For Quick Alerts
ALLOW NOTIFICATIONS  
For Daily Alerts

ಶೀತ ಶಮನಕ್ಕೆ, ಒಂದು ಚಮಚದಷ್ಟು ಜೇನು ಸಾಕು

By Deepu
|

ಮೂಗು ಇದ್ದ ಮೇಲೆ ನೆಗಡಿ ಬರದೆ ಇರುತ್ತದೆಯೇ? ಎಂಬ ನಾಣ್ಣುಡಿ ಇದೆ. ನೆಗಡಿ, ಕೆಮ್ಮು, ಜ್ವರ, ತಲೆನೋವು ಇವು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಸಮಸ್ಯೆಗಳೇ. ಶೀತವು ಸಾಮಾನ್ಯವಾಗಿ ಒಂದು ಉಸಿರಾಟದ ಡಿಸಾರ್ಡರ್ ಆಗಿದ್ದು, ಇದು ಮೂಗು, ಗಂಟಲು ಮತ್ತು ನಿಮ್ಮ ಶ್ವಾಸಕೋಶಗಳ ನಾಳಗಳು ಕಟ್ಟಿಕೊಳ್ಳುವಂತೆ ಮಾಡುತ್ತದೆ. ಶೀತ ಬಂದಾಗ ಮೂಗು ಸೋರುವಿಕೆ, ಗಂಟಲು ನೋವು, ಕೆಮ್ಮು, ಸ್ವಲ್ಪ ಜ್ವರ, ಸೀನು ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಇದು ಸಾಮಾನ್ಯವಾಗಿ ಒಂದು ವಾರದಲ್ಲಿ ಗುಣಮುಖವಾಗುತ್ತದೆ.

ಆದರೆ ಅದಕ್ಕಾಗಿ ನೀವು ಇದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಬೇಕು. ಬಹುಶಃ ಇದಕ್ಕಾಗಿ ನೀವು ಹಲವಾರು ಮನೆ ಮದ್ದುಗಳ ಮೊರೆ ಹೋಗುವುದು ಸಾಮಾನ್ಯ. ಅಮೃತಾಂಜನ್, ಬಿಸಿ ನೀರು, ತುಳಸಿ, ಅರಿಶಿನ, ಮೆಣಸು, ಶುಂಠಿ ಇತ್ಯಾದಿ ಮನೆ ಮದ್ದುಗಳನ್ನು ನೀವು ಶೀತದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಬಳಸಬಹುದು. ಆದರೆ ಅದರ ಜೊತೆಗೆ ಜೇನು ತುಪ್ಪವನ್ನು ಸಹ ಬಳಸಿ ಎಂಬುದು ನಮ್ಮ ಸಲಹೆ. ಜೇನು ತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಾ, ಆಂಟಿಆಕ್ಸಿಡೆಂಟ್ ಮತ್ತು ಆಂಟಿ ಮೈಕ್ರೊಬೈಯಲ್ ಅಂಶಗಳು ಇದ್ದು, ಇವು ವೈರಸ್, ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ಸೂಕ್ಷ್ಮಾಣು ಜೀವಿಗಳ ವಿರುದ್ಧ ಹೋರಾಡುತ್ತವೆ. ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

ಇವು ಶೀತವನ್ನು ಕಡಿಮೆ ಮಾಡುತ್ತವೆ ಮತ್ತು ನಿಮ್ಮ ಗಂಟಲಿಗೆ ಆರಾಮವನ್ನು ನೀಡುತ್ತದೆ. ಪ್ರತಿದಿನವು ಜೇನು ತುಪ್ಪವನ್ನು ಸೇವಿಸುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನೀವು ಪದೇ ಪದೇ ಶೀತಕ್ಕೆ ತುತ್ತಾಗುವುದು ಕಡಿಮೆಯಾಗುತ್ತದೆ. ಹಾಗಾಗಿ ಈ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮಗಾಗಿ ಜೇನು ತುಪ್ಪದಿಂದ ಶೀತವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತಿದೆ. ಬನ್ನಿ ಅದು ಹೇಗೆ ಎಂದು ತಿಳಿದುಕೊಳ್ಳೋಣ...

ಜೇನು ತುಪ್ಪ ಮತ್ತು ಚಕ್ಕೆ

ಜೇನು ತುಪ್ಪ ಮತ್ತು ಚಕ್ಕೆ

ಜೇನು ತುಪ್ಪವು ಉರಿಬಾವು, ಆಂಟಿಆಕ್ಸಿಡೆಂಟ್, ವೈರಸ್ ನಿರೋಧಕ ಮತ್ತು ಶಿಲೀಂಧ್ರ ನಿರೋಧಕ ಗುಣಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇದು ಶೀತವನ್ನು ಸಮರ್ಥವಾಗಿ ನಿವಾರಿಸುತ್ತದೆ. ¼ ಭಾಗ ಚಕ್ಕೆ ಪುಡಿಯೊಂದಿಗೆ 1 ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಬೆರೆಸಿಕೊಳ್ಳಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ, ಶೀತದಿಂದ ಮುಕ್ತರಾಗಿ.

