For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಶೀತ-ಕೆಮ್ಮಿನ ನಿವಾರಣೆಗೆ ಸಿಂಪಲ್ ಮನೆಮದ್ದು

ಜ್ವರ, ಶೀತ, ಕೆಮ್ಮು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ವೈದ್ಯರಲ್ಲಿಗೆ ಓಡಿ ಹೋಗುವುದು ಸಾಮಾನ್ಯ. ವೈದ್ಯರನ್ನು ಭೇಟಿಗೆ ಮೊದಲು ಮನೆಯಲ್ಲಿಯೇ ಕೆಲವೊಂದು ಚಿಕಿತ್ಸೆ ನೀಡಿದರೆ ಅದರಿಂದ ಪರಿಹಾರ ಕಾಣಬಹುದು....

By Hemanth
|

ಹವಾಮಾನ ಬದಲಾಗುತ್ತಿರುವಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ದೇಹದಲ್ಲಿ ಒಳ್ಳೆಯ ಪ್ರತಿರೋಧಕ ಶಕ್ತಿಯನ್ನು ಹೊಂದಿರುವವರು ಸಾಮಾನ್ಯವಾಗಿ ಬರುವ ಜ್ವರ, ಶೀತ ಹಾಗೂ ಕೆಮ್ಮಿನಿಂದ ಪಾರಾಗುತ್ತಾರೆ. ಆದರೆ ಹವಾಮಾನ ಬದಲಾವಣೆ ವೇಳೆ ಹೆಚ್ಚಾಗಿ ಸಂಕಷ್ಟಕ್ಕೆ ಸಿಲುಕುವುದು ಮಕ್ಕಳು.

ಜ್ವರ, ಶೀತ, ಕೆಮ್ಮು ಮಕ್ಕಳನ್ನು ಕಾಡುವಂತಹ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ದೂರ ಮಾಡಲು ವೈದ್ಯರಲ್ಲಿಗೆ ಓಡಿ ಹೋಗುವುದು ಸಾಮಾನ್ಯ. ವೈದ್ಯರನ್ನು ಭೇಟಿಗೆ ಮೊದಲು ಮನೆಯಲ್ಲಿಯೇ ಮಕ್ಕಳಿಗೆ ಕೆಲವೊಂದು ಚಿಕಿತ್ಸೆ ನೀಡಿದರೆ ಅದರಿಂದ ಪರಿಹಾರ ಕಾಣಬಹುದು. ಆದರೆ ಸಮಸ್ಯೆ ಹಾಗೆ ಉಳಿದುಕೊಂಡಿದ್ದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಮಕ್ಕಳಿಗೆ ಮನೆಯಲ್ಲಿ ಮಾಡಬಹುದಾದ ಕೆಲವೊಂದು ಚಿಕಿತ್ಸೆಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

Cold

ಆವಿ
ಸಣ್ಣ ಮಕ್ಕಳಿಗೆ ಶೀತವಾಗಿ ಉಸಿರಾಟಕ್ಕೆ ಕಷ್ಟವಾಗುತ್ತಿದ್ದರೆ ಆಗ ಮಕ್ಕಳಿಗೆ ಆವಿಯ ಚಿಕಿತ್ಸೆ ನೀಡಿ. ಸ್ನಾನ ಕೊಠಡಿಗೆ ಕರೆದುಕೊಂಡು ಹೋಗಿ ಬಿಸಿನೀರನ್ನು ಆನ್ ಮಾಡಿದರೆ ಅದರಿಂದ ಬರುವ ಆವಿಗೆ ಮಗು ಮುಖವೊಡ್ಡಬೇಕು. ಇಲ್ಲವೆಂದಾದರೆ ನೀರನ್ನು ಬಿಸಿ ಮಾಡಿ ಒಂದು ಪಾತ್ರೆಗೆ ಹಾಕಿ. ಅದರಿಂದ ಬರುವ ಆವಿಯನ್ನು ಮಗು ಒಳಕ್ಕೆ ತೆಗೆದುಕೊಂಡರೆ ಒಳ್ಳೆಯದು. ನೀಲಗಿರಿ ಎಣ್ಣೆಯ ಕೆಲವು ಹನಿಗಳನ್ನು ನೀರಿಗೆ ಹಾಕಿದರೆ ಮತ್ತಷ್ಟು ಒಳ್ಳೆಯದು.

