ಪುರುಷರೇ ಎಚ್ಚರಿಕೆ! ಇದೆಲ್ಲಾ ಕ್ಯಾನ್ಸರ್‌ನ ಲಕ್ಷಣಗಳು ನಿರ್ಲಕ್ಷಿಸಬೇಡಿ...

Posted By: Arshad
Subscribe to Boldsky

ಯಾವುದೇ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದಷ್ಟೂ ಇದರ ಚಿಕಿತ್ಸೆ ಹಾಗೂ ಇದರಿಂದ ಬದುಕುಳಿಯುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಈ ಕ್ಯಾನ್ಸರ್ ಆವರಿಸಿರುವ ಬಗ್ಗೆ ಅರಿವೇ ಇಲ್ಲದೇ ಮೊದಲ ಹಂತ ದಾಟಿ ಎರಡನೆಯ ಹಂತ ಪ್ರವೇಶಿದಾಗಲೇ ಹೆಚ್ಚಿನವರಿಗೆ ಇದರ ಬಗ್ಗೆ ಅರಿವುಂಟಾಗುತ್ತದೆ. ಆದ್ದರಿಂದ ಮೊದಲ ಹಂತದಲ್ಲಿಯೇ ಇರುವಿಕೆ ಗೊತ್ತಾದರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿ ಪ್ರಾಣಾಪಾಯದಿಂದ ಪಾರಾಗಬಹುದು. ಈ ಇರುವಿಕೆಯನ್ನು ಕೆಲವು ಲಕ್ಷಣಗಳ ಮೂಲಕ ಕಂಡುಕೊಳ್ಳಬಹುದು.

ಸಾಮಾನ್ಯ ಗಾತ್ರಕ್ಕೂ ಹೆಚ್ಚು ಊದಿಕೊಳ್ಳುವುದು, ನಡುವೆ ಎಲ್ಲೋ ಒಂದು ಕಡೆ ಕಡ್ಲೆಬೀಜ ಚರ್ಮದಡಿಯಲ್ಲಿರುವಂತೆ ಕಾಣುವುದು, ಒಂದು ಭಾಗ ಗಟ್ಟಿಯಾಗಿರುವುದು, ಅಥವಾ ತೀರಾ ಸಡಿಲವಾಗಿರುವುದು, ವೃಷಣಗಳನ್ನು ಮುಟ್ಟಿದರೆ ನೋವಾಗುವುದು ಮೊದಲಾದವುಗಳನ್ನು ಕಂಡರೆ ತಕ್ಷಣವೇ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಪಡೆಯಬೇಕು. ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವೃಷಣಗಳ ಕ್ಯಾನ್ಸರ್ ಬಗ್ಗೆ ಪ್ರತಿ ಪುರುಷರೂ ಅರಿತಿರುವುದು ಅಗತ್ಯವಾಗಿದ್ದು ಈ ಬಗ್ಗೆ ದೇಹ ನೀಡುವ ಮುನ್ಸೂಚನೆಗಳನ್ನು ಹುಡುಕುವುದು ಸಹಾ ಅಗತ್ಯ.

ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್‌ ವಿಧಗಳು

ಒಂದು ವೇಳೆ ಕೆಳಗೆ ವಿವರಿಸಿದ ಮಾಹಿತಿಯಲ್ಲಿ ಒಂದಾದರೂ ನಿಮಗೆ ಅನುಭವವಾಗುತ್ತಿದೆ ಎಂದರೆ ತಕ್ಷಣ ವೈದ್ಯರಲ್ಲಿ ತಪಾಸಣೆಗೊಳಪಡಬೇಕು. ಈ ಕ್ಯಾನ್ಸರ್ ಪ್ರಾಣಾಪಾಯಕ್ಕೂ ಕಾರಣವಾಗಬಲ್ಲುದು. ಈ ಕ್ಯಾನ್ಸರ್ ಹಂತಹಂತವಾಗಿ ಪರಿವರ್ತನೆ ಪಡೆಯುತ್ತಾ ಹೋಗುವ ಕಾಯಿಲೆಯಾಗಿದ್ದರೂ ಇದನ್ನು ಇಂದಿನ ವೈದ್ಯವಿಜ್ಞಾನ ಸೂಕ್ತ ಚಿಕಿತ್ಸೆಗಳಿಂದ ಸರಿಪಡಿಸಬಲ್ಲುದು. ಪುರುಷರಿಗೆ ಎದುರಾಗುವ ಒಟ್ಟಾರೆ ಕ್ಯಾನ್ಸರ್ ಗಳಲ್ಲಿ ವೃಷಣದ ಕ್ಯಾನ್ಸರ್ ನ ಪ್ರಮಾಣ ಶೇ. 1.2% ರಷ್ಟಿದೆ. ಅಲ್ಲದೇ ಬಹುತೇಕ ಸಂದರ್ಭಗಳಲ್ಲಿ ಒಂದು ವೃಷಣ ಮಾತ್ರವೇ ಕ್ಯಾನ್ಸರ್ ಗೊಳಗಾಗುತ್ತದೆ. ಬನ್ನಿ, ಈ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳ ಬಗ್ಗೆ ಅರಿಯೋಣ....

