For Quick Alerts
ALLOW NOTIFICATIONS  
For Daily Alerts

ತುಂಬಾ ಶೀತವಾಗಿದೆಯೇ? ಹಾಗಾದರೆ ಈ ಆಹಾರಗಳನ್ನು ಸೇವಿಸಿ..

By Lekhaka
|

ಶೀತ, ನೆಗಡಿ, ಮೂಗು ಕೂಡ ಕಟ್ಟಿದರೆ ನಿಮಗೆ ಕೂಡ ಚಳಿಗಾಲದಲ್ಲಿ ಬರುವಂತಹ ಸಾಮಾನ್ಯ ಶೀತ ಕಾಡಿದೆ ಎಂದರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವ ಕಾರಣದಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿಯು ಕುಗ್ಗುವುದು. ಈ ಕಾರಣದಿಂದ ಶೀತ ದೇಹವನ್ನು ಕಾಡುವುದು. ಸಾಮಾನ್ಯ ಶೀತಕ್ಕೆ ಕಾರಣವಾಗುಂತಹ ರಹಿನೊ ವೈರಸ್ ಚಳಿಗಾಲದಲ್ಲಿ ದ್ವಿಗುಣಗೊಳ್ಳಲು ಕಾರಣ ಹೆಚ್ಚಿನವರಿಗೆ ಶೀತ ಕಾಡುವುದು.

ಸಾಮಾನ್ಯ ಶೀತವು ಒಂದು ಸೋಂಕು ಆಗಿದ್ದು, ಅದರಿಂದ ನೆಗಡಿ, ಕೆಮ್ಮು ಮತ್ತು ಮೂಗು ಕಟ್ಟುವಿಕೆ ಕಂಡುಬರುವುದು. ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ತುಂಬಾ ಸುಲಭವಾಗಿ ಹರಡುವುದು. ಸೋಂಕು ಪೀಡಿತ ವ್ಯಕ್ತಿ ಕಫದ ಸಂಪರ್ಕಕ್ಕೆ ನಾವು ಬಂದಾಗ ಈ ವೈರಸ್ ನಮ್ಮ ದೇಹದೊಳಗೆ ಪ್ರವೇಶ ಮಾಡುವುದು. ನಮ್ಮ ದೇಹವು ಹೆಚ್ಚಿನ ಕಫ ಉತ್ಪತ್ತಿ ಮಾಡಿ ಇದರ ವಿರುದ್ಧ ಹೋರಾಡಲು ಪ್ರಯತ್ನಿಸುವುದು. ಇದರ ಪರಿಣಾಮವಾಗಿ ಅತಿಯಾದ ಕಫ ಉಂಟಾಗಿ ಮೂಗು ಕಟ್ಟುವ ಸಮಸ್ಯೆ ಕಾಣಿಸಿಕೊಳ್ಳುವುದು.

ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕೆಂದು ಹಿರಿಯರು ಹಿಂದಿನಿಂದಲೂ ಸಲಹೆ ನೀಡುತ್ತಾ ಬಂದಿದ್ದಾರೆ. ದೇಹವು ಬೆಚ್ಚಗಿರುವ ಕಾರಣದಿಂದ ವೈರಸ್ ದ್ವಿಗುಣವಾಗುವುದನ್ನು ತಡೆಯಬಹುದು. ಅದೇ ರೀತಿ ಶೀತ ಉಂಟಾದ ಸಮಯದಲ್ಲಿ ನಮ್ಮ ಹಸಿವು ಕೂಡ ಕಡಿಮೆಯಾಗುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಪ್ರಮುಖವಾಗಿ ಮೂಗು ಕಟ್ಟಿರುವುದು ಕಾರಣವಾಗಿದೆ. ನಾಲಗೆಯು ಆಹಾರದ ರುಚಿ ನೋಡಬಹುದು.

ಶೀತ ಆದಾಗ ಏನು ಮಾಡಬೇಕು, ಏನು ಮಾಡಬಾರದು?

