ನಿಮ್ಮ ಕಿವಿಯ ಮೇಣದ ಬಣ್ಣ ಆರೋಗ್ಯದ ವಿವರ ನೀಡಬಲ್ಲದು!

By Arshad
Subscribe to Boldsky

ಕಿವಿಯೊಳಗೆ ಮೇಣದಂತಹ ವಸ್ತು ಉತ್ಪತ್ತಿಯಾಗುತ್ತಲೇ ಇರುತ್ತದೆ. ಇದು ಹೆಚ್ಚಾದಾಗ ಆಗಾಗ ನಿವಾರಿಸಿ ಸ್ವಚ್ಛಗೊಳಿಸುತ್ತಾ ಇರಬೇಕು. ಆದರೆ ಕಿವಿಯಲ್ಲಿ ಉತ್ಪತ್ತಿಯಾಗುವ ಈ ಮೇಣಕ್ಕೂ ತನ್ನದೇ ಆದ ಉದ್ದೇಶವಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಇದರ ಬಣ್ಣ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಬಲ್ಲುದು. ಹಿಂದೆ ಕಿವಿ ಚಮಚ ಎಂಬ ಚಿಕ್ಕ ಉಪಕರಣ ಸಿಗುತ್ತಿತ್ತು. ಇದನ್ನು ಸರಿಯಾಗಿ ಉಪಯೋಗಿಸದಿದ್ದರೆ ಕಿವಿಯ ಸೂಕ್ಷ್ಮ ಭಾಗಗಳಿಗೆ ಹಾನಿಯುಂಟಾಗಬಹುದು ಆದ್ದರಿಂದ ಹತ್ತಿ ಸುತ್ತಿರುವ ಕಡ್ಡಿಗಳೇ ಸೂಕ್ತ. ಈ ಮೇಣಕ್ಕೆ cerumen ಎಂದು ಕರೆಯುತ್ತಾರೆ.

ಇದು ವಾಸ್ತವವಾಗಿ ಕೊಬ್ಬಿನ ಆಮ್ಲಗಳ ಘನರೂಪವಾಗಿದ್ದು ಉದ್ದನೆಯ ಸರಪಳಿಯಂತಿರುತ್ತದೆ. ಜೊತೆಗೇ ಇದರಲ್ಲಿರುವ ಸ್ಕ್ವಾಲೀನ್ ಹಾಗೂ ಆಲ್ಕೋಹಾಲ್ ಈ ಮೇಣಕ್ಕೆ ಜಿಗುಟುತನ ನೀಡುತ್ತದೆ. ಈ ಮೇಣ ಕಿವಿಯ ಒಳಭಾಗವನ್ನು ತೆಳುವಾಗಿ ಆವರಿಸಿ ಕಿವಿಯ ಸೂಕ್ಷ್ಮಚರ್ಮಕ್ಕೆ ಆರ್ದ್ರತೆಯಿಂದ ಸೋಂಕು ಉಂಟಾಗದಂತೆ ಪರದೆಯ ರೂಪದಲ್ಲಿ ರಕ್ಷಣೆ ಒದಗಿಸುತ್ತದೆ.

ಮನೆಮದ್ದು: ಕಿವಿನೋವಿಗೆ ಹಳ್ಳಿ ಮದ್ದು, ತ್ವರಿತ ಸಾಂತ್ವನ

ಆದರೆ ಹೆಚ್ಚಿನವರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ನೇರವಾಗಿ ಕಣ್ಣಿಗೆ ಕಾಣದೇ ಇರುವ ಈ ಮೇಣದಿಂದ ಆಗುವ ತೊಂದರೆಯಾದರೂ ಏನು ಎಂಬುದೇ ಹೆಚ್ಚಿನವರ ಪ್ರಶ್ನೆ. ಆದರೆ ಈ ಪದರ ಹೆಚ್ಚು ದಪ್ಪನಾದರೆ ಇದನ್ನು ಸೇವಿಸಲೆಂದೇ ಕೆಲವು ಕ್ರಿಮಿಗಳು ಆಗಮಿಸಬಹುದು. ಅಲ್ಲದೇ ಇದರ ಬಣ್ಣ ನಮ್ಮ ಆರೋಗ್ಯದ ಬಗ್ಗೆ ಹಲವು ಮಹತ್ವದ ಸೂಚನೆಗಳನ್ನೂ ನೀಡುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ....