ಬೆನ್ನು ಮತ್ತು ಹೊಟ್ಟೆನೋವು

ಬೆನ್ನು ಮತ್ತು ಹೊಟ್ಟೆನೋವು

ಸಾಮಾನ್ಯವಾಗಿ ಇವೆರಡೂ ಒಟ್ಟೊಟ್ಟಿಗೇ ಬರುವುದಿಲ್ಲ. ಒಂದು ವೇಳೆ ಇವೆರಡೂ ಒಟ್ಟಿಗೇ ಬಂದರೆ ಇದು ಮುಂದರೆದ ಹಂತದಲ್ಲಿರುವ ವೃಷಣದ ಕ್ಯಾನ್ಸರ್ ನ ಲಕ್ಷಣವಾಗಿದೆ. ಈ ಬಗ್ಗೆ ನಡೆದ ಅಧ್ಯಯನಗಳಲ್ಲಿ ವೃಷಣದ ಕ್ಯಾನ್ಸರ್ ರೋಗಿಗಳ ದುಗ್ಧಗ್ರಂಥಿಗಳು ಊದಿಕೊಂಡಿರುವುದು ಹಾಗೂ ಕ್ಯಾನ್ಸರ್ ಯಕೃತ್ ಗೂ ವಿಸ್ತರಿಸುತ್ತದೆ. ಹಾಗೂ ಈ ಮೂಲಕ ಯಕೃತ್ ನಲ್ಲಿಯೂ ಭಾರೀ ನೋವು ಕಾಣಿಸಿಕೊಳ್ಳುತ್ತದೆ.

 ವೃಷಣದ ಚರ್ಮದಡಿಯಲ್ಲಿ ನೋವಿಲ್ಲದ ಗಂಟು ಕಾಣಿಸಿಕೊಳ್ಳುವುದು

ವೃಷಣದ ಚರ್ಮದಡಿಯಲ್ಲಿ ನೋವಿಲ್ಲದ ಗಂಟು ಕಾಣಿಸಿಕೊಳ್ಳುವುದು

ವೃಷಣದ ಚರ್ಮದಡಿಯಲ್ಲಿ ಶೇಂಗಾ ಬೀಜವನ್ನಿಟ್ಟರೆ ಹೇಗಿರುತ್ತದೆಯೋ ಹಾಗೇ ಒಂದು ನೋವಿಲ್ಲದ ಚಿಕ್ಕ ಗಂಟು ಕಾಣಿಸಿಕೊಂಡರೆ ಇದು ವೃಷಣದ ಕ್ಯಾನ್ಸರ್ ನ ಸಾಮಾನ್ಯ ಮುನ್ಸೂಚನೆಯಾಗಿದೆ. ಪ್ರಾರಂಭದಲ್ಲಿ ಇದು ಚುಕ್ಕೆಯಷ್ಟಿದ್ದು ನಿಧಾನಕ್ಕೆ ಬೆಳೆಯುತ್ತಾ ಶೇಂಗಾಬೀಜದ ಗಾತ್ರಕ್ಕೆ ಬಂದಾಗಲೇ ಇದರ ಇರುವಿಕೆ ಗೊತ್ತಾಗುತ್ತದೆ. ಇದನ್ನು ಹೀಗೇ ಬಿಟ್ಟರೆ ದಿನೇ ದಿನೇ ಬೆಳೆಯುತ್ತಾ ನಿಧಾನವಾಗಿ ವೃಷಣಗಳನ್ನು ಒತ್ತುವ ಮೂಲಕ ನೋವು ನೀಡಲು ಪ್ರಾರಂಭಿಸುತ್ತವೆ.

