For Quick Alerts
ALLOW NOTIFICATIONS  
For Daily Alerts

ಗಂಟಲು ನೋವಿನ ಕಿರಿಕಿರಿಗೆ, ಇಲ್ಲಿದೆ ಗಿಡಮೂಲಿಕೆ ಚಹಾ

By Super
|

ಗಂಟಲ ಬೇನೆಗೆ ಶೀತ ಮಾತ್ರ ಕಾರಣವಲ್ಲ, ಧ್ವನಿಪೆಟ್ಟಿಗೆಯ ಹುರಿಗಳು ಅತಿ ಹೆಚ್ಚು ದಣಿವು ಅನುಭವಿಸುವುದೂ ಇನ್ನೊಂದು ಕಾರಣ. ವಿಪರೀತ ಹೆಚ್ಚು ಅಥವಾ ದೊಡ್ಡದನಿಯಲ್ಲಿ ಮಾತನಾಡುವವರಿಗೆ ಇದು ನಿತ್ಯದ ಸಮಸ್ಯೆ. ವಾತವರಣದಲ್ಲಿ ತೇವಾಂಶ ಅಥವಾ ಮಳೆಯ ಹನಿಗಳು ಹೆಚ್ಚಾದರೂ ಗಂಟಲ ಬೇನೆ ತಪ್ಪಿದ್ದಲ್ಲ. ಇದು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಬಾಧಿಸುತ್ತದೆ. ಸಾಮಾನ್ಯ ಗಂಟಲ ಬೇನೆಗೆ ತಲೆನೋವು, ಶೀತ, ಹೊಟ್ಟೆನೋವು, ನಡುಕ, ಚಳಿಜ್ವರ ಮೊದಲಾದವು ಕಂಪೆನಿ ಕೊಡುತ್ತವೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

ಒಂದು ವೇಳೆ ಈ ಕಾರಣಗಳಾದರೆ ಎಲ್ಲರಿಗೂ ಸಮಾನವಾಗಿ ಈ ತೊಂದರೆಗಳು ಬಾಧಿಸುತ್ತವೆ. ಕೆಲವು ಜನರಿಗೆ ಮಾತ್ರ ಬಾಧಿಸಿದರೆ ಇದಕ್ಕೆ ಕಾರಣಗಳು ಬೇರೆಯೇ ಇರುತ್ತವೆ. ಮುಖ್ಯವಾಗಿ ಧೂಮಪಾನ, ಹುಳಿತೇಗು, ವೈರಸ್ಸುಗಳ ಧಾಳಿ, ಬ್ಯಾಕ್ಟೀರಿಯಾಗಳ ದಾಳಿ, ಕೆಲವು ಆಹಾರಗಳಿಗೆ ದೇಹ ಸೂಕ್ಷ್ಮವಾಗಿ ಸ್ಪಂದಿಸುವುದು, ಕೆಲವು ಆಹಾರ ಅಥವಾ ಗಾಳಿಯ ಕಣಗಳಲ್ಲಿ ಕೆಲವು ಅಲರ್ಜಿಕಾರಕ ವಾಗಿರುವುದು ಇತ್ಯಾದಿಗಳು ಗಂಟಲಬೇನೆಯ ಸಹಿತ ಇತರ ತೊಂದರೆಗಳಿಗೆ ಕಾರಣವಾಗುತ್ತವೆ.

ಅದರಲ್ಲೂ ಹೊಸದಾಗಿ ಬಂದಿರುವ ಪ್ರದೇಶವಾದರೆ ಈ ಪ್ರದೇಶದಲ್ಲಿ ಸಾಮಾನ್ಯವಾಗಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಗೆ ದೇಹ ಇನ್ನೂ ರೋಗ ನಿರೋಧಕ ಶಕ್ತಿಯನ್ನು ಪಡೆದಿಲ್ಲವಾದ್ದರಿಂದ ತಕ್ಷಣ ಬಾಧಿಸುತ್ತದೆ. ಕೊಂಚ ದಿನಗಳ ವಾಸ್ತವ್ಯದ ಬಳಿಕ ಈ ಶಕ್ತಿ ದೇಹದಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಆದರೆ ಗಂಟಲಬೇನೆ ಬಂದ ಬಳಿಕ ದೇಹ ನಿರೋಧಕ ಶಕ್ತಿ ಇದನ್ನು ಕಡಿಮೆಗೊಳಿಸಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಸೋಮಾರಿತನದ ಪರಮಾವಧಿಯಾಗಿದೆ. ಗಂಟಲು ನೋವೇ? ಈ ಆಹಾರಗಳನ್ನು ದೂರವಿಡಿ!