ಜೇನು ತುಪ್ಪ ಮತ್ತು ಕಚ್ಛಾ ಈರುಳ್ಳಿ

ಜೇನು ತುಪ್ಪ ಮತ್ತು ಕಚ್ಛಾ ಈರುಳ್ಳಿ

ಜೇನು ತುಪ್ಪ ಮತ್ತು ಕಚ್ಛಾ ಈರುಳ್ಳಿಗಳ ಮಿಶ್ರಣವು ಸಹ ಶೀತವನ್ನು ನಿವಾರಿಸುತ್ತದೆ. ಇದಕ್ಕಾಗಿ ಈರುಳ್ಳಿಗಳನ್ನು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಅದಕ್ಕೆ ಜೇನು ತುಪ್ಪವನ್ನು ಲೇಪಿಸಿ. ಇದು ರಾತ್ರಿಯೆಲ್ಲಾ ನೆನೆಯಲು ಬಿಡಿ. ಬೆಳಗ್ಗೆ ಎದ್ದ ಕೂಡಲೆ ಇದನ್ನು ಸೇವಿಸಿ. ಇದನ್ನು ದಿನವಿಡೀ ಆಗಾಗ ಸೇವಿಸುತ್ತಲೆ ಇರಿ, ಇದರಿಂದ ಶೀತ ನಿವಾರಣೆಯಾಗುತ್ತದೆ.

ಜೇನು ತುಪ್ಪ, ಲಿಂಬೆ ಮತ್ತು ಶುಂಠಿ

ಜೇನು ತುಪ್ಪ, ಲಿಂಬೆ ಮತ್ತು ಶುಂಠಿ

ಜೇನು ತುಪ್ಪ, ಲಿಂಬೆ ಮತ್ತು ಶುಂಠಿಗಳ ಮಿಶ್ರಣವು ಸಹ ಶೀತವನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುತ್ತದೆ. ಇದಕ್ಕಾಗಿ ಲಿಂಬೆರಸ ಮತ್ತು ಜೇನು ತುಪ್ಪವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ನಂತರ ಇದಕ್ಕೆ ಶುಂಠಿ ಪುಡಿಯನ್ನು ಬೆರೆಸಿಕೊಳ್ಳಿ, ಈ ಮಿಶ್ರಣವನ್ನು ದಿನವಿಡೀ ಆಗಾಗ ಸೇವಿಸುತ್ತಾ ಇರಿ, ಶೀತ ನಿವಾರಣೆಯಾಗುತ್ತದೆ.

ಜೇನು ತುಪ್ಪ ಮತ್ತು ಚಕ್ಕೆ ಟೀ

ಜೇನು ತುಪ್ಪ ಮತ್ತು ಚಕ್ಕೆ ಟೀ

ಚಕ್ಕೆಯಲ್ಲಿ ಮಾಡಿದ ಟೀಗೆ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸಿ. ಇದರಿಂದ ಶೀತ ಮತ್ತು ಅದರ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಟೀ ನಿಮ್ಮ ಗಂಟಲಿಗೆ ಆರಾಮ ನೀಡುತ್ತದೆ ಮತ್ತು ನೆಗಡಿಯನ್ನು ನಿವಾರಣೆ ಮಾಡುತ್ತದೆ. ಚಕ್ಕೆಯ ಟೀಗೆ ಎರಡು ಟೇಬಲ್ ಚಮಚ ಜೇನು ತುಪ್ಪವನ್ನು ಬೆರೆಸಿಕೊಂಡು ಸೇವಿಸಿ. ಶೀತದಿಂದ ನಿವಾರಣೆ ಪಡೆಯುವವರೆಗೆ ಇದನ್ನು ಆಗಾಗ ಸೇವಿಸುತ್ತಾ ಇರಿ.

ಜೇನು ತುಪ್ಪ ಮತ್ತು ಲಿಂಬೆ ಟೀ

ಜೇನು ತುಪ್ಪ ಮತ್ತು ಲಿಂಬೆ ಟೀ

ಜೇನು ತುಪ್ಪ ಮತ್ತು ನಿಂಬೆ ಟೀ ಸಹ ಶೀತಕ್ಕೆ ಹೇಳಿ ಮಾಡಿಸಿದ ಮದ್ದಾಗಿರುತ್ತದೆ. ಈ ಮಿಶ್ರಣವನ್ನು ಸೇವಿಸುವುದರಿಂದ ಶೀತ ಮತ್ತು ಶೀತಕ್ಕೆ ಸಂಬಂಧಿಸಿದ ಲಕ್ಷಣಗಳು ದೂರವಾಗುತ್ತವೆ. ಇದರಿಂದ ಅಧಿಕ ಪ್ರಯೋಜನವನ್ನು ಪಡೆಯಲು ಬೆಳ್ಳಂಬೆಳಗ್ಗೆಯೇ ಇದನ್ನು ಸೇವಿಸಿ.

English summary

How To Use Honey To Treat Cold

Cold is a respiratory disorder that affects the nose, throat and the respiratory tract. Cold may have symptoms such as a runny nose, sore throat, cough, mild fever, sneezing, etc. So, in this article, we at Boldsky will be listing out some of the best ways to treat cold using honey. Read on for more.
X
Desktop Bottom Promotion