Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಂಟಲು ಬೇನೆಯ ಕಿರಿಕಿರಿಗೆ-ಇಲ್ಲಿದೆ ನೋಡಿ ಮನೆಮದ್ದು
ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವು ಸಹ ಬದಲಾಗುತ್ತದೆ. ಅದರಲ್ಲಿ ಶೀತ, ಗಂಟಲು ನೋವು, ಕೆಮ್ಮು ಮತ್ತು ಒಮ್ಮೊಮ್ಮೆ ಜ್ವರವು ಸಹ ನಮ್ಮನ್ನು ಭಾದಿಸಬಹುದು. ಅದರಲ್ಲಿ ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತದೆ.
ಏಕೆಂದರೆ ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲು ಕಷ್ಟವಾಗುತ್ತದೆ. ಏನಾದರು ಆಹಾರ ಸೇವಿಸಲು ಸಹ ಕಷ್ಟವಾಗುತ್ತದೆ. ಪಕ್ಕದಲ್ಲಿದ್ದವರಿಗೆ ಬಿಟ್ಟರೆ ದೂರದಲ್ಲಿರುವವರಿಗೆ ನಮ್ಮ ಮಾತುಗಳು ಕೇಳಿಸುವುದೇ ಇಲ್ಲ ಆ ಮಟ್ಟಿಗೆ ನಮ್ಮ ಗಂಟಲು ತನ್ನ ಶಕ್ತಿ ಸಾಮರ್ಥ್ಯಗಳನ್ನು ಕಳೆದುಕೊಂಡು ಬಿಡುತ್ತದೆ. ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ
ಇದಕ್ಕೆ ಪ್ರಮುಖ ಕಾರಣ ಫ್ಯಾರಿಂಕ್ಸ್ ಎಂಬ ಉರಿಬಾವು. ಇದು ನಮ್ಮ ಬಾಯಿಯಿಂದ ಹಿಡಿದು ಅನ್ನನಾಳದವರೆಗೆ ಹಬ್ಬಿ, ನಮ್ಮ ಗಂಟಲಿನಲ್ಲಿ ನೋವನ್ನು ತರುತ್ತದೆ.
ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಒಂದು ಸಮಸ್ಯೆಯಾಗಿರುವುದರಿಂದಾಗಿ ಅದರ ಕುರಿತು ಭಯಪಡುವ ಅಗತ್ಯವಿರುವುದಿಲ್ಲ. ಆದರೂ ಇದರ ನೋವನ್ನು ಮತ್ತು ಇದು ಉಂಟು ಮಾಡುವ ಅಸೌಕರ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯರ ಬಳಿ ಹೋಗುವ ಬದಲಿಗೆ ಮನೆಯಲ್ಲಿಯೇ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ನಿವಾರಿಸಿಕೊಳ್ಳಿ.....

ಮೆಂತೆಯ ನೀರು
ಮೆಂತೆಯಲ್ಲಿಯೂ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿದ್ದು ಗಂಟಲ ಸೋಂಕು ನಿವಾರಿಸಲು ಶಕ್ತವಾಗಿವೆ. ಒಂದು ಲೀಟರ್ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

ಮೆಂತೆಯ ನೀರು
ಯಾವಾಗ ನೀರಿನಲ್ಲಿ ಮೆಂತೆ ಬಣ್ಣ ಬಿಡತೊಡಗುತ್ತದೆಯೋ ಆಗ ತಕ್ಷಣ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ದಾಳಿಂಬೆಯ ಸಿಪ್ಪೆ

ದಾಳಿಂಬೆಯ ಸಿಪ್ಪೆ
ಇದಕ್ಕೆ ದಾಳಿಂಬೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಕೆಮ್ಮು ಇದ್ದಾಗ ಒಂದು ದೊಡ್ಡ ಚಮಚ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಸುಮಾರು ಐದು ನಿಮಿಷಗಳವರೆಗೆ ಕುದಿಸಿ ತಣಿಸಿ ಬಳಿಕ ದಿನಕ್ಕೆರಡು ಬಾರಿ ಬಾಯಿಯನ್ನು ಮುಕ್ಕಳಿಸಿ. ಇದರಿಂದ ಗಂಟಲು ಕೆರೆತ, ಕಫ ಸುಲಭವಾಗಿ ಹೊರಬರಲು ಸಾಧ್ಯವಾಗುತ್ತದೆ ಹಾಗೂ ಕೆಮ್ಮು ಕಡಿಮೆಯಾಗುತ್ತದೆ.

ಲವಂಗ ಮತ್ತು ಜೇನು
ಜೇನು ಮತ್ತು ಲವಂಗದಲ್ಲಿರುವ ಬ್ಯಾಕ್ಟೀರಿಯಾನಿವಾರಕ ಗುಣ ಗಂಟಲ ಕೆರೆತಕ್ಕೆ ಅತ್ಯಂತ ಸಮರ್ಥವಾದ ಮನೆಮದ್ದಾಗಿದೆ. ಸೋಂಕು ಹೆಚ್ಚಾಗಿ ಗಂಟಲಿಗೆ ಆಗಿರುವ ನೋವನ್ನು ಶಮನಗೊಳಿಸಲು, ಕಟ್ಟಿಕೊಂಡಿದ್ದ ಕಫವನ್ನು ಸಡಿಲಗೊಳಿಸಿ ನಿವಾರಿಸಲು ಶಕ್ತವಾಗಿದೆ. ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!




Click it and Unblock the Notifications