ಬದಲಿಗೆ ಇದನ್ನು ಶೀಘ್ರವಾಗಿ ಗುಣಪಡಿಸಿಕೊಳ್ಳಲು ಕೆಲವು ಗಿಡಮೂಲಿಕಾ ಟೀ ಗಳನ್ನು ಸೇವಿಸುವುದು ಸುಲಭದ ವಿಧಾನವಾಗಿದೆ. ಧೂಮಪಾನ, ಹುಳಿತೇಗು ಮೊದಲಾದ ಗುರುತರ ಕಾರಣಗಳಿಂದ ಬಂದಿದ್ದರ ಹೊರತಾಗಿ ಇತರ ಸಾಮಾನ್ಯ ಕಾರಣಗಳಿಂದ ಬಂದಿರಬಹುದಾದ ಗಂಟಲಬೇನೆಯನ್ನು ಈ ಚಹಾಗಳು ಸಮರ್ಥವಾಗಿ ಕಡಿಮೆಗೊಳಿಸುತ್ತವೆ. ಇಂತಹ ಉತ್ತಮ ಗುಣದ ಚಹಾಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ...

ಹಸಿರು ಟೀ

ಹಸಿರು ಟೀ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಗಂಟಲ ಬೇನೆ ಸಹಿತ ಹಲವು ತೊಂದರೆಗಳಿಂದ ರಕ್ಷಿಸುತ್ತದೆ. ಗಂಟಲಬೇನೆ ಇದ್ದರೆ ದಿನಕ್ಕೆ ಮೂರು ಬಾರಿಯಾದರೂ ಹಸಿರು ಟೀ ಸೇವಿಸಬೇಕು. ಒಂದು ವೇಳೆ ಕೊಂಚ ಲಿಂಬೆರಸವನ್ನು ಇದರೊಂದಿಗೆ ಬೆರೆಸಿ ಸೇವಿಸಿದರೆ ಇದರ ಶಕ್ತಿ ದುಪ್ಪಟ್ಟಾಗುತ್ತದೆ.

ಜೇನು ಸೇರಿಸಿದ ಲಿಂಬೆಯ ಟೀ

ಜೇನು ಸೇರಿಸಿದ ಲಿಂಬೆಯ ಟೀ

ಜೇನು ಒಂದು ಅತ್ಯುತ್ತಮ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ನಿವಾರಕವಾಗಿದೆ. ಅಲ್ಲದೇ ಗಾಯ ಮತ್ತಿತರ ವ್ಯಾಧಿಗಳನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಲಿಂಬೆರಸದಲ್ಲಿರುವ ಸಿಟ್ರಿಕ್ ಆಮ್ಲ ಗಂಟಲಿನ ಸೋಂಕಿಗೆ ಕಾರಣವಾಗಿರುವ ಬ್ಯಾಕ್ಟೀರಿಯಾ ಮತ್ತು ಇತರ ಕಣಗಳನ್ನು ನಿವಾರಿಸಲು ಶಕ್ತವಾಗಿದೆ. ಇವೆರಡನ್ನೂ ಬೆರೆಸಿದ ಟೀ ಕುಡಿದಾಗ ಗಂಟಲಬೇನೆ ಶೀಘ್ರವೇ ಗುಣವಾಗುತ್ತದೆ.

