For Quick Alerts
ALLOW NOTIFICATIONS  
For Daily Alerts

ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

By Manu
|

ಹಸಿಶುಂಠಿ ಎಂದರೆ ನಾವೆಲ್ಲಾ ಒಂದು ಮಸಾಲೆ ವಸ್ತು ಎಂದೇ ತಿಳಿದಿದ್ದೇವೆ. ಇನ್ನೂ ಹೆಚ್ಚೆಂದರೆ ಚಹಾದಲ್ಲಿ ಸೇರಿಸಿ ರುಚಿ ಹೆಚ್ಚಿಸಿಕೊಳ್ಳಬಹುದು ಎಂದು ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ಆದರೆ ನೂರಾರು ವರ್ಷಗಳಿಂದ ಹಸಿಶುಂಠಿಯನ್ನು ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಅದರಲ್ಲೂ ಭಾರತೀಯ ಔಷಧಿ, ಆಯುರ್ವೇದ ಮತ್ತು ಯುನಾನಿ ಪದ್ಧತಿಗಳಲ್ಲಿ ಹಸಿಶುಂಠಿಗೆ ಮಹತ್ವದ ಸ್ಥಾನವಿದೆ. ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಅಜ್ಜಿಯ ಮದ್ದಿನ ಸಾಮಾನ್ಯರೂಪವಾದ ಕಷಾಯದಲ್ಲಿಯೂ ಹಸಿಶುಂಠಿ ಇಲ್ಲದೇ ಇಲ್ಲ. ಶುಂಠಿ ಅಲರ್ಜಿಯಾಗಿರುವವರಿಗೆ ಹೊರತು ಉಳಿದವರಿಗೆಲ್ಲಾ ಹಸಿಶುಂಠಿ ಮಸಾಲೆಗಿಂತ ಹೆಚ್ಚಾಗಿ ಔಷಧಿಯ ರೂಪದಲ್ಲಿಯೇ ಆರೋಗ್ಯ ವೃದ್ಧಿಸುತ್ತದೆ. ಇದರ ಉರಿಯೂತ ನಿವಾರಕ ಗುಣಕ್ಕೆ ಇದರಲ್ಲಿರುವ ಜಿಂಜರ್ಸಾಲ್ ಮತ್ತು ಶೋಗಾವೋಲ್ (gingerols and shogaols) ಎಂಬ ಪೋಷಕಾಂಶಗಳು ಕಾರಣವಾಗಿದ್ದು ಸೋಂಕುಗಳಿಂದ ರಕ್ಷಣೆ ನೀಡುವುದರ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

ಗಂಟಲ ಬೇನೆ, ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ಕೆಳಹೊಟ್ಟೆಯ ನೋವು, ಅಜೀರ್ಣ, ಮಲಬದ್ಧತೆ, ಕೆಮ್ಮು, ಶೀತ ಮೊದಲಾದವುಗಳಿಗೆ ಶುಂಠಿ ಉತ್ತಮ ಪರಿಹಾರ ನೀಡಬಲ್ಲದು. ಆದರೆ ಇದರ ಸರಿಯಾದ ಬಳಕೆಯನ್ನು ನಿಮ್ಮ ಕುಟುಂಬ ವೈದ್ಯರ ಸಲಹೆ ಮೇರೆಗೆ ಬಳಸಿದರೆ ಮಾತ್ರ ಉತ್ತಮ. ಇದರ ಆರೋಗ್ಯಕರ ಪರಿಣಾಮಗಳು ಅತಿ ಹೆಚ್ಚಾಗಿ ಸಿಗಬೇಕಾದರೆ ಹಸಿಯಾಗಿ ಸೇವಿಸಬೇಕು ಎಂದು ಯಾರು ಎಲ್ಲಿ ಯಾವಾಗ ಹೇಳಿದ್ದರು ಎಂಬುದನ್ನು ಪರಿಗಣಿಸದೇ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಒಂದು ಚಿಕ್ಕ ತುಂಡನ್ನು ಜಗಿದು ರಸವನ್ನು ನುಂಗಿಬಿಡುತ್ತಾರೆ. ಬಿರುಬೇಸಿಗೆಯ ಧಗೆಯನ್ನು ತಂಪಾಗಿಸುವ ಶುಂಠಿ ಜ್ಯೂಸ್!

ಆದರೆ ಆಯುರ್ವೇದದ ಪ್ರಕಾರ ಹಸಿಶುಂಠಿಯನ್ನು ಹಸಿಯಾಗಿ ಸೇವಿಸಿದರೆ ಕೆಲವು ಪ್ರಯೋಜನಗಳಿವೆ. ಆದರೆ ಇದಕ್ಕೆ ಸರಿಯಾದ ಅಗತ್ಯವಿಲ್ಲದೇ ಇದ್ದರೆ ಸೇವಿಸಬಾರದು ಎಂದೂ ಹೇಳಿದೆ. ಹಾಗಾದರೆ ಇದರ ಸಮರ್ಪಕ ಸೇವನೆ ಹೇಗೆ ಎಂಬ ದ್ವಂದ್ವವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ...

