For Quick Alerts
ALLOW NOTIFICATIONS  
For Daily Alerts

ಕಟ್ಟೆಚ್ಚರ: ಸ್ವಲ್ಪ ಎಚ್ಚರ ತಪ್ಪಿದರೂ ವಿಷ ಹೊಟ್ಟೆ ಸೇರಲಿದೆ!

By
|

ನಾವಿಂದು ಕ್ಷೇಮವಾಗಿ ಸೇವಿಸುತ್ತಿರುವ ಹಣ್ಣು, ಧಾನ್ಯಗಳೆಲ್ಲವೂ ಒಂದು ಕಾಲದಲ್ಲಿ ಕಾಡಿನಲ್ಲಿದ್ದವೇ. ನಮ್ಮ ಹಿರಿಯರು ಇವುಗಳಲ್ಲಿ ತಿನ್ನಬಹುದಾದುದನ್ನು ತಮ್ಮ ಅನುಭವದಿಂದ ಆಯ್ದು ಈ ಬೆಳೆಗಳ ತೋಟ ಗದ್ದೆಗಳನ್ನು ಮಾಡಿ ಬೆಳೆದು ಬಂದ ಕಾರಣ ನಮಗಿಂದು ಉತ್ತಮ ಆಹಾರ ದೊರಕುತ್ತಿದೆ.

ಆದರೆ ನಮಗೆ ಅರಿವಿಲ್ಲದ ಎಷ್ಟೋ ಆಹಾರಗಳು ಅಥವಾ ಹಣ್ಣು ಹಂಪಲುಗಳು ವಿಷಕಾರಿಯಾಗಿರಬಹುದು. ಇದರ ಬಗ್ಗೆ ಅರಿವೇ ಇಲ್ಲದೇ ನಾವು ಸೇವಿಸುತ್ತಿದ್ದೇವೆ. ಉದಾಹರಣೆಗೆ ಆಲೂಗಡ್ಡೆ. ಸಾಮಾನ್ಯವಾಗಿ ಹೆಚ್ಚು ಕಾಲ ಕೆಡದೇ ಉಳಿಸಬಹುದಾದ ತರಕಾರಿಯಾಗಿರುವ ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ನಾವು ಫ್ರಿಜ್ಜಿನಲ್ಲಿಡದೇ ಹೊರಗೇ ಇಡುತ್ತೇವೆ. ಆದರೆ ಕೆಲವು ದಿನಗಳ ಬಳಿಕ ಆಲೂಗಡ್ಡೆಯ ಕಣ್ಣುಗಳಲ್ಲೆಲ್ಲಾ ಚಿಕ್ಕ ಚಿಕ್ಕ ಮೊಳಕೆಗಳು ಮೂಡುತ್ತವೆ. ಆಮೇಲೆ? ಅಚ್ಚರಿ, ಆದರೂ ಸತ್ಯ-ಈ ಆಹಾರಗಳು ವಿಷದಷ್ಟೇ ಅಪಾಯಕಾರಿ!

ಆಮೇಲೇನು, ಈ ಮೊಳಕೆಗಳನ್ನು ನಿವಾರಿಸಿ ಆಲುಗಡ್ಡೆಯನ್ನು ಪಲ್ಯ ಮಾಡಿ ಚಪ್ಪರಿಸುತ್ತೇವೆ. ಇದೇ ನಾವೆಲ್ಲರೂ ಮಾಡುತ್ತಿರುವ ತಪ್ಪು. ಆಲೂಗಡ್ಡೆ ಮೊಳಕೆ ಮೂಡುವ ಮೊದಲು ತಿಂದರೆ ಮಾತ್ರ ಕ್ಷೇಮ. ಮೊಳಕೆ ಬರಲು ತೊಡಗಿದ ಕೂಡಲೇ ಒಳಗಡೆ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ, ಇವು ವಿಷಕಾರಿಯಾಗಿವೆ.

ಹೌದೇ? ಈ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಉದ್ಗಾರ ತೆಗೆದಿರಾ? ತಾಳಿ, ಇಲ್ಲಿ ಕೆಲವೊಂದು ತರಕಾರಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಮುಂದೆ ಓದಿ...

ಆಲೂಗಡ್ಡೆ

ಆಲೂಗಡ್ಡೆ

ಮೊಳಕೆ ಬಂದ ಬಳಿಕ ಇದರೊಳಗೆ ಉತ್ಪತ್ತಿಯಾಗುವ ರಾಸಾಯನಿಕಗಳು ವಾಂತಿ ಮತ್ತು ಬೇಧಿಯನ್ನು ಉಂಟುಮಾಡುತ್ತವೆ. ಕೆಲವೊಮ್ಮೆ ಆಲುಗಡ್ಡೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತದೆ. ವಾಸ್ತವವಾಗಿ ಇದು ಆಲೂಗಡ್ಡೆಗೆ ನಿಸರ್ಗ ನೀಡಿರುವ ರಕ್ಷಣಾ ವ್ಯವಸ್ಥೆಯಾಗಿದೆ.

ಆಲೂಗಡ್ಡೆ

ಆಲೂಗಡ್ಡೆ

ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಲುಗಡ್ಡೆಯ ಒಳಗೆ glycoalkaloid ಎಂಬ ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗುತ್ತವೆ. ಇದನ್ನು ತಿಂದ ಪ್ರಾಣಿಗೆ ಇದು ಕಹಿಯಾಗಿರುತ್ತದೆ ಅಥವಾ ಕೀಟಗಳು ಹೀರದಿರಲು ನೆರವಾಗುತ್ತದೆ. ಆದರೆ ಈ ಆಲೂಗಡ್ಡೆಯನ್ನು ತಿಂದರೆ ನಮಗೂ ಹೊಟ್ಟೆ ಕೆಡುವುದು ಖಚಿತ. ಊಹೆಗೂ ನಿಲುಕದ ಆಲೂಗಡ್ಡೆಯ ಕಾರುಬಾರು....

