ಒಂದೇ ತಿಂಗಳಿನಲ್ಲಿ ಬರೋಬ್ಬರಿ ಏಳು ಕೆಜಿ ತೂಕ ಇಳಿಸಿಕೊಳ್ಳಿ!

By: manu
Subscribe to Boldsky

ದೇಹದಲ್ಲಿ ಕೊಬ್ಬು ಸಂಗ್ರಹವಾಗಿದೆ ಎಂದಾದಲ್ಲಿ ಅದನ್ನು ಇಳಿಸುವುದೇ ದೊಡ್ಡ ಸಮಸ್ಯೆಯಾಗಿಬಿಡುತ್ತದೆ. ಅನುವಂಶಿಕವಾಗಿ ಸ್ಥೂಲಕಾಯತೆ ಬರುವುದು ಸಾಮಾನ್ಯವಾಗಿದ್ದರೂ ಇದಕ್ಕೆ ತಕ್ಕಂತೆ ಬೇಕಾಬಿಟ್ಟಿಯಾಗಿ ಮಾಡುವ ಆಹಾರ ಸೇವನೆ ಕೂಡ ಸ್ಥೂಲಕಾಯತೆಗೆ ಮಾರಕವಾಗಿದೆ. ಆದರೆ ಬಾಯಿ ಚಪಲಕ್ಕೆ ಕಡಿವಾಣ ಹಾಕದೆ ತೂಕ ಇಳಿಸುವುದು ಮಾತ್ರ ಕಷ್ಟದ ಮಾತೇ. 

weightloss
 

ಇಂದಿನ ಲೇಖನದಲ್ಲಿ ನಾವು ನೀಡುವ ಪರಿಹಾರಗಳು ಒಂದು ತಿಂಗಳಲ್ಲೇ ಏಳು ಕಿಲೋ ತೂಕವನ್ನು ಇಳಿಸುವಲ್ಲಿ ಸಹಾಯ ಮಾಡಲಿದೆ. ಅದೂ ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ಎಂದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಹೌದು ನಿಮ್ಮ ತಿಂಡಿ ತಿನ್ನುವ ಆಸೆಯನ್ನು ಇದು ನಷ್ಟಗೊಳಿಸದೆಯೇ ಸಮತೋಲನವನ್ನು ಕಾಯ್ದುಕೊಂಡು ತೂಕ ಇಳಿಸುವಲ್ಲಿ ಸಹಾಯ ಮಾಡಲಿದೆ.  ಆಯುರ್ವೇದ ಟಿಪ್ಸ್: ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್!      

onion
 

ಬೇಕಾಗುವ ಸಾಮಾಗ್ರಿಗಳು

*ಸಿಪ್ಪೆ ಸುಲಿದ ಪುಟ್ಟ ಈರುಳ್ಳಿ - 8-10

*ಸಿಪ್ಪೆ ಸುಲಿದ ಬೆಳ್ಳುಳ್ಳಿ - 8-10 ಎಸಳು

*ಕರಿಮೆಣಸಿನ ಹುಡಿ - 2 ಚಮಚಗಳು

*ನೀರು - 1 ಲೀಟರ್                           ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯ ಕಾಪಾಡುವ ಈರುಳ್ಳಿ 

onion
 

ಈ ನೈಸರ್ಗಿಕ ಪರಿಹಾರವು ನಿಮ್ಮ ತೂಕ ಇಳಿಕೆಯಲ್ಲಿ ಚಮತ್ಕಾರವನ್ನೇ ಮಾಡಲಿದೆ. ಇದರೊಂದಿಗೆ ನೀವು ಸೂಕ್ತ ವ್ಯಾಯಾಮ ಮತ್ತು ಡಯೆಟ್ ವಿಧಾನವನ್ನು ಅನುಸರಿಸಬೇಕು. ನಿಮ್ಮ ಆಹಾರದಲ್ಲಿ ಹೆಚ್ಚುವರಿ ಕೊಬ್ಬಿನ ಅಂಶಗಳು ಮತ್ತು ಸಕ್ಕರೆ ಇಲ್ಲ ಎಂಬುದನ್ನು ಖಾತ್ರಿಪಡಿಸಿ. ಅಂತೆಯೇ ಈ ಸಲಹೆಯು ದೇಹದಲ್ಲಿ ಕೂಡಿರುವ ಅಧಿಕ ಕೊಬ್ಬನ್ನು ಕರಗಿಸಿ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಲಿದೆ. 

garlic
 

ಇದನ್ನು ಸಿದ್ಧಪಡಿಸುವುದು ಮತ್ತು ಬಳಸುವುದು ಹೇಗೆ?

*ಮುಚ್ಚಳವಿರುವ ಜಾರ್‌ನಲ್ಲಿ ಒಂದು ಲೀಟರ್‌ನಷ್ಟು ನೀರನ್ನು ತುಂಬಿಸಿ

*ಈಗ, ಜಾರ್‌ಗೆ ಮೇಲೆ ತಿಳಿಸಿರುವ ಸಾಮಾಗ್ರಿಗಳನ್ನು ಹಾಕಿ

*ಇನ್ನು ಮುಚ್ಚಳವನ್ನು ಮುಚ್ಚಿ ಮತ್ತು ಎರಡು ದಿನಗಳ ಕಾಲ ಹಾಗೆಯೇ ಬಿಡಿ

*ಈಗ, ಸಾಮಾಗ್ರಿಗಳನ್ನು ನೀರಿನಿಂದ ಬೇರ್ಪಡಿಸಿ

*ಖಾಲಿ ಹೊಟ್ಟೆಗೆ ಒಂದು ಗ್ಲಾಸ್‌ನಷ್ಟು ಈ ನೀರನ್ನು ಒಂದು ತಿಂಗಳವರೆಗೆ ಸೇವಿಸುತ್ತಿರಿ.

ತೂಕ ಇಳಿಸುವ ಈ ವಿಧಾನವನ್ನು ಅನುಸರಿಸಿ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಬರೆಯಿರಿ.

English summary

home remedy for weight loss with onion

Weight gain can happen due to various reasons like following an unhealthy diet, lack of exercise, hormonal imbalance, heredity, etc. Did you know that we can start the process of weight loss right at home, in our own kitchens? Yes, because there are a few natural ingredients that can help you lose weight. Have a look at this onion home remedy that can help you lose about 7 kilos in just a month!
Please Wait while comments are loading...
Subscribe Newsletter