For Quick Alerts
ALLOW NOTIFICATIONS  
For Daily Alerts

ಊಹೆಗೂ ನಿಲುಕದ ಆಲೂಗಡ್ಡೆಯ ಕಾರುಬಾರು....

By Manu
|

ಅಡುಗೆಯಲ್ಲಿ ಆಲೂಗಡ್ಡೆಯ ಪಾತ್ರ ಬಹಳ ವಿಶಾಲವಾದುದು. ದೋಸೆ, ಪಲ್ಯ, ಸಾಂಬಾರ್ ಮೊದಲಾದವುಗಳೆಲ್ಲಾ ಆಲುಗಡ್ಡೆಯ ವಿನಃ ಪೂರ್ಣವಾಗುವುದೇ ಇಲ್ಲ. ಅಲ್ಲದೇ ಆಲೂಗಡ್ಡೆ ಮತ್ತು ಇತರ ತರಕಾರಿ ಬಳಸಿ ಮಾಡಬಹುದಾದ ಖಾದ್ಯಗಳ ಪಟ್ಟಿ ಬಹಳವೇ ದೊಡ್ಡದಿದೆ. ಆಲು ಗೋಬಿ, ಆಲು ಚನಾ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರಾರು ಹೆಸರುಗಳು ದೊರಕಬಹುದು. ಆಲೂಗಡ್ಡೆ ಕೇವಲ ಆಹಾರಕ್ಕಾಗಿ ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಕೂದಲಿನ ಸಮೃದ್ಧ ಪೋಷಣೆಗೆ ಆಲೂಗಡ್ಡೆ ಜ್ಯೂಸ್

ಇದರ ಒಂದು ಉತ್ತಮ ಪ್ರಯೋಗವನ್ನು ಮುಖಲೇಪದ ರೂಪದಲ್ಲಿಯೂ ಮಾಡಬಹುದು. ಮುಖದ ಚರ್ಮದ ಆರೈಕೆಗಾಗಿ ಸುಲಭ, ವರ್ಷಪೂರ್ತಿ ಲಭ್ಯವಿರುವ, ಅಗ್ಗದ ಮತ್ತು ಫಲಪ್ರದವಾಗಿ ಬಳಸಬಹುದಾದ ತರಕಾರಿ ಎಂದರೆ ಆಲೂಗಡ್ಡೆ. ಇದಕ್ಕೆ ಪ್ರಮುಖ ಕಾರಣ ಆಲೂಗಡ್ಡೆಯಲ್ಲಿರುವ ರಸದ (ವಿಶೇಷವಾಗಿ ಸಿಪ್ಪೆಯ) ಕೊಂಚ ಕ್ಷಾರೀಯ ಗುಣ. ಇದು ಚರ್ಮದ ಆಮ್ಲೀಯತೆಯನ್ನು ಕಡಿಮೆಗೊಳಿಸುವ ಮೂಲಕ ಹೆಚ್ಚಿನ ಆರೈಕೆ ನೀಡುತ್ತದೆ.

ಆಲೂಗಡ್ಡೆಯಲ್ಲಿ ಪಿಷ್ಟದ ಜೊತೆಗೇ ವಿಟಮಿನ್ ಸಿ ಸಹಾ ಇದ್ದು ಚರ್ಮದ ಕೊಲ್ಯಾಜೆನ್ ಎಂಬ ಕಣಗಳನ್ನು ಒಂದುಗೂಡಿಸಿ (synthesis of collagen) ಚರ್ಮದ ಪದರ ದೃಢಗೊಳಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮದ ಸೆಳೆತ ಹೆಚ್ಚುವ ಮೂಲಕ ನೆರಿಗೆ ಮತ್ತು ವೃದ್ಧಾಪ್ಯದ ಗುರುತುಗಳು ಮೂಡುವ ಸಾಧ್ಯತೆ ಮುಂದೂಡಬಹುದು. ಅಲ್ಲದೇ ಆಲೂಗಡ್ಡೆಯಲ್ಲಿರುವ ಕೆಲವು ವಿಶಿಷ್ಟ ಪ್ರೋಟೀನುಗಳು ಚರ್ಮದ, ಅದರಲ್ಲೂ ವಿಶೇಷವಾಗಿ ಚರ್ಮದ ಹೊರಪದರದಲ್ಲಿ ನಷ್ಟವಾದ ಜೀವಕೋಶಗಳು ಹೊಸದಾಗಿ ಉತ್ಪತ್ತಿಯಾಗಲು ನೆರವಾಗುತ್ತದೆ. ಇದರಿಂದ ಚರ್ಮದ ಹೊರಪದರಲ್ಲಿ ಆಗಿದ್ದ ಗಾಯ, ಗೀರು, ಬಿರುಕುಗಳು ಮತ್ತು ಪೊರೆ ಎದ್ದಿರುವ ತೊಂದರೆಗಳೆಲ್ಲಾ ಶೀಘ್ರವಾಗಿ ಮಾಯವಾಗುತ್ತವೆ. ಬನ್ನಿ ಆಲೂಗಡ್ಡೆಯನ್ನು ಚರ್ಮದ ಆರೈಕೆಗಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ತುಟಿಯ ಪಕ್ಕದ ನೆರಿಗೆಗಳನ್ನು ನಿವಾರಿಸಲು

