉಪಯೋಗಿಸಲಾಗುತ್ತಿದೆ. ಇದರಲ್ಲಿರುವ ಅಸೆಟಿಕ್ ಆಮ್ಲ ಕುಹರದ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಇಲ್ಲಿ ಉಂಟಾಗಿದ್ದ ಸೋಂಕಿನ ದಟ್ಟಣೆಯನ್ನು ಸಡಿಲಿಸಿ ಕರಗಿಸಲು ನೆರವಾಗುತ್ತದೆ ಹಾಗೂ ಕುಹರದ ಭಾಗ ತೆರೆದು ಇಲ್ಲಿ ಉಂಟಾಗಿದ್ದ ಉರಿಯೂತ ಹಾಗೂ ಸೋಂಕಿನ ಮೂಲಕ ಎದುರಾಗಿದ್ದ ತಲೆನೋವನ್ನೂ ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ಕುದಿನೀರು ಹಾಕಿ ಇದಕ್ಕೆ ಒಂದು ದೊಡ್ಡ ಚಮಚದಷ್ಟು ಸೇಬಿನ ಶಿರ್ಕಾ ಬೆರೆಸಿ ಇದರ ಹಬೆಯನ್ನು ತಲೆಯ ಮೇಲೆ ದಪ್ಪ ಬಟ್ಟೆಯೊಂದನ್ನು ಆವರಿಸಿ ದೀರ್ಘ ಉಸಿರಾಟದ ಮೂಲಕ ಒಳಗೆಳೆದುಕೊಳ್ಳಿ.

  ಥೈಮ್ ಎಣ್ಣೆಯ ಪಟ್ಟಿ

  ಥೈಮ್ ಎಣ್ಣೆಯ ಪಟ್ಟಿ

  ಒಂದು ವೇಳೆ ಒತ್ತಡದ ಕಾರಣ ತಲೆನೋವು ಎದುರಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ ಥೈಮ್ ಎಣ್ಣೆ (Thyme Oil) ಒಂದು ಅದ್ಭುತವಾದ ಒತ್ತಡ ನಿವಾರಕವಾಗಿದೆ. ಇದು ನರಗಳನ್ನು ಸಡಿಲಿಸಿ ರಕ್ತಪರಿಚಲನೆ ಸುಗಮಗೊಳ್ಳಲು ನೆರವಾಗುತ್ತದೆ ಹಾಗೂ ತಲೆನೋವು ಕಡಿಮೆ ಮಾಡುತ್ತದೆ. ಇದಕ್ಕಾಗಿ ಒಂದು ಬಟ್ಟೆಯನ್ನು ಇಸ್ತ್ರಿ ಮಾಡಿ ಸಾಕಷ್ಟು ಬಿಸಿ ಮಾಡಿ ನಾಲ್ಕಾರು ಬಾರಿ ಮಡಚಿ ಪಟ್ಟಿಯಾಗಿಸಿ. ಬಿಸಿಯಾಗಿದ್ದಂತೆಯೇ ಈ ಪಟ್ಟಿಯ ಮೇಲೆ ಕೆಲವು ತೊಟ್ಟು ಥೈಮ್ ಎಣ್ಣೆಯನ್ನು ಚಿಮುಕಿಸಿ ತಕ್ಷಣವೇ ಹಣೆಯ ಮತ್ತು ಹಣೆಯ ಪಕ್ಕದ ಭಾಗಕ್ಕೆ ತಾಕುವಂತೆ ಕೊಂಚವೇ ಒತ್ತಡದಿಂದ ಇರಿಸಿ. ತಣ್ಣಗಾದ ಬಳಿಕ ಮತ್ತೊಮ್ಮೆ ಬಿಸಿಮಾಡಿ ಹಣೆಯ ಮೇಲಿರಿಸಿ. ನಾಲ್ಕಾರು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ತಲೆನೋವು ತಕ್ಷಣವೇ ಕಡಿಮೆಯಾಗುತ್ತದೆ.

  English summary

  Follow These Tips To Get Quick Relief From Headache

  Headaches are caused due to various reasons such as seasonal changes or change in weather and temperature. However, they are more common in the winters. When we suddenly step out in the freezing cold, the trigeminal nerve in our brain contracts and triggers a headache. Also, the cold storm in the winters hit our ear drum, causing ear pain and eventually a headache. Headaches are extremely annoying, especially for people with busy lives.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more