ತರಕಾರಿ-ಸಾಂಬಾರ ಪದಾರ್ಥಗಳ ಔಷಧೀಯ ಗುಣಗಳು

By Arshad
Subscribe to Boldsky

ನಮ್ಮ ಆಹಾರದಲ್ಲಿ ಬಳಸಲಾಗುವ ತರಕಾರಿ ಮತ್ತು ಸಾಂಬಾರ ಪದಾರ್ಥಗಳು ಕೇವಲ ಹಸಿವು ಇಂಗಿಸುವುದಷ್ಟೇ ಅಲ್ಲ, ಆರೋಗ್ಯವನ್ನೂ ವೃದ್ಧಿಸುವಲ್ಲಿ ನೆರವಾಗುತ್ತವೆ. ನಾವು ಸಾಂಬಾರ ಪದಾರ್ಥಗಳನ್ನು ಕೇವಲ ರುಚಿ ಹೆಚ್ಚಿಸಲು ಬಳಸುತ್ತಿದ್ದರೂ ನಮಗೆ ಅರಿವಿಲ್ಲದಂತೆಯೇ ಇವುಗಳ ಔಷಧೀಯ ಗುಣಗಳನ್ನೂ ಹಲವಾರು ವರ್ಷಗಳಿಂದ ಪಡೆಯುತ್ತಲೇ ಬಂದಿದ್ದೇವೆ.

ಉದಾಹರಣೆಗೆ ಬೆಳ್ಳುಳ್ಳಿ. ಒಗ್ಗರಣೆಯ ಮೂಲಕ ಬೆಳ್ಳುಳ್ಳಿಯನ್ನು ಸೇವಿಸಿದ ಬಳಿಕ ನಮ್ಮ ಜೀರ್ಣಕ್ರಿಯೆ ಉತ್ತಮಗೊಂಡು ಕರುಳುಗಳಲ್ಲಿ ಹುಣ್ಣುಗಳಾಗುವುದರಿಂದ ರಕ್ಷಣೆ ನೀಡಿದೆ. ಅಂದರೆ ಇದುವರೆಗೆ ನಮ್ಮ ಕರುಳುಗಳಲ್ಲಿ ಹುಣ್ಣಾಗದೇ ಇರಲು ಹಿಂದಿನಿಂದಲೂ ನಾವು ಸೇವಿಸುತ್ತಾ ಬಂದಿರುವ ಬೆಳ್ಳುಳ್ಳಿಯೇ ಕಾರಣ.   ಲವಲವಿಕೆಯ ಆರೋಗ್ಯಕ್ಕೆ- ಅಡುಗೆಮನೆಯ ಮದ್ದೇ ಓಕೆ!

ಇದರ ಉರಿಯೂತ ನಿವಾರಕ ಗುಣ ಮತ್ತು ಸೂಕ್ಷ್ಮಜೀವಿ ಪ್ರತಿರೋಧ ಗುಣದ ಕಾರಣ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಇನ್ನೂ ಹಲವು ವಿಧದ ಆರೋಗ್ಯಕರ ಪ್ರಯೋಜನಗಳಿವೆ. ಸಾಂಬಾರ ಪದಾರ್ಥಗಳು ಮಾತ್ರವಲ್ಲ, ಕೆಲವು ತರಕಾರಿಗಳೂ ಔಷಧಿಯಂತೆ ಕೆಲಸ ನಿರ್ವಹಿಸುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ ಬನ್ನಿ.... 

ಅರಿಶಿನ

ಅರಿಶಿನ

ತಲೆನೋವು, ಯಕೃತ್ ನ ಕಲ್ಮಶ ತೊಡೆಯುವುದು, ಕ್ಯಾನ್ಸರ್ ಬರದಂತೆ ತಡೆಯುವುದು ಮತ್ತು ಗಾಯಗಳನ್ನು ಶೀಘ್ರವಾಗಿ ಮಾಗಿಸಲು ಅರಿಶಿನ ಅತ್ಯುತ್ತಮವಾಗಿದೆ. ನಿತ್ಯದ ಆಹಾರಗಳಲ್ಲಿ ಬಳಸುವ ಜೊತೆಗೇ ಸೂಪ್, ಸಾಲಾಡ್ ಮತ್ತು ಇತರ ಖಾರವಾದ ಆಹಾರಗಳೊಂದಿಗೆ ಬೆರೆಸಿ ಸೇವಿಸಬೇಕು. ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್

ಈರುಳ್ಳಿ

ಈರುಳ್ಳಿ

ಸಾಮಾನ್ಯವಾಗಿ ನೀರುಳ್ಳಿ ಇಲ್ಲದ ಖಾದ್ಯವೇ ಇಲ್ಲ. ಹಸಿ ನೀರುಳ್ಳಿಯನ್ನು ತಿನ್ನುವ ಮೂಲಕ ಕೆಮ್ಮೆ ತಕ್ಷಣ ನಿವಾರಣೆಯಾಗುತ್ತದೆ. ಅಲ್ಲದೇ ಈರುಳ್ಳಿಯ ನಿಯಮಿತ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುವುದು, ಕೊಲೆಸ್ಟ್ರಾಲ್ ಕಡಿಮೆಯಾಗುವುದು, ಕೆಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುವುದು, ಹೃದಯ ಸಂಬಂಧಿ ರೋಗಗಳಿಂದ ಮುಕ್ತಿ ಪಡೆಯುವುದು ಮೊದಲಾದ ಪ್ರಯೋಜನಗಳಿವೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯನ್ನು ಹಸಿಯಾಗಿಯೂ, ಸೂಪ್, ಸಾಸ್, ಸಾಲಾಡ್ ಮತ್ತು ಇತರ ಖಾದ್ಯಗಳ ಜೊತೆಗೆ ಹಸಿಯಾಗಿ ಸೇವಿಸಿದರೆ ಹೆಚ್ಚಿನ ಪ್ರಯೋಜನವಿದೆ. ಕೂದಲು ಉದುರುವಿಕೆಗೆ ಈರುಳ್ಳಿ ರಸದ ಚಮತ್ಕಾರ

