For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಸಿಹಿ ಸುದ್ದಿ: ರಕ್ತ ಪರಿಚಲನೆ ಹೆಚ್ಚಿಸಲು ಸೂಕ್ತ ಸಲಹೆ

By Super
|

ರಕ್ತದ ಪ್ರಮಾಣ ಪುರುಷರಲ್ಲಿ ಸರಿಸುಮಾರು ಐದರಿಂದ ಐದೂವರೆ ಲೀಟರ್ ಇದ್ದರೂ ಮಹಿಳೆಯರಲ್ಲಿ ಕೊಂಚ ಕಡಿಮೆ ಇರುತ್ತದೆ. ಅಲ್ಲದೇ ಮಾಸಿಕ ಋತುಚಕ್ರದ ಕಾರಣ ರಕ್ತ ಕಳೆದುಕೊಳ್ಳುವುದರಿಂದ ಹೆಚ್ಚಿನ ರಕ್ತ ಉತ್ಪತ್ತಿಯಾಗುತ್ತಲೇ ಇರಬೇಕು.

ಕೆಲವೊಮ್ಮೆ ಶರೀರದ ತುದಿಯ ಭಾಗಗಳಾದ ಕೈಬೆರಳು ಮತ್ತು ಕಾಲ್ಬೆರಳುಗಳಲ್ಲಿ ರಕ್ತಸಂಚಾರ ಕಡಿಮೆಯಾಗಿ ಜೋಮು ಹಿಡಿದಂತಾಗುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಒಂದು ವೇಳೆ ಈ ಜೋಮು ಹಿಡಿಯುವುದು ಪದೇ ಪದೇ ಆಗುತ್ತಿದ್ದರೆ ರಕ್ತಸಂಚಾರದ ಕೊರತೆಯಿಂದ ನೀವು ಬಳಲುತ್ತಿರಬಹುದು. ರಕ್ತ ಸಂಚಾರ ವೃದ್ಧಿಸುವುದು ಹೇಗೆ?

ಈ ತೊಂದರೆಯಿಂದ ಪಾರಾಗಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಒಂದು ವೇಳೆ ಜೋಮು ಹಿಡಿಯುವ ಪ್ರಮಾಣ ಅತಿ ಹೆಚ್ಚಾಗಿದ್ದು ದಿನೇ ದಿನೇ ಆಗುತ್ತಿದ್ದರೆ ವೈದ್ಯರನ್ನು ಕಾಣುವುದು ಅವಶ್ಯವಾಗಿದೆ.

ಹಸಿರು ಚಹಾ ಸೇವಿಸಿ

ಹಸಿರು ಚಹಾ ಸೇವಿಸಿ

ಹಸಿರು ಟೀಯಲ್ಲಿ "Epigallocatechin" ಎಂಬ ಹೆಸರಿನ ಅದ್ಭುತ ಆಂಟಿ ಆಕ್ಸಿಡೆಂಟು ಇದೆ. ಈ ಪೋಷಕಾಂಶವು ನರಗಳ ಒಳಪದರವನ್ನು ಸೆಳೆತಗೊಳಿಸಿ ರಕ್ತಸಂಚಾರ ಸುಗಮಗೊಳಿಸಲು ನೆರವಾಗುತ್ತದೆ.ಇದರಿಂದ ರಕ್ತ ದೇಹದ ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ಮತ್ತು ಸರಾಗವಾಗಿ ತಲುಪಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಬೆರಳುಗಳು ಜೋಮು ಹಿಡಿಯುವುದರಿಂದ ಮುಕ್ತಿ ಪಡೆಯಬಹುದು.

ರೋಸ್ಮರಿ ಹೂವುಗಳು

ರೋಸ್ಮರಿ ಹೂವುಗಳು

ರಕ್ತಸಂಚಾರ ಹೆಚ್ಚಿಸುವಲ್ಲಿ ರೋಸ್ಮರಿ ಹೂವಿನ ತೈಲ, ಹೂಗಳ ಎಸಳುಗಳನ್ನು ಕುದಿಸಿ ತಯಾರಿಸಿದ ಟೀ, ಅಥವಾ ಸುಗಂಧಗಳು ಪೂರಕವಾಗಿವೆ. ತೈಲದಿಂದ ಕೈಕಾಲುಗಳಿಗೆ ಮಸಾಜ್ ಮಾಡುವುದರಿಂದ, ರೋಸ್ಮರಿ ಟೀ ಕುಡಿಯುವುದರಿಂದ ಹಾಗೂ ನಿಮ್ಮ ಕೋಣೆಯಲ್ಲಿ ರೋಸ್ಮರಿ ಹೂವಿನ ಸುಗಂಧವನ್ನು ವ್ಯಾಪಿಸುವಂತೆ ಮಾಡುವುದರಿಂದ ರಕ್ತಸಂಚಾರದಲ್ಲಿ ಹೆಚ್ಚಳ ಕಂಡುಬರುತ್ತದೆ. ಆದರೆ ಹೆಚ್ಚಿನ ರಕ್ತದೊತ್ತಡ, ಮೂರ್ಛೆರೋಗ ಇರುವವರಿಗೆ ರೋಸ್ಮರಿ ಒಳ್ಳೆಯದಲ್ಲ!

