For Quick Alerts
ALLOW NOTIFICATIONS  
For Daily Alerts

ಪುದೀನಾ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

By Arshad
|

ಅರಬ್ ದೇಶಗಳಲ್ಲಿ ಚಹಾ ಎಂದರೆ ಹಾಲಿಲ್ಲದ ಆದರೆ ಪುದೀನಾ ಸೊಪ್ಪು ಸೇರಿಸಿದ ಚಹಾ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲಿಯೂ ಹಲವರು ಹಾಲಿಲ್ಲದ ಚಹಾಕ್ಕೆ ಪುದಿನಾ ಎಲೆಗಳನ್ನು ಸೇರಿಸಿ ಸವಿಯುತ್ತಾರೆ. ಸುಲೇಮಾನಿ ಚಹಾ ಎಂದೇ ಭಾರತದಲ್ಲಿ ಖ್ಯಾತವಾಗಿರುವ ಚಹಾ ನೋಡಲು ನೀರಿನಂತಿದ್ದರೂ ಆರೋಗ್ಯಕರ ಗುಣದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ಇದೇ ರೀತಿಯ ಪುದಿನ ಎಲೆಗಳನ್ನು ಸೇರಿಸಿ ಕುದಿಸಿದ ಚಹಾ ಸಹಾ ಅತ್ಯುತ್ತಮವಾದ ಪೇಯವಾಗಿದೆ.

ಇದು ವಾಸ್ತವಾಗಿ ಪುದೀನಾ ಜಾತಿಗೇ ಸೇರಿದ, ಪುದೀನಾ ಎಲೆಗಳಂತೆಯೇ ಕಾಣುವ ಮತ್ತು ಪರಿಮಳವನ್ನು ಹೊಂದಿರುವ spearmint ಮತ್ತು watermint ಎಂಬ ಎರಡು ಸಸ್ಯಗಳ ಕಸಿಯಾಗಿದೆ. ಪುದಿನಾದಂತೆಯೇ ನೆಲಮಟ್ಟದಲ್ಲಿಯೇ ಬೆಳೆಯುವ ಈ ಸಸ್ಯದ ಎಲೆಗಳನ್ನು ಒಣಗಿಸಿ ಚಿಕ್ಕ ಚೂರುಗಳನ್ನಾಗಿಸಿ ಉಪಯೋಗಿಸಲಾಗುತ್ತದೆ.

ಈ ಎಲೆಗಳನ್ನು ನೀರಿನಲ್ಲಿ ಕುದಿಸುವುದರಿಂದ ಆ ನೀರಿನಲ್ಲಿ ಎಣ್ಣೆಯ ರೂಪದಲ್ಲಿರುವ ಮೆಂಥಾಲ್, ಮೆಂಥೋನ್ ಮತ್ತು ಮೆಂಥೈಲ್ ಅಸಿಟೇಟ್ ಗಳೆಂಬ ಪೋಷಕಾಂಶಗಳು ಕರಗುತ್ತವೆ. ಈ ನೀರು ಆರೋಗ್ಯಕರವಾಗಿದ್ದು ಹಲವು ತೊಂದರೆಗಳನ್ನು ನಿವಾರಿಸುತ್ತದೆ. ಜೊತೆಗೇ ಕ್ಯಾಲ್ಸಿಯಂ, ಮೆಗ್ನೀಶಿಯಂ, ಮತ್ತು ಪೊಟ್ಯಾಶಿಯಂನಂತಹ ಖನಿಜಗಳೂ ಇವೆ. ಇವು ಆರೋಗ್ಯವೃದ್ಧಿಗೆ ಅಗತ್ಯವಾಗಿವೆ. ಇಂತಹ ಚಹಾವನ್ನು ಹಾಲಿನ ಚಹಾದ ಬದಲಿಗೆ ಉಪಯೋಗಿಸುವುದರ ಉಪಯೋಗಗಳನ್ನು ನೋಡೋಣ.... ಬಹುಪಯೋಗಿ ಪುದಿನ ಸೊಪ್ಪಿನ ಔಷಧೀಯ ಗುಣಗಳೇನು?

