For Quick Alerts
ALLOW NOTIFICATIONS  
For Daily Alerts

ಆಹಾ...ಲವಂಗ ಚಹಾ, ಕಣ ಕಣದಲ್ಲೂ ಆರೋಗ್ಯದ ಶಕ್ತಿ!

By Manu
|

ಭಾರತದ ರಾಷ್ಟ್ರೀಯ ಪಾನೀಯವಾದ ಟೀ ಯನ್ನು ಭಾರತದ ಎಪ್ಪತ್ತು ಶೇಖಡಾಕ್ಕೂ ಹೆಚ್ಚಿನ ಜನರು ಸೇವಿಸುತ್ತಾರೆ. ಚಹಾ ಸಿಗದೇ ಇರುವ ಊರೇ ಭಾರತದಲ್ಲಿಲ್ಲ. ಎಷ್ಟೋ ಜನರ ದಿನದ ಪ್ರಥಮ ಆಹಾರವೇ ಟೀ. ಆದರೆ ಪ್ರತಿದಿನವೂ ಒಂದೇ ಬಗೆಯ ಟೀ ಕುಡಿದೂ ಕುಡಿದೂ ನಾಲಿಗೆ ಜಡ್ಡುಗಟ್ಟಿಹೋಗಿದ್ದರೆ ಟೀಯಲ್ಲಿ ಕೊಂಚ ಬದಲಾವಣೆ ತರುವುದು ಅವಶ್ಯ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಟೀ ಕುದಿಸುವಾಗ ಏಲಕ್ಕಿ, ದಾಲ್ಚಿನ್ನಿ, ಹಾಲಿಲ್ಲದ ಟೀಯಲ್ಲಿ ಪುದೀನಾ, ಲಿಂಬೆ, ಶುಂಠಿ ಮೊದಲಾದವುಗಳನ್ನು ಬೆರೆಸಿ ರುಚಿಯನ್ನು ಬದಲಿಸುವ ಜೊತೆಗೇ ಪೇಯವನ್ನು ಆರೋಗ್ಯಕರವನ್ನಾಗಿಸಬಹುದು. ಈಗಂತೂ ವಿವಿಧ ಮಸಾಲೆಗಳ ಮಿಶ್ರಣವಿರುವ ಟೀ ಮಸಾಲೆ ಸಿದ್ಧ ರೂಪದಲ್ಲಿ ಸಿಗುತ್ತಿದೆ. ಇದಕ್ಕೊಂದು ಸೇರ್ಪಡೆ ಎಂದರೆ ಲವಂಗದ ಪುಡಿ ಸೇರಿಸಿದ ಟೀ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಇದುವರೆಗೆ ಅಡುಗೆ ಅಥವಾ ಹಲ್ಲುನೋವಿಗಾಗಿ ಬಳಸುತ್ತಿದ್ದ ಲವಂಗವನ್ನು ಈಗ ಟೀ ಜೊತೆಗೆ ಬೆರೆಸಿ ಸೇವಿಸಿದರೆ ಕೇವಲ ರುಚಿ ಮಾತ್ರ ಬದಲಾಗುವುದಲ್ಲ, ಆರೋಗ್ಯವೂ ಉತ್ತಮಗೊಳ್ಳುತ್ತದೆ. ಹೇಗೆ ಎಂಬುದನ್ನು ಮುಂದೆ ಓದಿ...

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಲವಂಗದಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ಒಸಡುಗಳ ಸೋಂಕನ್ನು ನಿವಾರಿಸಿ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಂದು ವೇಳೆ ನೀವು ಒಸಡುಗಳಲ್ಲಿ ನೋವು ಅಥವಾ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟುಕೊಳ್ಳುವುದು ಒಂದು ವಿಧಾನವಾಗಿದೆ.

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಆದರೆ ಇನ್ನೊಂದು ವಿಧಾನದಲ್ಲಿ ಲವಂಗ ಬೆರೆಸಿ ಕುದಿಸಿದ ಟೀ ಅನ್ನು ಬಾಯಿಗೆ ಹಾಕಿಕೊಳ್ಳುವಷ್ಟು ತಣಿದ ಬಳಿಕ ಬಾಯಿಯಲ್ಲಿ ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಮುಕ್ಕಳಿಸಿ. ವಿಶೇಷವಾಗಿ ನೋವಿರುವ ಹಲ್ಲಿನ ಕಡೆ ಹೆಚ್ಚು ಕಾಲ ಮುಕ್ಕಳಿಸಿ. ಇದರಿಂದ ನೋವಿನಿಂದ ಮೊದಲ ವಿಧಾನಕ್ಕಿಂತಲೂ ಶೀಘ್ರವಾಗಿ ಮತ್ತು ಇನ್ನೂ ಉತ್ತಮವಾದ ಉಪಶಮನ ಸಿಗುತ್ತದೆ.

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಮೂಗಿನ ಮೇಲ್ಭಾಗದ, ಹಣೆಯ ಒಳಗಿರುವ ಟೊಳ್ಳು ಭಾಗದಲ್ಲಿ ಸೋಂಕು ಉಂಟಾಗಿ ಮೂಗು ಕಟ್ಟಿಕೊಂಡಿದ್ದು ತಲೆನೋವು ವಿಪರೀತವಾಗಿದ್ದರೆ ಒಂದು ಕಪ್ ಬಿಸಿಯಾದ ಲವಂಗದ ಪುಡಿ ಬೆರೆಸಿ ಮಾಡಿದ ಟೀ ಕುಡಿಯಿರಿ.

