For Quick Alerts
ALLOW NOTIFICATIONS  
For Daily Alerts

ಕಾಡುವ ಮೈ ಕೈ ನೋವಿಗೆ-ಅಡುಗೆ ಮನೆಯಲ್ಲಿದೆ ಶಾಶ್ವತ ಪರಿಹಾರ

By Super Admin
|

ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳ ಸಂತೋಷಕ್ಕೆ ಯಾವ ರೀತಿಯಿಂದಲೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಂತಹ ಒಂದು ಸಂದರ್ಭದಲ್ಲಿ ನಿಮಗೆ ಮೈ ಕೈ ನೋವು ಆವರಿಸಿದ್ದು ಇಲ್ಲ ಎನ್ನಲಾಗದೇ, ಹೌದೂ ಎನ್ನಲಾಗದೇ ಪರಿತಪಿಸುವ ಸಂದರ್ಭಗಳು ಎದುರಾಗಬಹುದು. ಹೆಚ್ಚಿನ ಸಂದರ್ಭದಲ್ಲಿ ಈ ಮೈ ಕೈ ನೋವು ನಿಮಗೆ ಇಲ್ಲ ಎನ್ನುವುದನ್ನೇ ಅನಿವಾರ್ಯವಾಗಿಸುತ್ತದೆ. ಆದರೆ ಇನ್ನು ಮುಂದೆ ಈ ಅನಿವಾರ್ಯತೆಗೆ ಕಟ್ಟು ಬೀಳಬೇಕಾಗಿಲ್ಲ.

These 2 Kitchen Ingredients Can Relive Body Pain In An Hour!

ಏಕೆಂದರೆ ಮೈಕೈ ನೋವನ್ನು ಒಂದೇ ಗಂಟೆಯಲ್ಲಿ ಇಲ್ಲವಾಗಿಸುವ ಅದ್ಭುತ ವಿಧಾನವೊಂದು ನಮ್ಮ ಬಳಿ ಇದೆ. ಈಗ ಗೆಳೆಯರಿಗೆ 'ಬರುತ್ತೇನೆ' ಎಂದು ಹೇಳಲು ಯಾವುದೇ ತಕರಾರಿಲ್ಲ. ಮೈ ಕೈ ನೋವು ಒಂದು ಕಿರಿಕಿರಿ ತರಿಸುವ ತೊಂದರೆಯಾಗಿದ್ದು ನಿತ್ಯದ ಇತರ ಚಟುವಟಿಕೆಗಳನ್ನೆಲ್ಲಾ ಕಷ್ಟಕರವಾಗಿಸುತ್ತದೆ. ಚಿಕ್ಕ ಪುಟ್ಟ ಕೆಲಸಗಳೂ ಭಾರೀ ತ್ರಾಸವಾದಂತೆ ಅನ್ನಿಸುತ್ತದೆ.

ಮೈ ಕೈ ನೋವಿಗೆ ಹಲವು ಕಾರಣಗಳಿವೆ. ಗಾಯಗಳು, ಹಲವಾರು ಸೋಂಕುಗಳು, ಅಸಮರ್ಪಕ ಆಹಾರಸೇವನೆಯಿಂದ ಶಿಥಿಲಗೊಂಡ ಮೂಳೆಗಳು, ವ್ಯಾಯಾಮದ ಕೊರತೆ ಇತ್ಯಾದಿ. ಹೆಚ್ಚಿನ ಸಂದರ್ಭದಲ್ಲಿ ಜನರು ನೋವು ನಿವಾರಕ ಗುಳಿಗೆಗಳಿಗೆ ಮೊರೆ ಹೋಗುತ್ತಾರೆ. ಜ್ವರದ ಬಳಿಕ ಕಾಡುವ ಮೈ ಕೈ ನೋವಿಗೆ ಸಮರ್ಪಕ ಮನೆಮದ್ದು

ವಾಸ್ತವವಾಗಿ ಈ ನೋವು ನಿವಾರಕಗಳು ನೋವನ್ನು ನಿವಾರಿಸುವುದೇ ಇಲ್ಲ. ಇದರ ಮುಖ್ಯ ಕೆಲಸವೆಂದರೆ ನೋವಿನ ಅನುಭೂತಿಯನ್ನು ಮೆದುಳಿಗೆ ಗ್ರಹಿಸುವ ಸೂಚನೆಗಳನ್ನು ಮಧ್ಯದಲ್ಲಿಯೇ ಅಡ್ಡಗಾಲು ಹಾಕುವುದು ಅಷ್ಟೇ. ಇನ್ನುಳಿದಂತೆ ನೋವನ್ನು ನಮ್ಮ ದೇಹದ ಜೀವನಿರೋಧಕ ವ್ಯವಸ್ಥೆಯೇ ಮಾಡಬೇಕು. ಅಲ್ಲದೇ ನೋವು ನಿವಾರಕಗಳ ಹೆಚ್ಚಿನ ಬಳಕೆಯಿಂದ ಆರೋಗ್ಯದ ಮೇಲೆ ಅತಿರೇಕದ ಪರಿಣಾಮಗಳೂ ಆಗಬಹುದು.

