Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ರಕ್ತ ಪರಿಚಲನೆ ಹೆಚ್ಚಿಸಲು ಅಧೋಮುಖ ವೃಕ್ಷಾಸನ ಅನುಸರಿಸಿ
ಯೋಗ ಮಾಡಿದರೆ ರೋಗಗಳಿಂದ ದೂರವಿರಬಹುದು ಎಂಬುದು ಯೋಗ ಮಾಡದವರಿಗೂ ತಿಳಿದಿರುವ ಸತ್ಯ. ನಮಗೆ ಇರುವ ಬಹುತೇಕ ಎಲ್ಲಾ ರೋಗಗಳನ್ನು ನಿವಾರಿಸುವ ಶಕ್ತಿಯನ್ನು ಯೋಗ ಪಡೆದಿದೆ. ಅಂದರೆ ಶೀತದಿಂದ ಹಿಡಿದು, ಅರ್ಥರಿಟಿಸ್‌ವರೆಗೂ, ಮಧುಮೇಹದಿಂದ ಹಿಡಿದು ನೋವು ನಿವಾರಣೆಯವರೆಗೂ, ಯೋಗವು ಒಂದು ದಿವ್ಯೌಷಧವೆಂಬಂತೆ ಬಳಕೆಯಾಗುತ್ತಿದೆ.

ನಮ್ಮ ಆರೋಗ್ಯ ಚೆನ್ನಾಗಿರಬೇಕು ಎಂದರೆ ದೇಹದ ಸಕಲ ಅಂಗಗಳು ಸರಿಯಾಗಿ ಕೆಲಸ ಮಾಡುತ್ತಿರಬೇಕು. ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡಬೇಕು ಎಂದರೆ, ಅವುಗಳಿಗೆ ಆಮ್ಲಜನಕ ಪೂರೈಕೆಯಾಗಬೇಕು. ಆಮ್ಲಜನಕ ಪೂರೈಕೆಯಾಗಬೇಕು ಎಂದರೆ ರಕ್ತ ಪರಿಚಲನೆ ಚೆನ್ನಾಗಿರಬೇಕು. ರಕ್ತ ಪರಿಚಲನೆ ಏರು ಏರಾದರೆ, ರಕ್ತ ಹೆಪ್ಪುಗಟ್ಟುವಿಕೆ, ನರ-ಸಂಬಂಧಿ ಸಮಸ್ಯೆಗಳು, ಕಾಲು ಊದಿಕೊಳ್ಳುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ನಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಹಲವಾರು ಚಿಕಿತ್ಸೆಗಳು ಲಭ್ಯವಿದೆ. ಆದರೂ ಎಲ್ಲಾ ಔಷಧಗಳ ಜೊತೆಗೆ ಯೋಗವನ್ನು ತಪ್ಪದೆ ಮಾಡಬೇಕಾಗುತ್ತದೆ. ಅದರಲ್ಲೂ ಅಧೋ ಮುಖ ವೃಕ್ಷಾಸನವನ್ನು ತಪ್ಪದೆ ಮಾಡಬೇಕಾಗುತ್ತದೆ. ಇದು ರಕ್ತ ಪರಿಚಲನೆಯನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಪರಿಗಣಿಸಲ್ಪಟ್ಟಿದೆ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ
"ಅಧೋ ಮುಖ ವೃಕ್ಷಾಸನ" ಎಂಬ ಪದವು ಸಂಸ್ಕೃತದಿಂದ ಬಂದಿದೆ. ಇಲ್ಲಿ "ಅಧೋ ಮುಖ" ಎಂದರೆ ಕೆಳಮುಖ ಮತ್ತು ವೃಕ್ಷ ಎಂದರೆ ಮರ ಎಂದರ್ಥ. ಅಂದರೆ ಮರದ ರೀತಿಯ ಆಸನವನ್ನು ಕೆಳ ಮುಖವಾಗಿ ಮಾಡುವ ಭಂಗಿ.
ಈ ಆಸನ ಮಾಡುವಾಗ ಮುಖವು ಕೆಳಮುಖವಾಗಿರುತ್ತದೆ ಮತ್ತು ನಮ್ಮ ದೇಹವು ಮರದ ರೀತಿ ಕಾಣಿಸುತ್ತದೆ. ಆದ್ದರಿಂದ ಇದನ್ನು ಅಧೋಮುಖ ವೃಕ್ಷಾಸನ ಎನ್ನುತ್ತಾರೆ. ವೃಕ್ಷಾಸನವು ನಮ್ಮ ದೇಹಕ್ಕೆ ತಾಜಾ ರಕ್ತವನ್ನು ಒದಗಿಸುತ್ತದೆ.
