For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಮುಟ್ಟಿದರೆ ಮುನಿ ಗಿಡದ ಆರೋಗ್ಯ ರಹಸ್ಯ

By Su.Ra
|

ಕೆಲವು ಸಸ್ಯಗಳಲ್ಲಿ ಇಂತಹ ಶಕ್ತಿ ಅಡಕವಾಗಿದೆ ಅಂದ್ರೆ ಒಮ್ಮೊಮ್ಮೆ ನಂಬೋಕೆ ಅಸಾಧ್ಯ ಅನ್ನಿಸುತ್ತೆ. ಇದೂ ಕೂಡ ಔಷಧೀಯ ಗಿಡ,ನಿಮ್ಮ ಆರೋಗ್ಯ ಲಾಭಕ್ಕಾಗಿ ಪ್ರಕೃತಿಯ ಕೊಡುಗೆ ಅಂದ್ರೆ ಆಶ್ಚರ್ಯ ಆಗಬಹುದು. ಅಂತಹ ಗಿಡಗಳಲ್ಲಿ ಮುಟ್ಟಿದರೆ ಮುನಿ ಇಂಗ್ಲೀಷಿನಲ್ಲಿ ಟಚ್ ಮಿ ನಾಟ್ ಅಂತ ಕರೆಸಿಕೊಳ್ಳುವ ಗಿಡವೂ ಒಂದು. ಈ ಗಿಡಕ್ಕೆ ಹಲವಾರು ಹೆಸರು. ಕೆಲವು ಪ್ರದೇಶದಲ್ಲಿ ನಾಚಿಕೆ ಮುಳ್ಳು ಅಂತಲೂ ಕರೆಯುತ್ತಾರೆ. ಯಾಕೆ ಈ ಹೆಸರು ಈ ಗಿಡಕ್ಕೆ ಅನ್ನೋದನ್ನು ಈ ಗಿಡ ನೋಡಿದವ್ರಿಗೆ ಖಂಡಿತ ತಿಳಿದಿರುತ್ತೆ. ಈ ಗಿಡವನ್ನು ಮುಟ್ಟಿದ ಕೂಡಲೆ ಇದರ ಎಲೆಗಳು ಮಡಚಿಕೊಳ್ಳುತ್ತೆ. ಹಾಗಂತ ಗಿಡಕ್ಕೆ ನಾಚಿಕೆ ಆಗಿ ಈ ರೀತಿ ಆಗೋದಲ್ಲ. ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ!

ಅದೊಂದು ನೈಸರ್ಗಿಕ ಪ್ರಕ್ರಿಯೆ ಅಷ್ಟೇ. ನಾಚಿಕೆ ಮುಳ್ಳಿನ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿರುತ್ತೆ ಮತ್ತು ಹುಳಹುಪ್ಪಟೆಗಳಿಂದ ತನ್ನನ್ನ ತಾನು ರಕ್ಷಿಸಿಕೊಳ್ಳುವ ಒಂದು ಬಗೆ ಇದು ಅಷ್ಟೇ. ಇಂತಹ ಗಿಡ ನಿಮ್ಮ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆಯಾಗಲಿದೆ. ಹಳ್ಳಿಕಡೆಗಳಲ್ಲಿ ನಾಚಿಕೆ ಮುಳ್ಳು ಅಂದ್ರೆ ಅದೊಂದು ಕಳೆಗಿಡವೆಂದೇ ಪ್ರಸಿದ್ಧಿ ಪಡೆದಿದೆ. ಯಾಕಂದ್ರೆ ಈ ಸಸ್ಯ ಎಲ್ಲಿ ಬೇಕಾದ್ರೂ ಬೆಳೆಯುತ್ತೆ. ರಕ್ತಬೀಜಾಸುರನ ಸಂತತಿ ಅಂತ ಕೆಲವರು ಇದನ್ನು ಹೀಗಾಣಿಸುವುದೂ ಉಂಟು.. ಯಾಕಂದ್ರೆ ಒಂದು ಗಿಡ ಸಾವಿರಕ್ಕೂ ಅಧಿಕ ಬೀಜಗಳನ್ನು ಉತ್ಪತ್ತಿ ಮಾಡುತ್ತೆ ಮತ್ತು ಅವು ಗಾಳಿಯಲ್ಲಿ ಹಾರಿ ಬೇರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತೆ. ತುಂಬೆ ಹೂವಿನಿಂದ ತುಂಬಿ ತುಳುಕುವ ಆರೋಗ್ಯ...

