For Quick Alerts
ALLOW NOTIFICATIONS  
For Daily Alerts

ದೇಹದ ರಕ್ತ ಶುದ್ಧೀಕರಣಕ್ಕೆ-ತಪ್ಪದೇ ಈ ಟಿಪ್ಸ್ ಅನುಸರಿಸಿ

ನೈಸರ್ಗಿಕ ರಕ್ತ ಶುದ್ದೀಕರಣ ಆಹಾರಕ್ರಮವನ್ನು ಸಾಮಾನ್ಯವಾಗಿ ರಕ್ತ ಶುದ್ಧೀಕರಣ ಆಹಾರಕ್ರಮವೆಂದು ಕರೆಯಲಾಗುತ್ತದೆ. ಇದರಿಂದ ವ್ಯಕ್ತಿಯೊಬ್ಬನ ದೇಹದಲ್ಲಿರುವ ಎಲ್ಲಾ ವಿಷಾಯುಕ್ತ ಅಂಶಗಳನ್ನು ಮತ್ತು ರಕ್ತನಾಳಗಳಲ್ಲಿರುವ ಕಲ್ಮಶಗಳನ್ನು ಹೊರಹಾಕುತ್ತದೆ

By Manu
|

ನಮ್ಮ ದೇಹದ ಪ್ರತಿ ಅಂಗವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಇದಕ್ಕೆ ಸತತವಾಗಿ ಪೋಷಕಾಂಶಗಳ ಪೂರೈಕೆ ಅಗತ್ಯ. ಇದನ್ನು ಕೊಂಡು ತಂದು ಪ್ರತಿ ಅಂಗ, ಅಂಗಾಂಶದ ಮಲಿನ, ಜೀವಕೋಶಗಳ ಇಂಗಾಲ ಡೈ ಆಕ್ಸೈಡ್‌ಗಳನ್ನು ಹೊತ್ತು ವಿಸರ್ಜಿಸಲು ದೇಹವಿಡೀ ಪ್ರವಹಿಸುವ ರಕ್ತದ ಪಾತ್ರ ಮಹತ್ತರವಾಗಿದೆ.

ಓರ್ವ ವ್ಯಕ್ತಿಯ ಆರೋಗ್ಯವನ್ನು ರಕ್ತದ ತಪಾಸಣೆಯ ಮೂಲಕ ಕ್ಷಿಪ್ರವಾಗಿ ಕಂಡುಹಿಡಿಯಬಹುದು. ರಕ್ತದ ಒತ್ತಡವನ್ನು ಸಮರ್ಪಕವಾಗಿರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತವನ್ನು ಶುದ್ಧವಾಗಿರಿಸಿಕೊಳ್ಳುವುದೂ ಅಷ್ಟೇ ಮುಖ್ಯ.

blood purify

ರಕ್ತದಿಂದ ಕಲ್ಮಶಗಳನ್ನು ನಿವಾರಿಸುವ ಕೆಲಸವನ್ನು ಮೂತ್ರಪಿಂಡಗಳು, ಯಕೃತ್ ಮತ್ತು ದುಗ್ಧಗ್ರಂಥಿಗಳು ನೆರವೇರಿಸುತ್ತವೆ. ಈ ಎಲ್ಲಾ ಅಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸಿ ರಕ್ತವನ್ನು ಶುದ್ದವಾಗಿರಿಸಿಕೊಳ್ಳಲು ಕೆಲವು ಆಹಾರಗಳು ನೆರವಾಗುತ್ತವೆ. ಒಂದು ವೇಳೆ ನಿಮ್ಮ ರಕ್ತ ಅಶುದ್ಧವಾಗಿದ್ದು ಇದನ್ನು ತಕ್ಷಣ ಶುದ್ಧಗೊಳಿಸಲು ಕೆಳಗೆ ನೀಡಿರುವ ಸುಲಭ ವಿಧಾನದಿಂದ ಸಾಧ್ಯವಾಗುತ್ತದೆ.