ಬೂದು ಬಣ್ಣದಲ್ಲಿದ್ದರೆ

ಬೂದು ಬಣ್ಣದಲ್ಲಿದ್ದರೆ

ಒಂದು ವೇಳೆ ಈ ಮೇಣ ಬೂದು ಬಣ್ಣದಲ್ಲಿದ್ದರೆ ಹಾಗೂ ಇತರ ಯಾವುದೇ ಚಿಹ್ನೆಗಳನ್ನು ತೋರದೇ ಇದ್ದರೆ ಇದು ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ತೋರಿಸುತ್ತದೆ. ವಾಸ್ತವವಾಗಿ ಇದು ಗಾಳಿಯಲ್ಲಿರುವ ಧೂಳನ್ನು ಈ ಮೇಣ ತನ್ನ ಮೇಲೆ ಮೆತ್ತಿಸಿಕೊಂಡಿರುವುದರಿಂದ ಈ ಬಣ್ಣ ಪಡೆದಿರುತ್ತದೆ. ಹೊಗೆ, ಧೂಳು ಹಾಗೂ ಇತರ ಕಣಗಳು ಗಾಳಿಯಲ್ಲಿ ಹೆಚ್ಚಿರುವ ಸ್ಥಳಗಳಲ್ಲಿರುವವರ ಕಿವಿಯಲ್ಲಿ ಇದು ಸಾಮಾನ್ಯವಾಗಿದೆ.

ರಕ್ತಮಿಶ್ರಿತವಾಗಿದ್ದರೆ

ರಕ್ತಮಿಶ್ರಿತವಾಗಿದ್ದರೆ

ಒಂದು ವೇಳೆ ನೀವು ಕಿವಿಯನ್ನು ಸ್ವಚ್ಛಗೊಳಿಸುವಾಗ ತಾಜಾ ರಕ್ತ ಅಥವಾ ಹಿಂದೆ ರಕ್ತ ಒಸರಿ ಗಟ್ಟಿಯಾಗಿರುವ ಪಕಳೆ ಏನಾದರೂ ಕಂಡುಬಂದರೆ ಇದು ಕಿವಿಯ ತಮಟೆಗೆ ಆಗಿರುವ ಗಾಯದ ಮೂಲಕ ರಕ್ತಸ್ರಾವವಾಗಿದೆ ಎಂದು ಸ್ಥೂಲವಾಗಿ ಅಂದಾಜಿಸಬಹುದು. ಈ ಪರಿಸ್ಥಿತಿ ಇದ್ದರೆ ನಿಮ್ಮ ಕಿವಿ ಸೋಂಕಿಗೊಳಗಾಗುವ ಸಾಧ್ಯತೆ ಅಪಾರವಾಗಿರುತ್ತದೆ. ಇದು ಒಟಿಟಿಸ್ (otitis) ಅಥವಾ ಕೀವು ತುಂಬಿಕೊಳ್ಳುವ ತೊಂದರೆಗೆ ಕಾರಣವಾಗಬಹುದು. ಆದ್ದರಿಂದ ತಡಮಾಡದೇ ತಕ್ಷಣ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು.

ಕಂದು ಬಣ್ಣದಲ್ಲಿದ್ದರೆ

ಕಂದು ಬಣ್ಣದಲ್ಲಿದ್ದರೆ

ಒಂದು ವೇಳೆ ಈ ಮೇಣ ಹೆಚ್ಚಿನ ಪ್ರಮಾಣದಲ್ಲಿದ್ದು ಕಂದುಬಣ್ಣದಲ್ಲಿದ್ದರೆ ಇದು ನಿಮ್ಮ ದೇಹ ಅತ್ಯಂತ ಒತ್ತಡದ ಸಮಯವನ್ನು ಹಾದು ಬಂದಿದೆ ಎಂದು ತಿಳಿಯಬೇಕು. ಆದ್ದರಿಂದ ಆಗಾಗ ನಿಸರ್ಗದೊಡನೆ ಒಡನಾಟವಿಟ್ಟುಕೊಂಡು ಮನಸ್ಸನ್ನು ಹಗುರಾಗಿಸಿಕೊಳ್ಳುತ್ತಾ ಇರಬೇಕು.

