Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!
ನಮ್ಮ ಅಡುಗೆಮನೆಯಲ್ಲಿ ಕೆಲವು ಸಾಂಬಾರ ವಸ್ತುಗಳಲ್ಲಿ ಕೆಲವು ಸದಾ ಇರಲೇ ಬೇಕು. ಇವು ಖಾಲಿಯಾಗುವ ಮುನ್ನವೇ ಅಂಗಡಿಯಿಂದ ಖರೀದಿಸಿ ತಂದು ಮರುತುಂಬಿಕೊಳ್ಳದಿದ್ದರೆ ಗೃಹಿಣಿಯರಿಗೆ ಸಮಾಧಾನವೇ ಇರುವುದಿಲ್ಲ. ಸಾಸಿವೆ, ಅರಿಶಿನ ಪುಡಿ, ಮೆಣಸಿನ ಪುಡಿ, ಮೆಂತೆ ಇವೆಲ್ಲಾ ಅಡುಗೆಮನೆಯಲ್ಲಿ ಸದಾ ಇರಲೇಬೇಕಾದ ಸಾಮಾಗ್ರಿಗಳಾಗಿವೆ. ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ಅದರಲ್ಲೂ ಮೆಂತೆ ಎಂದರೆ ಸೊಪ್ಪಿನ ರೂಪದಲ್ಲಿಯೂ ಬೀಜದ ರೂಪದಲ್ಲಿಯೂ ಸಿಗುವ ಸಾಮಾಗ್ರಿಯಾಗಿದ್ದು ಬಹುತೇಕ ಎಲ್ಲಾ ಅಡುಗೆಗಳಲ್ಲಿ ಬಳಸಲಾಗುತ್ತದೆ. ಸಾಂಬಾರ್, ದಾಲ್, ಪರೋಟ ಅಥವಾ ಸಾರಿನಲ್ಲಿ ಕೊಂಚವಾದರೂ ಮೆಂತೆ ಇರಲೇಬೇಕು. ಆದರೆ ಇದು ಕೇವಲ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಔಷಧೀಯ ಗುಣಗಳು ಆರೋಗ್ಯವನ್ನೂ ವೃದ್ಧಿಸುತ್ತದೆ. ಬನ್ನಿ, ಮೆಂತೆಯನ್ನು ನಮ್ಮ ಆಹಾರದಲ್ಲಿ ಏಕೆ ಅಳವಡಿಸಿಕೊಳ್ಳಬೇಕು ಎಂಬ ಪ್ರಶ್ನೆಗೆ ಉತ್ತರವಾಗಿ ಕೆಳಗಿನ ಮಾಹಿತಿಗಳನ್ನು ನೋಡೋಣ... ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ರುಚಿಕರ ಪಲ್ಯ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ನಮ್ಮ ರಕ್ತದಲ್ಲಿನ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ಮೆಂತೆ ನೆರವಾಗುತ್ತದೆ. ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ - low density lipoprotein (LDL) ಮಟ್ಟವನ್ನು ಕಡಿಮೆಗೊಳಿಸಲು ಮೆಂತೆ ಸಮರ್ಥವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ಏಕೆಂದರೆ ಮೆಂತೆಯಲ್ಲಿ ಸ್ಯಾಪೋನಿನ್ ಎಂಬ ಸ್ಟೆರಾಯ್ಡುಗಳಿದ್ದು ಇವು ಆಹಾರದಿಂದ ಹೆಚ್ಚುವರಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡುಗಳನ್ನು ಹೀರಿಕೊಳ್ಳದಂತೆ ಮಾಡುವ ಮೂಲಕ ಕೆಟ್ಟ ಕೊಲೆಸ್ಟಾಲ್ ಮಟ್ಟವನ್ನು ಕಡಿಮೆಗೊಳಿಸುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ
ಮೆಂತೆಯಲ್ಲಿ ಗ್ಯಾಲಾಕ್ಟೋಮ್ಯಾನನ್ (galactomannan) ಎಂಬ ಪೋಷಕಾಂಶವಿದ್ದು ಇದು ಹೃದಯದ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು ಇದು ರಕ್ತದಲ್ಲಿ ಸೋಡಿಯಂ ಅಂಶ ಹೆಚ್ಚಾಗಿದ್ದರೆ ಇದರ ಪ್ರಭಾವವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ
ಪರಿಣಾಮವಾಗಿ ಹೃದಯದ ಬಡಿತದ ಗತಿ ಮತ್ತು ಒತ್ತಡವನ್ನು ಆರೋಗ್ಯಕರವಾಗಿಸಲು ನೆರವಾಗುತ್ತದೆ. ಇದರೊಂದಿಗೆ ಕೊಂಚ ಆಹಾರದಲ್ಲಿ ನಿಯಂತ್ರಣ ಮತ್ತು ಕೊಂಚ ವ್ಯಾಯಾಮ ಇದರ ಪ್ರಭಾವವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಮೆಂತೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ನಾರು ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತವೆ. ತನ್ಮೂಲಕ ಜೀರ್ಣಾಂಗಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಕೆಲವು ಸಂದರ್ಭಗಳಲ್ಲಿ ಅಜೀರ್ಣ ಮತ್ತು ಹೊಟ್ಟೆನೋವಿನಿಂದ ಪರಿಹಾರ ಪಡೆಯಲು ಮೆಂತೆಕಾಳುಗಳನ್ನು ನೆನೆಸಿ ತಯಾರಿಸಿದ ಟೀ ಕುಡಿಯಬಹುದು. ಮೆಂತೆ ಕುದಿಸಿ ನೆನೆಸಿಟ್ಟ ನೀರನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯುವ ಮೂಲಕ ಮಲಬದ್ದತೆಯನ್ನು ಕಡಿಮೆಗೊಳಿಸಬಹುದು.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಒಂದು ವೇಳೆ ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿದ್ದರೆ ನಿಮ್ಮ ಆಹಾರದಲ್ಲಿ ಮೆಂತೆ ಸದಾ ಇರುವಂತೆ ನೋಡಿಕೊಳ್ಳಿ. ಅದರಲ್ಲೂ ಬೆಳಗ್ಗಿನ ಹೊತ್ತು ಕೆಲವು ರಾತ್ರಿ ನೆನೆಸಿಟ್ಟ ಮೆಂತೆಕಾಳುಗಳನ್ನು ಜಗಿದು ನುಂಗುವ ಮೂಲಕ ದಿನವಿಡೀ ಹೆಚ್ಚು ಹಸಿವಾಗದಂತೆ ನೋಡಿಕೊಳ್ಳಬಹುದು. ಇದು ನಿಮ್ಮ ತೂಕ ಕಳೆದುಕೊಳ್ಳುವ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುತ್ತದೆ.

