ತೂಕ ಇಳಿಸಿಕೊಳ್ಳಬೇಕೇ? ಎಲೆಕೋಸು ಸೂಪ್ ಕುಡಿಯಿರಿ

By: manu
Subscribe to Boldsky

ನಮ್ಮದೇ ತಪ್ಪಿನಿಂದ ಮತ್ತು ಕೆಟ್ಟ ಜೀವನ ಶೈಲಿಯಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಬೊಜ್ಜು ಒಮ್ಮೆ ದೇಹವನ್ನು ವಕ್ಕರಿಸಿಕೊಂಡರೆ ಅದರಿಂದ ಹೊರಬರುವುದು ತುಂಬಾ ಕಷ್ಟಕರ. ಬೊಜ್ಜು ಇಳಿಯಬೇಕೆಂದು ಹಲವಾರು ರೀತಿಯ ಪ್ರಯತ್ನ ಮಾಡಿದರೂ ಬೊಜ್ಜು ಮಾತ್ರ ಹಾಗೆ ಇರುತ್ತದೆ. ಬೊಜ್ಜನ್ನು ಕಡಿಮೆ ಮಾಡದೆ ಇದ್ದರೆ ಅದರಿಂದ ಹಲವಾರು ರೀತಿಯ ರೋಗಗಳು ದೇಹವನ್ನು ಕಾಡಲು ಆರಂಭಿಸುತ್ತದೆ.  ಊಹೆಗೂ ನಿಲುಕದ ಪ್ರಯೋಜನ-ಈ ಎಲೆಕೋಸಿನಲ್ಲಿದೆ! 

ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಬೇಕೆಂದು ತೂಕ ಕಡಿಮೆ ಮಾಡುವಂತಹ ಹಲವಾರು ವಿಧಾನಗಳನ್ನು ಪರೀಕ್ಷಿಸಿರಬಹುದು. ಆದರೆ ಎಲೆಕೋಸು ತೂಕವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದೆ. ವ್ಯಾಯಾಮದೊಂದಿಗೆ ಎಲೆಕೋಸಿನ ಸೂಪ್ ಅನ್ನು ಕುಡಿದರೆ ತೂಕ ಕಡಿಮೆ ಮಾಡುವ ಪ್ರಯತ್ನದಲ್ಲಿ ನಿಮಗೆ ಯಶಸ್ಸು ಸಿಗುವುದು ಖಚಿತ. ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ 

ಇದು ಆರೋಗ್ಯಕರ ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಹ ತೂಕ ಕಡಿಮೆ ಮಾಡುವ ಮದ್ದಿನಂತೆ ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ.....  

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಎಲೆಕೋಸಿನ ಎಲೆಗಳು 1 ಕಪ್

*ಈರುಳ್ಳಿ 3-4

*ಕಾಳುಮೆಣಸಿನ ಹುಡಿ (ಕರಿಮೆಣಸು) 1 ಚಮಚ

ನಿಯಮಿತವಾಗಿ ಸೇವಿಸಿ...

ನಿಯಮಿತವಾಗಿ ಸೇವಿಸಿ...

ನಿಯಮಿತವಾಗಿ ಈ ಮನೆಮದ್ದನ್ನು ಸೇವನೆ ಮಾಡಿದರೆ ಇದರ ಫಲಿತಾಂಶವು ಸಿಗುವುದು.

ಜೊತೆಗೆ ವ್ಯಾಯಾಮವನ್ನು ಮುಂದುವರೆಸಿ....

ಜೊತೆಗೆ ವ್ಯಾಯಾಮವನ್ನು ಮುಂದುವರೆಸಿ....

ಇದು ತುಂಬಾ ಪರಿಣಾಮಕಾರಿಯಾಗಬೇಕೆಂದರೆ ಆರೋಗ್ಯಕರ ಆಹಾರ ಕ್ರಮದೊಂದಿಗೆ ವ್ಯಾಯಾಮವನ್ನು ಮಾಡಬೇಕು.

ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ....

ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ....

ಎಲೆಕೋಸಿನಲ್ಲಿರುವ ಪೊಟಾಶಿಯಂ ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸಿ ದೇಹವು ವೇಗವಾಗಿ ಕೊಬ್ಬನ್ನು ಕರಗಿಸುವಂತೆ ಮಾಡುತ್ತದೆ. ಅಲ್ಲದೆ ಎಲೆಕೋಸಿನಲ್ಲಿ ನಾರಿನಾಂಶವು ಅಧಿಕ ಪ್ರಮಾಣದಲ್ಲಿದ್ದು , ಇದು ತೂಕ ಕಳೆದುಕೊಳ್ಳಲು ನೆರವಾಗುವುದು.

ಈರುಳ್ಳಿ ಮತ್ತು ಕಾಳುಮೆಣಸು

ಈರುಳ್ಳಿ ಮತ್ತು ಕಾಳುಮೆಣಸು

ಈರುಳ್ಳಿ ಮತ್ತು ಕಾಳುಮೆಣಸಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಕಿಣ್ವಗಳು ಕೊಬ್ಬಿನ ಕೋಶಗಳನ್ನು ಸುಲಭವಾಗಿ ಸುಡುವುದು.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಕತ್ತರಿಸಿಕೊಂಡಿರುವ ಈರುಳ್ಳಿ ಮತ್ತು ಎಲೆಕೋಸಿನ ಎಲೆಗಳನ್ನು ಸ್ವಲ್ಪ ನೀರಿಗೆ ಹಾಕಿ ಕುಕ್ಕರ್ ನಲ್ಲಿ ಬೇಯಿಸಿ.

*ಬೇಯಿಸಿದ ಎಲೆಕೋಸು ಮತ್ತು ಈರುಳ್ಳಿಯನ್ನು ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಇನ್ನು ಇದನ್ನು ಒಂದು ಕಪ್‌ಗೆ ಹಾಕಿಕೊಂಡು ಅದಕ್ಕೆ ಕಾಳುಮೆಣಸಿನ ಹುಡಿ ಹಾಕಿಕೊಳ್ಳಿ. ಎರಡು ತಿಂಗಳ ಕಾಲ ಉಪಹಾರದ ವೇಳೆ ಇದನ್ನು ಸೇವಿಸಿ.

*ಇದನ್ನು ಹೊರತುಪಡಿಸಿ ಉಪಾಹಾರಕ್ಕೆ ಬೇರೆ ಏನೂ ಸೇವಿಸಬೇಡಿ.

 
English summary

Cabbage Soup Diet For Rapid Weight Loss

We know that vegetables are extremely nutritious and come with many health benefits. Did you also know that cabbage is a vegetable that can actually help you reduce weight quickly? Yes, weight gain can be extremely unhealthy and also unattractive, if a person is obese or overweight, he/she can suffer from a number of ailments. Imagine walking into a store full of your favourite clothes and not being able to buy any, because they do not come in your size!
Please Wait while comments are loading...
Subscribe Newsletter