ಕಪ್ಪು ಬಣ್ಣದಲ್ಲಿದ್ದರೆ

ಕಪ್ಪು ಬಣ್ಣದಲ್ಲಿದ್ದರೆ

ಇದು ಯಾವಾಗಲೋ ಒಂದು ಬಾರಿ ಮಾತ್ರವೇ ಆಗಿದ್ದರೆ ಈ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಆದರೆ ಇದರೊಂದಿಗೆ ಕಿವಿಯಲ್ಲಿ ತುರಿಕೆ ಇದ್ದರೆ ಮಾತ್ರ, ಹಾಗೂ ಇದು ಸತತವಾಗಿದ್ದರೆ ಮಾತ್ರ ವೈದ್ಯರ ಸಲಹೆ ಅಗತ್ಯ. ಕಪ್ಪು ಬಣ್ಣದ ಮೇಣ ಸಾಮಾನ್ಯವಾಗಿ ಶಿಲೀಂಧ್ರದ ಸೋಂಕಿನ ಕಾರಣದಿಂದ ಉಂಟಾಗುತ್ತದೆ.

ಬಿಳಿಯ ಬಣ್ಣದಲ್ಲಿದ್ದರೆ

ಬಿಳಿಯ ಬಣ್ಣದಲ್ಲಿದ್ದರೆ

ಒಂದು ವೇಳೆ ಮೇಣ ಬಿಳಿಯ ಅಥವಾ ತಿಳಿಹಳದಿ ಬಣ್ಣದಲ್ಲಿದ್ದರೆ ಇದು ದೇಹದಲ್ಲಿ ವಿಟಮಿನ್ನುಗಳು ಹಾಗೂ ಸೂಕ್ಷ್ಮಪೋಷಕಾಂಶಗಳ ಕೊರತೆಯನ್ನು ಬಿಂಬಿಸುತ್ತದೆ. ವಿಶೇಷವಾಗಿ ಕಬ್ಬಿಣ ಮತ್ತು ತಾಮ್ರದ ಕೊರತೆಯಿಂದ ಬಿಳಿ ಬಣ್ಣ ಕಾಣಿಸಿಕೊಳ್ಳುತ್ತದೆ. ಇದನ್ನು ಸರಿಪಡಿಸಲು ಈ ಅಂಶಗಳು ಹೆಚ್ಚಿರುವ ಆಹಾರಗಳಾದ ಬೀನ್ಸ್ ಹಾಗೂ ಓಟ್ಸ್ ರವೆಯನ್ನು ಹೆಚ್ಚಾಗಿ ಸೇವಿಸಬೇಕು.

ಮೇಣ ದುರ್ಗಂಧದಿಂದ ಕೂಡಿದ್ದರೆ

ಮೇಣ ದುರ್ಗಂಧದಿಂದ ಕೂಡಿದ್ದರೆ

ಒಂದು ವೇಳೆ ಮೇಣದಿಂದ ಸಹಿಸಲಸಾಧ್ಯವಾದ ದುರ್ಗಂಧ ಹೊಮ್ಮುತ್ತಿದ್ದರೆ ಇದು ನಡುಕಿವಿಯಲ್ಲಿ ಭಾರೀ ಸೋಂಕು ಉಂಟಾಗಿರುವುದನ್ನು ಸೂಚಿಸುತ್ತದೆ. ಬರೆಯ ದುರ್ಗಂಧ ಮಾತ್ರವಲ್ಲ, ಕಿವಿಯ ಒಳಗಿನಿಂದ ಯಾವುದೋ ಯಂತ್ರ ಚಲಿಸುತ್ತಿರುವಂತೆ ಶಬ್ದವೂ ಕಿವಿಯೊಳಗಿನಿಂದ ಆಗಾಗ ಕೇಳಿಬರುತ್ತದೆ. ಹೀಗಿದ್ದರೆ ಕಿವಿಯನ್ನು ತಾವಾಗಿ ಸ್ವಚ್ಛಮಾಡದೇ, ತಡಮಾಡದೇ ಕಿವಿ-ಮೂಗು-ಗಂಟಲು ತಜ್ಞರ ಬಳಿ ಹೋಗಿಯೇ ತಪಾಸಣೆಗೊಂಡು ಚಿಕಿತ್ಸೆ ಪಡೆಯಬೇಕು.