ಪುದಿನಾ ಚಹಾ

ಪುದಿನಾ ಚಹಾ

ಪುದಿನಾ ಎಲೆಗಳಲ್ಲಿಯೂ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದು ಹಲವು ವ್ಯಾಧಿಗಳನ್ನು ಗುಣಪಡಿಸುವ ಗುಣ ಹೊಂದಿದೆ. ವಿಶೇಷವಾಗಿ ಜೀರ್ಣಾಂಗಗಳ ಉರಿಯೂತವನ್ನು ನಿವಾರಿಸುವಲಿ ಸಕ್ಷಮವಾಗಿದೆ. ಒಂದು ವೇಳೆ ಕಫ ಕಟ್ಟಿಕೊಂಡಿದ್ದು ಗಂಟಲ ಬೇನೆ ಅತಿಯಾಗಿದ್ದರೆ ಪುದಿನಾ ಇದನ್ನು ಸಡಿಲಗೊಳಿಸುವ ಮೂಲಕ ಕಫವನ್ನು ನಿವಾರಿಸಿ ಗಂಟಲಬೇನೆ ಕಡಿಮೆಯಾಗುವಂತೆ ಮಾಡುತ್ತದೆ. ಅಲ್ಲದೇ ಪುದಿನಾದಲ್ಲಿರುವ ಮೆಂಥಾಲ್ ಗಂಟಲಿಗೆ ತಣ್ಣನೆಯ ಅನುಭವವನ್ನೂ ನೀಡುತ್ತದೆ.

ಪುದಿನ(ಪೆಪ್ಪರ್ಮಿಂಟ್) ಚಹಾ ತಯಾರಿಸುವ ವಿಧಾನ

ಪುದಿನ(ಪೆಪ್ಪರ್ಮಿಂಟ್) ಚಹಾ ತಯಾರಿಸುವ ವಿಧಾನ

ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ದಾಲ್ಚಿನ್ನಿ ಟೀ

ದಾಲ್ಚಿನ್ನಿ ಟೀ

ಗಂಟಲಲ್ಲಿ ಕಟ್ಟಿಕೊಂಡಿರುವ ಕಫದ ನಿವಾರಣೆಗೆ ದಾಲ್ಚಿನ್ನಿ ಅಥವಾ ಚೆಕ್ಕೆಯ ಪುಡಿಯೂ ಉತ್ತಮವಾಗಿದೆ. ಬಿಸಿನೀರಿನಲ್ಲಿ ದಾಲ್ಚಿನ್ನಿ ಪುಡಿ ಕುದಿಸಿ ಸೋಸಿದ ಬಳಿಕ ಕೊಂಚ ಜೇನು ಸೇರಿಸಿ ಕುಡಿಯುವ ಮೂಲಕ ಗಂಟಲ ಬೇನೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಸೋಂಕನ್ನು ನಿವಾರಿಸಿ ಉರಿಯನ್ನೂ ಶಮನಗೊಳಿಸುತ್ತದೆ.

ಶುಂಠಿ ಬೆರೆಸಿದ ಟೀ

ಶುಂಠಿ ಬೆರೆಸಿದ ಟೀ

ಶುಂಠಿಯ ರಸದಲ್ಲಿಯೂ ಉತ್ತಮ ಪೋಷಕಾಂಶಗಳಿದ್ದು ಇವು ಉತ್ತಮ ಉರಿಯೂತ ನಿವಾರಕವಾಗಿವೆ. ಒಂದು ವೇಳೆ ಗಂಟಲಿನ ಸ್ನಾಯುಗಳು ಸಂಕುಚಿತಗೊಂಡು ಉಗುಳುನುಂಗಲೂ ಕಷ್ಟಕರವಾಗಿದ್ದು ನೋವು ನೀಡುತ್ತಿದ್ದರೆ ಶುಂಠಿರಸ ಬೆರೆಸಿದ ಟೀ ಕುಡಿಯುವುದು ಉತ್ತಮ. ಇದಕ್ಕಾಗಿ ತಾಜಾ ಮತ್ತು ಸಾವಯವ ವಿಧಾನದಲ್ಲಿ ಬೆಳೆದ ಶುಂಠಿಯನ್ನೇ ಉಪಯೋಗಿಸಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆರಡು ಬಾರಿ ಹಾಲು ಸೇರಿಸದೇ ಬಿಸಿಬಿಸಿಯಾಗಿ ಸೇವಿಸಿ.

ಶುಂಠಿ ಚಹಾ ತಯಾರಿಸುವ ವಿಧಾನ

ಶುಂಠಿ ಚಹಾ ತಯಾರಿಸುವ ವಿಧಾನ

ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

English summary

Herbal Teas That Cure Sore Throat

Here are the few home remedies work wonders in treating conditions like sore throat. Various herbal teas comes in handy to treat sore throat. Consuming these herbal teas provide provides quick relief from sore throat. It alleviates the pain depending on the cause and possibly cure the problem. have a look
X
Desktop Bottom Promotion