For Quick Alerts
ALLOW NOTIFICATIONS  
For Daily Alerts

ನೋವು ನಿವಾರಕ ಮಾತ್ರೆ ಪಕ್ಕಕ್ಕಿಡಿ, ಮನೆಮದ್ದು ಪ್ರಯತ್ನಿಸಿ

By Manu
|

ದೇಹದಲ್ಲಿ ಎಲ್ಲೇ ನೋವಾದರೂ ಇದನ್ನು ಕಡಿಮೆಯಾಗಲು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಿದ್ದೀರಾ? ಇದರಿಂದ ತಾತ್ಕಾಲಿಕವಾಗಿ ನೋವು ಇಲ್ಲದಂತೆ ಅನ್ನಿಸಿದರೂ ಇದರ ಅಡ್ಡ ಪರಿಣಾಮಗಳು ಬಳಿಕ ಹಲವು ತೊಂದರೆಗಳಿಗೆ ಕಾರಣವಾಗಬಹುದು. ವಾಸ್ತವವಾಗಿ ನೋವು ನಿವಾರಕಗಳು ನೋವು ನಿವಾರಕವೇ ಅಲ್ಲ! ಕಾಡುವ ಮೈ ಕೈ ನೋವಿಗೆ-ಅಡುಗೆ ಮನೆಯಲ್ಲಿದೆ ಶಾಶ್ವತ ಪರಿಹಾರ

ಬದಲಿಗೆ ನೋವಿನ ಸಂವೇದನೆ ಮೆದುಳಿಗೆ ತಲುಪದಂತೆ ನಮ್ಮ ನರಗಳನ್ನು ನಡುವೆ ಮರಗಟ್ಟಿಸುತ್ತದೆ. ನಿಜವಾಗಿ ನೋವು ಕಡಿಮೆ ಮಾಡುವುದು ಈ ನೋವು ನಿವಾರಕಗಳಲ್ಲ, ಬದಲಿಗೆ ನಮ್ಮ ರೋಗ ನಿರೋಧಕ ವ್ಯವಸ್ಥೆಯೇ! ಪದೇ ಪದೇ ನೋವು ನಿವಾರಕ ಸೇವಿಸುವ ಮೂಲಕ ನರಗಳು ಸತತವಾಗಿ ಮರಗಟ್ಟಿ, ಮತ್ತೆ ಸಡಿಲಗೊಂಡು ಕೊನೆಗೊಮ್ಮೆ ಶಿಥಿಲವಾಗುತ್ತವೆ. ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

ಇದು ಹಲವು ಪ್ರಾಣಾಂತಿಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಆದ್ದರಿಂದ ನೋವು ನಿವಾರಕ ಅನಿವಾರ್ಯವಲ್ಲದೇ ವೈದ್ಯರಂತೂ ನೀಡುವುದೇ ಇಲ್ಲ. ಹೀಗಿರುವಾಗ ನಾವೇ ನಮ್ಮ ಇಚ್ಛೆಯ ಮೇರೆಗೆ ಸೇವಿಸುವುದು ನಮ್ಮ ಕಾಲಿಗೆ ನಾವೇ ಕೊಡಲಿ ಹೊಡೆದಂತೆ. ಆದರೆ ನಿಜವಾಗಿಯೂ ನೋವನ್ನು ಕಡಿಮೆ ಮಾಡಿಯೇ ಪರಿಹಾರ ಒದಗಿಸುವ ಕೆಲವು ನೈಸರ್ಗಿಕ ಔಷಧಿಗಳಿವೆ.

ಇವು ಅತಿ ಶೀಘ್ರವಾಗಿ ನೋವಿಗೆ ಕಾರಣವಾಗಿರುವ ತೊಂದರೆಯನ್ನು ಇಲ್ಲವಾಗಿಸಿ ನಿಜವಾಗಿಯೂ ನೋವನ್ನು ಕಡಿಮೆ ಮಾಡುತ್ತವೆ. ಈ ಅಪಾಯಕಾರಿ ನೋವು ನಿವಾರಕ ಗುಳಿಗೆಗಳ ಬದಲು ನೈಸರ್ಗಿಕ ವಿಧಾನವನ್ನು ಅನುಸರಿಸಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ನೋವಿನಿಂದ ಪಾರಾಗಲು ಜಾಣರಾಗೋಣ ಬನ್ನಿ.....