ಮೇಣ ದ್ರವರೂಪದಲ್ಲಿದ್ದರೆ

ಮೇಣ ದ್ರವರೂಪದಲ್ಲಿದ್ದರೆ

ಒಂದು ವೇಳೆ ಇದು ದ್ರವರೂಪದ, ಸ್ನಿಗ್ಧವಾಗಿದ್ದರೆ ಹಾಗೂ ಇತ್ತೀಚೆಗೆ ಕಂಡುಬಂದರೆ ಇದು ನಿಮ್ಮ ಕಿವಿಯೊಳಗೆ ಉರಿಯೂತವಾಗಿರುವ ಸೂಚನೆಯನ್ನು ನೀಡುತ್ತದೆ. ಬೆಳಿಗೆದ್ದಾಗ ಕಿವಿಯಿಂದ ದ್ರವ ಸೋರಿರುವುದನ್ನು ಇತರರು ಸ್ಪಷ್ಟವಾಗಿಯೇ ಗಮನಿಸುತ್ತಾರೆ. ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.

ತೀರಾ ಒಣಗಿದ್ದರೆ

ತೀರಾ ಒಣಗಿದ್ದರೆ

ದೇಹದಲ್ಲಿ ಕೊಬ್ಬಿನ ಸಂಗ್ರಹ ಕಡಿಮೆ ಇದ್ದರೆ ಮೇಣವೂ ಒಣಗಿರುತ್ತದೆ. ಇನ್ನೊಂದು ಕಾರಣವೆಂದರೆ ತುರಿಕೆಯುಂಟು ಮಾಡುವ dermatitis ಎಂಬ ಚರ್ಮರೋಗ ಹಾಗೂ ಇತರ ಚರ್ಮಸಂಬಂಧಿತ ಕಾರಣಗಳಿಂದಲೂ ಒಣಚರ್ಮ ಉಂಟಾಗಿರುವ ಪರಿಣಾಮವಾಗಿ ಮೇಣವೂ ಒಣಗಬಹುದು.

ಗಾಢಬಣ್ಣದ, ಅಂಟಾಗಿದ್ದರೆ

ಗಾಢಬಣ್ಣದ, ಅಂಟಾಗಿದ್ದರೆ

ಒಂದು ವೇಳೆ ಇದು ಇತರ ಸಮಯಕ್ಕಿಂತ ಈಗ ಕೊಂಚ ಗಾಢವಾಗಿದ್ದು ಕೊಂಚ ಅಂಟಂಟಾಗಿರುವಂತೆ ತೋರಿದರೆ ದೇಹ ಅಗತ್ಯಕ್ಕೂ ಹೆಚ್ಚು ಬೆವರುತ್ತಿದೆ ಎಂದು ಸೂಚಿಸುತ್ತಿದೆ. ಬಣ್ಣ ಗಾಢವಾಗಿದ್ದಷ್ಟೂ ಹೆಚ್ಚು ಬೆವರು ಹರಿದಿದೆ ಎಂದು ತಿಳಿಯಬಹುದು. ಹೆಚ್ಚು ಬೆವರಲು ಪ್ರಮುಖ ಕಾರಣವಿಲ್ಲದಿದ್ದ ಪಕ್ಷದಲ್ಲಿ ಈ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ದೇಹವೇಕೆ ಅಗತ್ಯಕ್ಕೂ ಹೆಚ್ಚು ಬೆವರುತ್ತಿದೆ ಎಂಬುದನ್ನು ಮಾತ್ರ ವೈದ್ಯರೇ ಸೂಕ್ತ ಪರೀಕ್ಷೆಗಳ ಮೂಲಕ ನಿರ್ಧರಿಸುತ್ತಾರೆ.

