For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಆರೋಗ್ಯಕ್ಕೆ- ಅಡುಗೆಮನೆಯ ಮದ್ದೇ ಓಕೆ!

By Super Admin
|

ಭಾರತೀಯ ಅಡುಗೆಗಳಲ್ಲಿ ಬಳಸುವಷ್ಟು ಸಾಂಬಾರ ಪದಾರ್ಥಗಳನ್ನು ವಿಶ್ವದ ಇನ್ನಾವುದೇ ದೇಶದಲ್ಲಿ ಬಳಸಲಾರರು. ಪ್ರತಿ ಸಾಂಬಾರ ವಸ್ತುವಿನಲ್ಲಿಯೂ ವಿಶೇಷವಾಗ ಗುಣ, ರುಚಿ, ವಾಸನೆ ಮತ್ತು ವಿಶೇಷವಾಗಿ ಔಷಧೀಯ ಗುಣಗಳಿವೆ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಆಯುರ್ವೇದದಲ್ಲಿ ಈ ಔಷಧೀಯ ಗುಣಗಳಿಗೆ ಹೆಚ್ಚಿನ ಮಹತ್ವವಿದ್ದು ಹಲವು ಔಷಧಿಗಳಲ್ಲಿ ಈ ಸಾಂಬಾರ ಪದಾರ್ಥಗಳನ್ನು ಬಳಸುತ್ತಾ ಬಂದಿದೆ. ಬನ್ನಿ, ಇವುಗಳಲ್ಲಿ ಯಾವ ಔಷಧೀಯ ಗುಣಗಳಿವೆ ಎಂಬುದನ್ನು ನೋಡೋಣ....

ಹಸಿಶುಂಠಿ

ಹಸಿಶುಂಠಿ

ಮಾಂಸದ ಅಡುಗೆಗಳಿಗೆ ಅನಿವಾರ್ಯವಾದ ಹಸಿಶುಂಠಿ ಜ್ವರ ಮತ್ತು ಕಟ್ಟಿಕೊಂಡಿರುವ ನಾಳಗಳನ್ನು ತೆರೆಯುವಲ್ಲಿ ಅತ್ಯುತ್ತಮ ಔಷಧಿಯಾಗಿದೆ. ವಿಶೇಷವಾಗಿ ಇದರ ಪೋಷಕಾಂಶಗಳು ರಕ್ತದ ಮೂಲಕ ಮೆದುಳನ್ನು ತಲುಪಿದಾಗ ಮೆದುಳಿನ ರಕ್ತನಾಳಗಳಲ್ಲಿ ಉಂಟಾಗಿದ್ದ ತಡೆಗಳನ್ನು ನಿವಾರಿಸುತ್ತದೆ. ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಹಸಿಶುಂಠಿ

ಹಸಿಶುಂಠಿ

ತನ್ಮೂಲಕ ಎದುರಾಗಿದ್ದ ತಲೆನೋವು, ವಾಕರಿಕೆ ಮೊದಲಾದವನ್ನು ನಿವಾರಿಸುತ್ತದೆ. ಅಲ್ಲದೇ ಜೀವರಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುವ ಮೂಲಕ ಅಮಶಂಕೆಯನ್ನೂ ಹತೋಟಿಗೆ ತರುತ್ತದೆ.

ಅರಿಶಿನ

ಅರಿಶಿನ

ಇದೊಂದು ಉತ್ತಮ ರೋಗನಿರೋಧಕವಾಗಿದ್ದು ಇದರ ಶಕ್ತಿ ಕ್ಯಾನ್ಸರ್ ರೋಗವನ್ನೂ ತಡೆಗಟ್ಟಬಲ್ಲುದು. ಹೈದರಾಬಾದಿನಲ್ಲಿರುವ The National Institute of Nutrition ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ ಅರಿಶಿನದಲ್ಲಿರುವ ಕೆಲವು ಕಣಗಳು ಕ್ಯಾನ್ಯರ್ ತಡೆಗಟ್ಟಲು ಸಕ್ಷಮವಾಗಿವೆ. ಅಜೀರ್ಣ, ಗಂಟಲು ಬೇನೆ, ಕೆಮ್ಮು-ಶೀತವೇ? ಅರಿಶಿನವೇ ಸಾಕು!

ಅರಿಶಿನ

ಅರಿಶಿನ

ಚಿಕ್ಕ ಗಾಯವಾದರೆ ತಕ್ಷಣ ಅರಿಶಿನ ಪುಡಿ ಹಚ್ಚುವುದರ ಮೂಲಕ ಇದರ ಪ್ರತಿಜೀವಕ ಗುಣವನ್ನು ಒರೆಹಚ್ಚಬಹುದು. ವಿಶೇಷವಾಗಿ ಬೆರಳ ಸಂದುಗಳಲ್ಲಿ ಚಿಕ್ಕ ಗುಳ್ಳೆಗಳಾಗಿ ತುರಿಕೆ ಉಂಟಾದರೆ ಇದಕ್ಕೆ ಬರೆ ಒಣ ಅರಿಶಿನ ಪುಡಿ ಹಚ್ಚಿ ಒಂದೆರಡು ದಿನ ನೀರು ತಾಕದಂತೆ ಕಾಪಾಡಿದರೆ ಸಾಕು.