ಮಧುಮೇಹಿಗಳು

ಮಧುಮೇಹಿಗಳು

ಮಧುಮೇಹಿಗಳು, ಅದರಲ್ಲೂ ಟೈಪ್ 1 ಮಧುಮೇಹಿಗಳು ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಹಸಿಶುಂಠಿಯ ರಸವನು ಬೆರೆಸಿದ ನೀರನ್ನು ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಇಡಿಯ ದಿನ ಏಕಪ್ರಕಾರವಾಗಿರುವಂತೆ ನೋಡಿಕೊಳ್ಳಬಹುದು.

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ

ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ

ಹಸಿಶುಂಠಿಯ ರಸ ರಕ್ತಪರಿಚಲನೆಯನ್ನು ಚುರುಕುಗೊಳಿಸಲು ಉತ್ತಮವಾಗಿದೆ. ಇದಕ್ಕಾಗಿ ಶುಂಠಿಯ ರಸವನ್ನು ದಿನದ ಪೇಯದಲ್ಲಿ ಬೆರೆಸಿ ಕುಡಿಯುವುದು ಉತ್ತಮ. ಆದರೆ ಕೆಲವರು ಅತಿರೇಕಕ್ಕೆ ಹೋಗಿ ಹಸಿಶುಂಠಿಯ ರಸವನ್ನು ಚರ್ಮಕ್ಕೆ ನೇರವಾಗಿ ಹೆಚ್ಚಿಕೊಳ್ಳುತ್ತಾರೆ. ಆದರೆ ಇದು ಅಪಾಯಕರವಾಗಿದ್ದು ಹಚ್ಚಿದ ಸ್ಥಳದಲ್ಲಿ ಅಪಾರವಾದ ಉರಿ ಕಾಣಿಸಿಕೊಂಡು ಬಹಳ ಹೊತ್ತಿನವರೆಗೆ ಉರಿಯುತ್ತದೆ. (ಇದನ್ನು ಖಂಡಿತಾ ಪ್ರಯತ್ನಿಸಬೇಡಿ)

ಹಸಿವನ್ನು ಹೆಚ್ಚಿಸುತ್ತದೆ

ಹಸಿವನ್ನು ಹೆಚ್ಚಿಸುತ್ತದೆ

ಕೆಲವರಿಗೆ ಹಸಿವಾಗದೇ ಊಟಕ್ಕೆ ಮನಸ್ಸಿರುವುದೇ ಇಲ್ಲ. ಬಲವಂತವಾಗಿ ಊಟಕ್ಕೆ ಬಡಿಸಿದರೂ ನೆಪಮಾತ್ರಕ್ಕೆ ಕೊಂಚ ಊಟ ಮಾಡಿ ಎದ್ದು ಹೋಗುತ್ತಾರೆ. ಇವರಿಗೆ ಊಟಕ್ಕೂ ಮುನ್ನ ಚಿಕ್ಕ ತುಂಡು ಹಸಿಶುಂಠಿಯನ್ನು ಜಗಿಯಲು ನೀಡಿದರೆ ಸುಮಾರು ಅರ್ಥಘಂಟೆಯಲ್ಲಿ ಹಸಿವಾಗುತ್ತಿದೆ ಎಂದು ಓಡಿ ಬರುತ್ತಾರೆ.

ತಲೆನೋವು ನಿವಾರಿಸುತ್ತದೆ

ತಲೆನೋವು ನಿವಾರಿಸುತ್ತದೆ

ಒಂದು ವೇಳೆ ನೀವು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿದ್ದರೆ ಮಾತ್ರ ಈ ವಿಧಾನ ಅನುಸರಿಸಿ. ಹಸಿಶುಂಠಿಯ ಚಿಕ್ಕ ತುಂಡನ್ನು ನಯವಾಗಿ ಅರೆದು ಇದನ್ನು ಕೊಂಚವೇ ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಹಣೆ, ಹಣೆಯ ಪಕ್ಕದ ಭಾಗ ಮತ್ತು ಕಿವಿಯ ಹಿಂಭಾಗದ ಮೂಳೆಯಿರುವಲ್ಲಿ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಲೆನೋವು ನಿವಾರಿಸುತ್ತದೆ

ತಲೆನೋವು ನಿವಾರಿಸುತ್ತದೆ

ಇದು ಕೊಂಚ ಉರಿ ತರಿಸುತ್ತದಾದರೂ ತಲೆನೋವನ್ನು ಮಾತ್ರ ಕಡಿಮೆಗೊಳಿಸುವ ಮೂಲಕ ಉರಿಯನ್ನು ಸ್ವಲ್ಪ ಸಹಿಸಿಕೊಳ್ಳಬೇಕು.ಆದರೆ ತಲೆನೋವು ಪ್ರಾರಂಭವಾದ ಕೂಡಲೇ ಹಚ್ಚಿಕೊಳ್ಳುವುದು ಅಗತ್ಯ. ಒಮ್ಮೆ ತಲೆನೋವು ಉಗ್ರ ರೂಪ ಪಡೆಯಿತೋ, ಈ ವಿಧಾನವಲ್ಲ, ಯಾವುದೇ ಔಷಧಿ ಮೈಗ್ರೇನ್ ತಲೆನೋವನ್ನು ಶಮನಗೊಳಿಸಲು ಸಾಧವಿಲ್ಲ.