ಜ್ವರ ಮತ್ತು ಗಂಟಲಬೇನೆ ಕಡಿಮೆಗೊಳಿಸುತ್ತದೆ
ಒಂದು ಚಮಚ ಲಿಂಬೆರಸ ಮತ್ತು ಕೊಂಚ ಜೇನಿನೊಂದಿಗೆ ಕೆಲವು ಮೆಂತೆಕಾಳುಗಳನ್ನು ಸೇವಿಸಿದರೆ ಹಲವು ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು. ವಿಶೇಷವಾಗಿ ಜ್ವರ, ಗಂಟಲಬೇನೆ, ಸುಸ್ತು, ವಾಕರಿಕೆಗಳನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಮೆಂತೆಯಲ್ಲಿರುವ ಗೋಂದಿನಂತಹ ಪದಾರ್ಥ ಕೆಮ್ಮು ಮತ್ತು ಗಂಟಲ ಬೇನೆಯನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.

ತ್ವಚೆಯ ತೊಂದರೆಗಳಿಂದ ಮುಕ್ತಿ ನೀಡುತ್ತದೆ
ಮೆಂತೆಕಾಳುಗಳನ್ನು ನೆನೆಸಿಟ್ಟು ಬಳಿಕ ಕುದಿಸಿ ಅರೆದ ಬಳಿಕ ಲಭ್ಯವಾಗುವ ಲೇಪನವನ್ನು ಹಚ್ಚುವ ಮೂಲಕ ಮುಖದ ಚರ್ಮದಲ್ಲಿರುವ ಬ್ಲಾಕ್ ಹೆಡ್, ಮೊಡವೆ, ನೆರಿಗೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಮೊದಲು ಮುಖವನ್ನು ಚೆನ್ನಾಗಿ ತಣ್ಣೀರಿನಲ್ಲಿ ತೊಳೆದು ಬಳಿಕ ಈ ಲೇಪನವನ್ನು ದಪ್ಪನಾಗಿ ಹಚ್ಚಿಕೊಂಡು ಇಪ್ಪತ್ತು ನಿಮಿಷ ಒಣಗಲು ಬಿಡಬೇಕು. ಬಳಿಕ ತಣ್ಣೀರಿನಲ್ಲಿ ಚರ್ಮವನ್ನು ತೊಳೆದುಕೊಳ್ಳಬೇಕು.



Click it and Unblock the Notifications