ಕೆಂಪು ಕಾಳು ಮೆಣಸು (Cayenne Pepper ಅಥವಾRed Hot Chili Pepper)

ಕೆಂಪು ಕಾಳು ಮೆಣಸು (Cayenne Pepper ಅಥವಾRed Hot Chili Pepper)

ಆಹಾರಕ್ಕೆ ಖಾರ ನೀಡಲು ಉಪಯೋಗಿಸುವ ಕೆಂಪು ಕಾಳು ಮೆಣಸು ರಕ್ತ ಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಆಹಾರದ ಮೂಲಕ ಖಾರವನ್ನು ಸೇವಿಸಿದ ಬಳಿಕ ರಕ್ತಸಂಚಾರ ಹೆಚ್ಚುವುದನ್ನು ಸಂಶೋಧನೆಗಳ ಮೂಲಕ ಸಾಬೀತುಪಡಿಸಲಾಗಿದೆ. ಇದರಿಂದ ಇಡಿಯ ದೇಹದಲ್ಲಿ ರಕ್ತಸಂಚಾರ ಸುಗಮಗೊಳ್ಳುವುದು. ಆದರೆ ಪ್ರತಿದಿನದ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ.

ಟೊಮೇಟೊ

ಟೊಮೇಟೊ

ಟೊಮಾಟೋ ಹಣ್ಣುಗಳಿಗೆ (ವಾಸ್ತವವಾಗಿ ಟೊಮಾಟೋ ಒಂದು ಹಣ್ಣು, ನಾವು ತರಕಾರಿಯಾಗಿ ಬಳಸುತ್ತಿದ್ದೇವೆ) ಕೆಂಪು ಬಣ್ಣ ನೀಡಲು ಕಾರಣವಾಗಿರುವ ಲೈಕೋಪಿನ್ ಎಂಬ ಪೋಷಕಾಂಶ ರಕ್ತದಲ್ಲಿ ಜಿಡ್ಡು ಉಂಟಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ರಕ್ತಸಂಚಾರ ಉತ್ತಮಗೊಳ್ಳುತ್ತದೆ.

ಗುಗ್ಗಲ್ ಅಥವಾ ಗುಗ್ಗುಲು

ಗುಗ್ಗಲ್ ಅಥವಾ ಗುಗ್ಗುಲು

ಗುಗ್ಗುಲು ಎಂದು ಕರೆಯಲಾಗುವ ಈ ಗಿಡಮೂಲಿಕೆ ಮಹಿಳೆಯರ ಆರೋಗ್ಯವನ್ನು ವೃದ್ಧಿಸಲು ಉತ್ತಮವಾದ ಔಷಧಿಯಾಗಿದೆ. ಇದರಲ್ಲಿರುವ "Guggulsterones" ಎಂಬ ಪೋಷಕಾಂಶ ಒಂದು ಒಡಲ್ಕಟ್ಟುಕ (kenotic steroid) ಆಗಿದೆ. ಈ ಮೂಲಿಕೆಯನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ರಕ್ತನಾಳಗಳ ಒಳಗೆ ಜಿಡ್ಡು ಅಂಟಿಕೊಳ್ಳುವುದು ತಪ್ಪಿದಂತಾಗಿ ರಕ್ತಸಂಚಾರ ಹೆಚ್ಚುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಬೆಳ್ಳುಳ್ಳಿ ಉತ್ತಮವಾದ ಔಷಧಿಯಾಗಿದೆ. ಬೆಳ್ಳುಳ್ಳಿಯನ್ನು ಹಲವು ಅಡುಗೆಗಳಲ್ಲಿ ಬಳಸಲಾಗುತ್ತದೆ. ಮಹಿಳೆಯರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತಸಂಚಾರ ಹೆಚ್ಚುವುದು ಕಂಡುಬಂದಿದೆ. ಅಜೀರ್ಣದ ಕಾರಣ ಆಹಾರದ ಪೋಷಕಾಂಶಗಳು ಪೂರ್ಣವಾಗಿ ದೊರಕದಿದ್ದಾಗಲೂ ಹಸಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಊಟದೊಂದಿಗೆ ಸೇವಿಸುವುದರಿಂದ್ ಉತ್ತಮ ಪರಿಣಾಮ ದೊರಕುತ್ತದೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿರುವ ಉರಿತರಿಸುವ ಪೋಷಕಾಂಶವಾದ ಆಲಿಸಿನ್ ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ನಿಮ್ಮ ಆಹಾರದಲ್ಲಿ ಈರುಳ್ಳಿಯ ಪ್ರಮಾಣ ಸಾಕಷ್ಟು ಇರುವಂತೆ ನೋಡಿಕೊಳ್ಳುವುದು ಹಾಗೂ ಹಸಿ ಈರುಳ್ಳಿಯ ಒಳಭಾಗದ ಎಸಳುಗಳನ್ನು ಊಟದಲ್ಲಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ಒಣಫಲಗಳು

ಒಣಫಲಗಳು

ನಿಮ್ಮ ನಿತ್ಯದ ಆಹಾರಗಳ ಜೊತೆಗೇ ಒಣಫಲಗಳಾದ ಗೋಡಂಬಿ, ಬಾದಾಮಿ, ಪಿಸ್ತಾ ಮೊದಲಾದವುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುತ್ತಾ ಬರುವುದರಿಂದ ರಕ್ತ ಸಂಚಾರ ಹೆಚ್ಚುತ್ತದೆ. ಇದರಲ್ಲಿರುವ ವಿಟಮಿನ್ ಬಿ3 ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ.

