Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತೂಕವಿಳಿಸಬೇಕೆ? ಎಲೆಕೋಸು ಸೂಪ್ ಕುಡಿಯಿರಿ

ಡಯಟ್ ಮಾಡುವ ಯೋಚನೆಯುಳ್ಳವರು ಯಾವುದೇ ಕಾಲದಲ್ಲಿ ಸಿಗಬಹುದಾದ ಕ್ಯಾಬಿಜ್ ಸೂಪನ್ನು ಮನೆಯಲ್ಲೇ ತಯಾರಿಸಿ ನಿಯಮಿತವಾಗಿ ತೆಗೆದುಕೊಂಡರೆ ತೂಕವಿಳಿಸಿಕೊಂಡು ಅಂದದ ಆಕಾರ ಪಡೆದುಕೊಳ್ಳಬಹುದು ಮತ್ತು ಆರೋಗ್ಯವಂತರಾಗಿ ಕಾಣಬಹುದು. ಬನ್ನಿ ತಯಾರಿಸೋಣ ಎಲೆಕೋಸು ಸೂಪ್.
ಬೇಕಾಗುವ ಪದಾರ್ಥಗಳು
ಎಲೆಕೋಸು ಸಣ್ಣ ಗಾತ್ರದ್ದು | ಹಸಿ ಶುಂಠಿ ಹೆಬ್ಬೆರಳಿನಷ್ಟು | ಬೆಳ್ಳುಳ್ಳಿ ಮೂರು ಎಸಳು | ಕಾರ್ನ್ ಫ್ಲೋರ್ ಐದಾರು ಚಮಚ | ಈರುಳ್ಳಿ 1 | ಸೋಯಾ ಸಾಸ್ | ಚಿಲ್ಲಿ ಸಾಸ್ | ಮೆಣಸಿನ ಪುಡಿ | ಎಣ್ಣೆ | ಉಪ್ಪು
ತಯಾರಿಸುವ ವಿಧಾನ
ಎಲೆಕೋಸಿನ ಎಲೆಗಳನ್ನು ಬಿಡಿಸಿಟ್ಟುಕೊಂಡು ಸಣ್ಣದಾಗಿ ಹೆಚ್ಚಿಟ್ಟುಕೊಂಡು ನೀರಿನಲ್ಲಿ ನೆನೆಸಿಡಿ, ಬೇಕಿದ್ದರೆ ಚಿಟಿಕೆ ಅರಿಷಿಣ ಪುಡಿ ಹಾಕಿಡಿ. ತೊಳೆದ ಹಸಿ ಶುಂಠಿ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇವೆರಡು ಮತ್ತು ಸುಲಿದಿಟ್ಟ ಬೆಳ್ಳುಳ್ಳಿಯನ್ನು ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಹುರಿದಿಟ್ಟುಕೊಳ್ಳಿ.
ನೆನೆಸಿಟ್ಟ ನೀರನ್ನು ತೆಗೆದು ಎಲೆಕೋಸನ್ನು ಮತ್ತೊಂದು ಪಾತ್ರೆಯಲ್ಲಿ ಮೂರು ಲೋಟ ನೀರು ಹಾಕಿ ಹದಿನೈದು ನಿಮಿಷ ಕುದಿಸಿರಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಒಗ್ಗರಣೆ, ಸೋಯಾ ಸಾಸ್, ಚಿಲ್ಲಿ ಸಾಸ್, ಮೆಣಿಸಿನ ಪುಡಿ ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಮತ್ತೆ ಐದು ನಿಮಿಷ ಕುದಿಸಿರಿ.
ಮತ್ತೊಂದೆಡೆ ಒಂದು ಪಾತ್ರೆಯಲ್ಲಿ ನೀರು ಮತ್ತು ಕಾರ್ನಫ್ಲೋರ್ ಸೇರಿಸಿ ನೀರು ಪೇಸ್ಟಿನಂತೆ ತಯಾರಿಸಿ. ಇದನ್ನು ಕುದಿಯುತ್ತಿರುವ ಎಲೆಕೋಸಿನ ಪಾತ್ರೆಗೆ ಸೇರಿಸಿ ಒಂದೆರಡು ನಿಮಿಷ ಕುದಿಸಿ. ಕ್ಯಾಬೇಜ್ ಸೂಪನ್ನು ಬಿಸಿಯಿರುವಾಗಲೇ ಊಟಕ್ಕೆ ಮೊದಲು ಕುಡಿಯಲು ನೀಡಿ. ಇದನ್ನು ದಿನಕ್ಕೆ ಎರಡು ಬಾರಿಯಂತೆ ಏಳು ದಿನ ಕುಡಿದರೆ ಎಂಬತ್ತಿರೋರು ನೋಡನೋಡುತ್ತಲೆ ಅರವತ್ತೈದಕ್ಕಿಳಿದಿರುತ್ತೀರಿ.



Click it and Unblock the Notifications