ಗಾಢ ಕಂದು ಅಥವ ಕಪ್ಪು ಬಣ್ಣ ಹೊಂದಿದ್ದರೆ

ಗಾಢ ಕಂದು ಅಥವ ಕಪ್ಪು ಬಣ್ಣ ಹೊಂದಿದ್ದರೆ

ಮೇಣ ಗಾಢಕಂದು ಬಣ್ಣ ಹೊಂದಿದ್ದರೂ ಇದು ಕೊಂಚ ಆತಂಕವುಂಟುಮಾಡುತ್ತದೆ. ಆದರೆ ಗಾಭರಿಗೆ ಅಗತ್ಯವಿಲ್ಲ. ಇಲ್ಲಿ ಅಗತ್ಯಕ್ಕೂ ಹೆಚ್ಚು ಪ್ರಮಾಣದಲ್ಲಿ ಮೇಣ ಉತ್ಪತ್ತಿಯಾಗಿದೆ ಎಂದು ತಿಳಿದುಕೊಳ್ಳಬಹುದು. ಅಂದರೆ ಇದಕ್ಕೆ ನಾವು ಹೆಚ್ಚಿನ ಒತ್ತಡಕ್ಕೊಳಗಾಗಿದ್ದ ಕಾರಣವಿರಬಹುದು. ಅಥವಾ ಸೋಮಾರಿತನದಿಂದ ಬಹುಕಾಲದವರೆಗೆ ಮೇಣವನ್ನು ನಿವಾರಿಸದೇ ಇದ್ದ ಕಾರಣ ಹಳೆಯ ಮೇಣ ಒಣಗಿ ಹೊಸಮೇಣದೊಂದಿಗೆ ಬೆರೆತು ಗಾಢ ಬಣ್ಣ ಪಡೆದಿರಬಹುದು. ಇದನ್ನು ತೆಗೆದ ಬಳಿಕ ಗಾಳಿಯ ಸಂಪರ್ಕ ಪಡೆದೊಡನೇ ಹಳೆಯ ಮೇಣದ ಬಣ್ಣ ಗಾಢವಾಗುತ್ತದೆ ಅಷ್ಟೇ! ಇದಕ್ಕೆ ಪರಿಹಾರ-ಸೋಮಾರಿತನವನ್ನು ಓಡಿಸುವುದು.

ಸೋರುವ ಮೇಣ

ಸೋರುವ ಮೇಣ

ಕೆಲವೊಮ್ಮೆ ಮೇಣ ಸ್ವತಃ ಕರಗಿ ಹೊರಬರುತ್ತದೆ. ಇದು ಸ್ವಾಭಾವಿಕವಾಗಿದ್ದು ದೇಹವೇ ಹಳೆಯ ಮೇಣವನ್ನು ನಿವಾರಿಸುವ ಒಂದು ತಂತ್ರವಾಗಿದೆ. ಆದರೆ ಇದು ಅತ್ಯಲ್ಪ ಪ್ರಮಾಣದಲ್ಲಿದ್ದು ಹೆಚ್ಚಿನ ಸಮಯದಲ್ಲಿ ಒಂದೆರಡು ತೊಟ್ಟುಗಳಷ್ಟು ಮಾತ್ರವೇ ಇರುತ್ತದೆ. ಆದರೆ ಒಂದು ವೇಳೆ ಇದು ಹೆಚ್ಚಿನ ಪ್ರಮಾಣದಲ್ಲಿದ್ದು ಚಮಚ ತುಂಬುವಷ್ಟು ಪ್ರಮಾಣದಲ್ಲಿದ್ದರೆ ಹಾಗೂ ಇದರಲ್ಲಿ ಕೀವು ಮತ್ತು ರಕ್ತ ತುಂಬಿದ್ದರೆ ಇದು ಹರಿದ ತಮಟೆಯ ಸ್ಪಷ್ಟ ಸೂಚನೆಯಾಗಿದೆ. ತಕ್ಷಣವೇ ವೈದ್ಯರ ಬಳಿ ಹೋಗದೇ ನಿರ್ವಾಹವಿಲ್ಲ.

ರಕ್ತಭರಿತ ಮೇಣ

ರಕ್ತಭರಿತ ಮೇಣ

ಕೆಲವೊಮ್ಮೆ ಇದು ಗಟ್ಟಿಯಾದ ರಕ್ತದಂತೆ ತೋರುತ್ತದೆ. ಹೀಗಿದ್ದರೆ ತಕ್ಷಣ ವೈದ್ಯರಿಂದ ತಪಾಸಣೆಗೊಳಪಡಬೇಕು. ಏಕೆಂದರೆ ಇದು ಸಹಾ ಹರಿದ ತಮಟೆಯ ಪರಿಣಾಮವಿರಬಹುದು ಅಥವಾ ಹಿಂದಿನ ಬಾರಿ ಕಿವಿಯನ್ನು ಸ್ವಚ್ಛಗೊಳಿಸುವಾಗ ಕಿವಿಯ ಒಳಭಾಗದಲ್ಲಿ ಚಿಕ್ಕ ಗಾಯ ಮಾಡಿದ್ದು ಆ ಗಾಯದಿಂದ ರಕ್ತ ಸೋರಿ ಹೆಪ್ಪುಗಟ್ಟಿ ಉಳಿದಿದ್ದೂ ಇರಬಹುದು.