ಮೊದ ಮೊದಲು ಈ ಆಸನವನ್ನು ಅಭ್ಯಾಸ ಮಾಡಲು ಹೊಸಬರಿಗೆ ಕಷ್ಟವಾಗುತ್ತದೆ. ಆಗಾಗಿ ಇದನ್ನು ಗೋಡೆಯ ಸಹಾಯದೊಂದಿಗೆ ಮಾಡಬೇಕಾಗುತ್ತದೆ. ಇದರಿಂದ ನೀವು ಬೀಳುವ ಸಾಧ್ಯತೆ ಸಹ ಕಡಿಮೆಯಾಗುತ್ತದೆ. ಬನ್ನಿ ವೃಕ್ಷಾಸನ ಮಾಡುವ ವಿಧಾನ ಹೇಗೆ ಎಂಬುದನ್ನು ಮುಂದೆ ಓದಿ... ರಕ್ತ ಪರಿಚಲನೆಯ ಕ್ಷಮತೆಗೆ ಅನುಸರಿಸಿ ಸಾಲಂಭ ಭುಜಂಗಾಸನ
1. ನಿಮ್ಮ ಕೈಗಳನ್ನು ಗೋಡೆಯಿಂದ ಕೆಲವು ಇಂಚುಗಳಷ್ಟು ದೂರದಲ್ಲಿ ಇರಿಸಿ.
2. ನಿಮ್ಮ ಭುಜಗಳನ್ನು ಮಣಿಕಟ್ಟುಗಳ ನೇರಕ್ಕೆ ಇರಿಸಿ.
3. ಒಂದು ಮೊಣಕಾಲನ್ನು ಮಡಿಚಿ, ಇನ್ನೊಂದು ಕಾಲನ್ನು ಮೇಲಕ್ಕೆ ಎತ್ತಿ. ಒಮ್ಮೆ ನೀವು ಆರಾಮವಾಗಿದ್ದಿರಿ ಎನಿಸಿದರೆ, ಇನ್ನೊಂದು ಕಾಲನ್ನು ನೇರವಾಗಿ ಚಾಚಿ.
4. ಆಮೇಲೆ ಇನ್ನೊಂದು ಕಾಲನ್ನು ಸಹ ಚಾಚಿ.
5. ನಿಮ್ಮ ತಲೆಯು ಎರಡು ಕಾಲುಗಳ ನಡುವೆ ಇದೆಯೆಂದು ಖಚಿತಪಡಿಸಿಕೊಳ್ಳಿ.
6. ಇದೇ ಸ್ಥಿತಿಯಲ್ಲಿ ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಇರಿ. ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳಿ.
7. ಈಗ ನಿಮ್ಮ ಕಾಲುಗಳನ್ನು ನಿಧಾನವಾಗಿ ಕೆಳಗೆ ತನ್ನಿ. ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ
ಈ ಆಸನವನ್ನು ಮಾಡಲು ಮೊದಲು ಕಷ್ಟವಾಗಬಹುದು. ಆದರೆ ಒಮ್ಮೆ ನೀವು ಇದನ್ನು ಮಾಡಲು ಆರಂಭಿಸಿದರೆ ಇದು ಮಾಡುವುದು ತುಂಬಾ ಸುಲಭವಾಗುತ್ತದೆ.
ಆಸನದ ಇತರೆ ಪ್ರಯೋಜನಗಳು
*ಭುಜಗಳನ್ನು, ಕೈಗಳನ್ನು ಮತ್ತು ಮಣಿಕಟ್ಟುಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ.
*ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡಿ ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
*ಹೊಟ್ಟೆಯ ಭಾಗವನ್ನು ಸ್ಟ್ರೆಚ್ ಮಾಡಲು ಇದು ಸಹಕರಿಸುತ್ತದೆ.
*ಸಾಧಾರಣ ಖಿನ್ನತೆಯನ್ನು ನಿವಾರಿಸುತ್ತದೆ. ದೈಹಿಕ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿ ಜಿಮ್ ಬಿಡಿ
ಎಚ್ಚರಿಕೆ
ಕತ್ತು, ಬೆನ್ನು ಅಥವಾ ಭುಜದ ಗಾಯಕ್ಕೆ ಒಳಗಾದವರು ಈ ಆಸನವನ್ನು ಮಾಡಬಾರದು. ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗ ಸಮಸ್ಯೆ ಇರುವವರು ಈ ಆಸನವನ್ನು ಪರಿಣಿತರ ಮಾರ್ಗದರ್ಶನದಲ್ಲಿ ಮಾತ್ರ ನಿರ್ವಹಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