ಆದರೆ ಮೂಗಿನಲ್ಲಿರುವಂತಹ ಘ್ರಾಣ ಕೋಶವು ಆಹಾರದ ಸ್ವಾದವನ್ನು ಮೆದುಳಿಗೆ ಕಳುಹಿಸಿಕೊಡುವುದು. ಈ ಘ್ರಾಣ ಕೋಶಗಳು ಮೂಗಿನಲ್ಲಿರುವುದು. ಮೂಗು ಕಟ್ಟಿದಾಗ ಘ್ರಾಣಕೋಶಗಳಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಇದರಿಂದ ನಮಗೆ ಆಹಾರ ರುಚಿಸುವುದೇ ಇಲ್ಲ. ಆದರೆ ಈ ಸಮಯದಲ್ಲಿ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ಒದಗಿಸುವುದು ಅತೀ ಅಗತ್ಯವಾಗಿದೆ. ಈ ಲೇಖನದಲ್ಲಿ ಕೊಟ್ಟಿರುವಂತಹ ಕೆಲವೊಂದು ಆಹಾರಗಳು ಶೀತ ಕಡಿಮೆ ಮಾಡುವುದು ಮಾತ್ರವಲ್ಲದೆ ದೇಹಕ್ಕೆ ಚೇತರಿಸಿಕೊಳ್ಳಲು ಬೇಕಾಗುವಂತಹ ಅತೀ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸಿಕೊಡುವುದು....

ಬಿಸಿ ನೀರು, ಲಿಂಬೆ ಮತ್ತು ಜೇನುತುಪ್ಪ

ಬಿಸಿ ನೀರು, ಲಿಂಬೆ ಮತ್ತು ಜೇನುತುಪ್ಪ

ಬಿಸಿ ನೀರು ಕಿರಿಕಿರಿ ಉಂಟು ಮಾಡುವ ಗಂಟಲಿಗೆ ಶಮನ ನೀಡಲಿದೆ. ಅದೇ ವಿಟಮಿನ್ ಸಿ ಹೊಂದಿರುವ ಲಿಂಬೆಯು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಜೇನುತುಪ್ಪದಲ್ಲಿ ಇರುವ ವೈರಲ್ ವಿರೋಧಿ ಗುಣಗಳು ಸಮಸ್ಯೆ ಉಂಟು ಮಾಡುವ ವೈರಸ್ ನ್ನು ಕೊಲ್ಲುವುದು. ಬೇರೆ ಯಾವುದೇ ಔಷಧಿಗಿಂತ ಈ ಪಾನೀಯವು ನಿಮಗೆ ತುಂಬಾ ಪರಿಣಾಮಕಾರಿಯಾಗಲಿದೆ. ಒಂದು ಲಿಂಬೆಯ ರಸಕ್ಕೆ ಒಂದು ಲೋಟ ಬಿಸಿ ನೀರು ಹಾಕಿ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ. ದಿನದಲ್ಲಿ ಎರಡು ಸಲ ಇದನ್ನು ಕುಡಿದರೆ ಸಮಸ್ಯೆ ನಿವಾರಣೆಯಾಗುವುದು.

ಎಳೆ ನೀರು..

ಎಳೆ ನೀರು..

ಎಳೆ ನೀರಿನಲ್ಲಿ ವಿದ್ಯುದ್ವಿಚ್ಚೇದಗಳು ತುಂಬಿಕೊಂಡಿವೆ ಮತ್ತು ಇದು ದ್ರವಗಳನ್ನು ಪುನಃ ತುಂಬಿಸಿಕೊಳ್ಳುವುದು. ಎಳೆ ನೀರು ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ಸೋಂಕು ಮತ್ತು ಜ್ವರ ಬರದಂತೆ ತಡೆಯುವುದು. ಇದು ರಕ್ತಸಂಚಾರವನ್ನು ಉತ್ತಮಪಡಿಸುವುದು. ಎಳೆ ನೀರಿನಲ್ಲಿ ಲಾರಿಕ್ ಆಮ್ಲ ಮತ್ತು ಕ್ಯಾಪ್ರಿಲಿಕ್ ಆಮ್ಲವು ಸಮೃದ್ಧವಾಗಿದೆ. ಇವುಗಳಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶೀತ ನಿವಾರಣೆ ಮಾಡುವಲ್ಲಿ ಬೆಳ್ಳುಳ್ಳಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಲ್ಲಿ ಇರುವಂತಹ ನಂಜು ನಿರೋಧಕ ಗುಣಗಳು ಸೋಂಕನ್ನು ಕೊಲ್ಲುವುದು. ಇದರಲ್ಲಿ ವಿಟಮಿನ್ ಸಿ, ಸೆಲೆನಿಯಂ ಮತ್ತು ಇತರ ಕೆಲವೊಂದು ಖನಿಜಾಂಶಗಳು ಇವೆ. ಇದು ಶೀತವನ್ನು ಕಡಿಮೆ ಮಾಡುವುದು. ಇದು ಕಫಹಾರಿಯಾಗಿ ಕೆಲಸ ಮಾಡುವುದು. ಇದು ಕಟ್ಟಿದ ಮೂಗಿನ್ನು ತೆರೆಯುವಂತೆ ಮಾಡಿ ಕಫ ಕಡಿಮೆ ಮಾಡುವುದು. ಎರಡು ಬೆಳ್ಳುಳ್ಳಿಯ ಪೇಸ್ಟ್ ಮಾಡಿಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ. ಇದನ್ನು ಶೀತ ಕಡಿಮೆಯಾಗುವ ತನಕ ಪ್ರತಿನಿತ್ಯ ಸೇವನೆ ಮಾಡಿ.