ವೃಷಣ ಚೀಲಗಳು ಭಾರವಾಗುವುದು

ವೃಷಣ ಚೀಲಗಳು ಭಾರವಾಗುವುದು

ವೃಷಣಗಳನ್ನು ಹಿಡಿದಿಟ್ಟುಕೊಂಡಿರುವ ಚೀಲ ನಮ್ಮ ದೇಹದಲ್ಲಿಯೇ ಅತಿ ಹೆಚ್ಚು ನೆರಿಗೆಗಳನ್ನು ಹೊಂದಿರುವ ಚರ್ಮದ ಭಾಗವಾಗಿದ್ದು ತಾಪಮಾನಕ್ಕನುಗುಣವಾಗಿ ಹಿಗ್ಗುವ ಹಾಗೂ ಕುಗ್ಗುವ ಗುಣ ಹೊಂದಿದೆ. ವಾಸ್ತವವಾಗಿ ಗಂಡು ಸಸ್ತನಿಗಳಲ್ಲಿ ವೀರ್ಯಾಣುಗಳ ಉತ್ಪತ್ತಿಗೆ ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ತಾಪಮಾನ ಇರಬೇಕೆಂದು ನಿಸರ್ಗವೇ ಈ ಚೀಲಗಳಲ್ಲಿ ದೇಹದ ಹೊರಗೆ ವೃಷಣಗಳನ್ನಿರಿಸಿದೆ. ಹೆಣ್ಣು ಸಸ್ತನಿಗಳಲ್ಲಿ ಜನನೇಂದ್ರಿಯಗಳು ದೇಹದ ಒಳಗೇ ಇರುವುದು ಮಾತ್ರ ಸೃಷ್ಟಿಯ ವೈಚಿತ್ರ. ಒಂದು ವೇಳೆ ವೃಷಣಗಳ ಚೀಲ ತೀರಾ ಸಡಿಲವಾಗಿ ಜೋತು ಬಿದ್ದಿದ್ದರೆ ಇದನ್ನು ಕಡೆಗಣಿಸಬಾರದು. ಇದು ವೃಷಣದ ಕ್ಯಾನ್ಸರ್ ನ ಪ್ರಾರಂಭಿಕ ಮುನ್ಸೂಚನೆಯಾಗಿದೆ.

ವೃಷಣ ಚೀಲದಲ್ಲಿ ನೀರು ತುಂಬಿಕೊಂಡಿರುವುದು

ವೃಷಣ ಚೀಲದಲ್ಲಿ ನೀರು ತುಂಬಿಕೊಂಡಿರುವುದು

ವೃಷಣಗಳ ಚೀಲದಲ್ಲಿ ವೃಷಣಗಳನ್ನು ಹಿಡಿದಿಟ್ಟುಕೊಳ್ಳಲು ಕೊಂಚ ಪ್ರಮಾಣದ ದ್ರವ ಸದಾ ಇರುತ್ತದೆ. ಆದರೆ ಇದು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಒಂದು ವಾರವಾದರೂ ಕಡಿಮೆಯಾಗದೇ ಇದ್ದರೆ ಮಾತ್ರ ವೈದ್ಯರಿಂದ ತಪಾಸಣೆಗೊಳಪಡಬೇಕು. ಅಧ್ಯಯನಗಳಲ್ಲಿ ಕಂಡುಕೊಂಡಂತೆ ಏಕಾಏಕಿ ಈ ಚೀಲಗಳಲ್ಲಿ ನೀರು ತುಂಬಿಕೊಳ್ಳುವುದು ವೃಷಣದಲ್ಲಿ ಗಂಟುಗಳಾಗುವ ಸೂಚನೆಯಾಗಿದೆ.

 ಸ್ತನತೊಟ್ಟುಗಳು ತೀರಾ ಸಂವೇದಿಯಾಗುತ್ತವೆ

ಸ್ತನತೊಟ್ಟುಗಳು ತೀರಾ ಸಂವೇದಿಯಾಗುತ್ತವೆ

ವೃಷಣದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿರುವ ಪುರುಷರ ಸ್ತನತೊಟ್ಟುಗಳು ತೀರಾ ಸೂಕ್ಷ್ಮಸಂವೇದಿಯಾಗುತ್ತವೆ ಹಾಗೂ ಸಾಮಾನ್ಯ ಗಾತ್ರಕ್ಕೂ ಹೆಚ್ಚು ಊದಿಕೊಳ್ಳಬಹುದು. ವೃಷಣದಲ್ಲಿ ಬೆಳೆಯುವ ಗಂಟು ಅಥವಾ ದುರ್ಮಾಂಸದ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಒಂದು ಬಗೆಯ ಪ್ರೋಟೀನ್ ಸ್ತನತೊಟ್ಟುಗಳನ್ನು ಊದಿಸಲು ಹಾಗೂ ಸೂಕ್ಷ್ಮಸಂವೇದಿಯಾಗಿಸಲು ಕಾರಣವಾಗಿದೆ.