ಹಾಥ್ರೋನ್ ಎಲೆಗಳು ಮತ್ತು ಹಣ್ಣುಗಳು

ಹಾಥ್ರೋನ್ ಎಲೆಗಳು ಮತ್ತು ಹಣ್ಣುಗಳು

ಹಾಥ್ರೋನ್ ಎಂಬ ಹಣ್ಣುಗಳಲ್ಲಿ ಮತ್ತು ಇದರ ಎಲೆಗಳಲ್ಲಿ ಇರುವ "Quercetin" ಎಂಬ ಪೋಷಕಾಂಶವು ರಕ್ತಸಂಚಾರ ಹೆಚ್ಚಿಸಲು ನೆರವಾಗುತ್ತದೆ. ಈ ಪೋಷಕಾಂಶವು ನೀರುಳ್ಳಿ, ಲಿಂಬೆ, ಕೆಂಪು ಸೇಬು, ಪ್ರಖರ ಬಣ್ಣಗಳ ಬೆರ್ರಿ ಹಣ್ಣುಗಳು, ದ್ರಾಕ್ಷಿ ಮತ್ತು ಆಲಿವ್ ಎಣ್ಣೆಯಲ್ಲಿಯೂ ಕಂಡುಬರುತ್ತದೆ. ಹಸಿರು ಟೀ ಮತ್ತು ಕೆಂಪು ವೈನ್ ನಲ್ಲಿಯೂ ಈ ಪೋಷಕಾಂಶವಿದೆ.

ನಡೆದಾಟ ಹೆಚ್ಚಿಸಿ ಅಥವಾ ಓಡಿರಿ

ನಡೆದಾಟ ಹೆಚ್ಚಿಸಿ ಅಥವಾ ಓಡಿರಿ

ನಡಿಗೆ ಅತ್ಯಂತ ಸುಲಭವಾದ ಮತ್ತು ಅತ್ಯಂತ ಫಲಪ್ರದವಾದ ವ್ಯಾಯಾಮವಾಗಿದೆ. ಆದರೆ ನಡಿಗೆಗಿಂತಲೂ ನಿಧಾನಗತಿಯ ಓಟ ರಕ್ತಸಂಚಾರ ಹೆಚ್ಚಲು ಉತ್ತಮ ವಿಧಾನವಾಗಿದೆ. ಇದಕ್ಕಾಗಿ ಮೊದಲ ಇಪ್ಪತ್ತು ನಿಮಿಷಗಳ ಕಾಲ ನಿಧಾನಗತಿಯಲ್ಲಿ ಓಡಿ ಬಳಿಕ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ವೇಗವನ್ನು ಹೆಚ್ಚಿಸಿ. ಪ್ರತಿದಿನ ಈ ವ್ಯಾಯಾಮವನ್ನು ಅನುಸರಿಸುವುದರಿಂದ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ಆರೋಗ್ಯ ಉತ್ತಮಗೊಳ್ಳುತ್ತದೆ.

ನಿಮ್ಮ ದೇಹಕ್ಕೆ ಮಸಾಜ್ ನೀಡಿ

ನಿಮ್ಮ ದೇಹಕ್ಕೆ ಮಸಾಜ್ ನೀಡಿ

ಉಗುರುಬೆಚ್ಚನೆಯ ಕೊಬ್ಬರಿ ಎಣ್ಣೆ, ರೋಸ್ಮರಿ ಎಣ್ಣೆ ಅಥವಾ ಆಲಿವ್ ಎಣ್ಣೆಯಿಂದ ಪ್ರತಿದಿನ ನಯವಾದ ಮಸಾಜ್ ಮಾಡಿಸಿಕೊಳ್ಳುವುದರಿಂದ ರಕ್ತಸಂಚಾರ ಹೆಚ್ಚುವುದು ಕಂಡುಬಂದಿದೆ. ಮಸಾಜ್ ಬಳಿಕ ನಿಮ್ಮ ದೇಹ ತಾಳಿಕೊಳ್ಳುವಷ್ಟು ಬಿಸಿಯ ನೀರಿನಿಂದ ಸ್ನಾನ ಮಾಡುವುದರಿಂದ ರಕ್ತಸಂಚಾರ ಹೆಚ್ಚಲು ನೆರವಾಗುತ್ತದೆ.

English summary

Ways Women Can Improve Blood Circulation

Some women face this problem once in a blue moon, however if it has become your daily headache, it’s high time to contemplate. There are ways women can improve blood circulation with few steps. Read on, to know more. 
Story first published: Monday, March 30, 2015, 16:37 [IST]
X
Desktop Bottom Promotion