ಅಷ್ಟೇ ಅಲ್ಲ, ಕಾಂಡದ ಭಾಗವನ್ನು ಕತ್ತರಿಸಿದರೆ ಬೇರುಗಳು ಜೀವಂತವಾಗಿದ್ದು ಮತ್ತೆ ಬಹುಬೇಗನೆ ಬೆಳೆದು ನಿಲ್ಲುವ ಸಸ್ಯ ಪ್ರಬೇಧ ಇದು. ಇದರ ಮುಳ್ಳುಗಳು ಚುಚ್ಚಿದ್ರೆ ಯಮಯಾತನೆ ಪಡುವಂತ ನೋವು ಗ್ಯಾರೆಂಟಿ..ಆದ್ರೆ ಆಯುರ್ವೇದದಲ್ಲಿ ಮಾತ್ರ ಮುಟ್ಟಿದರೆ ಮುನಿ ಸಸ್ಯಕ್ಕೆ ವಿಶೇಷ ಮಹತ್ವವಿದೆ. ನಮ್ಮ ದೈಹಿಕ ಆರೋಗ್ಯದ ವೃದ್ಧಿಸುವಲ್ಲಿ ಮುಟ್ಟಿದರೆ ಮುನಿ ಸಸ್ಯ ಹಲವು ಉಪಯೋಗಗಳನ್ನು ಮಾಡಲಿದೆ...

ಬಾವುಗಳ ನಿವಾರಣೆಗೆ ಸಹಕಾರಿ

ಬಾವುಗಳ ನಿವಾರಣೆಗೆ ಸಹಕಾರಿ

ಮುಟ್ಟಿದರೆ ಮುನಿ ಗಿಡದ ಕಾಂಡ, ಬೇರು, ಎಲೆ, ಹೂವು ಎಲ್ಲವೂ ಕೂಡ ಪ್ರಯೋಜನಕಾರಿ. ಯಾವುದಾದ್ರೂ ಜಾಗದಲ್ಲಿ ಬಾವುಗಳಾಗಿದ್ದಲ್ಲಿ ಈ ಗಿಡವನ್ನು ಅರೆದು ಅದನ್ನು ಬಾವಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿ ಕಟ್ಟಿದ್ರೆ ಬಾವು ಬಹುಬೇಗನೆ ನಿವಾರಣೆಯಾಗುತ್ತೆ.

ಮಲಬದ್ಧತೆ ಸಮಸ್ಯೆಗೆ ಪರಿಹಾರ

ಮಲಬದ್ಧತೆ ಸಮಸ್ಯೆಗೆ ಪರಿಹಾರ

ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲ್ತಾ ಇದ್ದು, ಐದಾರು ದಿನದಿಂದ ಟಾಯ್ಲೆಟ್ ಗೆ ಹೋಗಿಲ್ಲ ಅಂದ್ರೆ ಮುಟ್ಟಿದರೆ ಮುನಿ ಗಿಡ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುವುದರಿಂದ ಉಪಶಮನವಾಗುತ್ತೆ. ಎರಡರಿಂದ ಮೂರು ಸ್ಪೂನ್ ಕುಡಿದರೆ ಸಾಕಾಗುತ್ತೆ. ಇಲ್ಲವೇ ಒಂದು ಲೋಟ ನೀರಿಗೆ ಒಂದು ಅಥವಾ ಎರಡು ಸ್ಪೂನ್ ರಸವನ್ನು ಬೆರೆಸಿ ಕುಡಿಯಬಹುದು.

ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ

ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ

ಬಾಣಂತನದಲ್ಲಿ ಹೊಟ್ಟೆ ಕರಗಿಸೋದು, ಮತ್ತೆ ಫಿಟ್ ಆಗಿ ಮೊದಲಿನ ಸೈಜ್ ಗೆ ಬರೋದು ಪ್ರತಿ ಮಹಿಳೆಗೂ ಒಂದು ಚಾಲೆಂಜ್ ಇದ್ದಂತೆ. ಸರಿಯಾಗಿ ಬಾಣಂತನ ಆಗಿಲ್ಲ ಅಂದ್ರೆ ಪುನಃ ಫಿಟ್ ಎಂಡ್ ಫೈನ್ ಆಗೋದು ಅಷ್ಟು ಸುಲಭವಲ್ಲ.

ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ

ಬಾಣಂತಿಯರ ಹೊಟ್ಟೆ ಕರಗಿಸಲು ಸಹಕಾರಿ

ಬಾಣಂತಿಯರು ತಮ್ಮ ಹೊಟ್ಟೆಯನ್ನು ಕರಗಿಸಲು ಈ ಮುಟ್ಟಿದರೆ ಮುನಿ ಸಸ್ಯವನ್ನು ಬಳಕೆ ಮಾಡಬಹುದು. ನಾಚಿನ ಮುಳ್ಳಿನ ಗಿಡದ ಸೊಪ್ಪಿನ ರಸವನ್ನು ತಯಾರಿಸಿಕೊಂಡು ಅದನ್ನು ಕೈಗಳಿಗೆ ಹಚ್ಚಿಕೊಂಡು ನಂತ್ರ ಹೊಟ್ಟೆಯ ಭಾಗಕ್ಕೆ ಲೇಪಿಸಿ ಒಂದೆರಡು ನಿಮಿಷ ಮಸಾಜ್ ಮಾಡಿಕೊಂಡ್ರೆ, ದಪ್ಪಗಿರುವ ಹೊಟ್ಟೆ ಕರಗುತ್ತಾ, ಮೊದಲಿನಂತಾಗಲು ಸಹಕಾರಿಯಾಗಿರುತ್ತೆ

ಮೊಡವೆ ನಿವಾರಣೆ

ಮೊಡವೆ ನಿವಾರಣೆ

ಮುಟ್ಟಿದರೆ ಮುನಿ ಸಸ್ಯದ ರಸವನ್ನು ಮೊಡವೆ ಕಲೆಗಳಿರುವ ಜಾಗಕ್ಕೆ ಲೇಪಿಸಿಕೊಂಡ್ರೆ, ಮೊಡವೆಗಳು ನಿವಾರಣೆಯಾಗುತ್ತೆ.

ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುತ್ತೆ

ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುತ್ತೆ

ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ..ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿದ್ರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತೆ.

ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುತ್ತೆ

ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ನೀಡುತ್ತೆ

ಮನೆಯಲ್ಲೇ ಕಷಾಯದ ಪುಡಿ ತಯಾರಿಕೆ ಮಾಡುವವರು ನೈಸರ್ಗಿಕವಾಗಿರುವ ಮುಟ್ಟಿದರೆ ಮುನಿ ಸಸ್ಯದ ಪುಡಿಯನ್ನು ಅದಕ್ಕೆ ಬಳಕೆ ಮಾಡಬಹುದು.