ಜೀರಿಗೆ

ಜೀರಿಗೆ

ಒಗ್ಗರಣೆ, ಮೆಣಸು ಇರುವ ಯಾವುದೇ ಖಾದ್ಯವಾದರೂ ಜೀರಿಗೆಯಿಲ್ಲದೇ ಇದು ಅಪೂರ್ಣ. ಜೀರಿಗೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ಜಠರದಲ್ಲಿ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ವಾಯುಪ್ರಕೋಪವಾಗದಂತೆ ನೋಡಿಕೊಳ್ಳುತ್ತದೆ. ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು

ಜೀರಿಗೆ

ಜೀರಿಗೆ

ಇದರಲ್ಲಿರುವ ಉತ್ತಮ ಪ್ರಮಾಣದ ಕಬ್ಬಿಣ ಮತ್ತು ಮ್ಯಾಂಗನೀಸ್ ಹೊಟ್ಟೆಯಲ್ಲಿ ಉಬ್ಬರವಾಗದಂತೆ ಕಾಪಾಡುತ್ತವೆ.

ಲವಂಗ

ಲವಂಗ

ಊಟದ ಬಳಿಕ ಬಾಯಿಯಲ್ಲಿ ವಾಸನೆ ಬರದಂತಿರಲು ಲವಂಗವೊಂದನ್ನು ಜಗಿಯುವ ಪದ್ದತಿ ಭಾರತದಲ್ಲಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಬಾಯಿಯ ಜೊಲ್ಲಿನಲ್ಲಿ ಊಟದ ಬಳಿಕ ಉಳಿಯುವ ಆಹಾರ ಕಣಗಳು ಕೊಳೆಯದಂತೆ ತಡೆಯುತ್ತದೆ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಲವಂಗ

ಲವಂಗ

ಹಲ್ಲುನೋವಿಗೆ ಮತ್ತು ಸಂಧಿವಾತಕ್ಕೆ ಲವಂಗದ ಎಣ್ಣೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಲವಂಗದ ಸೇವನೆಯಿಂದ ಕಟ್ಟಿಕೊಂಡಿದ್ದ ಮೂಗು ತೆರೆಯುತ್ತದೆ ಹಾಗೂ ಜೀರ್ಣಕ್ರಿಯೆ ಸಹಾ ಸರಾಗಗೊಳ್ಳುತ್ತದೆ.

ಇಂಗು

ಇಂಗು

ಅಜೀರ್ಣದ ಕಾರಣ ಹೊಟ್ಟೆಯಲ್ಲಿ ಆಗುವ ಏರುಪೇರನ್ನು ತಡೆಯಲು ಚಿಟಿಕೆಯಷ್ಟು ಇಂಗು ಸಾಕು. ಇದೇ ಕಾರಣಕ್ಕೆ ಇಂಗು ಸೇರಿಸಿದ ಉಪ್ಪಿನಕಾಯಿಯನ್ನು ಊಟದೊಂದಿಗೆ ಸೇವಿಸುವುದನ್ನು ನಮ್ಮ ಹಿರಿಯರು ಕಲಿಸಿದ್ದಾರೆ. ಇಂಗಿನ ನೀರನ್ನು ಸೇವಿಸುವ ಮೂಲಕ ಶ್ವಾಸದಲ್ಲಿ ಅಡಚಣೆ, ಅಸ್ತಮಾ, ಬ್ರಾಂಕೈಟಿಸ್ ಮತ್ತು ಒಣಕೆಮ್ಮು ನಿವಾರಣೆಯಾಗುತ್ತದೆ.

ಇಂಗು

ಇಂಗು

ಇದರ ಕಮಟು ವಾಸನೆಯೇ ಬ್ಯಾಕ್ಟೀರಿಯಾಗಳನ್ನು ಕೊಲ್ಲುವಷ್ಟು ಪ್ರಬಲವಾಗಿದೆ. ಆಹಾರದ ಒಗ್ಗರಣೆಯ ಮೂಲಕ ಚಿಟಿಕೆ ಇಂಗಿನ ಸೇವನೆ ರಕ್ತದಲ್ಲಿರುವ ಕ್ರಿಮಿಗಳನ್ನು ಕೊಲ್ಲಲೂ ನೆರವಾಗುತ್ತದೆ. ಆದರೆ ಇದು ಎಷ್ಟು ಪ್ರಬಲ ಎಂದರೆ ಚಿಟಿಕೆಗಿಂತ ಹೆಚ್ಚು ಪ್ರಮಾಣವನ್ನು ಯಾವುದೇ ಅಡುಗೆಗೆ ಸೇರಿಸಬಾರದು.

English summary

Herbs And Spices Medicinal Values

Indian cuisines use the most number of herbs and spices. Every spice have their own essence, taste, flavour and medicinal values. The medicinal values of herbs and spices are widely used in Ayurvedic medicines. Lets look at some of the herbs and spices and their medicinal values
X
Desktop Bottom Promotion