Healthy reasons to drink peppermint tea

ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ

ಹಲ್ಲುನೋವಿಗೆ ಮುಖ್ಯ ಕಾರಣ ಒಸಡು ಮತ್ತು ಹಲ್ಲುಗಳ ಸಂದುಗಳಲ್ಲಿ ಆಹಾರ ಶೇಖರವಾಗಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗುವುದು. ಹೀಗೆ ಕೊಳೆತ ಆಹಾರದ ಕಾರಣ ಬಾಯಿಯಿಂದ ದುರ್ವಾಸನೆಯೂ ಹೊಮ್ಮುತ್ತದೆ. ಪೆಪ್ಪರ್ಮೆಂಟ್ (ಪುದಿನ) ಚಹಾದಲ್ಲಿ ಯೂಜಿನಾಲ್ (eugenol) ಎಂಬ ಪೋಷಕಾಂಶವಿದೆ. ಇದು ಒಂದು ಪ್ರಬಲ ನಂಜು ನಿರೋಧಕ (antiseptic) ಮತ್ತು ನೋವು ನಿವಾರಕ (analgesic) ಆಗಿದ್ದು ಕೊಳೆತ ಆಹಾರದಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಒಸಡುಗಳಲ್ಲಿ ನೋವಿದ್ದು ಹಲ್ಲು ಜುಂ ಎನ್ನುತ್ತಿದ್ದರೆ ಈ ಚಹಾವನ್ನು ಉಗುರುಬೆಚ್ಚನೆಯ (ಅಥವಾ ನೀವು ತಾಳಿಕೊಳ್ಳುವಷ್ಟು ಮಟ್ಟಿಗೆ) ತಣಿಸಿ ಚೆನ್ನಾಗಿ ಮುಕ್ಕಳಿಸಿ ಉಗುಳಿ. ಮುಖ ಮೇಲೆತ್ತಿ ಸ್ವಲ್ಪ ಗಳಗಳ ಮಾಡುವುದರಿಂದ ಗಂಟಲಿನ ಮೇಲ್ಭಾಗದಲ್ಲಿದ್ದ ಕೊಳೆಯೂ ನಿವಾರಣೆಯಾಗುತ್ತದೆ. ಅಗತ್ಯವಿದ್ದರೆ ಕೊಂಚ ಉಪ್ಪನ್ನೂ ಸೇರಿಸಬಹುದು. ಮದ್ಯಪಾನ, ಧೂಮಪಾನ ಅಥವಾ ಈರುಳ್ಳಿ ತಿಂದ ಬಳಿಕ ಉಂಟಾಗುವ ಬಾಯಿಯ ದುರ್ವಾಸನೆಗೂ ಈ ಚಹಾದಿಂದ ಮುಕ್ಕಳಿಸುವುದು ಫಲಕಾರಿಯಾಗಿದೆ.

ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ

ಚಹಾದ ದ್ರವ ಜಠರರಸದಲ್ಲಿ ಸೇರಿದ ಬಳಿಕ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲೀಯ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಪರಿಣಾಮವಾಗಿ ವಾಯುಪ್ರಕೋಪಕ್ಕೆ ಮತ್ತು ಹೊಟ್ಟೆಯಲ್ಲಿ ಉರಿ, ಹುಳಿತೇಗು ಮೊದಲಾದ ತೊಂದರೆಗಳಿಗೆ ಗ್ರಾಸವಾಗಬಹುದಾಗಿದ್ದ ಅನಿಲಗಳ ಉತ್ಪತ್ತಿಯನ್ನು ತಡೆಯುತ್ತದೆ. ಕರುಳುಗಳಲ್ಲಿ ಹೋದ ಬಳಿಕ ಇದರ ಮೆಂಥಾಲ್ ನ ಗುಣದಿಂದ ಕರುಳಿನ ಸ್ನಾಯುಗಳು ನಿರಾಳಗೊಂಡು ಹೊಟ್ಟೆನೋವನ್ನು ನಿವಾರಿಸುತ್ತದೆ. ಜೊತೆಗೇ ಪಿತ್ತವನ್ನು ಪ್ರಚೋದಿಸಿ ಪಿತ್ತರಸದ ಅಗತ್ಯ ಪ್ರಮಾಣದ ಸ್ರವಿಕೆಗೆ ನೆರವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭಗೊಂದು ವಿಸರ್ಜನೆಯೂ ಸುಲಲಿತವಾಗುತ್ತದೆ. ಮನೆಯಂಗಳದಲ್ಲೇ ಬೆಳೆಸಬಹುದಾದ ಆರೋಗ್ಯಕಾರಿ ಸಂಜೀವಿನಿಗಳು!

Healthy reasons to drink peppermint tea

ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ

ಹಲವು ಕಾರಣಗಳಿಂದ ಮೂಗು ಕಟ್ಟುತ್ತದೆ. ವಾಸ್ತವವಾಗಿ ಇದೊಂದು ದೇಹದ ರಕ್ಷಣಾ ವ್ಯವಸ್ಥೆ. ಒಂದು ವೇಳೆ ಎಡಹೊಳ್ಳೆಯಲ್ಲಿ ಸೋಂಕು ತಗುಲಿದ್ದರೆ ಎಡಹೊಳ್ಳೆ ಮುಚ್ಚಿದ್ದು ಬಲಹೊಳ್ಳೆ ತೆರೆದಿರುತ್ತದೆ. ಅಂತೆಯೇ ಬಲಹೊಳ್ಳೆಯೂ ಸಹಾ. ಕೆಲವೊಮ್ಮೆ ಚಿಕ್ಕಪುಟ್ಟ ಧೂಳಿನ ಕಣವನ್ನೂ ವೈರಸ್ ಎಂದೇ ತಿಳಿದು ದೇಹ ಮೂಗನ್ನು ಮುಚ್ಚಿಬಿಡುತ್ತದೆ. ಇದಕ್ಕಾಗಿ ಪುದಿನ ಚಹಾ ಎಲೆಗಳನ್ನು ಕುದಿಯುವ ನೀರಿನಲ್ಲಿ ಕಲಕಿ ಈ ನೀರಿನಿಂದ ಹೊರಬರುವ ಹಬೆಯನ್ನು ಮೂಗಿನ ಮೂಲಕ ಎಳೆದುಕೊಳ್ಳಿ. ಮುಚ್ಚಿದ್ದ ಹೊಳ್ಳೆ ನಿಧಾನವಾಗಿ ತೆರೆಯಲು ಪ್ರಾರಂಭವಾಗುತ್ತದೆ.