ಬಾದಾಮಿ

ಬಾದಾಮಿ

ಎಲ್ಲಿಯವರೆಗೆ ಬಾದಾಮಿಯ ರುಚಿ ಕಹಿಯಾಗುವುದಿಲ್ಲವೋ ಅಲ್ಲಿಯವರೆಗೆ ಇದು ಸುರಕ್ಷಿತ. ಒಂದು ವೇಳೆ ಇದರ ರುಚಿ ಕೊಂಚವಾದರೂ ಕಹಿ ಅನ್ನಿಸಿದರೆ ಇದನ್ನು ತಕ್ಷಣ ಎಸೆದು ಬಿಡಬೇಕು.

ಬಾದಾಮಿ

ಬಾದಾಮಿ

ಏಕೆಂದರೆ ಇದರಲ್ಲಿ ಉತ್ಪತ್ತಿಯಾಗುವ ರಾಸಾಯನಿಕದಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ಸಯನೈಡ್ ವಿಷ ಇರುತ್ತದೆ. ಒಂದು ವೇಳೆ ಕಹಿ ಬಂದಿರುವ ಬಾದಾಮಿಯನ್ನು ಕೊಂಚ ಹೆಚ್ಚಿನ ಸಂಖ್ಯೆಯಲ್ಲಿ ತಿಂದರೆ ಸಾವಿಗೂ ಕಾರಣವಾಗಬಹುದು.

 ಟೊಮೇಟೊ

ಟೊಮೇಟೊ

ಕೆಲವೊಮ್ಮೆ ಟೊಮೇಟೊ ತಾಜಾ ಇರಬೇಕೆಂದು ತೊಟ್ಟಿನ ಸಹಿತ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುತ್ತಾರೆ. ಆದರೆ ತಿನ್ನುವ ಮೊದಲು ಈ ತೊಟ್ಟು ಮತ್ತು ಎಲೆಗಳನ್ನು ನಿವಾರಿಸಿಯೇ ತಿನ್ನಬೇಕು. ಏಕೆಂದರೆ ತೊಟ್ಟು ಮತ್ತು ಎಲೆಗಳಲ್ಲಿ glycoalkaloid ರಾಸಾಯನಿಕವಿದ್ದು ಇದೊಂದು ವಿಷಕಾರಿ ವಸ್ತುವಾಗಿದೆ. ಬರೀ 15 ನಿಮಿಷದಲ್ಲಿ ಟೊಮೇಟೊ ಚಟ್ನಿ ರೆಡಿ!

ಮರಗೆಣಸು

ಮರಗೆಣಸು

ಮರಗೆಣಸಿನಲ್ಲಿಯೂ ಅಲ್ಪ ಪ್ರಮಾಣದ ಸಯನೈಡ್ ವಿಷವಿದೆ. ವಿಶೇಷವಾಗಿ ಇದರ ಎರಡನೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಆದ್ದರಿಂದ ಇದನ್ನು ತಿನ್ನುವ ಮೊದಲು ಹೊರಗಿನ ದಪ್ಪ ಸಿಪ್ಪೆಯನ್ನು ನಿವಾರಿಸಿ ಚೆನ್ನಾಗಿ ತೊಳೆದು ಕೊಂಚ ಕಾಲ ನೀರಿನಲ್ಲಿಟ್ಟು, ಬಳಿಕ ಬೇಯಿಸಿ ಅಥವಾ ಒಣಗಿಸಿ ಸೇವಿಸಿದರೆ ಮಾತ್ರ ಇದು ಸುರಕ್ಷಿತ. ಇಲ್ಲದಿದ್ದರೆ ಇದು ವಿಷವಾಗಿ ಪರಿಣಮಿಸಬಹುದು.

ಅಣಬೆ

ಅಣಬೆ

ಮಳೆ ಬಂತೆಂದರೆ ಹಲವಾರು ವಿಧದ ಅಣಬೆಗಳು ಅಲ್ಲಲ್ಲಿ ಹುಟ್ಟುತ್ತವೆ. ಒಂದಕ್ಕಿಂತ ಒಂದು ನೋಡಲು ಸುಂದರವಾಗಿದ್ದರೂ ಇವುಗಳಲ್ಲಿ ಬಹುತೇಕ ತಿನ್ನಲು ಯೋಗ್ಯವಲ್ಲ.

ಅಣಬೆ

ಅಣಬೆ

ಪರಿಣಿತರು ಬೆಳೆಸಿ ಸೇವಿಸಲು ಸುರಕ್ಷಿತ ಎಂದು ಖಚಿತಪಡಿಸಿದ ಅಣಬೆಯ ಹೊರತಾಗಿ ಬೇರಾವ ಅಣಬೆಗಳನ್ನು ಸೇವಿಸಬಾರದು. ಅದರಲ್ಲೂ ಬಿಳಿಚುಕ್ಕೆಯ ಕೆಂಪು ಬಣ್ಣದ ಅತಿ ಸುಂದರ ಅಣಬೆಯಂತೂ ಅತ್ಯಂತ ವಿಷಕಾರಿಯಾಗಿದ್ದು ಇದರ ಒಂದೇ ತುತ್ತು ಸ್ವಾಸ್ಥ್ಯ ಕೆಡಿಸಬಲ್ಲುದು.

English summary

Poisonous Foods We May Eat By Mistake

Though the fruits and vegetables that we eat on a daily basis are not poisonous, there could be situations where they could turn poisonous. Let us discuss about them in this post..
X
Desktop Bottom Promotion