ಗಾಯವಾಗಿ ರಕ್ತಸ್ರಾವವಾಗುತ್ತಾ ಇದ್ದರೆ ಇದೊಂದು ಉತ್ತಮ ಮದ್ದು

ಗಾಯವಾಗಿ ರಕ್ತಸ್ರಾವವಾಗುತ್ತಾ ಇದ್ದರೆ ಇದೊಂದು ಉತ್ತಮ ಮದ್ದು

ಹಿಂದಿನ ಕಾಲದಲ್ಲಿ ತೋಟದ ಕೆಲಸಕ್ಕೆ, ಕಾಡುಮೇಡುಗಳಲ್ಲಿ ಕೆಲಸ ಮಾಡುವಾಗ ಗಾಯವಾಗಿ ರಕ್ತ ಸೋರಿಕೆಯಾಗುತ್ತಿದ್ದರೆ ಹತ್ತಿರದಲ್ಲಿ ಯಾವ ಬ್ಯಾಂಡೇಜು ಇರುತ್ತಿರಲಿಲ್ಲ. ಅಲ್ಲಿರುತ್ತಿದ್ದ ಮೆಡಿಸಿನ್ ಈ ಮುಟ್ಟಿದರೆ ಮುನಿ ಸಸ್ಯ ಅಂದ್ರೆ ನೀವು ನಂಬಲೇಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗಾಯವಾಗಿ ರಕ್ತಸ್ರಾವವಾಗುತ್ತಾ ಇದ್ದರೆ ಇದೊಂದು ಉತ್ತಮ ಮದ್ದು

ಗಾಯವಾಗಿ ರಕ್ತಸ್ರಾವವಾಗುತ್ತಾ ಇದ್ದರೆ ಇದೊಂದು ಉತ್ತಮ ಮದ್ದು

ಗಾಯವಾಗಿ ರಕ್ತ ಸೋರಿಕೆಯಾಗುತ್ತಿದ್ದಲ್ಲಿ ನಾಚಿಕೆ ಮುಳ್ಳಿನ ಗಿಡದ ಎಲೆಯನ್ನು ಜಜ್ಜಿ ಹಚ್ಚಿದ್ರೆ ಕೂಡಲೇ ರಕ್ತಸ್ರಾವ ನಿಲ್ಲುತ್ತೆ ಮತ್ತು ಗಾಯ ಬೇಗನೆ ವಾಸಿಯಾಗುತ್ತೆ.

ಚರ್ಮ ರೋಗ ನಿವಾರಣೆಗೆ ಸಹಕಾರಿ

ಚರ್ಮ ರೋಗ ನಿವಾರಣೆಗೆ ಸಹಕಾರಿ

ಯಾರಿಗೆ ತುರಿಕೆ ಮತ್ತು ಇತರೆ ಚರ್ಮ ಸಂಬಂಧಿ ಕಾಯಿಲೆಗಳಿರುತ್ತೋ, ಅಂತವರು ಮುಟ್ಟಿದರೆ ಮುನಿ ಗಿಡದ ರಸವನ್ನು ಹಚ್ಚಿಕೊಳ್ಳೋದ್ರಿಂದ ಚರ್ಮ ರೋಗ ನಿವಾರಣೆಯಾಗುತ್ತೆ.

ಸೈಡ್ ಎಫೆಕ್ಟ್

ಸೈಡ್ ಎಫೆಕ್ಟ್

ಇಷ್ಟೆಲ್ಲ ಪ್ರಯೋಜನವಿರುವ ಮುಟ್ಟಿದರೆ ಮುನಿ ಸಸ್ಯದ ಒಂದು ಅಪಾಯವೂ ಇದೆ. ಇದರ ಮುಳ್ಳುಗಳು ಚುಚ್ಚಿದ್ರೆ ನೋವು ಮಾತ್ರವಲ್ಲ, ದೇಹದಲ್ಲಿ ನಂಜು ಹೆಚ್ಚಾಗುವ ಸಾಧ್ಯತೆ ಇರುತ್ತೆ.


English summary

The Health Benefits of Sensitive Plant

The sensitive plant is a trailing plant; the stems have numerous thorns generally hairy where they sprout from 4 to 8 small leaves. It has a mauve coloured round headed flowers. Sometimes known as sleeping grass, bashful mimosa, touch-me-not, or the humble plant, the sensitive plant is actually native to Brazil, but it is invasive there and is often considered a weed. In the sameway there is lot of benefits in sensitive Plant have a look
X
Desktop Bottom Promotion