ಅರಿಶಿನ

ಅರಿಶಿನ

ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿ ಸಹಾ ಉತ್ತಮ ನೈಸರ್ಗಿಕ ನೋವುನಿವಾರಕವಾಗಿದೆ. ವಿಶೇಷವಾಗಿ ಎದೆಯುರಿ, ಅಜೀರ್ಣ, ಆಮ್ಲೀಯತೆ ಮೊದಲಾದ ಕಾರಣಗಳಿಂದ ಹೊಟ್ಟೆಯಲ್ಲಿ ನೋವು ಕಂಡುಬಂದರೆ ಹಸಿಶುಂಠಿಯ ಸೇವನೆಯಿಂದ ಶೀಘ್ರ ಪರಿಹಾರ ಕಂಡುಬರುತ್ತದೆ. ಅಲ್ಲದೇ ಎದೆಯಲ್ಲಿ ನೋವು, ಮೂಳೆಗಳ ಸಂಧುಗಳಲ್ಲಿ ನೋವು, ಉರಿ ಮೊದಲಾದವು ಕಂಡುಬಂದರೆ ಹಸಿಶುಂಠಿ ಉತ್ತಮ ಪರಿಹಾರ ಒದಗಿಸುತ್ತದೆ. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಲವಂಗದ ಎಣ್ಣೆ

ಲವಂಗದ ಎಣ್ಣೆ

ಹಲ್ಲಿನಲ್ಲಿ, ಒಸಡುಗಳಲ್ಲಿ ನೋವು ಕಂಡುಬಂದರೆ ಆ ಭಾಗದಲ್ಲಿ ಲವಂಗದ ಎಣ್ಣೆಯನ್ನು ಹಚ್ಚುವ ಮೂಲಕ ನೋವು ತಕ್ಷಣ ಕಡಿಮೆಯಾಗುತ್ತದೆ. ತಲೆನೋವಿಗೂ ಲವಂಗದ ಎಣ್ಣೆಯ ಲೇಪನ ಶೀಘ್ರವಾದ ಪರಿಹಾರ ನೀಡುತ್ತದೆ. ಲವಂಗದ ಎಣ್ಣೆ ಉತ್ತಮ ನೋವು ನಿವಾರಕವಾಗಿದ್ದು ನೋವನ್ನು ಕಡಿಮೆಗೊಳಿಸಲು ಸಕ್ಷಮವಾಗಿದೆ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ನೀರು

ನೀರು

ನೀರು ಸಹಾ ಒಂದು ಉತ್ತಮ ನೋವು ನಿವಾರಕವಾಗಿದೆ. ನೂರಾರು ವರ್ಷಗಳಿಂದ ಹಲವು ನೋವುಗಳಿಗೆ ನೀರು ಕುಡಿಯುವ ಮೂಲಕ ಪರಿಹಾರ ಕಂಡುಕೊಳ್ಳುತ್ತಾ ಬರಲಾಗಿದೆ. ನಮ್ಮ ಜೀವಕೋಶಗಳಿಗೆ ಆರ್ದ್ರತೆ ಒದಗಿಸುವ ಮೂಲಕ ಉರಿಯೂತ, ಬಾವು ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಮೈಕೈ ನೋವು, ಸ್ನಾಯುಗಳ ಸೆಳೆತ ಇದ್ದಾಗ ಸಾಕಷ್ಟು ನೀರು ಕುಡಿಯುವುದರಿಂದ ಶೀಘ್ರ ನೋವು ಕಡಿಮೆಯಾಗುತ್ತದೆ.

