Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಆಯುರ್ವೇದ ಟಿಪ್ಸ್: ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್!
ತೂಕ ಕಳೆದುಕೊಳ್ಳಲು ಆಯುರ್ವೇದದಲ್ಲಿರುವ ಔಷಧಿಗಳು ತುಂಬಾ ಪರಿಣಾಮಕಾರಿಯೆಂದು ಪರಿಗಣಿಸಲಾಗಿದೆ.. ಅವು ಯಾವುದು ಎಂಬುದನ್ನು ಮುಂದೆ ಓದಿ...
ಭಾರತದಲ್ಲಿ ಅನಾದಿ ಕಾಲದಿಂದಲೂ ಹಲವಾರು ರೋಗಗಳಿಗೆ ಆಯುರ್ವೇದದ ಮೂಲಕವೇ ಔಷಧಿಯನ್ನು ನೀಡಲಾಗುತ್ತಿದೆ. ಆಧುನಿಕ ಯುಗದಲ್ಲಿ ಆಯುರ್ವೇದವೆನ್ನುವುದು ವಿಶ್ವದೆಲ್ಲೆಡೆಯಲ್ಲಿ ಪಸರಿಸಿದೆ. ವಿಶ್ವದ ವಿವಿಧ ಮೂಲೆಗಳಿಂದ ಆಯುರ್ವೇದ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಾರೆ.
ಆಧುನಿಕ ಔಷಧಿಗಳಿಂದ ಆಗುವಂತಹ ಅಡ್ಡಪರಿಣಾಮಗಳಿಂದಾಗಿ ಹೆಚ್ಚಿನವರು ಆಯುರ್ವೇದವನ್ನು ಮೆಚ್ಚಿಕೊಂಡಿದ್ದಾರೆ. ಇದು ಸಂಪೂರ್ಣವಾಗಿ ನೈಸರ್ಗಿಕ ಹಾಗೂ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ತೂಕ ಕಳೆದುಕೊಳ್ಳಲು ಆಯುರ್ವೇದದಲ್ಲಿರುವ ಔಷಧಿಗಳು ತುಂಬಾ ಪರಿಣಾಮಕಾರಿಯೆಂದು ಪರಿಗಣಿಸಲಾಗಿದೆ. ಆಯುರ್ವೇದ ಔಷಧಿ ಮೂಲಕ ತೂಕ ಇಳಿಸುವುದು ಹೇಗೆಂದು ತಿಳಿಯಿರಿ. ಊಟ ಕಡಿಮೆ ಮಾಡಿದರೆ, ತೂಕ ಕಡಿಮೆಯಾಗುವುದಿಲ್ಲ!

ಆಯುರ್ವೇದ ಔಷಧಿ ತಯಾರಿಸುವ ವಿಧಾನ
*ಬೇಕಾಗುವ ಸಾಮಗ್ರಿಗಳು
*½ ಚಮಚ ಗುಗ್ಗುಲ್ ಸತ್ವ( ಯಾವುದೇ ಆಯುರ್ವೇದದ ಅಂಗಡಿಯಲ್ಲಿ ನೀವು ಇದನ್ನು ಪಡೆಯಬಹುದು), ಶುಂಠಿ ಜ್ಯೂಸ್
*ಒಂದು ಚಮಚ, ಒಂದು ಚಮಚ ನಿಂಬೆ ರಸ ತುಂಬಾ ಹಳೆದಾಗಿರುವಂತಹ ತೂಕ ಕಳೆದುಕೊಳ್ಳುವ ಆಯುರ್ವೇದದ ಈ ಔಷಧಿಯು ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ. ತೂಕ ಕಮ್ಮಿ ಮಾಡುವ ಸರಳ ವ್ಯಾಯಾಮಗಳಿವು
ಆಯುರ್ವೇದ ಶಾಸ್ತ್ರದ ಪ್ರಕಾರ ಯಾವುದೇ ಔಷಧಿ ಸೇವನೆ ಮಾಡುತ್ತಾ ಇದ್ದರೂ ಆರೋಗ್ಯಕರ ಹಾಗೂ ಕಡಿಮೆ ಕ್ಯಾಲೋರಿ ಹೊಂದಿರುವ ಆರೋಗ್ಯಕಾರಿ ಆಹಾರ ಸೇವನೆ ಮಾಡಬೇಕು ಮತ್ತು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು.
ಅದರಲ್ಲೂ ಗುಗ್ಗುಲ್ ತುಂಬಾ ಪರಿಣಾಮಕಾರಿಯಾಗಿರುವಂತಹ ಆಯುರ್ವೇದಿಕ್‌ನ ಸಾರವಾಗಿದೆ. ಇದನ್ನು ಒಂದು ಅಂಟು ಮರದಿಂದ ಪಡೆಯಲಾಗುತ್ತದೆ. ಇದು ದೇಹದಲ್ಲಿರುವ ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್‌ಗಳನ್ನು ತೆಗೆದುಹಾಕಿ ದೇಹದಲ್ಲಿ ಜಮೆಯಾಗಿರುವಂತಹ ಕೊಬ್ಬು ಕರಗುವಂತೆ ಮಾಡುತ್ತದೆ. ಇದರಿಂದ ದೇಹದ ತೂಕವು ಕಡಿಮೆಯಾಗುವುದು. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಇದನ್ನು ಬಳಸಬಹುದು. ತೂಕ ಇಳಿಸಿಕೊಳ್ಳಲು ಆಯುರ್ವೇದ ಸೂಚಿಸುವ ಸುಲಭ ವಿಧಾನಗಳು
ಶುಂಠಿ ಹಾಗೂ ನಿಂಬೆರಸದಲ್ಲಿರುವಂತಹ ನಿರ್ವಿಷಕಾರಿ ಗುಣಗಳು ಕೊಬ್ಬನ್ನು ದಹಿಸಲು ಗುಗ್ಗುಲ್‌ಗೆ ನೆರವಾಗುವುದು. ಇದರಿಂದಾಗಿ ಈ ಆಯುರ್ವೇದ ಔಷಧಿಯು ತೂಕ ಇಳಿಸಲು ತುಂಬಾ ಪರಿಣಾಮಕಾರಿಯಾಗುವುದು.
ಬಳಸುವ ಹಾಗೂ ಉಪಯೋಗಿಸುವ ವಿಧಾನ
*ಒಂದು ಪಿಂಗಾಣಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಸರಿಯಾಗಿ ಇದನ್ನು ಕಲಸಿಕೊಂಡು ಮಿಶ್ರಣ ಮಾಡಿಕೊಳ್ಳಿ.
*ಆಯುರ್ವೇದ ಔಷಧಿಯು ಈಗ ಸೇವಿಸಲು ಸಿದ್ಧವಾಗಿದೆ. ಒಂದು ತಿಂಗಳ ಕಾಲ ಖಾಲಿ ಹೊಟ್ಟೆಯಲ್ಲಿ ಪ್ರತೀ ದಿನ ಬೆಳಗ್ಗೆ ಹಾಗೂ ರಾತ್ರಿ ಇದನ್ನು ಸೇವಿಸಿ. ಇದನ್ನು ಮನೆಯಲ್ಲಿ ಮಾಡಿ ಸೇವಿಸಿ ಮತ್ತು ಫಲಿತಾಂಶವನ್ನು ನಮಗೆ ತಿಳಿಸಿ. ನಿಮ್ಮ ಮೈ ತೂಕ ಕಮ್ಮಿಯಾಗದಿರಲು 7 ಕಾರಣಗಳು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