ವಿವಿಧ ಬಣ್ಣಗಳಿಂದ ಕೂಡಿದ್ದರೆ

ವಿವಿಧ ಬಣ್ಣಗಳಿಂದ ಕೂಡಿದ್ದರೆ

ಕೆಲವೊಮ್ಮೆ ಕೆಲವು ಬಣ್ಣಗಳ ಮಿಶ್ರಣದಿಂದ ಮೇಣ ಕೂಡಿರಬಹುದು. ಎಲ್ಲಿಯವರೆಗೆ ನೋವು ಅಥವಾ ತುರಿಕೆ ಕಾಣಿಸಿಕೊಳ್ಳುವುದಿಲ್ಲವೋ ಈ ಬಣ್ಣಗಳಿಂದ ಏನೂ ತೊಂದರೆಯಿಲ್ಲ. ಸಾಮಾನ್ಯವಾಗಿ ಬೇರೆ ಬೇರೆ ಊರುಗಳಿಗೆ ಪಯಣಿಸುತ್ತಾ ಇರುವವರಲ್ಲಿ ಆಯಾ ಪ್ರದೇಶದ ಧೂಳು ಕುಳಿತುಕೊಳ್ಳುವ ಮೂಲಕ ಇದು ಎದುರಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಕಿವಿ ಸ್ವಚ್ಛಗೊಳಿಸಿದಾಗ ಬಣ್ಣವನ್ನು ಗಮನಿಸಿ, ಇದು ನಿಮ್ಮ ಆರೋಗ್ಯದ ಬಗ್ಗೆ ಕೆಲವು ಮಾಹಿತಿ ನೀಡುತ್ತಿರಬಹುದು.

ನೆರೆತ ಕೂದಲಿನ ಬಣ್ಣ

ನೆರೆತ ಕೂದಲಿನ ಬಣ್ಣ

ಈ ಬಣ್ಣದ ಮೇಣವನ್ನು ಹತ್ತಿಯ ಮೇಲೆ ಕಂಡರೆ ಚಿಂತೆಗೇನೂ ಕಾರಣವಿಲ್ಲ. ಈ ಬಣ್ಣ ಕಿವಿ ತನ್ನನ್ನು ತಾನೇ ಸ್ವಚ್ಛಗೊಳಿಸಲು ಕೈಗೊಂಡ ಕ್ರಮದ ಪರಿಣಾಮವಾಗಿದೆ. ಆದರೆ ಈ ಮೇಣ ತೀರಾ ಒಣಗಿದ್ದು ಹಪ್ಪಳದಂತಿದ್ದರೆ ಹಾಗೂ ಮಡಚಿದರೆ ತುಂಡಾಗುವಂತಿದ್ದರೆ ಹಾಗೂ ಕಿವಿಯಲ್ಲಿ ಭಾರೀ ತುರಿಕೆ ಇದ್ದರೆ ಇದು ಇಸಬು ಅಥವಾ eczema ರೋಗದ ಚಿಹ್ನೆಯಾಗಿರಬಹುದು. ತಕ್ಷಣ ವೈದ್ಯರನ್ನು ಕಾಣಬೇಕು.

ಕಿವಿ ನೋವನ್ನು ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

For Quick Alerts
ALLOW NOTIFICATIONS
For Daily Alerts

    English summary

    Colour Of Your Earwax Can Determine Details Of Your Health

    The earwax serves an important purpose for our health. It is scientifically known as cerumen. The earwax is made up of long-chain fatty acids, squalene and alcohols that provide a waterproof lining to the ears and can prevent infection and other things. The purpose of earwax is to protect our hollow hole that is our ear canals from bacteria and debris. People are usually bothered with the question 'does the colour of ear wax mean anything'. Read further to know what does the colour of your earwax mean.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more