ಮೊಸರು

ಮೊಸರು

ಹೊಟ್ಟೆಗೆ ಸಂಬಂಧಿಸಿದ ನೋವಿರಲಿ ಅಥವಾ ಅಸಿಡಿಟಿಯಿರಲಿ ಮೊಸರು ಅದಕ್ಕೆ ಅತ್ಯುತ್ತಮ ಪರಿಹಾರ. ಇದನ್ನು ನಿಮ್ಮ ಆಹಾರದ ಜೊತೆಗೆ ಸೇವಿಸಬಹುದು ಅಥವಾ ಪ್ರತ್ಯೇಕವಾಗಿ ಸೇವಿಸಬಹುದು.

ಆಕ್ಯುಪಂಕ್ಚರ್

ಆಕ್ಯುಪಂಕ್ಚರ್

ನೋವು ಇರುವ ಸ್ಥಳದಲ್ಲಿ ಅತಿ ಸಪೂರವಾದ ಸೂಜಿಗಳನ್ನು ಚುಚ್ಚಿ ನೋವಿನ ಅಲೆಗಳನ್ನು ಹೊರಹಾಕುವ ಈ ವಿಧಾನ ಚೀನಾದಿಂದ ಬಂದಿದ್ದು ಶೀಘ್ರವಾಗಿ ನೋವು ಕಡಿಮೆ ಮಾಡಲು ನೆರವಾಗುತ್ತದೆ. ಆದರೆ ಈ ಸೂಜಿಗಳನ್ನು ಸರಿಯಾದ ಸ್ಥಳದಲ್ಲಿ ಸೂಕ್ತ ಒತ್ತಡದಲ್ಲಿ ಚುಚ್ಚಲು ತರಬೇತಿ ಪಡೆದ ವೈದ್ಯರಿಗೆ ಮಾತ್ರ ಸಾಧ್ಯ. ವಿಶೇಷವಾಗಿ ಮೊಣಕಾಲು, ಸೊಂಟನೋವು ಮೊದಲಾದವುಗಳಿಗೆ ಈ ವಿಧಾನ ಸೂಕ್ತವಾಗಿದೆ.

ವ್ಯಾಯಮ

ವ್ಯಾಯಮ

ಮೈಕೈ ನೋವಿದ್ದಾಗ ಈ ನೋವಿಗೆ ಇನ್ನಷ್ಟು ನೋವು ನೀಡುವ ಮೂಲಕ ನೋವನ್ನು ಕಡಿಮೆ ಮಾಡಬಹುದು. ಹೋಮಿಯೋಪಥಿ ವಿಧಾನದಲ್ಲಿ ಈ ಕ್ರಮವನ್ನೇ ಅನುಸರಿಸಲಾಗುತ್ತದೆ. ನೋವಿರುವ ಸ್ನಾಯುಗಳಿಗೆ ಹೆಚ್ಚಿನ ಶ್ರಮ ನೀಡುವ ಸುಲಭ ವ್ಯಾಯಮಗಳನ್ನು ಮಾಡುವ ಮೂಲಕ ನೋವು ಹೆಚ್ಚಾದಂತೆ ಅನ್ನಿಸಿದರೂ ಕೊಂಚ ತಾಳ್ಮೆ ವಹಿಸಿ ನೋವನ್ನು ತಡೆದುಕೊಂಡರೆ ಕೆಲವೇ ನಿಮಿಷಗಳಲ್ಲಿ ಚಮತ್ಕಾರವೋ ಎಂಬಂತೆ ನೋವು ಮಾಯವಾಗಿರುತ್ತದೆ.

English summary

Natural Pain Killer, Use Natural Pain Relief Remedies

Are you someone who frantically looks for painkillers the minute you experience some kind of a body pain? If yes, then may be you should consider natural alternatives to reduce pain! As we may already know, taking painkillers frequently can put our health at a serious risk, as painkillers can be infused with strong, harmful chemicals that can be pretty harsh on our body.
X
Desktop Bottom Promotion