ವೃಷಣಗಳ ಗಾತ್ರ ಬದಲಾಗುವುದು

ವೃಷಣಗಳ ಗಾತ್ರ ಬದಲಾಗುವುದು

ವೃಷಣದ ಕ್ಯಾನ್ಸರ್ ನ ಪ್ರಾರಂಭಿಕ ಹಂತದ ಇನ್ನೊಂದು ಲಕ್ಷಣವೆಂದರೆ ಇವುಗಳ ಗಾತ್ರ ಬದಲಾಗುವುದು. ಸಾಮಾನ್ಯವಾಗಿ ಒಂದು ವೃಷಣ ಇನ್ನೊಂದಕ್ಕಿಂತ ಗಾತ್ರದಲ್ಲಿ ದೊಡ್ಡದಾಗುತ್ತಿರುವುದು ಕಂಡುಬರುತ್ತದೆ. ಅಥವಾ ಅಸಾಮಾನ್ಯವಾದ ಊದಿಕೊಳ್ಳುವಿಕೆ ಕಂಡುಬಂದರೂ ತಕ್ಷಣ ವೈದ್ಯರನ್ನು ಕಾಣಬೇಕು.

ರಕ್ತ ಹೆಪ್ಪುಗಟ್ಟುವುದು

ರಕ್ತ ಹೆಪ್ಪುಗಟ್ಟುವುದು

ಒಂದು ವೇಳೆ ವೃಷಣಗಳಲ್ಲಿರುವ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದರೆ ಇದರ ಪರಿಣಾಮವಾಗಿ ಉಸಿರೇ ಸಿಕ್ಕದಿರುವುದು ಹಾಗೂ ಕಾಲುಗಳು ಊದಿಕೊಳ್ಳುವುದು ಕಾಣಿಸಿಕೊಳ್ಳುತ್ತದೆ. ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು DVT ಅಥವಾ deep venous thrombosis ಎಂದು ಕರೆಯುತ್ತಾರೆ. ಕೆಲವು ಪುರುಷರಲ್ಲಿ ಈ ಲಕ್ಷಣ ವೃಷಣದ ಕ್ಯಾನ್ಸರ್ ಆವರಿಸುತ್ತಿರುವ ಲಕ್ಷಣವನ್ನು ಪ್ರಕಟಿಸುತ್ತವೆ. ಆದರೆ ಈ ಲಕ್ಷಣಗಳು ಬೇರೆ ತೊಂದರೆಯಿಂದಲೂ ಎದುರಾಗುವ ಸಾಧ್ಯತೆ ಇರುವ ಕಾರಣ ಇದು ವೃಷಣಗಳ ಕ್ಯಾನ್ಸರ್ ಹೌದೇ ಅಲ್ಲವೇ ಎಂಬುದನ್ನು ಕೇವಲ ವೈದ್ಯಕೀಯ ಪರೀಕ್ಷಾ ವರದಿಗಳು ಮಾತ್ರ ಖಚಿತಪಡಿಸಬಲ್ಲವು.

ಸೋಂಕು

ಸೋಂಕು

ವೃಷಣಗಳ ಒಳಗಿನ ಭಾಗದಲ್ಲಿ ಸೋಂಕು ಉಂಟಾದರೆ ಇದಕ್ಕೆ orchitis ಎಂದು ಕರೆಯುತ್ತಾರೆ. ಇದು ಎದುರಾದರೆ ವೃಷಣಗಳನ್ನು ಮುಟ್ಟಲಿಕ್ಕೇ ಸಾಧ್ಯವಾಗುವುದಿಲ್ಲ ಅಥವಾ ಒಳ ಉಡುಪುಗಳ ಅಂಚುಗಳು ತಗಲಿದರು ಜುಮ್ಮೆನ್ನುತ್ತವೆ. ತಕ್ಷಣ ವೈದ್ಯರನ್ನು ಕಾಣಬೇಕು.

  
English summary

Attention Men! Here Are The Early Symptoms Of Testicular Cancer

Here, we have listed out the early symptoms of testicular cancer that you and other men can suffer from. If you're suffering from any of these symptoms, then you need to see a doctor at the earliest. Testicular cancer is a deadly disease that is curable even if it is metastatic. It only accounts for 1.2% of all cases of cancer in men. This cancer often develops in either one of the two testicles. Read further to find out about the signs of testicular cancer.