ಗೆಣಸು

ಗೆಣಸು

ಗೆಣಸಿನಲ್ಲಿ ವಿಟಮಿನ್ ಸಿ ಮತ್ತು ಡಿ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ದೇಹಕ್ಕೆ ಇದು ಬೇಗನೆ ಶಕ್ತಿ ನೀಡುವುದು. ಪದೇ ಪದೇ ಶೀತಕ್ಕೆ ಒಳಗಾಗುವ ವ್ಯಕ್ತಿಗಳು ಗೆಣಸಿನ ಸೇವಿಸಿದರೆ ತುಂಬಾ ಒಳ್ಳೆಯದು. ಮೂರು ಕಪ್ ನೀರಿನಲ್ಲಿ ಎರಡು ಕಪ್ ಗೆಣಸನ್ನು ಬೇಯಿಸಿ ಅದರ ನೀರು ಕುಡಿಯಿರಿ.

ಅರಿಶಿನ

ಅರಿಶಿನ

ಅರಿಶಿನವು ನಂಜುನಿರೋಧ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಕಟ್ಟಿರುವ ಮೂಗಿನ ಶಮನ ನೀಡುವುದು ಮಾತ್ರವಲ್ಲದೆ ಎದೆಕಟ್ಟುವಿಕೆ ಸಮಸ್ಯೆ ನಿವಾರಣೆ ಮಾಡುವುದು. ದೇಹದಲ್ಲಿ ಅತಿಯಾಗಿರುವ ಕಫ ಹೊರಹಾಕಲು ಇದು ಕಫಹಾರಿಯಾಗಿ ಕೆಲಸ ಮಾಡುವುದು. ಒಂದು ಲೋಟ ಬಿಸಿ ಹಾಲಿಗೆ ¼ ಚಮಚ ಅರಿಶಿನ ಹಾಕಿಕೊಂಡು ಪ್ರತಿನಿತ್ಯ ಕುಡಿದರೆ ಅದರಿಂದ ಶೀತ ಕಡಿಮೆಯಾಗುವುದು.

ಶುಂಠಿ

ಶುಂಠಿ

ಕೆಮ್ಮು ಮತ್ತು ಶೀತಕ್ಕೆ ಶುಂಠಿಯು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಇದು ಕೆಮ್ಮನ್ನು ಕಡಿಮೆ ಮಾಡಿ ಮೂಗು ಕಟ್ಟುವಿಕೆ ನಿವಾರಿಸುವುದು. ಇದರಲ್ಲಿ ಇರುವಂತಹ ವೈರಲ್ ವಿರೋಧಿ ಗುಣಗಳು ಸಮಸ್ಯೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು. ಖಾಲಿ ಲೋಟಕ್ಕೆ ಮೂರು ಇಂಚು ಉದ್ದದ ಶುಂಠಿಯನ್ನು ಹಾಕಿ. ಅದಕ್ಕೆ ಒಂದು ಲಿಂಬೆಯ ರಸ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ. ಕುದಿಯುತ್ತಿರುವ ನೀರಿಗೆ ಈ ಮಿಶ್ರಣವನ್ನು ಹಾಕಿ ಮತ್ತು ಸ್ವಲ್ಪ ಹೊತ್ತು ಹಾಗೆ ಬಿಡಿ. ಈ ಮಿಶ್ರಣವನ್ನು ಸೋಸಿಕೊಂಡ ಬಳಿಕ ಕುಡಿಯಿರಿ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನ ನ ಹೆಸರು ನೋಡಿ ನಿಮಗೆ ಅಚ್ಚರಿಯಾಗಿರಬಹುದು. ಆದರೆ ಶೀತಕ್ಕೆ ಇದು ಕೂಡ ಒಳ್ಳೆಯ ಆಹಾರ. ಇದರಲ್ಲಿ ವಿಟಮಿನ್ ಸಿ ಅತ್ಯಧಿಕವಾಗಿದೆ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದು ಕಿರಿಕಿರಿ ಉಂಟುಮಾಡುವ ಗಂಟಲಿಗೆ ಶಮನ ನೀಡಿ ದೇಹದಲ್ಲಿ ಶಕ್ತಿ ವೃದ್ಧಿಸುವುದು.ದಿನದಲ್ಲಿ ಒಂದೆರಡು ಬಾಳೆಹಣ್ಣುಗಳನ್ನು ಸೇವಿಸಿ.

