ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ

By Arshad
Subscribe to Boldsky

ದಾಳಿಂಬೆಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು, ಪಾಲಿಫೆನಾಲ್ ಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ oxidative stress ಅಥವಾ ರಕ್ತದಲ್ಲಿ ಬರುವ ವಿಷಕಾರಿ ವಸ್ತುಗಳನ್ನು ಅಥವಾ ಕಣಗಳನ್ನು ನಿಷ್ಪಲಗೊಳಿಸುವ ಕ್ಷಮತೆ ಕುಂಠಿತವಾಗುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಲ್ಲದೇ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ತಿನ್ನಲು ಹಿಂದೇಟು ಹಾಕಲು ಪ್ರಮುಖ ಕಾರಣವೆಂದರೆ ಇದನ್ನು ಸುಲಿದು ಕಾಳುಗಳನ್ನು ಬೇರ್ಪಡಿಸುವ ಕ್ರಿಯೆ. ಇದು ಕೊಂಚ ಸಮಯ ಹಿಡಿಯುವ ಕೆಲಸವಾದ ಕಾರಣ ಹೆಚ್ಚಿನವರು ದಾಳಿಂಬೆಯ ತಂಟೆಗೇ ಹೋಗುವುದಿಲ್ಲ.

Pomegranate juice
  

ಆದರೆ ಇದರ ಪ್ರಯೋಜನಗಳನ್ನು ಕಂಡುಕೊಂಡಾಗ ಈ ಹಣ್ಣುಗಳ ಕಾಳು ಬೇರ್ಪಡಿಸಲು ವಿನಿಯೋಗಿಸುವ ಸಮಯ ನಿಜಕ್ಕೂ ಸಾರ್ಥಕವಾದುದು ಎಂದು ಕಂಡುಕೊಳ್ಳಬಹುದು. ಹೃದಯದ ಆರೋಗ್ಯ ಉತ್ತಮಗೊಂಡು ನೂರ್ಕಾಲ ಬಾಳಬೇಕು ಎಂದಿದ್ದರೆ ನಿತ್ಯವೂ ಒಂದು ಲೋಟ ಈ ಕಾಳುಗಳನ್ನು ಮಿಕ್ಸಿಗೆ ಹಾಕಿ ಗೊಟಾಯಿಸಿ ಹಿಂಡಿದ ರಸವನ್ನು ಸೇವಿಸಬೇಕು. ಬನ್ನಿ, ಹೃದಯವನ್ನು ಈ ರಸ ಹೇಗೆ ಕಾಪಾಡಿ ನೂರು ವರ್ಷ ಆಯಸ್ಸು ನೀಡುತ್ತದೆ ಎಂಬುದನ್ನು ನೋಡೋಣ...

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ

ದಿನಕ್ಕೊಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ( LDL) ಮಟ್ಟ ಕಡಿಮೆಯಾಗಿ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟ ಹೆಚ್ಚಾಗಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ. ಇದರಿಂದ ರಕ್ತನಾಳಗಳ ಒಳಗೆ ಸಂಗ್ರಹವಾಗಿದ್ದ ಜಿಡ್ಡು ನಿವಾರಣೆಯಾಗಿ ರಕ್ತಸಂಚಾರ ಸುಗಮಗೊಳ್ಳುತ್ತದೆ. ಸರ್ವತೋಮುಖ ಆರೋಗ್ಯಕ್ಕಾಗಿ ದಾಳಿಂಬೆ ಸೇವಿಸಿ ನೋಡಿ! 

ಮಧುಮೇಹ ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ

ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು.

Everyday Pomegranate juice can keep your heart healthy
 

ರಕ್ತದ ಒತ್ತಡ ಸಮಸ್ಥಿತಿಯಲ್ಲಿರಿಸಲು ನೆರವಾಗುತ್ತದೆ

ಮಾನಸಿಕ ಒತ್ತಡದ ಕಾರಣ ಎದುರಾಗುವ ಅಧಿಕ ರಕ್ತದೊತ್ತಡ ಇಂದು ಸಾಮಾನ್ಯವಾಗಿದ್ದು ಇತ್ತೀಚೆಗೆ ಯುವಜನಾಂಗದಲ್ಲಿಯೂ ಕಂಡುಬರುತ್ತಿದೆ. ಅತಿ ಹೆಚ್ಚಿನ ಸ್ಪರ್ಧೆ ಈ ಒತ್ತಡಕ್ಕೆ ಪ್ರಮುಖ ಕಾರಣ. ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ವಿಶೇಷವಾಗಿ ಅಧಿಕ ರಕ್ತದೊತ್ತಡವನ್ನು ಸಮಸ್ಥಿತಿಯಲ್ಲಿರಿಸಲು ಸಾಧ್ಯವಾಗುತ್ತದೆ. ದಾಳಿಂಬೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು

ಅಪಧಮನಿಕಾಠಿಣ್ಯವನ್ನು ಕಡಿಮೆಗೊಳಿಸುತ್ತದೆ

Everyday Pomegranate juice can keep your heart healthy

ಅಪಧಮನಿಕಾಠಿಣ್ಯ ಅಥವಾ arthelosclerosis ಎಂಬ ರೋಗವಿರುವ ರೋಗಿಗಳಲ್ಲಿ ರಕ್ತನಾಳಗಳ ಒಳಗೆ ಬಹುಕಾಲದಿಂದ ಜಿಡ್ಡು ಅಂಟಿಕೊಂಡು ಗಟ್ಟಿಯಾಗಿ ನರಗಳೆಲ್ಲಾ ಗಟ್ಟಿಯಾಗಿ ಹೋಗಿರುತ್ತವೆ. ಈ ಸ್ಥಿತಿ ಇರುವ ಹಲವು ರೋಗಿಗಳಿಗೆ ಒಂದು ಸಂಶೋಧನೆಯ ಅಂಗವಾಗಿ ಮೂರು ವರ್ಷಗಳ ಕಾಲ ಸತತವಾಗಿ ದಾಳಿಂಬೆ ರಸವನ್ನು ಕುಡಿಸಲಾಗಿತ್ತು. ಮೂರು ವರ್ಷದ ಬಳಿಕ ಈ ನರಗಳು ಸಾಕಷ್ಟು ಉತ್ತಮ ಸ್ಥಿತಿ ಪಡೆದಿದ್ದುದು ಮಾತ್ರವಲ್ಲ, ಹೃದಯದ ಒತ್ತಡವೂ ಕಡಿಮೆಯಾಗಿತ್ತು.

For Quick Alerts
ALLOW NOTIFICATIONS
For Daily Alerts

    English summary

    Everyday Pomegranate juice can keep your heart healthy

    Pomegranate is a storehouse of antioxidants and polyphenols that help reduce oxidative stress, target free radicals and keep your heart in good health. If you think munching the fruit is quite boring and time consuming, then put the washed and peeled fruit into a juicer and have the juice every day. Here is how a glass of pomegranate juice can help you keep your heart healthy.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more