ಇದರ ಬದಲಿಗೆ ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಸುಲಭ ಸಮಾಗ್ರಿಗಳನ್ನು ಬಳಸಿ ಈ ನೋವನ್ನು ಅತಿ ಶೀಘ್ರವಾಗಿ ಇಲ್ಲವಾಗಿಸಬಹುದು. ಬನ್ನಿ, ಈ ಅದ್ಭುತ ವಿಧಾನವನ್ನು ಈಗ ನೋಡೋಣ: ನೈಸರ್ಗಿಕ ನೋವು ನಿವಾರಕವನ್ನು ತಯಾರಿಸಲು ಅಗತ್ಯವಿರುವ ಸಾಮಾಗ್ರಿಗಳು: ಪ್ರಯಾಣದ ನಂತರ ಕಾಡುವ ಮೈ ಕೈ ನೋವಿಗೆ ಮನೆಮದ್ದು

ಉಪ್ಪು: ಎರಡು ಚಿಕ್ಕ ಚಮಚ (ಕಲ್ಲುಪ್ಪು ಆದರೆ ಉತ್ತಮ)
ಹರಳೆಣ್ಣೆ: ಒಂದು ದೊಡ್ಡ ಚಮಚ

ಹರಳೆಣ್ಣೆಗೂ ಮೈ ಕೈ ನೋವಿಗೂ ಏನು ಸಂಬಂಧ ಎಂದು ಮೊದಲಾಗಿ ಎಲ್ಲರೂ ಕೇಳುವ ಪ್ರಶ್ನೆ. ಹರಳೆಣ್ಣೆಯಲ್ಲಿ ನೋವು ಕಡಿಮೆ ಮಾಡುವ ಅಂಶಗಳು ಇದ್ದರೂ ಇದನ್ನು ನೇರವಾಗಿ ಹಚ್ಚಿದರೆ ಏನೂ ಪರಿಣಾಮವಾಗದು. ಆದ್ದರಿಂದ ಇದರ ಪರಿಣಾಮಗಳನ್ನು ದೇಹ ಹೀರುವಂತಾಗಲು ಕೊಂಚ ಉಪ್ಪು ಸೇರಿಸಿದರೆ ಸಾಕು, ಈಗ ಹರಳೆಣ್ಣೆ ಅದ್ಭುತವಾಗಿ ಕೆಲಸ ಮಾಡಲು ತೊಡಗುತ್ತದೆ.

ವಿಶೇಷವಾಗಿ ಉರಿಯೂತ, ನೋವಿನಿಂದ ಉಂಟಾದ ಬಾವು ಮೊದಲಾದವನ್ನು ಅತಿ ಕಡಿಮೆ ಸಮಯದಲ್ಲಿ ಕಡಿಮೆ ಮಾಡುವ ಕ್ಷಮತೆ ಹೊಂದಿದೆ. ಅಲ್ಲದೇ ಹಚ್ಚಿದ ಸ್ಥಳದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಮೂಲಕ ನೋವು ಶೀಘ್ರವಾಗಿ ಕಡಿಮೆಯಾಗಲು ಮತ್ತು ನೋವಿಗೆ ಕಾರಣವಾದ ಸೋಂಕು ನಿವಾರಿಸಲೂ ನೆರವಾಗುತ್ತದೆ. ಆರೋಗ್ಯಕಾರಿ ಟಿಪ್ಸ್: ಕಾಡುವ ಮೈ ಕೈ ನೋವಿಗೆ ಅಕ್ಕಿ ರೆಸಿಪಿ!

ಈ ವಿಧಾನವನ್ನು ತಯಾರಿಸುವ ಕ್ರಮ
ಒಂದು ಚಿಕ್ಕ ಬೋಗುಣಿಯಲ್ಲಿ ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಕಲಕಿ. ಉಪ್ಪು ಕರಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕೊಂಚ ತಾಳ್ಮೆ ಅಗತ್ಯ. ಉಪ್ಪು ಕರಗಿದ ಬಳಿಕ ಈ ಲೇಪನ ಜೇನಿನಶ್ಟು ಗಾಢವಾಗುತ್ತದೆ. ಬಳಿಕ ಈ ಲೇಪನವನ್ನು ನೋವಿರುವ ಸ್ಥಳಕ್ಕೆ ತೆಳುವಾಗಿ ಕೊಂಚವೇ ಒತ್ತಡ ಮೂಲಕ ಹಚ್ಚಿ.
ಸುಮಾರು ಹತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಈ ಭಾಗದ ಚರ್ಮ ಕೊಂಚ ಉರಿ ಎನಿಸಬಹುದು. ಬಳಿಕ ತಣ್ಣೀರು ಬಳಸಿ ತೊಳೆದುಕೊಳ್ಳಿ. ಕೊಂಚ ಎಣ್ಣೆಯ ಪಸೆ ಹಾಗೇ ಇರಲಿ, ಸೋಪು ಉಪಯೋಗಿಸಬೇಡಿ. ಒಂದೇ ಘಂಟೆಯಲ್ಲಿ ನೋವು ಮಾಯವಾಗಿರುವುದನ್ನು ಗಮನಿಸಿ.

English summary

These 2 Kitchen Ingredients Can Relive Body Pain In An Hour!

Imagine a situation where your friends are planning to go on a running marathon, in the weekend, however, you have no choice but to cancel, because you are suffering from an unexpected joint pain! Surely, many of us would have been in similar situations where our body pain and other such ailments have stopped us from doing the things we like.
X
Desktop Bottom Promotion