ಕೋಳಿ ಮಾಂಸದ ಸೂಪ್

ಕೋಳಿ ಮಾಂಸದ ಸೂಪ್

ಸುರಿಯುತ್ತಿರುವಂತಹ ಮೂಗಿಗೆ ಬಿಸಿಬಿಸಿಯಾಗಿರುವ ಕೋಳಿ ಮಾಂಸದ ಸೂಪ್ ಗೆ ಬೇರೆ ಔಷಧಿ ಬೇಕಿಲ್ಲ. ಇದು ಗಂಟಲಿಗೆ ಶಮನ ನೀಡಿ ಮೂಗು ಕಟ್ಟುವಿಕೆ ತೆರೆಯುವುದು. ಇದರಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವಂತಹ ಖನಿಜಾಂಶಗಳು ಇವೆ. ಸೂಪ್ ನ್ನು ದೇಹವು ಸುಲಭವಾಗಿ ಹೀರಿಕೊಳ್ಳುವುದು. ಕೋಳಿಯಲ್ಲಿ ಕಾರ್ನೊಸೈನ್ ಅಧಿಕವಾಗಿದ್ದು, ಇದು ಕಟ್ಟಿದ ಮೂಗನ್ನು ನಿವಾರಣೆ ಮಾಡಿ ಗಂಟಲಿಗೆ ಶಮನ ನೀಡುವುದು. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ.ಕೋಳಿಯ ಕೆಲವು ತುಂಡುಗಳನ್ನು ಬೇಯಿಸಿ. ಅದಕ್ಕೆ ತರಕಾರಿ ಮತ್ತು ಮಸಾಲೆಗಳನ್ನು ಹಾಕಿಕೊಂಡು ಕುಡಿಯಿರಿ.

ಹಸಿರೆಳೆ ತರಕಾರಿಗಳು

ಹಸಿರೆಳೆ ತರಕಾರಿಗಳು

ಹಸಿರೆಳೆ ತರಕಾರಿಗಳು ವಿಟಮಿನ್ ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ಪ್ರತಿರೋಧಕ ಶಕ್ತಿ ಹೆಚ್ಚು ಮಾಡಿ ದೇಹವು ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು. ಮತ್ತೆ ಯಾವುದೇ ಕಾಯಿಲೆಗಳು ಬರದಂತೆ ತಡೆಯುವುದು ಮತ್ತು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುವುದು. ಹಸಿರೆಳೆ ತರಕಾರಿಗಳನ್ನು ನಿಮ್ಮ ದಿನನಿತ್ಯದ ಆಹಾರ ಮತ್ತು ಸಲಾಡ್ ಗಳಲ್ಲಿ ಸೇರಿಸಿಕೊಳ್ಳಿ.

English summary

Best Foods To Eat When You Have A Cold

Have you ever wondered why our appetite goes for a toss when we are down with cold? That is because our tongue can taste the food but only the olfactory cells in our nose provide information of the flavour of the food to our brain. These olfactory cells are situated in our nose. When it is blocked, olfactory cells receive no signal to send to the brain and hence the food tastes bland. But it is important to nourish our bodies with the right kind of nutrition.Here are some comforting foods that will help your relieve the symptoms of cold and also provide you with all the nutrition you need for your body to recover.
X
Desktop Bottom Promotion