ಕೆಮ್ಮು ಕಡಿಮೆಗೊಳಿಸುತ್ತದೆ

ಕೆಮ್ಮು ಕಡಿಮೆಗೊಳಿಸುತ್ತದೆ

ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ. ನೀರು ಸುಮಾರು ಅರ್ಧದಷ್ಟಾದ ಬಳಿಕ ಈ ನೀರನ್ನು ಸೋಸಿ ಕೆಲವು ಹನಿ ಲಿಂಬೆರಸ ಮತ್ತು ಕೊಂಚ ಜೇನು ಸೇರಿಸಿ ಕಲಕಿ ಬಿಸಿಬಿಸಿಯಾಗಿಯೇ ಕುಡಿಯಿರಿ. ಸಾಧ್ಯವಾದರೆ ಕೊಂಚ ಬಿಸಿ ಇರುವಂತೆಯೇ ಮುಖ ಮೇಲೆತ್ತೆ ಗಂಟಲಲ್ಲಿ ಗಳಗಳ ಮಾಡಿ. ಇದರಿಂದ ಕೆಮ್ಮು, ಕಫ ಮತ್ತು ಕಟ್ಟಿಕೊಂಡಿರುವ ಮೂಗು ಸಹಾ ತೆರೆದು ಶೀತದಿಂದ ಆರಾಮ ದೊರಕುತ್ತದೆ.

ಹಲ್ಲುನೋವು ಕಡಿಮೆಗೊಳಿಸುತ್ತದೆ

ಹಲ್ಲುನೋವು ಕಡಿಮೆಗೊಳಿಸುತ್ತದೆ

ಒಂದು ವೇಳೆ ಒಸಡುಗಳ ಒಳಭಾಗದಲ್ಲಿ ಬಾವು ಬಂದು ಹಲ್ಲು ನೋಯುತ್ತಿದ್ದರೆ ಹಸಿಶುಂಠಿಯ ಚಿಕ್ಕ ತುಂಡು ಈ ನೋವನ್ನು ಶಮನಗೊಳಿಸಬಲ್ಲದು. ಇದಕ್ಕಾಗಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ನೀರಿನಲ್ಲಿ ಕುದಿಸಿ, ಈ ನೀರು ಅರ್ಧವಾದಾಗ ಸೋಸಿ ತಣಿಸಿ ಈ ನೀರಿನಿಂದ ಸಾಕಷ್ಟು ಬಾರಿ ಮುಕ್ಕಳಿಸಿ ಉಗಿಯಬೇಕು.

ವಾಕರಿಕೆ ಕಡಿಮೆಗೊಳಿಸುತ್ತದೆ

ವಾಕರಿಕೆ ಕಡಿಮೆಗೊಳಿಸುತ್ತದೆ

ವಾಕರಿಕೆ ಮತ್ತು ಇದರ ಪರಿಣಾಮವಾಗಿ ಎದುರಾಗುವ ವಾಂತಿಯ ತೊಂದರೆಯಿಂದ ಪಾರಾಗಲು ಹಸಿಶುಂಠಿ ಉತ್ತಮವಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆದ್ದ ಕೂಡಲೇ ಈ ತೊಂದರೆಗೆ ಒಳಗಾಗುವವರು ಹಸಿಶುಂಠಿಯನ್ನು ಬೇಯಿಸಿದ ನೀರನ್ನು ತಣಿಸಿ ಕುಡಿಯುವುದು ಉತ್ತಮ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ನೀರು ಅರ್ಧವಾದ ಬಳಿಕ ಕೊಂಚ ಜೇನು ಸೇರಿಸಿ ಈ ನೀರನ್ನು ಬಿಸಿಬಿಸಿಯಾಗಿ ಊಟದ ಬಳಿಕ ಕುಡಿಯಿರಿ. ಇದರಿಂದ ಅಜೀರ್ಣದ ತೊಂದರೆ ನಿವಾರಣೆಯಾಗುತ್ತದೆ.

English summary

Proven Health Benefits of Raw Ginger

Though most of us see ginger as a food, it was perceived as a medicine by the previous generation. Yes, it was used to treat many ailments. As this spice contains many medicinal properties, many people make it a habit to eat a piece of it every morning on empty stomach. Of course, if you are allergic to ginger then you should avoid doing so as it ca irritate your mouth and may also make your stomach upset. But for others, ginger can do miracles.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more