ತುಟಿಯ ಪಕ್ಕದ ನೆರಿಗೆಗಳನ್ನು ನಿವಾರಿಸಲು

ವಯಸ್ಸಾಗುತ್ತಾ ಹೋದಂತೆ ಮೊದಲು ಕಾಣಿಸಿಕೊಳ್ಳುವ ನೆರಿಗೆ ಎಂದರೆ ತುಟಿಯ ಅಕ್ಕಪಕ್ಕದ ಭಾಗ. ಇದನ್ನು ನಿಧಾನಗೊಳಿಸಲು ಚರ್ಮಕ್ಕೆ ಸತು ಮತ್ತು ತಾಮ್ರದ ಪೋಷಣೆಯ ಅಗತ್ಯವಿದೆ. ಈ ಕೊರತೆಯನ್ನು ಆಲೂಗಡ್ಡೆ ಸಮರ್ಥವಾಗಿ ನೀಗಿಸುತ್ತದೆ. ಇದಕ್ಕಾಗಿ ಎರಡು ದೊಡ್ಡಚಮಚ ಆಲೂಗಡ್ಡೆಯ ತಿರುಳು (ಸಿಪ್ಪಿ ಸಹಿತ) ಮತ್ತು ಕೊಂಚ ಉಗುರುಬೆಚ್ಚನೆಯ ನೀರು ಸೇರಿಸಿ ಅರೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುಟಿಯ ಪಕ್ಕದ ನೆರಿಗೆಗಳನ್ನು ನಿವಾರಿಸಲು

ತುಟಿಯ ಪಕ್ಕದ ನೆರಿಗೆಗಳನ್ನು ನಿವಾರಿಸಲು

ಈ ಲೇಪನವನ್ನು ನೇರವಾಗಿ ಮುಖಕ್ಕೆ ಹಚ್ಚಿ. ಆದರೆ ಕಣ್ಣುಗಳ ಸುತ್ತ ಮತ್ತು ಕುತ್ತಿಗೆಯ ಮುಂಭಾಗದ ಚರ್ಮಕ್ಕೆ ಹಚ್ಚಬೇಡಿ. ಇಪ್ಪತ್ತು ನಿಮಿಷದ ಬಳಿಕ ಒದ್ದೆಯಾದ ಬಟ್ಟೆ ಅಥವಾ ಟಿಶ್ಯೂ ಪೇಪರ್ ಒತ್ತಿ ಒರೆಸಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ಅಥವಾ ಇನ್ನೂ ಕೊಂಚವೇ ಬಿಸಿ ಇರುವ ನೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸಬೇಡಿ.

ಸಲಹೆ #1

ಸಲಹೆ #1

ಆಲುಗಡ್ಡೆಯ ಮುಖಲೇಪ ಚರ್ಮದ ಸೂಕ್ಷ್ಮರಂಧ್ರಗಳನ್ನು ಬಿಗಿಗೊಳಿಸುತ್ತದೆ, ರಕ್ತಸಂಚಾರ ಹೆಚ್ಚಿಸುತ್ತದೆ ಹಾಗೂ ಚರ್ಮವನ್ನು ಮೃದುಗೊಳಿಸಲೂ ನೆರವಾಗುತ್ತದೆ. ಈ ಎಲ್ಲಾ ಗುಣಗಳ ಕಾರಣ ಆಲುಗಡ್ಡೆಯ ಮುಖಲೇಪವನ್ನು ನಿಯಮಿತವಾಗಿ ಬಳಸುವುದನ್ನು ಸೌಂದರ್ಯತಜ್ಞರು ಶಿಫಾರಸ್ಸು ಮಾಡುತ್ತಾರೆ. ಅಷ್ಟೇ ಅಲ್ಲ, ಆಲುಗಡ್ಡೆಯ ಹಸಿ ತಿರುಳನ್ನು ಕೈಗಳಿಗೆ ಹಚ್ಚಿಕೊಳ್ಳುವ ಮೂಲಕವೂ ಹಸ್ತ, ಮೊಣಕೈಗಳ ಚರ್ಮವನ್ನೂ ಮೃದುಗೊಳಿಸಬಹುದು. ಇದಕ್ಕಾಗಿ ಹಸಿ ಆಲುಗಡ್ಡೆಯನ್ನು ಸಿಪ್ಪೆ ಸಹಿತ ಅರೆದು ತೆಳುವಾಗಿ ಕೈಗಳಿಗೆ ಲೇಪಿಸಿ ಅರ್ಧಘಂಟೆ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸಲಹೆ #2