ಜೀರಿಗೆ

ಜೀರಿಗೆ

ಜೀರಿಗೆಯ ನಿಯಮಿತ ಸೇವನೆಯಿಂದ ಚರ್ಮದ ತೊಂದರೆಗಳು ಕಡಿಮೆಯಾಗುತ್ತದೆ. ಮಧುಮೇಹವಿದ್ದರೆ ಶೀಘ್ರವಾಗಿ ತಹಬಂದಿಗೆ ಬರಲು ನೆರವಾಗುತ್ತದೆ. ಉಗುರುಬೆಚ್ಚನೆಯ ನೀರಿನಲ್ಲಿ ಜೀರಿಗೆಯನ್ನು ಬೆರೆಸಿ ತಣ್ಣೀರಿನ ಬದಲಿಗೆ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

ಶುಂಠಿ

ಶುಂಠಿ

ಇದೊಂದು ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಹಲವು ವಿಧದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ವಿಶೇಷವಾಗಿ ಮೈಗ್ರೇನ್ ತಲೆನೋವು ಮತ್ತು ತಲೆಸುತ್ತುವಿಕೆಗೆ ಉತ್ತಮ ಪರಿಹಾರ ನೀಡುತ್ತದೆ.

ಶುಂಠಿ

ಶುಂಠಿ

ಶುಂಠಿಯನ್ನು ಹಸಿಯಾಗಿ ಬಿಸಿ ಟೀ ಯಲ್ಲಿ ಬೆರೆಸಿ ಸೇವಿಸುವುದರಿಂದ ಮತ್ತು ಇತರ ಖಾದ್ಯಗಳಲ್ಲಿ ಅರೆದು ಸೇರಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಪುದೀನಾ

ಪುದೀನಾ

ಪುದೀನಾದ ನಿಯಮಿತ ಸೇವನೆಯಿಂದ ಹಲ್ಲುಗಳ ಸವತ ಮತ್ತು ಒಸಡುಗಳ ಸೋಂಕಿನಿಂದ ಪಾರಾಗಬಹುದು. ಅಲ್ಲದೇ ತಲೆನೋವು, ಸುಸ್ತು, ಅಜೀರ್ಣದ ತೊಂದರೆಗಳಿಂದಲೂ ಪರಿಹಾರ ಪಡೆಯಬಹುದು.ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಪುದೀನಾ

ಪುದೀನಾ

ಪುದೀನಾ ಎಲೆಯನ್ನು ಹಾಲಿಲ್ಲದ ಟೀ ಜೊತೆಗೆ ಸೇವಿಸುವುದರಿಂದ ಹಲವು ಪ್ರಯೋಜನಗಳಿವೆ. ಅಲ್ಲದೇ ವಿವಿಧ ಮಾಂಸಾಹಾರದ ಅಡುಗೆ, ಸೂಪ್ ಮತ್ತು ಇತರ ಖಾದ್ಯಗಳಲ್ಲಿ ಬೆರೆಸಿ ಸೇವಿಸುವುದರಿಂದಲೂ ಪ್ರಯೋಜನ ಪಡೆಯಬಹುದು. ಪುದೀನಾ ಎಲೆಗಳಿಂದ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

ವೆನಿಲ್ಲಾ

ವೆನಿಲ್ಲಾ

ಇದುವರೆಗೆ ಕೇವಲ ಐಸ್ ಕ್ರೀಂಗೆ ರುಚಿ ನೀಡುವ ಪರಿಕರವಾಗಿದ್ದ ವೆನಿಲ್ಲಾ ವಾಸ್ತವವಾಗಿ ಒಂದು ಆರೋಗ್ಯವರ್ಧಕವಾಗಿದೆ.ವೆನಿಲ್ಲಾ ಕೋಡುಗಳನ್ನು ತರಕಾರಿಯ ರೂಪದಲ್ಲಿ ಬಳಸುವುದು ಅತ್ಯುತ್ತಮ. ಆದರೆ ಇದು ತರಕಾರಿಯ ರೂಪದಲ್ಲಿ ಸಿಗುವುದು ಕೇವಲ ಬೆಳೆಗಾರರಿಗೆ ಮಾತ್ರ ಸಾಧ್ಯವಾಗುವುದರಿಂದ ಇದರಿಂದ ಸೆಳೆಯಲ್ಪಟ್ಟ ರಸವನ್ನು ತಣ್ಣಗಿನ ಪೇಯ ಮತ್ತು ಸಿಹಿಖಾದ್ಯಗಳಲ್ಲಿ ಬೆರೆಸಿ ಸೇವಿಸಬಹುದು. ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....

 
For Quick Alerts
ALLOW NOTIFICATIONS
For Daily Alerts

    English summary

    Medicinal Benefits Of Some Spices And Veggies

    Though most of us enjoy various vegetables and spices in our dishes, we seldom care to know about their benefits to the health. For example, garlic is very powerful food as it is packed with many medicinal qualities. In the same way, there are other spices and vegetables which come with medicinal benefits. Read on to know about them....
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more