ಜ್ವರವನ್ನು ಕಡಿಮೆಗೊಳಿಸುತ್ತದೆ

ಯಾವುದೋ ವೈರಸ್ ಧಾಳಿಗೆ ದೇಹ ತುತ್ತಾದಾಗ ರಕ್ಷಣಾ ವ್ಯವಸ್ಥೆ ದೇಹವನ್ನು ಬಿಸಿ ಮಾಡುವ ಮೂಲಕ ವೈರಸ್ಸುಗಳ ವಿರುದ್ಧ ಹೋರಾಡುತ್ತದೆ. ಪೆಪ್ಪರ್ಮೆಂಟ್ ಚಹಾದಲ್ಲಿರುವ ಮೆಂಥಾಲ್ ಹಲವು ವೈರಸ್ಸುಗಳನ್ನು ಹೊಡೆದೋಡಿಸುವ ನೈಸರ್ಗಿಕ ಔಷಧಿಯಾಗಿರುವುದರಿಂದ ಜ್ವರಕ್ಕೆ ಕಾರಣವಾದ ವೈರಸ್ ಇಲ್ಲವಾಗಿ ಜ್ವರ ಇಳಿಯುತ್ತದೆ. ಇದಕ್ಕಾಗಿ ಪೆಪ್ಪರ್ಮೆಂಟ್ ಎಲೆಗಳನ್ನು ಕುದಿಯುವ ನೀರಿನಲ್ಲಿಟ್ಟು ಒಂದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಜ್ವರ ಹೆಚ್ಚಿದ್ದರೆ ಮೂರು ನಿಮಿಷಗಳವರೆಗೂ ಇರಿಸಬಹುದು. ಬಳಿಕ ಸೋಸಿ ಬಿಸಿಬಿಸಿ ಇರುವಂತೆಯೇ ಕುಡಿಯಿರಿ. ಟೀ ಸೇವನೆಯ ಬಳಿಕ ಬೆವರೂ ಹೆಚ್ಚಾಗಿ ದೇಹದ ಶಾಖ ಕಡಿಮೆಯಾಗಲು ನೆರವಾಗುತ್ತದೆ.

ವಾಂತಿ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ

ಕೆಲವು ಆಹಾರಗಳು ಹೊಟ್ಟೆಯಲ್ಲಿ ಪೂರ್ಣವಾಗಿ ಜೀರ್ಣವಾಗದೇ ಅಥವಾ ಅಲರ್ಜಿಕರವಾಗಿದ್ದರೆ ಹೊಟ್ಟೆಯಲ್ಲಿ ತುರಿಕೆ ಅಥವಾ ಸಂವೇದನೆಯುಂಟುಮಾಡಿ ವಾಂತಿಯ ಮೂಲಕ ಹೊರಹೋಗುವಂತೆ ಪ್ರಚೋದಿಸುತ್ತದೆ. ಇದೇ ವಾಕರಿಕೆ. ವಾಕರಿಕೆ ಹೆಚ್ಚಾದರೆ ವಾಂತಿಯೂ ಆಗುತ್ತದೆ. ಹಲವರಿಗೆ ಬಸ್ಸಿನಲ್ಲಿ ಕುಳಿತಾಕ್ಷಣ ಬಸ್ಸಿನ ಕುಲುಕುವಿಕೆಯಿಂದ ವಾಂತಿಯಾಗುವುದೂ ಇದೇ ಕಾರಣಕ್ಕೆ. ಚಿಕ್ಕ ಮಕ್ಕಳಲ್ಲಿ ಈ ತೊಂದರೆ ಹೆಚ್ಚು. ಸೆಳೆತನಿವಾರಕ ವಾಗಿರುವ (antispasmodic) ಈ ಚಹಾ ಹೊಟ್ಟೆಯ ಸ್ನಾಯುಗಳ ಸೆಳೆತವನ್ನು ಕಡಿಮೆಗೊಳಿಸಿ ವಾಂತಿಯಾಗದಂತೆ ತಡೆಯುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ಬಳಿಕ ಒಂದು ಕಪ್ ಪೆಪ್ಪರ್ಮಿಂಟ್ ಚಹಾ ಸೇವಿಸುವುದು ಉತ್ತಮ. ಪದೇ ಪದೇ ಕಾಡುವ ಸುಸ್ತು, ಕಾರಣ ತಿಳಿದುಕೊಳ್ಳಿ

ಪುದಿನ(ಪೆಪ್ಪರ್ಮಿಂಟ್) ಚಹಾ ತಯಾರಿಸುವ ವಿಧಾನ

ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

English summary

Healthy reasons to drink peppermint tea

Peppermint tea is not only mild and refreshing, but also powerful to treat a number of maladies. It can be a viable alternative for pharmaceuticals in some situations. Peppermint tea is prepared from the dried leaves of peppermint plant, which is a natural hybrid of spearmint and water mint.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more