ರಕ್ತಹೀನತೆ ಇದೆ ಎಂದಾಗ ವೈದ್ಯರು ಹಸಿರು ಸೊಪ್ಪು ತಿನ್ನಲು ಸಲಹೆ ಮಾಡುತ್ತಾರೆ. ಈ ಸೊಪ್ಪುಗಳಲ್ಲಿ ಇತರ ಪೋಷಕಾಂಶಗಳ ಜೊತೆಗೇ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವೂ ಇದೆ. ಇದು ರಕ್ತದ ಕಣಗಳನ್ನು ಹೊಸದಾಗಿ ಉತ್ಪತ್ತಿಗೊಳಿಸಲು ನೆರವಾಗುತ್ತದೆ. ಬಸಲೆ ಸೊಪ್ಪು ಇದಕ್ಕೆ ಅತ್ಯಂತ ಸಮರ್ಪಕ ಆಯ್ಕೆಯಾಗಿದೆ.

ಬಳಿಕ ಪಾಲಕ್, ಬ್ರೋಕೋಲಿ, ಕೋಸು ಮೊದಲಾದವುಗಳಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಕ್ಯಾನ್ಸರ್ ನಿವಾರಕ ಗುಣಗಳಿದ್ದು ಇವು ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ. ತನ್ಮೂಲಕ ರಕ್ತದಲ್ಲಿರುವ ಕಲ್ಮಶಗಳನ್ನು ಇನ್ನಷ್ಟು ಸಮರ್ಪಕವಾಗಿ ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ರಕ್ತ ಹೆಚ್ಚು ಹೆಚ್ಚು ಶುದ್ಧಗೊಳ್ಳುತ್ತಾ ಹೋಗುತ್ತದೆ. ರಕ್ತ ಪರಿಚಲನೆ ಹೆಚ್ಚಿಸಲು ಅಧೋಮುಖ ವೃಕ್ಷಾಸನ ಅನುಸರಿಸಿ

ಕೊತ್ತಂಬರಿ ಸೊಪ್ಪಿನಲ್ಲಿಯೂ ರಕ್ತವನ್ನು ಶುದ್ಧೀಕರಿಸುವ ಗುಣವಿದ್ದು ವಿಶೇಷವಾಗಿ ರಕ್ತದಲ್ಲಿ ಮತ್ತು ಶರೀರದ ಇತರ ಭಾಗಗಳಲ್ಲಿ ಸಂಗ್ರಹಗೊಂಡಿದ್ದ ಭಾರವಾದ ಲೋಹದ ಕಣಗಳನ್ನು ನಿವಾರಿಸಲು ನೆರವಾಗುತ್ತದೆ.

ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳಾದ ಕರಬೂಜ, ಕಿತ್ತಳೆ, ರಾಸ್ಪ್ಬೆರಿ, ಸೇಬು, ಕಿವಿಹಣ್ಣು, ಚಕ್ಕೋತ, ದಾಳಿಂಬೆ, ಕ್ರ್ಯಾನ್ಬೆರಿ ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ರಕ್ತ ಶುದ್ಧೀಕರಣಗೊಳ್ಳುವುದು ಮಾತ್ರವಲ್ಲ, ಕ್ಯಾನ್ಸರ್ ಹರಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡಲೂ ಸಾಧ್ಯವಾಗುತ್ತದೆ.

ಇದರ ಜೊತೆಗೇ ನಾರಿನ ಪ್ರಮಾಣ ಹೆಚ್ಚಿರುವ ಹಣ್ಣುಗಳನ್ನು ಸೇವಿಸುವ ಮೂಲಕವೂ ದೇಹದಿಂದ ಭಾರವಾದ ಲೋಹದ ಕಣಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಲೋಹ ದೇಹದಲ್ಲಿದ್ದರೆ ಸೋಂಕು ಹರಡಲು ಕಾರಣವಾಗುತ್ತದೆ. ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ

ನಿತ್ಯವೂ ವಿವಿಧ ಹಣ್ಣುಗಳನ್ನು ಕೊಂಚ ಪ್ರಮಾಣದಲ್ಲಿ ತಿನ್ನುತ್ತಾ ಬಂದರೆ ಮತ್ತು ವಿಶೇಷವಾಗಿ ನಿಮ್ಮ ಮಧ್ಯಾಹ್ನದ ಊಟವನ್ನು ಕೇವಲ ಹಣ್ಣುಗಳಿಂದ ಪೂರೈಸಿದರೆ ಇನ್ನೂ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಬೆಳಗ್ಗಿನ ಉಪಾಹಾರದೊಂದಿಗೆ ದಾಳಿಂಬೆ ಅಥವಾ ಕೆಂಪು ಚಕ್ಕೋತದ ರಸವನ್ನು ಕುಡಿಯುವ ಮೂಲಕ ಈ ಹಣ್ಣುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಯೋಜನವನ್ನು ಪಡೆಯಬಹುದು. ಒಂದು ವೇಳೆ ಯಾವುದಾದರೋ ತೊಂದರೆಗೆ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯದೇ ಇವನ್ನು ಕುಡಿಯಬೇಡಿ.

ಬೆಳ್ಳುಳ್ಳಿ ಒಂದು ನೈಸರ್ಗಿಕ ಸೂಕ್ಷ್ಮಜೀವಿ ನಿವಾರಕವಾಗಿದ್ದೂ ಉತ್ತಮ ರಕ್ತ ಶುದ್ಧೀಕಾರಕವೂ ಆಗಿದೆ. ನಿಮ್ಮ ಆಹಾರದಲ್ಲಿ ಕೆಲವು ಎಸಳು ಹಸಿ ಬೆಳ್ಳುಳ್ಳಿಯನ್ನು ಸೇರಿಸಿಕೊಳ್ಳುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗಲು ಸಹಾಯವಾಗುತ್ತದೆ.

ಅಲ್ಲದೇ ಇದರಲ್ಲಿರುವ ಫೈಟೋ ಕೆಮಿಕಲ್ಸ್ ಎಂಬ ಪೋಷಕಾಂಶಗಳು ಯಕೃತ್‌ನ ವಿಷವಸ್ತುಗಳನ್ನು ಹೊರ ಹಾಕಲು ಸಮರ್ಥವಾಗಿವೆ. ಬೆಳ್ಳುಳ್ಳಿ ಕೊಂಚ ಖಾರವಾಗಿದ್ದರೂ ಸಾಧ್ಯವಾದರೆ ಹಸಿಯಾಗಿಯೇ ಸೇವಿಸಿ. ಆಗದಿದ್ದರೆ ಬೆಳ್ಳುಳ್ಳಿಯ ಒಣಪುಡಿಯನ್ನು ನಿಮ್ಮ ಊಟದಲ್ಲಿ ಬೆರೆಸಿಕೊಂಡು ಊಟ ಮಾಡಿ. ಮಹಿಳೆಯರಿಗೆ ಸಿಹಿ ಸುದ್ದಿ: ರಕ್ತ ಪರಿಚಲನೆ ಹೆಚ್ಚಿಸಲು ಸೂಕ್ತ ಸಲಹೆ

ಟೀಯನ್ನು ಹಾಗೇ ಕುಡಿಯುವ ಬದಲು ಇದರಲ್ಲಿ ಕೆಲವು ಮಸಾಲೆಗಳನ್ನು ಬೆರೆಸಿ ಕುಡಿದರೆ ಟೀ ಯ ರುಚಿ ಹೆಚ್ಚುತ್ತದೆ ಹಾಗೂ ಆರೋಗ್ಯವೂ ಉತ್ತಮಗೊಳ್ಳುತ್ತದೆ. ನಿಮ್ಮ ಟೀ ಯಲ್ಲಿ ಹಸಿಶುಂಠಿ, ಪುದೀನಾ, ಡ್ಯಾಂಡೆಲಿಯನ್ ಹೂ ಮೊದಲಾದವುಗಳನ್ನು ಕುದಿಯುವ ಸಮಯದಲ್ಲಿ ಬೆರೆಸಿ ಸೇವಿಸುವ ಮೂಲಕ ರಕ್ತವೂ ಶುದ್ಧಿಗೊಳ್ಳುತ್ತದೆ.

English summary

How Can You Keep Your Blood Clean?

Blood is a vital part of our body that performs many functions like supplying significant nutrients and oxygen to various parts of the body and transporting waste and carbon dioxide away from the cells, which is essential for proper functioning of the other organs. The overall wellness of a person is determined by the blood of that individual.
X
Desktop Bottom Promotion