ಸಲಹೆ #2

ಒಂದು ಆಲುಗಡ್ಡೆಯನ್ನು ಬೇಯಿಸಿ ಇದನ್ನು ಕಿವುಚಿ ಮತ್ತೆ ನೀರಿಗೆ ಬೆರೆಸಿ ಚೆನ್ನಾಗಿ ಕಲಕಿ ಮತ್ತೊಮ್ಮೆ ಕುದಿಸಿ. ಈ ನೀರು ತಣಿದ ಬಳಿಕ ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿಗೆ ಸಮಪ್ರಮಾಣದಲ್ಲಿ ಹಸಿ ಹಾಲನ್ನು ಬೆರೆಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಲ್ಲಿ ಹತ್ತಿಯುಂಡೆಯನ್ನು ಅದ್ದಿ ಮುಖದ ಚರ್ಮಕ್ಕೆ ನವಿರಾಗಿ ಹಚ್ಚಿ ಹತ್ತು ಅಥವಾ ಹದಿನೈದು ನಿಮಿಶ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ಕಡಿಮೆ ವಯಸ್ಸಿನಲ್ಲಿಯೇ ಎದುರಾದ ನೆರಿಗೆಗಳನ್ನು ನಿವಾರಿಸಬಹುದು.

ಸಲಹೆ #3

ಸಲಹೆ #3

ಒಂದು ವೇಳೆ ನಿಮ್ಮ ತ್ವಚೆ ಎಣ್ಣೆತ್ವಚೆಯಾಗಿದ್ದರೆ ಹಸಿ ಆಲುಗಡ್ಡೆ (ಸಿಪ್ಪೆ ಸಹಿತ) ಯಿಂದ ಸಂಗ್ರಹಿಸಿದ ಕಾಲುಕಪ್ ರಸ ಮತ್ತು ಕಾಲು ಕಪ್ ಟೊಮೇಟೊ ತಿರುಳನ್ನು ಅರೆದು ತೆಗೆದ ರಸವನ್ನು ಸೇರಿಸಿ ಮಿಶ್ರಣ ಮಾಡಿ ಈ ರಸವನ್ನು ಬಾಟಲಿಯಲ್ಲಿ ಸಂಗ್ರಹಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲಹೆ #3

ಸಲಹೆ #3

ಹತ್ತಿಯುಂಡೆಯೊಂದನ್ನು ಈ ದ್ರವದಲ್ಲಿ ಮುಳುಗಿಸಿ ಎಣ್ಣೆಪಸೆ ಇರುವಲ್ಲಿ ಕೊಂಚ ಒತ್ತಡದಿಂದ ಒರೆಸಿಕೊಳ್ಳಿ. ಎಣ್ಣೆ ಪಸೆ ಸುಲಭವಾಗಿ ಹತ್ತಿಯುಂಡೆಗೆ ಅಂಟಿಕೊಂಡು ಬರುತ್ತದೆ. ಪ್ರತಿದಿನ ಎರಡರಿಂದ ಮೂರು ಬಾರಿ ಬಳಸುವ ಮೂಲಕ ಇಡಿಯ ದಿನ ಎಣ್ಣೆಪಸೆಯಿಂದ ಮುಕ್ತರಾಗಬಹುದು.

English summary

Using Potato Juice For Skin Treatments Is Surprisingly ..

Potatoes are natural, inexpensive and are an efficacious means for treating skin issues. The reason is in the chemical composition of potato tubers that contain many substances that are highly useful for the skin. here are the few benefits of potatoes juice, have a look...
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more