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಜ್ವರವನ್ನು ಕಡಿಮೆ ಮಾಡುತ್ತದೆ

ಜ್ವರವನ್ನು ಕಡಿಮೆ ಮಾಡುತ್ತದೆ

ಲವಂಗದಲ್ಲಿರುವ ಮೆಗ್ನೀಶಿಯಂ ಮತ್ತು ವಿಟಮಿನ್ ಇ, ಮತ್ತು ಕೆ ಸಿದ್ಧರೂಪದಲ್ಲಿ ಟೀ ಯಲ್ಲಿ ಬೆರೆತು ಸುಲಭವಾಗಿ ಜೀರ್ಣಗೊಳ್ಳುತ್ತವೆ. ಈ ಪೋಷಕಾಂಶಗಳು ಅತ್ಯುತ್ತಮ ಉರಿಯೂತ ನಿವಾರಕ ಗುಣ ಹೊಂದಿರುವ ಕಾರಣ ವಿವಿಧ ಬ್ಯಾಕ್ಟೀರಿಯಾಗಳ ಧಾಳಿಯಿಂದ ಉಂಟಾಗಿದ್ದ ಜ್ವರವನ್ನು ಶೀಘ್ರವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೂ ಕೊಂಚಕಾಲ ಮುನ್ನ ಒಂದು ಕಪ್ ಲವಂಗದ ಪುಡಿ ಬೆರೆಸಿದ ಟೀ ಕುಡಿಯುವ ಮೂಲಕ ಬಾಯಿಯ ಲಾಲಾರಸ ಮತ್ತು ಜೀರ್ಣಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಅಲ್ಲದೇ ಇದರ ಪೋಷಕಾಂಶಗಳು ಉತ್ತಮ ನೋವುನಿವಾರಕರೂ ಆಗಿರುವ ಕಾರಣ ಹೊಟ್ಟೆಯಲ್ಲಿ ಉಂಟಾಗುವ ಆಮ್ಲೀಯತೆ, ಅಜೀರ್ಣ, ಹುಳಿತೇಗು, ಅಪಾನವಾಯು ಮೊದಲಾದವುಗಳು ಉಂಟಾಗದಂತೆ ಕಾಪಾಡುತ್ತದೆ.

ಲವಂಗ ಟೀ ತಯಾರಿಸುವುದು ಹೇಗೆ?

ಲವಂಗ ಟೀ ತಯಾರಿಸುವುದು ಹೇಗೆ?

ಒಂದು ಚಿಕ್ಕ ಚಮಚ ಲವಂಗಗಳನ್ನು ಮನೆಯ ಚಿಕ್ಕ ಒರಳಿನಲ್ಲಿ ಕುಟ್ಟಿ ಪುಡಿಮಾಡಿ. ಅಂದರೆ ಈ ಪುಡಿ ದಪ್ಪರವೆಯಷ್ಟು ಪುಡಿಯಾದರೆ ಸಾಕು. ಟೀ ತಯಾರಿಸುವಾಗ ಈ ಪುಡಿಯನ್ನು ಒಂದು ಕಪ್‌ಗೆ ಒಂದು ಚಿಕ್ಕಚಮಚದಷ್ಟು ಪ್ರಮಾಣದಲ್ಲಿ ಸೇರಿಸಿ ಕುದಿಸಿ.

ಲವಂಗ ಟೀ ತಯಾರಿಸುವುದು ಹೇಗೆ?

ಲವಂಗ ಟೀ ತಯಾರಿಸುವುದು ಹೇಗೆ?

ಕುದಿ ಪ್ರಾರಂಭವಾದ ಬಳಿಕ ಉರಿಯನ್ನು ತಗ್ಗಿಸಿ ಸುಮಾರು ಐದರಿಂದ ಹತ್ತು ನಿಮಿಷ ಕುದಿಸಿ. ಬಳಿಕ ಸುಮಾರು ಅರ್ಧ ಚಿಕ್ಕಚಮಚ ನಿಮ್ಮ ಆಯ್ಕೆಯ ಟೀಪುಡಿ ಸೇರಿಸಿ ಚಿಕ್ಕ ಉರಿಯಲ್ಲಿ ಇನ್ನೂ ನಾಲ್ಕಾರು ನಿಮಿಷ ಕುದಿಸಿ (ನಿಮ್ಮ ಆಯ್ಕೆಯ ಗಾಢತೆ ಪಡೆಯುವಷ್ಟು).

ಲವಂಗ ಟೀ ತಯಾರಿಸುವುದು ಹೇಗೆ?

ಲವಂಗ ಟೀ ತಯಾರಿಸುವುದು ಹೇಗೆ?

ಬಳಿಕ ಈ ನೀರನ್ನು ಸೋಸಿ ಇದರಲ್ಲಿ ನಿಮ್ಮ ಆಯ್ಕೆಗೆ ತಕ್ಕಷ್ಟು ಹಾಲು ಸಕ್ಕರೆ ಬೆರೆಸಿ ಕುಡಿಯಿರಿ. ಇಲ್ಲದಿದ್ದರೆ ಕೊಂಚ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಸೋಸಿದ ಬಳಿಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ಹಲ್ಲು ನೋವು ಮೊದಲಾದ ಸಂದರ್ಭಗಳಲ್ಲಿ ಸಿದ್ಧರೂಪದ ಔಷಧಿಯಂತೆಯೂ ಬಳಸಬಹುದು.

English summary

interesting reasons to try clove tea!

Tea is an indispensable part of our lives and sipping on a hot cup of tea is enough to kick-start the day. However, if you are bored with the usual green tea or black tea, here’s something you can try – clove tea.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more