ಜೇನು
ಜೇನುತುಪ್ಪದಲ್ಲಿ ಶಮನಕಾರಿ ಗುಣಗಳು ಇದೆ ಎಂದು ಎಲ್ಲರಿಗೂ ತಿಳಿದಿದೆ. ಜೇನಿನಲ್ಲಿ ಮಗುವಿನ ಬೆರಳನ್ನು ಮುಳುಗಿಸಿ ಮತ್ತು ಅದನ್ನು ಚೀಪುವಂತೆ ಹೇಳಿ. ದಿನದಲ್ಲಿ ಎರಡು ಮೂರು ಸಲ ಹೀಗೆ ಮಾಡಿ. ಐದು ವರ್ಷಕ್ಕಿಂತ ದೊಡ್ಡ ಮಗುವಾದರೆ ಜೇನಿಗೆ ಸ್ವಲ್ಪ ದಾಲ್ಚಿನಿ ಹುಡಿಯನ್ನು ಹಾಕಿ ಸವಿಯಲು ಹೇಳಿ. ಶೀತ ಶಮನಕ್ಕೆ, ಒಂದು ಚಮಚದಷ್ಟು ಜೇನು ಸಾಕು

ಅಜ್ಮೈನ್
ಕುದಿಯುವ ನೀರಿಗೆ ಅಜ್ಮೈನ್ ನ ಕೆಲವು ಬೀಜ ಮತ್ತು ತುಳಸಿಯ ಎಲೆಗಳನ್ನು ಹಾಕಿಕೊಂಡು ಕುಡಿದರೆ ಕೆಮ್ಮಿನಿಂದ ಪರಿಹಾರ ಪಡೆಯಬಹುದು. ಎದೆಕಟ್ಟಿರುವುದನ್ನು ಇದು ನಿವಾರಣೆ ಮಾಡುತ್ತದೆ.

ಅರಿಶಿನ ಹಾಲು
ನಂಜುನಿರೋಧಕ ಗುಣವನ್ನು ಹೊಂದಿರುವಂತಹ ಅರಿಶಿನ ಕೆಮ್ಮು ಹಾಗೂ ಶೀತದಂತಹ ವೈರಲ್ ಸೋಂಕನ್ನು ನಿವಾರಣೆ ಮಾಡುವುದು. ಒಂದು ಲೋಟ ಹಾಳಿಗೆ ಅರಶಿನ ಹಾಕಿ ಮಗುವಿಗೆ ಪ್ರತೀ ರಾತ್ರಿ ನೀಡಿದರೆ ಕೆಮ್ಮು ನಿವಾರಣೆಯಾಗುತ್ತದೆ. ಇದು ಕಿರಿಕಿರಿಯಾಗುವ ಗಂಟಲು ಹಾಗೂ ಕಟ್ಟಿರುವ ಮೂಗಿಗೆ ಶಮನ ನೀಡುವುದು. ಹಾಲಿನಲ್ಲಿ ಕ್ಯಾಲ್ಸಿಯಂ ಇರುವ ಕಾರಣದಿಂದ ಇದು ಮಗುವಿಗೆ ಶಕ್ತಿಯನ್ನು ನೀಡುವುದು. ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು

ಮಸಾಜ್
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಸಾಜ್ ಒಳ್ಳೆಯ ಪರಿಹಾರ. ಸಾಸಿವೆ ಎಣ್ಣೆಗೆ ಬೆಳ್ಳುಳ್ಳಿಯನ್ನು ಹಾಕಿಕೊಂಡು ಮಗುವಿನ ಎದೆ, ಬೆನ್ನು ಹಾಗೂ ಕುತ್ತಿಗೆ ಭಾಗಕ್ಕೆ ಮಸಾಜ್ ಮಾಡಿ. ಮಗುವಿನ ಪಾದ ಹಾಗೂ ಕಾಲಿನ ಭಾಗಕ್ಕೂ ಮಸಾಜ್ ಮಾಡಿಕೊಳ್ಳಿ.

English summary

Home remedies to curb cold and cough

With the change in weather, viral cough and cold are common ailments that kids suffer from. Try some of these remedies to treat the ailment and boost your kid's immunity:
Story first published: Sunday, November 27, 2016, 14:02 [IST]
X
Desktop Bottom Promotion